ನಾವು ಜನರ ನೋವಿಗೆ ಸ್ಪಂದಿಸಿ ರಾಜಕೀಯ ಮಾಡುತ್ತೇವೆ. ಬಿಜೆಪಿಯವರಂತೆ ಅಮಾಯಕರನ್ನು ಬಲಿಕೊಟ್ಟು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಧಾರವಾಡ (ಫೆ.16): ನಾವು ಜನರ ನೋವಿಗೆ ಸ್ಪಂದಿಸಿ ರಾಜಕೀಯ ಮಾಡುತ್ತೇವೆ. ಬಿಜೆಪಿಯವರಂತೆ ಅಮಾಯಕರನ್ನು ಬಲಿಕೊಟ್ಟು ರಾಜಕೀಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಕೇಂದ್ರ ಸಚಿವ ಅಮಿತ್ ಶಾ ಅವರು ಕುಟುಂಬ ರಾಜಕಾರಣ ಹೇಳಿಕೆಗೆ ಧಾರವಾಡದಲ್ಲಿ ತಿರುಗೇಟು ನೀಡಿದ ಅವರು, ಜೆಡಿಎಸ್‌ನಲ್ಲಿ ಮಾತ್ರ ಕುಟುಂಬ ರಾಜಕೀಯ ಇದೆಯೇ? ಬಿಜೆಪಿಯಲ್ಲಿ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. ನಾವು ಜನರ ಆಶೀರ್ವಾದ ಪಡೆದು ಜನಪ್ರತಿನಿಧಿ ಆಗಿದ್ದೇವೆ ವಿನಃ ಹಿಂಬಾಗಿಲಿನಿಂದ ಪ್ರವೇಶಿಸಿಲ್ಲ. ಅಮಾಯಕರನ್ನು ಬಲಿ ಪಡೆದು ರಾಜಕಾರಣ ಮಾಡಿಲ್ಲ.
ನಾವೇನು ನರಹತ್ಯೆ ಮಾಡಿದ್ದೇವೆಯೇ? ಎಂದು ಖಾರವಾಗಿ ಪ್ರಶ್ನಿಸಿರುವ ಎಚ್‌ಡಿಕೆ, ನಾವು ಹೋರಾಟದಿಂದ ಜನಪ್ರತಿನಿಧಿಗಳಾಗಿದ್ದೇವೆ. ಚುನಾವಣೆಗೆ ನಿಲ್ಲಲು ಅಮಿತ್ ಶಾ ಅವರ ಪರವಾನಗಿ ಪಡೆಯಬೇಕೇ? ಎಂದು ಕಿಡಿಕಾರಿದರು. ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಅಮಿತ್ ಶಾ ಅವರ ಮಗನಿಗೆ ಬಿಸಿಸಿಐನಲ್ಲಿ ಅಧಿಕಾರ ನೀಡಿಲ್ಲವೇ ಎಂದಿರುವ ಎಚ್‌ಡಿಕೆ, ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟುಜನ ಅಪ್ಪ-ಮಕ್ಕಳು ರಾಜಕಾರಣದಲ್ಲಿ ಇಲ್ಲ. ಇವರ ಕಣ್ಣಿಗೆ ದೇವೇಡೌಡರ ಕುಟುಂಬ ಮಾತ್ರವೇ ಕಾಣುತ್ತದೆಯೇ? ಎಂದು ಆಕ್ಷೇಪಿಸಿದರು. ಇದು (ಕರ್ನಾಟಕ) ಉತ್ತರ ಪ್ರದೇಶ ಹಾಗೂ ಬಿಹಾರ ಅಲ್ಲ. ಕರ್ನಾಟಕಕ್ಕೆ ಅಮಿತ್ ಶಾ ಹಾಗೂ ಬಿಜೆಪಿ ಕೊಡುಗೆ ಏನು? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
undefined
ಬಿಜೆಪಿ ಗೆಲ್ಲಿಸೋ ಸುಪಾರಿ ಪಡೆದ ಸಿದ್ದರಾಮಯ್ಯ: ಎಚ್.ಡಿ.ಕುಮಾರಸ್ವಾಮಿ
ರೈತ ಮುಖಂಡರು ವಿಧಾನಸೌಧದ ಮೆಟ್ಟಿಲೇರಲಿ: ರೈತ ಮುಖಂಡರು ವಿಧಾನಸೌಧಕ್ಕೆ ಬರಲು ಬಯಸಿದರೆ ಬರಬಹುದು ಎಂದು ರೈತ ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಹಿರಂಗ ಆಹ್ವಾನ ನೀಡಿದರು. ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ನವಲಗುಂದ ಪಟ್ಟಣದಲ್ಲಿ ಸಂಜೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಯತ್ನವಾಗಿ ಪಂಚರತ್ನ ಯೋಜನೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಮುಂಬರುವ ಚುನಾವಣೆಯಲ್ಲಿ ರೈತರು ಪಕ್ಷದ ಮೂಲಕ ವಿಧಾನಸೌಧ ಮೆಟ್ಟಿಲು ಏರಬಹುದು ಎಂದರು.
ನಾನು ಕಾಂಗ್ರೆಸ್ ಹಾಗೂ ಬಿಜೆಪಿ ಜತೆ ಸರ್ಕಾರ ನಡೆಸಿದ್ದು ಬೇಸತ್ತು ಹೋಗಿದ್ದೇನೆ. ಈ ಬಾರಿ ಸಂಪೂರ್ಣ ಬೆಂಬಲ ನೀಡಿ ಎಂದು ಮನವಿ ಮಾಡಿದ ಅವರು, ಇಡೀ ದೇಶದಲ್ಲಿ ಸರ್ವ ಜನಾಂಗದ ಶಾಂತಿಯ ತೋಟವನ್ನು ಬಿಜೆಪಿ ಸಂಘರ್ಷಕ್ಕೆ ಈಡುಮಾಡಿದೆ. ಹಿಂದೂ ಮುಸ್ಲಿಂ ಸೌಹಾರ್ದ ಬದುಕಿಗೆ ಕೊಳ್ಳಿ ಇಡಲಾಗಿದೆ. ಇದರಿಂದಾಗಿ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಲು ಮನವಿ ಮಾಡಿದರು. ಸಾಲ ತೀರಿಸದೇ ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಆದರೆ ಬಿಜೆಪಿ ಸರ್ಕಾರ ಈ ಬಗ್ಗೆ ಕಿಂಚಿತ್ತು ಕಾಳಜಿ ತೋರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ರಾಜ್ಯಕ್ಕೆ ಬರುತ್ತಲೇ ಇದ್ದಾರೆ.
ಆದರೆ ಅವರು ಪಕ್ಷ ಸಂಘಟನೆಗೆ ಮಾತ್ರ ಬರುತ್ತಿದ್ದಾರೆ. ರೈತರ ಆತ್ಮಹತ್ಯೆಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಬೆಲೆ ಏರಿಕೆಯಿಂದ ಜನರು ಬೇಸತ್ತಿದ್ದಾರೆ ಎಂದರು. ಕುಮಾರಸ್ವಾಮಿ ಅವರಿಗೆ ಇದೇ ಸಮಯದಲ್ಲಿ ಕಂಬಳಿ ಹೊದಿಸಿ, ಟಗರಿನ ಮರಿ ಕಾಣಿಕೆ ನೀಡಲಾಯಿತು. ಇದರೊಂದಿಗೆ ಸಾವಿತ್ರಿ ಪೂಜಾರ ಅವರಿಂದ ಕೈ ತುತ್ತು ನೀಡಲಾಯಿತು. ಇದೇ ವೇಳೆ ಮುಸ್ತಫಾ ಕುನ್ನಿಬಾವಿ ಸೇರಿದಂತೆ ಹಲವಾರು ಜೆಡಿಎಸ್ ಸೇರ್ಪಡೆಯಾದರು. ಗ್ರಾಮೀಣ ಜಿಲ್ಲಾಧ್ಯಕ್ಷ ವಿ.ಪಿ. ಗಂಗಾಧರಮಠ, ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ, ಆಕಾಂಕ್ಷಿಗಳಾದ ದೇವರಾಜ್ ಕಂಬಳಿ, ಪ್ರಕಾಶ ಅಂಗಡಿ, ಮಂಜುನಾಥ ಹಗೇದಾರ ಹಾಗೂ ಸ್ಥಳೀಯ ಮುಖಂಡರು ಇದ್ದರು.
ಪಾಪ, ಎಚ್‌ಡಿಕೆಗೆ ವಯಸ್ಸಾಗಿದೆ ನಿವೃತ್ತಿ ಆದರೆ ಆಗಲಿ ಬಿಡಿ: ಸಿದ್ದರಾಮಯ್ಯ
ಮಹದಾಯಿ ಬಗ್ಗೆ ಡಿಪಿಆರ್‌ಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರಬಹುದು. ಆದರೆ, ಯೋಜನೆ ಅನುಷ್ಠಾನ ಮಾಡಿದ್ದೀರಾ? ಒಂದೆಡೆ ಒಪ್ಪಿಗೆ ನೀಡಿ, ಮತ್ತೊಂದೆಡೆ ಗೋವಾ ಸರ್ಕಾರದಿಂದ ತಕರಾರು ಹಾಕಿಸುತ್ತಾರೆ. ತ್ರಿಬಲ್ ಎಂಜಿನ್ ಸರ್ಕಾರ ಕರ್ನಾಟಕ ಉಳಿಸುವುದು ಅನುಮಾನ.
-ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ