ಬಿಜೆಪಿಯದ್ದು ಭಾರತ್ ಮಾತಾಕೀ ಜೈ, ಶ್ರೀರಾಮ ಕೀ ಜೈ, ಆಂಜನೇಯ ಸ್ವಾಮಿ ಜೈ ಅನ್ನುವ ಸಂಸ್ಕೃತಿ. ಆದರೆ ಕಾಂಗ್ರೆಸ್‌ನದ್ದು ಟಿಪ್ಪು ಸಂತಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕುಕನೂರು (ಫೆ.16): ಬಿಜೆಪಿಯದ್ದು ಭಾರತ್ ಮಾತಾಕೀ ಜೈ, ಶ್ರೀರಾಮ ಕೀ ಜೈ, ಆಂಜನೇಯ ಸ್ವಾಮಿ ಜೈ ಅನ್ನುವ ಸಂಸ್ಕೃತಿ. ಆದರೆ ಕಾಂಗ್ರೆಸ್‌ನದ್ದು ಟಿಪ್ಪು ಸಂತಾನ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ‘ಪೇಜ್ ಪ್ರಮುಖರ ಸಮಾವೇಶ’ದಲ್ಲಿ ಮಾತನಾಡಿದ ಅವರು, ಯಲಬುರ್ಗಾದಿಂದ ಆರಂಭ ಆಗಿರುವುದು ಸಂಕಲ್ಪ ಯಾತ್ರೆ ಅಲ್ಲ, ವಿಜಯ ಯಾತ್ರೆ. ಆಂಜನೇಯ ಜನ್ಮ ಸ್ಥಳ ಅಂಜನಾದ್ರಿಯಾಗಿದೆ. ಇದು ಪವಿತ್ರ ಸ್ಥಳ. ಕುಕನೂರು ಮಹಾಮಾಯಾ ದೇವಿ ದರ್ಶನ ಪಡೆದು ಬಂದೆ. ತಾಯಿ ಪುಷ್ಪಾಶೀರ್ವಾದ ನೀಡಿದ್ದಾಳೆ. ಯಲಬುರ್ಗಾದಲ್ಲಿ ಬಿಜೆಪಿ ಗೆಲ್ಲುವುದು ಶತಸಿದ್ಧ ಎಂದರು.
ಮುಂದಿನ ವರ್ಷ ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಆಗಲಿದೆ. ಅಂಜನಾದ್ರಿಯಲ್ಲಿ ಆಂಜನೇಯ ಆಗ ಕುಣಿಯುತ್ತಾನೆ. ನಾವು ರಾಮ, ಆಂಜನೇಯನನ್ನು ಜಪಿಸುತ್ತೇವೆ. ದತ್ತ, ಆಂಜನೇಯ ಮಾಲೆ ಹಾಕುತ್ತೇವೆ. ಕಾಂಗ್ರೆಸ್‌ನವರು ಟಿಪ್ಪು ಮಾಲೆ ಹಾಕುತ್ತಾರೆ. ಕಾಂಗ್ರೆಸ್‌ನವರು ಟಿಪ್ಪು ಭಜನೆ ಮಾಡುತ್ತಾರೆ. ಹುಲಿಯಾ (ಸಿದ್ದರಾಮಯ್ಯ) ಕಾಡಿಗೆ ಹೋಗುವುದು, ಬಂಡೆ ಒಡೆಯುತ್ತದೆ (ಡಿಕೆಶಿ) ಎಂದು ಕಟೀಲ್ ಬವಿಷ್ಯ ನುಡಿದರು.
undefined
ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ
ಸೋನಿಯಾ ಕಾಲಿಗೆ ಸಿದ್ದು: ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಏಕವಚನದಲ್ಲಿ ಟೀಕಿಸುವ ಸಿದ್ದರಾಮಣ್ಣ ನೀವು ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆಗಿದ್ದೀರಿ. ದೇವೇಗೌಡರನ್ನು ನೀವು ತುಳಿದಿದ್ದೀರಿ. ನಾವು ತಾವಾಗಿ ಬಂದ ಶಾಸಕರನ್ನು ಕರೆದುಕೊಂಡು ಸರ್ಕಾರ ರಚನೆ ಮಾಡಿದ್ದೇವೆ ಎಂದು ಆಪರೇಷನ್ ಕಮಲವನ್ನು ಸಮರ್ಥಿಸಿಕೊಂಡರು. ಸಿದ್ದರಾಮಯ್ಯನವರೇ ನೀವು ಯಾವತ್ತೂ ಸಿಎಂ ಆಗಲ್ಲ. ಕತ್ತಲಲ್ಲಿ ಕ್ಷೇತ್ರ ಹುಡುಕುತ್ತಿದ್ದೀರಿ. ತಾಕತ್ತಿದ್ದರೆ ಬಾದಾಮಿಯಲ್ಲಿ ಮತ್ತೊಮ್ಮೆ ನಿಲ್ಲಿ. ಜನ ಏನು ಮಾಡ್ತಾರೆ ನೋಡಿ. ವರುಣಾದಲ್ಲಿಯೂ ತಿರಸ್ಕೃತರಾಗಿದ್ದಿರಿ. ಕೋಲಾರದಲ್ಲಿ ಮುನಿಯಪ್ಪನವರು ಮುನಿಸಿಕೊಂಡಿದ್ದಾರೆ ಎಂದರು.
ಜೀವ ಉಳಿಸಿದ ಮೋದಿ: ಕೋವಿಡ್ ವೇಳೆ ಭಾರತದಲ್ಲಿ ಪ್ರಧಾನಿ ಮೋದಿ ಅವರು ಲಸಿಕೆ ತಯಾರಿಸಲು ಆರಂಭಿಸಿದರು. ಇತರ ರಾಷ್ಟ್ರಗಳಿಗೆ ಲಸಿಕೆ ನೀಡಿದರು. ಪ್ರಧಾನಿ ಮೋದಿ ಅವರಿಂದ ಭಾರತೀಯರ ಜೀವ ಉಳಿದಿದೆ. ರಾಹುಲ್, ಸಿದ್ದರಾಮಯ್ಯ ಅವರು ಲಸಿಕೆ ನೀಡುವಾಗ ಲಸಿಕೆಯಿಂದ ಮಕ್ಕಳಾಗುವುದಿಲ್ಲ ಅಂದಿದ್ದರು. ಅದಕ್ಕೆ ರಾಹುಲ್ ಮದುವೆ ಆಗಿಲ್ಲ ಎಂದು ವ್ಯಂಗ್ಯವಾಡಿದರು.
ಎರಡು ಸಾವಿರ ಕೋಟಿ: ಸಚಿವ ಹಾಲಪ್ಪ ಆಚಾರರು .2000 ಕೋಟಿ ತಂದು ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಅವರ ಅಭಿವೃದ್ಧಿ ಕಾರ್ಯಕ್ಕೆ ಮಾಜಿ ಸಿಎಂ ಬಿಎಸ್‌ವೈ, ಸಿಎಂ ಬೊಮ್ಮಾಯಿ ಹಣ ನೀಡಿ ಕಾಮಧೇನು ಆಗಿದ್ದಾರೆ. ಮತ್ತೊಮ್ಮೆ ಯಲಬುರ್ಗಾ ಕ್ಷೇತ್ರದಲ್ಲಿ ಬಿಜೆಪಿ ಕಮಲ ಅರಳಲಿದೆ. ಕಾಂಗ್ರೆಸ್ ಮೂಲೆಗುಂಪಾಗಲಿದೆ ಎಂದರು.
ಭೀಮಾತೀರದ ವೈಷಮ್ಯಕ್ಕೆ ತೆರೆ ಎಳೆದ ಅಲೋಕ್ ಕುಮಾರ್: ಚಡಚಣ-ಬೈರಗೊಂಡ ಗ್ಯಾಂಗ್‌ಗಳ ನಡುವೆ ಸಂಧಾನ ಯಶಸ್ವಿ
ಕುಕ್ಕರ್ ಬಿರುಕು: ಡಿಕೆಶಿಗೆ ಎರಡು ಕುಕ್ಕರ್‌ಗಳ ಕಂಟಕವಿದೆ. ತೀರ್ಥಹಳ್ಳಿಯ ಕುಕ್ಕರ್‌ನಿಂದ ಪಕ್ಷದಲ್ಲಿ ಕಂಟಕ ಹಾಗೂ ಬೆಳಗಾವಿಯ ಕುಕ್ಕರ್‌ನಿಂದ ಕುಟುಂಬದಲ್ಲಿ ಬಿರುಕು ಮೂಡಲಿದೆ ಎಂದು ವ್ಯಂಗ್ಯವಾಡಿದರು.