ರೈತರ ಸಂಕಷ್ಟಅರಿಯದ ರಾಯರಡ್ಡಿ: ಸಚಿವ ಹಾಲಪ್ಪ ಆಚಾರ್

By Kannadaprabha News  |  First Published Feb 16, 2023, 1:20 AM IST

ರೈತರ ಕಷ್ಟಅರಿಯದೆ ನೀರಾವರಿಗೆ ಆದ್ಯತೆ ನೀಡದೆ ರಾಜಕಾರಣ ಮಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ ತಿಳಿಸಿದರು.


ಕುಕನೂರು (ಫೆ.16): ರೈತರ ಕಷ್ಟಅರಿಯದೆ ನೀರಾವರಿಗೆ ಆದ್ಯತೆ ನೀಡದೆ ರಾಜಕಾರಣ ಮಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ ತಿಳಿಸಿದರು. ಇಲ್ಲಿ ‘ಬಿಜೆಪಿ ಪೇಜ್‌ ಪ್ರಮುಖರ ಸಮಾವೇಶ’ದಲ್ಲಿ ಮಾತನಾಡಿದ ಅವರು, ರಾಯರಡ್ಡಿ ಅವರು 30 ವರ್ಷದಲ್ಲಿ ನೀರಾವರಿ ಬಗ್ಗೆ ಮಾತನಾಡಲಿಲ್ಲ. ರೈತರ ಬಗ್ಗೆ ಚಿಂತನೆ ಮಾಡಲಿಲ್ಲ. ಆದರೆ ಬಿಜೆಪಿಯವರು ಕೊಪ್ಪಳ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು ಎಂದರು. ಏತ ನೀರಾವರಿಯ ಯೋಜನೆಯ ಎರಡನೇ ಹಂತದ ಕಾಮಗಾರಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಒಂದು ಪೈಸೆ ಕೊಡಲಿಲ್ಲ. 

ಅನುಮೋದನೆಯನ್ನೂ ಮಾಡಲಿಲ್ಲ. ಈಗ ನೀರಾವರಿ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಗ್ರಾಮೀಣ ಒಳರಸ್ತೆ, ಕೆರೆಗಳನ್ನು ಅಭಿವೃದ್ಧಿಪಡಿಸಲಿಲ್ಲ ಎಂದು ಟೀಕಿಸಿದರು. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಭಾರತ ದೇಶದ ಕೀರ್ತಿ ಹೆಚ್ಚಿದೆ. ವಿಶ್ವವು ಭಾರತವನ್ನು ನೋಡುವ ಕೆಲಸ ಮಾಡಿದ್ದಾರೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ವಿದ್ಯಾರ್ಥಿಗಳಿಗೆ, ರೈತರಿಗೆ, ನೇಕಾರರಿಗೆ ಹಲವು ಯೋಜನೆಗಳನ್ನು ನೀಡಿದ್ದಾರೆ. ಗಣಿ ಇಲಾಖೆಗೆ ನಾನು ಸಚಿವನಾದ ಮೇಲೆ .6500 ಕೋಟಿ ರಾಜಧನವನ್ನು ಸಂಗ್ರಹಿಸಿದ್ದೇನೆ. ನನ್ನ ಆದ್ಯತೆ ಶಿಕ್ಷಣ ಮತ್ತು ನೀರಾವರಿಗೆ ಎಂದರು.

Tap to resize

Latest Videos

undefined

ಲವ್ ಜಿಹಾದ್ ಬಗ್ಗೆ ಮಾತ್ನಾಡೋ ನಳಿನ್‌ಗೆ ಲವ್ವಲ್ಲಿ ಹೆಚ್ಚು ಕಡಿಮೆ ಆಗಿರ್ಬೇಕು: ಬಿ.ಕೆ.ಹರಿಪ್ರಸಾದ್ ವ್ಯಂಗ್ಯ

ಸಂಸದ ಸಂಗಣ್ಣ ಕರಡಿ ಮಾತನಾಡಿ, ಹಾಲಪ್ಪ ಆಚಾರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಯಲಬುರ್ಗಾ, ಕುಷ್ಟಗಿ, ಕನಕಗಿರಿ ಭಾಗದಲ್ಲಿ ನೀರಾವರಿ ಕೆಲಸವಾಗುತ್ತಿದೆ. ಆನಂದ ಸಿಂಗ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಆಂಜನಾದ್ರಿ ಅಭಿವೃದ್ಧಿಗೆ .120 ಕೋಟಿ ಅನುದಾನ ತರಲು ಶ್ರಮಿಸಿದ್ದಾರೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್‌ ಮಾತನಾಡಿ, ರಾಹುಲ್‌ ಗಾಂಧಿ ಅವರು ಜೋಡೊ ಯಾತ್ರೆಯಲ್ಲಿ ಏನು ತೋಡಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಶುರುವಾಗಿದೆ. ಕಾಂಗ್ರೆಸ್‌ ಯಜಮಾನ ಇಲ್ಲದ ಪಕ್ಷವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದರು.

ವಿಧಾನಪರಿಷತ್‌ ಸದಸ್ಯೆ ಹೇಮಲತಾ ನಾಯಕ್‌, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ್‌, ಕನಕಗಿರಿ ಶಾಸಕ ಬಸವರಾಜ ದಡೇಸೂಗೂರು, ವಿಭಾಗೀಯ ಸಹ ಪ್ರಭಾರ ಚಂದ್ರಶೇಖರ ಹಲಗೇರಿ ಮಾತನಾಡಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಗುಳಗಣ್ಣವರ್‌, ನರಸಿಂಗರಾವ್‌ ಕುಲಕರ್ಣಿ, ವೀರೇಶ ಸಾಗೋಣಿ, ಶಿವಲೀಲಾ ದಳವಾಯಿ, ಶಕುಂತಲಾ ಮಾಪಾ, ಅರವಿಂದಗೌಡ ಪಾಟೀಲ್‌, ರತನ್‌ ದೇಸಾಯಿ, ಬಸವನಗೌಡ ತೊಂಡಿಹಾಳ, ಕಳಕಪ್ಪ ಕಂಬಳಿ, ವೀರಣ್ಣ ಹುಬ್ಬಳ್ಳಿ, ಬಸಲಿಂಗಪ್ಪ ಭೂತೆ, ಸಿ.ಎಚ್‌. ಪಾಟೀಲ್‌, ಕಳಕನಗೌಡ ಕಲ್ಲೂರು, ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ವೀರಭದ್ರಪ್ಪ ಅಬಾರಿ, ಶಿವಶಂಕರರಾವ್‌ ದೇಸಾಯಿ, ಸುಧಾಕರ ದೇಸಾಯಿ, ಶಂಕ್ರಪ್ಪ ಸುರಪುರ, ಶರಣಪ್ಪ ಈಳಗೇರ, ಶಂಭು ಜೋಳದ, ಶಿವಕುಮಾರ ನಾಗಲಾಪೂರಮಠ, ಶರಣಪ್ಪ ಹೊಸಕೇರಿ, ಸಿದ್ಲಿಂಗಯ್ಯ ಉಳ್ಳಾಗಡ್ಡಿ, ವೀರಣ್ಣ ಹುಬ್ಬಳ್ಳಿ, ಅಯ್ಯನಗೌಡ, ಶಂಕರಗೌಡ ಟಣಕನಕಲ್‌ ಇತರರಿದ್ದರು.

ಗಂಗಾವತಿಯಿಂದ ರಾಜಕೀಯ ಮರು ಪ್ರವೇಶಕ್ಕೆ ಜನಾರ್ದನ ರೆಡ್ಡಿ ಸಜ್ಜು

ಬೈಕ್‌ ರಾರ‍ಯಲಿ ಮೂಲಕ ಸ್ವಾಗತ: ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರನ್ನು ಬಿಜೆಪಿ ಮುಖಂಡರು ಮಸಬಹಂಚಿನಾಳ ಮೂಲಕ ನೂರಾರು ಬೈಕ್‌ಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು. ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತ, ಅಂಬೇಡ್ಕರ್‌ ವೃತ್ತ, ವೀರಭದ್ರಪ್ಪ ವೃತ್ತದ ಮೂಲಕ ತೆರಳಿ, ಮಹಾಮಾಯ ದೇವಿ ದರ್ಶನ ಪಡೆದು ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದರು. ಅಪಾರ ಪ್ರಮಾಣದ ಜನರು ಭಾಗಿಯಾಗಿದ್ದರು.

click me!