ಕುಮಾರಸ್ವಾಮಿಗೆ ಅಧಿಕಾರ ಇಲ್ದೆನೂ ಇರೋಕಾಗಲ್ಲ, ಅಧಿಕಾರ ಕೊಟ್ರೂ ನಿಭಾಯಿಸೋಕಾಗಲ್ಲ!

By Sathish Kumar KH  |  First Published Nov 18, 2023, 1:21 PM IST

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹಾಗಂತ ಅವರಿಗೆ ಅಧಿಕಾರ ಕೊಟ್ಟರೆ ನಿಭಾಯಿಸೋಕೆ‌ ಆಗಲ್ಲ.


ಮಂಡ್ಯ (ನ.18): ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಹಾಗಂತ ಅವರಿಗೆ ಅಧಿಕಾರ ಕೊಟ್ಟರೆ ನಿಭಾಯಿಸೋಕೆ‌ ಆಗಲ್ಲ. ಈಗಾಗಲೇ ಎರಡು ಬಾರಿ ಸಿಎಂ ಆದ್ರೂ‌ ಪೂರ್ಣಾವಧಿ ಮಾಡಿಲ್ಲ ಎಂದು ಕೃಷಿ ಸಚುವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.

ಮಂದ್ಯ ಜಿಲ್ಲೆಯ ಮದ್ದೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಗೆ ಅಧಿಕಾರ ಬಿಟ್ಟು ಇರೋಕೆ ಆಗಲ್ಲ. ಅವರಿಗೆ ಅಧಿಕಾರ ಕೊಟ್ಟರೆ ನಿಭಾಯಿಸೋಕೆ‌ ಆಗಲ್ಲ. ಕುಮಾರಸ್ವಾಮಿ ಬಗ್ಗೆ ಮಾತಾಡಲು ನನಗೆ ಆಸಕ್ತಿ ಇಲ್ಲ. ಎರಡು ಬಾರಿ ಸಿಎಂ ಆದ್ರೂ‌ ಪೂರ್ಣಾವಧಿ ಮಾಡಿಲ್ಲ. ರಾಷ್ಟ್ರದಲ್ಲಿ ಅಡ್ವಾನಿ, ವಾಜಪೇಯಿ, ಮನಮೋಹನ ಸಿಂಗ್, ಮೋದಿ ಎಲ್ಲರೂ ಅಧಿಕಾರ ಮಾಡಿದ್ದಾರೆ. ಈ‌ ಯಜಮಾನರು ನಮ್ಮ ಮಾಜಿ ಸ್ನೇಹಿತರನ್ನು ನೋಡಿದ್ರೆ ಪಾಪ ಅಯ್ಯೋ ಅನ್ನಿಸುತ್ತದೆ. ಕುಮಾರಸ್ವಾಮಿ ಅವರು ಆರೋಗ್ಯ ನೆಮ್ಮದಿಯಿಂದ ಇರಬೇಕು ಎಂದು ಕೇಳಿಕೊಳ್ಳುತ್ತೇನೆ. ನಮ್ಮನ್ನ ನೋಡಿ ಅವರಿಗೆ ತಡೆಕೊಳ್ಳೋಕೆ ಆಗ್ತಾ ಇಲ್ಲ. ಚಲುವರಾಯಸ್ವಾಮಿ ನಿವೃತ್ತಿ ತಗೊಂಡ್ರೆ ನೆಮ್ಮದಿಯಾಗಿ ಇರುತ್ತಾರಾ ಕೇಳಿ ಎಂದರು.

Tap to resize

Latest Videos

'ಎಲ್ಲಿದ್ದೀಯಪ್ಪಾ ನಿಖಿಲ್‌..' ಎಂದಾಗ ಓಗೊಟ್ಟಿದ್ದು ಇವರ ಮಗ ಮಾತ್ರ ಅಲ್ವಾ?.. ಎಚ್‌ಡಿಕೆಗೆ ಚಾಟಿ ಬೀಸಿದ ಸಿದ್ಧರಾಮಯ್ಯ!

ಆರು ತಿಂಗಳಿನಿಂದ ಸರ್ಕಾರದ ಕೆಲಸ ಸಹಿಸಲಾರದೆ ವಿರೋಧ ಪಕ್ಷದವರು ಸುಮ್ಮನೆ ಮಾತಾಡುತ್ತಾ ಇದ್ದಾರೆ. ಅದ್ರಲ್ಲೂ ಜೆಡಿಎಸ್ ಅವರು ಇಲ್ಲಸಲ್ಲದ ಹೇಳಿಕೆಗಳನ್ನು ಕೊಡ್ತಾ ಇದಾರೆ. ನಾವು ಅದರ ಕಡೆ ಗಮನ ಕೊಡಲ್ಲ. ರಾಜ್ಯದಲ್ಲಿನ ಸಮಸ್ಯೆಗಳ‌ ಬಗ್ಗೆ ಗಮನ ಕೊಡ್ತಾ ಇದೀವಿ. ನಮ್ಮ ಸರ್ಕಾರದ ಕೆಸಲದ ವೇಗ ಕಡಿಮೆ ಮಾಡಲು ಈ ರೀತಿ ಹೇಳಿಕೆ ಕೊಡ್ತಾ ಇದಾರೆ. ಹಿಟ್ ಅಂಡ್ ರನ್ ಮಾಡುವ ಕೆಲಸವಾಗುತ್ತಾ ಇದೆ. ಕಾಂಟ್ರವರ್ಸಿ ಇದ್ರೆ ಮಾಧ್ಯಮಗಳು ತೋರಿಸುತ್ತೆ ಎಂದು ಅವರು ಅಂದುಕೊಂಡಿದ್ದಾರೆ. ಇದಕ್ಕಾಗಿ ಕೇವಲ ಆರೋಪಗಳನ್ನು ಮಾಡಿಕೊಂಡು ಬರ್ತಾ ಇದ್ದಾರೆ ಎಂದು ಕಿಡಿಕಾರಿದರು.

ವಿರೋಧ ಪಕ್ಷದವರ ಟೀಕೆ ಜನರ ಅಭಿವೃದ್ಧಿಗೆ ಪೂರಕವಾಗಿ ಇರಬೇಕು. ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲು ಸರ್ಕಸ್ ಮಾಡಿದ್ದಾರೆ. ಅಂತೂ ಅಶೋಕ್ ನೇಮಕ ಮಾಡಿದ್ದಾರೆ. ಇವರು ಯತೀಂದ್ರ ಬಗ್ಗೆ ಮಾತಾಡುತ್ತಾರೆ. ಆದರೆ, ಯತೀಂದ್ರ ಆ ಕ್ಷೇತ್ರದ ಮಾಜಿ ಶಾಸಕ. ಅಪ್ಪ ರಾಜ್ಯದ ಸಿಎಂ ಆಗಿದ್ದಾರೆ, ಮುಂದೆ ಯತೀಂದ್ರ ಆ ಕ್ಷೇತ್ರದ ನಾಯಕರಾಗಲಿದ್ದಾರೆ. ಹೀಗಿರುವಾಗ ಆ ಕ್ಷೇತ್ರದಲ್ಲಿ ಕೆಲಸಗಳ ಬಗ್ಗೆ ನೋಡಿ ಕೊಂಡರೆ ತಪ್ಪೇನು. ವರುಣ ಕ್ಷೇತ್ರದಲ್ಲಿ ಒಂದು ಸಮಿತಿಯಲ್ಲಿ ಇದ್ದಾರೆ. ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಹಾಕಿ ಎನ್ನೋದ್ರಲ್ಲಿ ತಪ್ಪೇನು. ಸಾರ್ವಜನಿಕರೇ ನಮ್ಮ ಕ್ಷೇತ್ರಕ್ಕೆ ಇಂತಹ ಅಧಿಕಾರಿ ಬೇಕು ಅಂತಾರೆ. ಮಾಜಿ ಶಾಸಕ ಕೇಳುವುದರಲ್ಲಿ ತಪ್ಪೇನು ಎಂದು ಕೇಳಿದರು.

ರಾಜ್ಯದ 5 ಎಸ್ಕಾಂಗಳಲ್ಲಿ ಈ 2 ದಿನ ಆನ್‌ಲೈನ್‌ ಸೇವೆ ಸ್ಥಗಿತ: ಕಾರಣ ಇಲ್ಲಿದೆ?

ಕುಮಾರಸ್ವಾಮಿ ಕುಟುಂಬದವರು ಅಧಿಕಾರದಲ್ಲಿ ಇದ್ದಾಗ ಅವರು ಏನು ಮಾಡಿಲ್ಲ. ಡಿಕೆಶಿ ಅವರ ಲುಲ್ಲು ಮಾಲ್ ಬಗ್ಗೆ ಮಾತಾಡುತ್ತಾರೆ. ತಪ್ಪು ಮಾಡಿದ್ರೆ ತನಿಖೆ ಮಾಡಲಿ. 10-15 ವರ್ಷದ ಹಳೆ ಜಾಗ ಅವರದ್ದು‌. ನನ್ನ ಬಗ್ಗೆಯೂ ಅವರು ಮಾತಾಡಿದ್ದಾರೆ. ನಾನು ಸರ್ಕಾರಿ ಜಾಗವನ್ನು ಅನುಮೋದನೆ ಮಾಡಿಕೊಂಡರೆ ಅಪರಾದ. ಗ್ರಾಂಡ್ ಜಮೀನನ್ನು ನಾನು‌ ತೆಗೆದುಕೊಂಡರೆ ಅಪರಾಧ. ನಾನು ಒಬ್ಬ ಜೋಡಿಧಾರನ ಜಮೀನು ತೆಗೆದುಕೊಂಡಿರೋದು. ಅಲ್ಲಿ 200 ಎಕರೆಯ ಸಮಸ್ಯೆ ಇದೆ. ಇದಕ್ಕೆ ಒಂದು ಕಮಿಟಿ ಸಹ ಇದೆ. ಅವರು ಅದನ್ನು ತನಿಖೆ ಮಾಡುತ್ತಾರೆ. ನಾನು ಹಣ ಕೊಟ್ಟಿ ಖರೀದಿ ಮಾಡಿದ್ದೇನೆ. ಚುನಾವಣೆಯ ವೇಳೆ ನಾನು ಇದನ್ನು ತೋರಿಸಿಕೊಂಡಿದ್ದೇನೆ ಎಂದರು.

click me!