ನಗರ ಪ್ರದೇಶಗಳಲ್ಲಿ ಕಾನ್ವೆಂಟ್‌ಗಳು ಮಕ್ಕಳಿಗೆ ಅಂಕ ಪಡೆಯುವುದನ್ನು ಕಲಿಸಿದರೆ ಗ್ರಾಮೀಣಾ ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸುತ್ತವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಶ್ಲಾಘಿಸಿದರು.
ಕೋಲಾರ (ಆ.07): ನಗರ ಪ್ರದೇಶಗಳಲ್ಲಿ ಕಾನ್ವೆಂಟ್‌ಗಳು ಮಕ್ಕಳಿಗೆ ಅಂಕ ಪಡೆಯುವುದನ್ನು ಕಲಿಸಿದರೆ ಗ್ರಾಮೀಣಾ ಶಾಲೆಗಳು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕೃತಿ, ಸಂಸ್ಕಾರ ಕಲಿಸುತ್ತವೆ ಎಂದು ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಶ್ಲಾಘಿಸಿದರು. ಶ್ರೀನಿವಾಸಪುರ ತಾಲೂಕಿನ ಚಲ್ದಿಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಯಲು ರಂಗ ಮಂದಿರದಲ್ಲಿ ಹಿರಿಯ ವಕೀಲ ದಿ. ಕೆ.ಮುನಿಸ್ವಾಮಿಗೌಡರ ಜನ್ಮ ಶತಾಬ್ದಿ ಅಂಗವಾಗಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಿಸಿ ಮಾತನಾಡಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಕನಸು ಕಾಣುವಂತೆ ಶಿಕ್ಷಕರು ಸಹ ಶ್ರಮಪಟ್ಟು ಗುಣಮಟ್ಟದ ಶಿಕ್ಷಣ ನೀಡುವುದನ್ನು ಗ್ರಾಮೀಣ ಭಾಗಗಳಲ್ಲಿ ಈಗಲೂ ಕಾಣಬಹುದು ಎಂದರು.
ಶಾಲೆಗೆ ಸೌಲಭ್ಯ ಕಲ್ಪಿಸಲು ಕ್ರಮ: ಚಲ್ದಿಗಾನಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಅಗತ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಗಳಿಗೆ ಶಿಕ್ಷಣ ಇಲಾಖೆಗೆ ಸೂಚಿಸುತ್ತೇನೆ, ನನಗೆ ಶಾಲೆ ಅಭಿವೃದ್ದಿಪಡಿಸಲು ವೈಯುಕ್ತಿಕ ಜವಾಬ್ದಾರಿ ನೀಡಿದಲ್ಲಿ ಭರಿಸಲು ಸಿದ್ದನಿದ್ದೇನೆ. ಶಾಲೆಯನ್ನು ಮಾದರಿಯನ್ನಾಗಿ ಮಾಡುವುದು ಕೆ.ಮುನಿಸ್ವಾಮಿ ಗೌಡರ ಕನಸು ನನಸು ಮಾಡಲು ನನ್ನ ಸಹಾಕಾರ ಸದಾ ಕಾಲ ಇರುತ್ತದೆ ಎಂದು ಅವರು ಭರವಸೆ ನೀಡಿದರು. ಕೆರೆಗಳಲ್ಲಿ ಹೂಳು ಎತ್ತುವಿಕೆ ಕೆಲಸವನ್ನು ದೇವನಹಳ್ಳಿ ಕ್ಷೇತ್ರದಲ್ಲಿ ಮಾಡುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ವೇಮಗಲ್ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದಂತೆ ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಮಾನಸಿಕ ಅಸ್ವಸ್ಥ ಮುಸ್ಲಿಂ ಯುವತಿಯನ್ನು ಸ್ವೀಕರಿಸಲು ಒಪ್ಪದ ಕುಟುಂಬ: ಸೂಕ್ತ ಕ್ರಮಕ್ಕೆ ವಿಶು ಶೆಟ್ಟಿ ಆಗ್ರಹ
ದಲಿತರ ಕೋಟೆ ಕೋಲಾರ: ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಮಾತನಾಡಿ, ನಾನು ಮೈಸೂರಿನಲ್ಲಿದ್ದರೂ ಸಹ ನನ್ನ ತವರು ಶ್ರೀನಿವಾಸಪುರದ ಜೋಡಿಕೊತ್ತಪಲ್ಲಿ, ಸಿಎಂ ಸಿದ್ದರಾಮಯ್ಯರಿಗೆ ರಾಜಕೀಯವಾಗಿ ಜನ್ಮ ನೀಡಿದ್ದು ನಿಮ್ಮ ಕೋಲಾರ ಜಿಲ್ಲೆ. ಅಹಿಂದವನ್ನು ಹುಟ್ಟು ಹಾಕಿದ್ದು ಇದೇ ಜಿಲ್ಲೆ. ಹಾಗಾಗಿ ಅವರು ಮುಖ್ಯ ಮಂತ್ರಿಯಾಗಲು ಕೋಲಾರ ಜಿಲ್ಲೆಯೇ ಅಡಿಪಾಯವಾಗಿದೆ. ರಾಜ್ಯಕ್ಕೆ ಪ್ರಥಮ ಮುಖ್ಯ ಮಂತ್ರಿ ನೀಡಿರುವುದು ಕೋಲಾರ ಆಗಿದೆ. ಕೋಲಾರ ದಲಿತರ ಭದ್ರ ಕೋಟೆ. ಕೋಲಾರವು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿ ಕೆ.ಎ.ಎಸ್. ಐ.ಎ.ಎಸ್ ಅಧಿಕಾರಿಗಳ ತವರು. ದಲಿತರು ಬಹುಸಂಖ್ಯಾತರಾಗಿದ್ದರೂ ರಾಜ್ಯದಲ್ಲಿ ಸಿಎಂ ಸ್ಥಾನ ಸಿಗದೆ ಇರುವುದು ದುರಾದೃಷ್ಟಕರ. ಮುಂದಿನ ದಿನಗಳಲ್ಲಿ ಕೆ.ಎಚ್.ಮುನಿಯಪ್ಪ ಆ ಸ್ಥಾನ ಪಡೆಯಲಿ ಎಂಬುವುದು ನಮ್ಮಗಳ ಆಶಯ ಎಂದರು. ರಾಜ್ಯದಲ್ಲಿ ಕೆಂಪೇಗೌಡರ ಭಜನೆಗಳನ್ನು ಮಾಡುತ್ತಾರೆ, ಆದರೆ ಅವರು ನಿರ್ಮಿಸಿದಂತ ಕೆರೆಗಳನ್ನು ನುಂಗಿ ನೀರು ಕುಡಿದ್ದಿದ್ದಾರೆ ಹೊರತು ಅವರಿಗೆ ಕೆಂಪೇಗೌಡರ ಹೆಸರು, ಅವರು ನಿರ್ಮಿಸಿದ್ದ ಆಸ್ತಿಗಳನ್ನು ಉಳಿಸುವಂತ ಕಾಳಜಿಯು ಯಾರಿಗೂ ಇಲ್ಲವಾಗಿದೆ ಎಂದು ಟೀಕಿಸಿದರು.
ಕೋಲಾರ ಜಿಲ್ಲೆ ಅಭಿವೃದ್ಧಿಗೆ 74 ಕೋಟಿ ಅನುದಾನ: ಸಚಿವ ಬೈರತಿ ಸುರೇಶ್
ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ: ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್.ಮುನಿಯಪ್ಪ ಅವರು, ಸದ್ಯಕೆ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಈ ವಿಷಯ ಸದ್ಯಕೆ ಅಪ್ರಸ್ತುತ ಎಂದು ತೆರೆ ಎಳೆದರು. ಈ ಸಂದರ್ಭದಲ್ಲಿ ಹೈಕೋರ್ಚ್ ಹಿರಿಯ ವಕೀಲ ಎಂ. ಶಿವಪ್ರಕಾಶ್, ಜಾಲಪ್ಪ ಆಸ್ಪತ್ರೆಯ ನಿವೃತ್ತ ಅಧೀಕ್ಷಕ ಡಾ.ಬೋರೇಗೌಡ, ಮಾವು ಅಭಿವೃದ್ದಿ ಮಂಡಳಿಯ ಮಾಜಿ ಅಧ್ಯಕ್ಷ ಎಲ್.ಗೋಪಾಲ್‌ಕೃಷ್ಣ, ಪ್ರಾಥಮಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಸಂಪತ್ ಕುಮಾರ್, ಪಿಚ್ಚಹಳ್ಳಿ ಶ್ರೀನಿವಾಸ್, ಡಾ.ಜಗದೀಶ್, ದಲಿತ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಚಲ್ದಿಗಾನಹಳ್ಳಿ ಗ್ರಾ.ಪಂ. ಮಾಜಿ ಸದಸ್ಯ ಗೋಪಾಲಗೌಡ, ಮುಖಂಡರಾದ ಶ್ರೀನಿವಾಸಪ್ಪ, ಪ್ರದೀಪ್, ಅನಿಲ್ ಕುಮಾರ್, ಮುನಿಯಪ್ಪ, ಖಾದರ್, ಮುಖ್ಯ ಶಿಕ್ಷಕ ಗೋವಿಂದರೆಡ್ಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮೇನಾರಾಯಣ, ಕಾರ್ಯಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಉದಯಶಂಕರ್, ಪ್ರಸಾದ್ ಬಾಬು ಇದ್ದರು.