ಈ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ. ತಾವೊಬ್ಬ ಹಿಂದುಳಿದ ವರ್ಗದವರಾಗಿ, ಹಿಂದುಳಿದವರಿಗಾಗಿ ಈ ಬಾರಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಹೇಳಿದರು.
ಕಾರವಾರ (ಮೇ.19): ಲೋಕಸಭಾ ಚುನಾವಣೆ ನಡೆಯಲು ವರ್ಷವಿದೆ. ಈ ಬಾರಿಯ ಚುನಾವಣೆಯಲ್ಲಿ ತಾವು ಸ್ಪರ್ಧಿಸಲು ಗಂಭೀರವಾಗಿ ಚಿಂತನೆ ಮಾಡಿದ್ದೇನೆ. ಈ ಲೋಕಸಭಾ ಕ್ಷೇತ್ರದಲ್ಲಿ 25 ವರ್ಷಗಳಿಂದ ಹಿಂದುಳಿದವರಿಗೆ ಅವಕಾಶ ಸಿಕ್ಕಿಲ್ಲ. ತಾವೊಬ್ಬ ಹಿಂದುಳಿದ ವರ್ಗದವರಾಗಿ, ಹಿಂದುಳಿದವರಿಗಾಗಿ ಈ ಬಾರಿ ಸ್ಪರ್ಧಿಸುತ್ತಿದ್ದೇನೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದು, ಜಿಲ್ಲೆಯ ಎಲ್ಲ ಭಾಗದಲ್ಲೂ ನಮ್ಮ ಬೆಂಬಲಿಗರಿದ್ದಾರೆ. ಅವರ ಅಭಿಪ್ರಾಯ ಪಡೆದು ಯಾವ ಪಕ್ಷದಿಂದ ಸ್ಪರ್ಧಿಸಬೇಕು ಎಂದು ಅಂತಿಮ ನಿರ್ಧಾರ ಮಾಡಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾರ್ಯ ವ್ಯಾಪ್ತಿಯಲ್ಲಿ ಪ್ರಚಾರ, ಪ್ರವಾಸ ಪ್ರಾರಂಭಿಸುತ್ತೇನೆ ಎಂದರು.
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ. ಕುಮಾರಸ್ವಾಮಿ ಸೂಚನೆಯ ಮೇರೆಗೆ ಲೋಕಸಭಾ ಚುನಾವಣೆಗೆ ಕೇವಲ 30 ದಿನವಿರುವಾಗ ಜೆಡಿಎಸ್‌ನಿಂದ ಕಣಕ್ಕೆ ಇಳಿದಿದ್ದೆ. ಯಾವುದೇ ರೀತಿಯಲ್ಲೂ ಪೂರ್ವ ತಯಾರಿಯಲ್ಲಿ ಮಾಡಿಕೊಂಡಿರಲಿಲ್ಲ. ಜೆಡಿಎಸ್‌ನಲ್ಲಿ ಸಂಘಟನೆ ಕೂಡ ಇರಲಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಕಾರಣ ನಾವು ಕಾಂಗ್ರೆಸ್ಸಿನ ಮೇಲೆಯೇ ಸಂಪೂರ್ಣ ಅವಲಂಬಿತವಾಗುವ ಸಂದರ್ಭವಿತ್ತು. ಕೆಲವು ಕಾಂಗ್ರೆಸ್ ನಾಯಕರು ತಮಗೆ ಬೆಂಬಲ ನೀಡಲು ವಿರೋಧ ಮಾಡಿದ್ದರು. ಆದಾಗ್ಯೂ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬರುವ ಎಂಟು ವಿಧಾಸಭಾ ಕ್ಷೇತ್ರಗಳಲ್ಲಿ ಓಡಾಡಿ 3- 4 ಲಕ್ಷ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೆ ಎಂದು ತಿಳಿಸಿದರು.
ಚಾಮರಾಜನಗರ ಮೌಢ್ಯ ಅಳಿಸಿದ್ದ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ!
ರೂಪಾಲಿಗೆ ಟಿಕೆಟ್ ತಪ್ಪಿಸಲು ಮುಖಂಡರ ಪ್ರಯತ್ನ: ಕಾರವಾರ ಶಾಸಕಿಯಾಗಿದ್ದ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ತಪ್ಪಿಸಬೇಕೆಂದು ಎಲ್ಲ ಮುಖಂಡರು ಮಾತನಾಡಿದ ಆಡಿಯೋ ತಮ್ಮ ಬಳಿ ಇದೆ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಇರುವುದಕ್ಕೆ ರೂಪಾಲಿ ಅವರಿಗೆ ಇಷ್ಟೊಂದು ಮತಗಳು ಬಂದಿವೆ. ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ಸೈಲ್ ಅವರಿಗೆ ಬೆಂಬಲ ನೀಡಿದ್ದೆ. ಕ್ಷೇತ್ರದ ಅಭಿವೃದ್ಧಿ ಯೋಜನೆಗಳಿಗಾಗಿ ಅವರೊಂದಿಗೆ ಅಭಿವೃದ್ಧಿ ಪರವಾದ ಡೀಲ್ ನಡೆದಿತ್ತು. ಒಬ್ಬ ಮಹಿಳೆಯನ್ನು ಸೋಲಿಸಲು ಎಲ್ಲ ಗಂಡಸರೂ ಒಂದಾಗಿದ್ದಾರೆ ಎಂದು ರೂಪಾಲಿ ಟೀಕಿಸಿದ್ದರು. ಹಾಗಿದ್ದರೆ ಅವರೊಂದಿಗೆ ಪ್ರಚಾರ ನಡೆಸುತ್ತಿದ್ದ ಗಣಪತಿ ಉಳ್ವೇಕರ್ ಏನು? ಎಂದು ವ್ಯಂಗ್ಯ ನುಡಿದರು.
ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಿ: ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಶಾಸಕರ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು. ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಶಾಸಕ ಸತೀಶ ಸೈಲ್ ಹಾಗೂ ಮಂಕಾಳ ವೈದ್ಯ ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ವಿವರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈಗಿರುವ ಪದ್ಧತಿಯಂತೆ ಎರಡು ದಿನಕ್ಕೊಮ್ಮೆ ಟ್ಯಾಂಕರ್‌ನಲ್ಲಿ ಕುಡಿಯುವ ನೀರು ಪೂರೈಸುವ ಬದಲು ಪ್ರತಿದಿನ ಪೂರೈಸುವುದು.
ರಾಮನಗರ ಕ್ಷೇತ್ರದಲ್ಲಿಯೇ ರಾಜಕೀಯ ಮರು ಜನ್ಮ: ನಿಖಿಲ್ ಕುಮಾರಸ್ವಾಮಿ
ಅವಶ್ಯಕತೆ ಇರುವ ಬೋರವೆಲ್‌ಗಳನ್ನು ದುರಸ್ತಿ ಮಾಡುವುದು, ಅವಶ್ಯಕತೆ ಇದ್ದರೆ ಹೊಸ ಬೋರವೆಲ್ ಕೊರೆಸುವುದು. ನೀರಿನ ಸಮಸ್ಯೆ, ಪೂರೈಕೆ ಬಗ್ಗೆ ಅಧಿಕಾರಿಗಳು ಮೂರು ದಿನಗಳಲ್ಲಿ ವರದಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಂಚಾಯಿತಿಗಳಲ್ಲಿ ಹಣದ ಅಭಾವ ಇದೆ ಎಂದು ಎಲ್ಲಿಯೂ ಕುಡಿಯುವ ನೀರಿಗೆ ತೊಂದರೆ ಬಾರದ ಹಾಗೆ ಅಧಿಕಾರಿಗಳು ನೋಡಿಕೊಳ್ಳುವುದು. ಎಲ್ಲ ತಾಲೂಕುಗಳ ಕುಡಿಯುವ ನೀರು ಸರಬರಾಜು ನೋಡೆಲ್ ಅಧಿಕಾರಿಗಳ ಮತ್ತು ನೀರು ಪೂರೈಸುವ ಕಾಂಟ್ರ್ಯಾಕ್ಟ್ದಾರರ ಮೊಬೈಲ್ ಸಂಖ್ಯೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಬೇಕು. ಅವಶ್ಯಕತೆ ಇದ್ದವರು ದಿನದ ಯಾವ ಸಮಯದಲ್ಲಿಯೂ ಈ ಅಧಿಕಾರಿಗಳನ್ನು ಅವರವರ ದೂರವಾಣಿಗಳಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಲಾಯಿತು.