Chikkamagaluru Election Result 2023: ಸಿ.ಟಿ ರವಿ ಸೋಲಿಗೆ ಕಾರಣ ಅಪಪ್ರಚಾರ, ಜಾತಿ ರಾಜಕಾರಣ

By Suvarna News  |  First Published May 19, 2023, 10:33 PM IST

ಸಿ.ಟಿ ರವಿ ಸೋಲಿಗೆ ಕ್ಷೇತ್ರದಲ್ಲಿ ನಡೆದಂತಹವ ವ್ಯಾಪಕ ಜಾತಿ ರಾಜಕಾರಣ  ಅಪ್ರಚಾರ ಕಾರಣವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಚಿಕ್ಕದೇವನೂರು ರವಿ ಆರೋಪಿಸಿದ್ದಾರೆ.


ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಮೇ.19): ಚಿಕ್ಕಮಗಳೂರು ಕ್ಷೇತ್ರದ ಮಾಜಿ ಶಾಸಕ  ಸಿ.ಟಿ ರವಿ ಸೋಲಿಗೆ ಕ್ಷೇತ್ರದಲ್ಲಿ ನಡೆದಂತಹವ ವ್ಯಾಪಕ ಜಾತಿ ರಾಜಕಾರಣ  ಅಪ್ರಚಾರ ಕಾರಣವಾಗಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಚಿಕ್ಕದೇವನೂರು ರವಿ ಆರೋಪಿಸಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಅವರು ನೂತನವಾಗಿ ಆಯ್ಕೆಯಾದ ಹೆಚ್ ಡಿ  ತಮ್ಮಯ್ಯ ನವರಿಗೆ ಬಿಜೆಪಿ ಅಭಿನಂದಿಸುತ್ತದೆ ಆದ್ರೆ  ಅಧಿಕಾರ ಸಿಕ್ಕಬರದಲ್ಲಿ ನೀಡುವ ಹೇಳಿಕೆಗಳು  ಜವಾಬ್ದಾರಿಯುತವಾಗಿ ಇರಲಿ ಎಂದು ಸಲಹೆ ನೀಡಿದರು. ಸಿ.ಟಿ ರವಿ ಕ್ಷೇತ್ರದಲ್ಲಿ ಸೋಲು ಪ್ರಮುಖವಾದ ಕಾರಣ ಅತೀಯಾದ ಆತ್ಮವಿಶ್ವಾಸ, ಜಾತಿ ರಾಜಕಾರಣ, ಅಪ್ರಚಾರದಿಂದ ಸೋಲಾಗಿದೆ ಎಂದರು.ಸಿ.ಟಿ ರವಿ ಶಾಸಕರಾಗಿದ್ದ ಅವಧಿಯಲ್ಲಿ ಯಾವುದೇ ಜಗಳ,  ವ್ಯಾಜ್ಯಗಳು ಕೋಮುಗಲಬೆಗಳು ನಡೆದಿಲ್ಲ ಎಂಬುದನ್ನು ಈಗೀನ  ಶಾಸಕರು ಅರ್ಥಮಾಡಿಕೊಳ್ಳಬೇಕೆಂದರು.

Tap to resize

Latest Videos

undefined

ಕೆರೆ ಕಾಮಗಾರಿ ಬಗ್ಗೆ ಸಮಗ್ರ ತನಿಖೆ ನಡೆಯುಲಿ: 
ಬಸವನಹಳ್ಳಿ ಕೆರೆಕಾಮಗಾರಿಯಲ್ಲಿ  ಅವ್ಯವಹಾರ ನಡೆದಿದೆ ಎಂದು ಶಾಸಕರು ಹೇಳಿದ್ದಾರೆ. ಏನು ಅವ್ಯವಹಾರ ನಡೆದಿದೆ ಎಂಬುದನ್ನು ಶಾಸಕರು ಸ್ಪಷ್ಟವಾಗಿ ತಿಳಿಸಿಲ್ಲ, ಕೋಟೆ ತಾವರೆಕೆರೆ ಅಭಿವೃದ್ಧಿಯನ್ನು ಏಕೆ ಬಿಟ್ಟರು ಎಂಬುದು ಗೊತ್ತಿಲ್ಲ. ಕೋಟೆಕೆರೆ ಅಭಿವೃದ್ಧಿಯನ್ನು ಏಕೆ ಕೈಬಿಟ್ಟರು ಗೊತ್ತಿಲ್ಲ ಅದನ್ನು ಸೇರಿಸಿಕೊಂಡು ತನಿಖೆ ನಡೆಸಲು ಮುಂದಾಗಲಿ ಅದಕ್ಕೆ ಪಕ್ಷದ ಬೆಂಬಲವಿದೆ ಎಂದು ತಿಳಿಸಿದರು.ಜನಪರವಾದ ಕೆಲಸವನ್ನು ಶಾಸಕರು ಮಾಡುತ್ತಾರೆಂಬ ವಿಶ್ವಾಸ ಪಕ್ಷದ್ದಾಗಿದೆ. ಆದರೆ ಶಾಸಕರು ತಪ್ಪೆಸಗಿ ದಾಗ ಟೀಕಿಸುವ ಮತ್ತು ಸರಿದಾರಿಯಲ್ಲಿ ನಡೆಯಲು ಪಕ್ಷ ಸಲಹೆ ನೀಡುತ್ತದೆ ಎಂದರು.  

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಕ್ಷಣ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೆ: 
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಕ್ಷಣ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೆ? ಅವರು ನಮ್ಮ ಪಕ್ಷದಲ್ಲಿ ಇರುವಾಗ ನಗರಸಭೆ ಸದಸ್ಯರಾಗಿ, ಉಪಾಧ್ಯಕ್ಷರಾಗಿ, ಅಧ್ಯಕ್ಷರಾದಾಗ ಪ್ರಜಾಪ್ರಭುತ್ವ ಇರಲಿಲ್ಲವೇ? ಪಕ್ಷ ಬಿಟ್ಟು ಶಾಸಕರಾದ ಕೂಡಲೇ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆಯೇ?  ಅದನ್ನು ಮರು ಸ್ಥಾಪಿಸುತ್ತೇನೆ ಎಂದಿರುವುದು ಶಾಸಕರ ತಿಳಿವಳಿಕೆ ಕೊರತೆ ತೋರಿಸುತ್ತಿದೆ ಎಂದರು.

ಪ್ರಜಾಪ್ರಭುತ್ವ ಕಗ್ಗೊಲೆ ಎಂಬ ಹೇಳಿಕೆ ಬಾಲಿಶವಾಗಿದೆ. ಭಾರತದ ಪ್ರಜಾಪ್ರಭುತ್ವ ಯಾವತ್ತೂ ಗಟ್ಟಿಯಾಗಿಯೇ ಇರುತ್ತದೆ. ಅದರ ಪರಿಣಾಮವೇ ನೀವು ಶಾಸಕರಾಗಿ ಆಯ್ಕೆಯಾಗಿದ್ದೀರಿ ಎಂಬುದನ್ನು ಮರೆಯಬಾರದು.ಭ್ರಷ್ಟಾಚಾರ ರಹಿತ ಜನಸ್ನೇಹಿ ಆಡಳಿತಕ್ಕೆ ಆದ್ಯತೆ ನೀಡುವುದಾಗಿ ಹೇಳಿರುವುದನ್ನು ಬಿಜೆಪಿ ಸ್ವಾಗತಿಸುತ್ತದೆ. ಶಾಸಕರ ಹೇಳಿಕೆ ಆರಂಭ ಶೂರತ್ವ ಆಗದಿರಲಿ ಎಂಬುದನ್ನು ನಮ್ಮ ಪಕ್ಷ ಬಯಸುತ್ತದೆ ಎಂದು ತಿಳಿಸಿದರು.

Siddaramaiah Oath Ceremony: ಸಿದ್ದರಾಮಯ್ಯ ಎಂಬ ಹೆಸರಿನ ನಾನು.....

ನೂತನ ಶಾಸಕರಿಂದ ಭ್ರಷ್ಟಾಚಾರ ರಹಿತ ಆಡಳಿತ ನಿರೀಕ್ಷಸಲು ಸಾಧ್ಯವೆ: 
ಚುನಾವಣೆಗೆ ಮೊದಲು ತಮ್ಮಯ್ಯನವರು ನೀಡಿದ್ದ ಹೇಳಿಕೆಯನ್ನು ಇಲ್ಲಿ ಪಕ್ಷ ನೆನಪಿಸುವ ಕೆಲಸವನ್ನು ಮಾಡುತ್ತದೆ. ನಾನು ಶೇ.70 ಪ್ರಾಮಾಣಿಕ, ಉಳಿದ ಶೇ.30 ವ್ಯವಸ್ಥೆಯೊಂದಿಗೆ ಹೊಂದಿಕೊಂಡಿದ್ದೇನೆ ಎಂದಿದ್ದರು. ಶೇ.30 ವ್ಯವಸ್ಥೆ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ನೂತನ ಶಾಸಕರಿಂದ ಭ್ರಷ್ಟಾಚಾರ ರಹಿತ ಆಡಳಿತ ನಿರೀಕ್ಷಸಲು ಸಾಧ್ಯವೆ ಎಂದು ಪ್ರಶ್ನಿಸಿದರು.

Karnataka Election Results 2023: ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶಕ್ತಿ ಪೀಠದಲ್ಲಿ ನಡೆದ ಆ

ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರೀತಿಯ ರಾಜಕಾರಣ ಮಾಡಿದ್ದಾರೆ. ಎಲ್ಲಿಯೂ ಅವರು ದ್ವೇಷದ ರಾಜಕಾರಣ ಮಾಡಿಲ್ಲ. ಜೊತೆಗೆ ಜನಸ್ನೇಹಿ ಆಡಳಿತ ನೀಡಿದ್ದಾರೆ. ಎಲ್ಲಾ ಜಾತಿ, ವರ್ಗ, ಧರ್ಮದವರಿಗೂ ಸರ್ಕಾರದ ಸವಲತ್ತೂ ತಲುಪಿಸುವಲ್ಲಿ ಯಶಸ್ಸು ಕಂಡಿದ್ದಾರೆ. ಆ ಕಾರಣದಿಂದಾಗಿಯೇ ಈ ಬಾರಿ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ಮತಗಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

click me!