ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹಾಡುಗಾರ ಗ್ರಾಮದಲ್ಲಿ ಮುಂಬರೋ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ.2): ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕೊಪ್ಪ ತಾಲೂಕಿನ ಜಯಪುರ ಸಮೀಪದ ಹಾಡುಗಾರ ಗ್ರಾಮದಲ್ಲಿ ಮುಂಬರೋ ವಿಧಾನಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲು ಇಲ್ಲಿನ ಜನ ತೀರ್ಮಾನಿಸಿದ್ದಾರೆ. ನಾಲ್ಕು ವರ್ಷಗಳಿಂದ ಹಾಡುಗಾರು ಸಂಪರ್ಕ ಮುಖ್ಯರಸ್ತೆಯ ಸೇತುವೆ ಕುಸಿಯುತ್ತಿದ್ದು, ಊರಿನ ಪ್ರಮುಖ ರಸ್ತೆಗಳೆಲ್ಲ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಹಾಡುಗಾರ ಗ್ರಾಮದಲ್ಲಿ ಸುಮಾರು 93ಕ್ಕೂ ಹೆಚ್ಚಿನ ಮನೆಗಳಿವೆ. 480ಕ್ಕೂ ಹೆಚ್ಚಿನ ಜನ ವಾಸಿವಿದ್ದಾರೆ. ಆದರೆ, 2019ರಲ್ಲಿ ಸುರಿದ ಭಾರೀ ಮಳೆಯಿಂದ ರಸ್ತೆ ಹಾಳಾಗಿದ್ದು ಈವರಗೂ ದುರಸ್ಥಿ ಮಾಡಿಲ್ಲ. ಶಾಸಕ ಟಿ.ಡಿ.ರಾಜೇಗೌಡ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ನೋ ಯೂಸ್. ಹಾಗಾಗಿ, ಈ ಭಾಗದ ಜನ ಮುಂಬರೋ ವಿಧಾನಸಭೆ ಚುಣಾವಣೆಯನ್ನ ಬಹಿಷ್ಕಾರ ಹಾಕಲು ತೀರ್ಮಾನಿಸಿದ್ದಾರೆ.
ಮಳೆಗಾಲದಲ್ಲಿ ಜನರ ಪರಿಸ್ಥಿತಿ ದುಸ್ಥಿರ: 2019ರ ಆಗಸ್ಟ್ ತಿಂಗಳಿನಲ್ಲಿ ಸುರಿದ ಮಳೆಗೆ ಹಾಡುಗಾರು ಮುಖ್ಯ ರಸ್ತೆಯ ಸೇತುವೆ ಕುಸಿದಿತ್ತು. 2019ರ ಬಳಿಕ ಪ್ರತಿ ವರ್ಷ ಮಳೆಗಾಲದಲ್ಲಿ ಸೇತುವೆ ಕುಸಿಯುತ್ತಿದೆ. ಸೇತುವೆ ಕುಸಿದಾಗಲೆಲ್ಲಾ ಸ್ಥಳಕ್ಕೆ ಭೇಟಿ ನೀಡುವ ಅಧಿಕಾರಿಗಳು, ಶಾಸಕರು ಹೊಸ ಸೇತುವೆ ನಿರ್ಮಾಣಕ್ಕೆ ಹಣ ನೀಡುವುದಾಗಿ ಹೇಳಿ ಭರವಸೆ ನೀಡಿದರೋ ವಿನಃ ಇದುವರೆಗೆ ಯಾವುದೇ ಹಣ ಬಿಡುಗಡೆ ಮಾಡಿಲ್ಲ. ಗ್ರಾಮದ ಸಂಪರ್ಕಕ್ಕಿರುವ ಈ ಏಕೈಕ ಸೇತುವೆಯ ಮೇಲೆ ಮಳೆ ಬಂದಾಗಲೆಲ್ಲ ಹೊಳೆಯ ನೀರು ಹರಿಯುತ್ತಿದ್ದು, ಇದರ ಮೇಲೆ ಸಂಚರಿಸುವ ಶಾಲಾ-ಮಕ್ಕಳು, ಗ್ರಾಮಸ್ಥರು ನೀರಿನ ಸೆಳತಕ್ಕೆ ಸಿಕ್ಕಿ ಪ್ರಾಣ ಹಾನಿಗೊಳಗಾದರೆ ಯಾರು ಹೊಣೆ ಎಂದು ಹಳ್ಳಿಗರ ಪ್ರಶ್ನಿಸಿದ್ದಾರೆ.
ರಾಜಕೀಯದಲ್ಲಿ ರೌಡಿಗಳಿಗೆ ರಾಜಮರ್ಯಾದೆ: ಇಲ್ಲಿದೆ ಸೈಲೆಂಟ್ ಸುನೀಲ್‌ನ ಕಂಪ್ಲೀಟ್ ಸ್ಟೋರಿ
ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆಯ ಎಚ್ಚರಿಕೆ: ಶಾಸಕರು ಮತ್ತು ಮಾಜಿ ಶಾಸಕರು ಸಮಸ್ಯೆಗೆ ಸ್ಪಂದನೆ ನೀಡಿಲ್ಲ. ಡಿಸೆಂಬರ್ 15ರೊಳಗೆ ಕಾಮಗಾರಿಗೆ ಹಣ ನೀಡದಿದ್ದಲ್ಲಿ ಮೊದಲ ಹಂತದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪದಾಧಿಕಾರಿಗಳು ಪಕ್ಷದ ಜವಾಬ್ದಾರಿಗಳಿಗೆ ರಾಜೀನಾಮೆ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
Ramanagara: ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತದಿಂದಲೂ ತಯಾರಿ
ಶಾಸಕರ ಅನುದಾನ ಸೇರಿದಂತೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ಪ್ರವಾಹ ಕಾಮಗಾರಿಗಾಗಿ ರಾಜ್ಯ ಸರ್ಕಾರದಿಂದ ನೂರಾರು ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದರೂ ಸೇತುವೆ ದುರಸ್ಥಿಗೆ ಶಾಸಕರು ಹಣ ನೀಡದಿರುವುದರಿಂದ ಶಾಸಕರು ಹಾಗೂ ಅಧಿಕಾರಿಗಳ ವಿರುದ್ಧ ಜನ ಅಸಮಾಧಾನ ಹೊರಹಾಕಿದ್ದಾರೆ. ಸೇತುವೆ ನಿರ್ಮಿಸಿ ಕೊಡದಿದ್ದರೆ ಹಾಡುಗಾರ ಗ್ರಾಮಸ್ಥರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿದ್ದಾರೆ.