Pancharatna Rathayatra: ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು: ಎಚ್‌.ಡಿ.ಕುಮಾರಸ್ವಾಮಿ

By Govindaraj S  |  First Published Dec 2, 2022, 8:29 PM IST

ಸೋಂಪುರ ಹೋಬಳಿಯಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಂಚರಥಯಾತ್ರೆಯೂ ಬುಧವಾರ ರಾತ್ರಿ ತ್ಯಾಮಗೊಂಡ್ಲು, ಮಣ್ಣೆ, ಮರಳಕುಂಟೆ, ಬೂದಿಹಾಲ್‌, ಟಿ.ಬೇಗೂರು, ಕುಲುವನಹಳ್ಳಿ, ಬಿಲ್ಲಿನಕೋಟೆ ಗ್ರಾಮಗಳ ಮೂಲಕ ಸಾಗಿ ತಡರಾತ್ರಿ ಲಕ್ಕೂರು ಗ್ರಾಮಕ್ಕೆ ತಲುಪಿದ್ದು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಲಕ್ಕೂರಿನಲ್ಲಿ ಗ್ರಾಮ ವಾಸ್ಥವ್ಯ ಮಾಡಿದರು.


ದಾಬಸ್‌ಪೇಟೆ (ಡಿ.02): ಸೋಂಪುರ ಹೋಬಳಿಯಲ್ಲಿ ಜೆಡಿಎಸ್‌ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪಂಚರಥ ಯಾತ್ರೆಯೂ ಬುಧವಾರ ರಾತ್ರಿ ತ್ಯಾಮಗೊಂಡ್ಲು, ಮಣ್ಣೆ, ಮರಳಕುಂಟೆ, ಬೂದಿಹಾಲ್‌, ಟಿ.ಬೇಗೂರು, ಕುಲುವನಹಳ್ಳಿ, ಬಿಲ್ಲಿನಕೋಟೆ ಗ್ರಾಮಗಳ ಮೂಲಕ ಸಾಗಿ ತಡರಾತ್ರಿ ಲಕ್ಕೂರು ಗ್ರಾಮಕ್ಕೆ ತಲುಪಿದ್ದು, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಲಕ್ಕೂರಿನಲ್ಲಿ ಗ್ರಾಮ ವಾಸ್ಥವ್ಯ ಮಾಡಿದರು.

ಅಸ್ಪೃಶ್ಯ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ಒತ್ತಾಯ ಕೇಳಿಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈ ವೇಳೆ ಪ್ರತಿಕ್ರಿಯಿಸಿದ ಅವರು, ಯಾವ ಕಾರಣಕ್ಕೆ ನಾನು ಕ್ಷಮೆ ಕೇಳಬೇಕು? ಮೊನ್ನೆ ಸಿದ್ದರಾಮಯ್ಯನವರು ಶಿವಕುಮಾರ್‌ ಕುಳಿತುಕೊಳ್ಳೋ ವಿಚಾರಕ್ಕೆ ಅಸ್ಪಶ್ಯ ಅಂದಿದ್ದಾರೆ. ಅವರು ಕ್ಷಮೆ ಕೇಳಿದ್ದಾರ? ಎಂದು ಪ್ರಶ್ನಿಸಿದರು. ಯಾರೋ ನಾಲ್ವರು ರಾಜಕೀಯವಾಗಿ ನನ್ನ ಬಗ್ಗೆ ಮಾತಾಡಬಹುದು. ಯಾರು ಅಸ್ಪೃಶ್ಯರು, ಯಾವ ಕಾರಣಕ್ಕಾಗಿ ಹೋರಾಟ ಮಾಡುತ್ತಾರೆ. ಅಂಬೇಡ್ಕರ್‌ ತಮಗಾದ ಅವಮಾನ ಮರೆಸಲು ಕಾನೂನು ನೀಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ. ಯಾರು ಅಸ್ಪೃಶ್ಯರು. 

Tap to resize

Latest Videos

JDS Pancharatna Rathayatra: ಜೆಡಿಎಸ್‌ ಪಂಚರತ್ನ ಯಾತ್ರೆಗೆ ತುಮಕೂರಲ್ಲಿ ಭವ್ಯ ಸ್ವಾಗತ

ನಾನು ಹೇಳಿದ್ದು ಬಿಜೆಪಿ ಪಕ್ಷದವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಓಡಿಸಬೇಕು ಅಂತ ಚರ್ಚೆ ಮಾಡುತ್ತಾ ಇದ್ದಾರೆ. ಜೆಡಿಎಸ್‌ ಅದಿಕಾರಕ್ಕೆ ಬಂದರೆ ನಮ್ಮ ಪಕ್ಷದ ಸಿ.ಎಂ.ಇಬ್ರಾಹಿಂ ಏಕೆ ಮುಖ್ಯಮಂತ್ರಿ ಆಗಬಾರದು? ಅವರೇನು ಅಸ್ಪೃಶ್ಯರೇ ಎನ್ನುವುದು ತಪ್ಪೇ.? ಇವರು ಏನಕ್ಕೆ ನಾವು ಅಸ್ಪಶ್ಯರು ಅಂತ ಹೇಳಿಕೊಳ್ಳಬೇಕು. ಹೋರಾಟ ಮಾಡುತ್ತಿರುವವರು ಅಸ್ಪೃಶ್ಯರು ಅಂತಾ ಭಾವನೆ ಇಟ್ಟುಕೊಂಡಿದ್ದಾರ? ಅಂಬೇಡ್ಕರ್‌ ಇವರಿಗೆ ಶಕ್ತಿ ಕೊಟ್ಟಿದ್ದು ಹೀಗೆ ನಾವು ಅಸ್ಪಶ್ಯರು ಅನ್ನುವುದಕ್ಕಾಗಿಯೇ ಎಂದು ಪ್ರಶ್ನಿಸಿದರು.

ನಾನು ಯಾರಿಗೂ ಅಗೌರವ ತೋರಿಸೋ ಕೆಲಸ ಮಾಡಿಲ್ಲ. ದಲಿತ ಸಮುದಾಯದ ಹೆಣ್ಣು ಮಗಳನ್ನು ಮೂರು ದಿನ ನಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದೇನೆ. ಅವರಿಗೆ ಆರೋಗ್ಯ ಸರಿ ಇಲ್ಲದಿದ್ದಾಗ ನನ್ನ ಮನೆಯಲ್ಲಿ ಇರಿಸಿಕೊಂಡಿದ್ದೇನೆ. ಇದು ನನ್ನ ಬದುಕು, ಇವರ ಹೋರಾಟಗಳಿಗೆಲ್ಲ ನಾನು ಹೆದರುವುದಿಲ್ಲ ಎಂದರು. ಬಿಜೆಪಿ ನಾಯಕರ ಜೊತೆ ಹಲವು ರೌಡಿಶೀಟರ್‌ಗಳ ಸಂಪರ್ಕ ವಿಚಾರಕ್ಕೆ ಸಂಬಂದಿಸಿ ಮಾತನಾಡಿದ ಹೆಚ್‌ಡಿ ಕುಮಾರಸ್ವಾಮಿ, ಅದನ್ನೆಲ್ಲ ಕಟ್ಟಿಕೊಂಡು ನನಗೇನು ಆಗಬೇಕು. ನನಗೆ ಮಾಡಲು ಬೇರೆ ಕೆಲಸವಿದೆ. ಅವರು ರೌಡಿಶೀಟರ್ಸ್‌? ಏನೋ ಅನ್ನೋದು ನನಗ್ಯಾಕೆ ಎಂದರು.

ಇಂದು ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ಪ್ರತಿಯೊಂದು ಕಡೆಯು ಜನರ ವಿಶ್ವಾಸ ಕಂಡಿದ್ದೇನೆ. ಸಭೆಗಳಲ್ಲಿ ಜನರು ನಮ್ಮ ಮೇಲೆ ವಿಶ್ವಾಸ ಮೂಡಿಸಿದ್ದಾರೆ. ಜನರ ಮನಸಿನಲ್ಲಿ ಎರಡು ರಾಷ್ಟಿ್ರೕಯ ಪಕ್ಷಗಳ ಮೇಲೆ ವಿಶ್ವಾಸ ಕಡಿಮೆ ಆಗಿದೆ. 13 ದಿನಗಳ ಪ್ರವಾಸದಲ್ಲಿ ಜನರ ನಾಡಿ ಮೀಡಿತ ನನಗೆ ಗೊತ್ತಾಗಿದೆ ಎಂದು ತಿಳಿಸಿದರು. ಗುರುವಾರ ಬೆಳಿಗ್ಗೆ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಲಕ್ಕೂರು ಗ್ರಾಮದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ ಕೆಲ ಸಮಯ ಮಾತುಕತೆ ನಡೆಸಿದರು.

Pancharatna Rathayatra: ದೊಡ್ಡಬಳ್ಳಾಪುರ ಗೆಲ್ಲೋದೆ ನಮ್ಮ ಗುರಿ: ಎಚ್‌.ಡಿ.ಕುಮಾರಸ್ವಾಮಿ

ಮಾರಮ್ಮ ದೇವಿಯ ದೇವಾಲಯದಲ್ಲಿ ಪೂಜೆ: ನಂತರ ಮಾರಮ್ಮ ದೇವಿಯ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗ್ರಾಮದ ಮಹಿಳೆಯರು ತಮ್ಮ ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಕುಮಾರಸ್ವಾಮಿ ನಮ್ಮ ಸರ್ಕಾರ ಅಧಿಕಾರಕ್ಕೆ ತನ್ನಿ ಆಮೇಲೆ ಸಮಸ್ಯೆಗಳನ್ನು ಖಂಡಿತ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

click me!