ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಲಿ, ನನಗೆ ಅದು ಮುಖ್ಯ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಂತರ, ಹೈಕಮಾಂಡ್ ಹಾಗೂ ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ.
ಕೋಲಾರ (ಏ.16): ರಾಜ್ಯದಲ್ಲಿ ಯಾರೇ ಮುಖ್ಯಮಂತ್ರಿ ಆಗಲಿ, ನನಗೆ ಅದು ಮುಖ್ಯ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ನಂತರ, ಹೈಕಮಾಂಡ್ ಹಾಗೂ ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆ ಆಗುತ್ತಾರೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಆಗುವ ಆಸೆ ತಮಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ತಿಳಿಸಿದ್ದಾರೆ.
ಕೋಲಾರದಲ್ಲಿ ನಡೆಯುತ್ತಿರುವ ಜೈ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು. ವೇದಿಕೆ ಮೇಲೆ ಇರುವ ನಮ್ಮ ನಾಯಕರಿಗೆ ನಾನು ಹೇಳೋದಿಷ್ಟೇ. ಯಾರೇ ಮುಖ್ಯಮಂತ್ರಿ ಆಗಲಿ, ನನಗೆ ಅದು ಮುಖ್ಯ ಅಲ್ಲ. ನನಗೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು. ಆ ನಂತರ ಹೈಕಮಾಂಡ್ ಹಾಗೂ ಶಾಸಕರು ಹೇಳಿದಂತೆ ಮುಖ್ಯಮಂತ್ರಿ ಆಯ್ಕೆ ಆಗ್ತಾರೆ. ಹೀಗಾಗಿ ಸರ್ಕಾರದ ತರುವುದು ನಮಗೆ ಮುಖ್ಯ. 150 ಸೀಟ್ ಗೆಲ್ಲುವ ಗುರಿ ಮುಟ್ಟಬೇಕು. ನಿಮ್ಮದು ಏನೇ ಇದ್ದರೂ ಎಲ್ಲರೂ ಕೈ ಜೋಡಿಸಿ ಹೋಗಬೇಕು ಎಂದು ಹೇಳಿದರು.
undefined
Karnataka Assembly Elections 2023: ಸಿದ್ದುಗೆ ಕೋಲಾರ ಟಿಕೆಟ್ ನಿರಾಕರಿಸಿದ್ದು ಏಕೆ?
ಕೋಲಾರ ಜಿಲ್ಲೆ ಬಂಗಾರದ ಜಿಲ್ಲೆಯಾಗಿದೆ. ಇಡೀ ದೇಶದಲ್ಲಿ ಮೂರು ಬಂಗಾರದ ಖಣಿಗಳಿವೆ. ಆ ಮೂರು ಕೂಡ ಕರ್ನಾಟಕದಲ್ಲಿದೆ. ಒಂದು ಕೋಲಾರ, ಪಾವಗಡ, ರಾಯಚೂರು. ಇಡೀ ದೇಶಕ್ಕೆ ಬಂಗಾರ ಕೊಡುವ ನಾಡು ನಮ್ಮದಾಗಿದೆ. ಇಲ್ಲಿ ರಾಜ್ಯದ ಸಂಪತ್ತು ಮತ್ತು ದೇಶವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ 150 ಸೀಟ್ ಮುಟ್ಟುವುದು ದೊಡ್ಡ ಟಾಸ್ಕ್ ಅಲ್ಲ. ರಾಜ್ಯದ ನಾಯಕರಿಗೆ ಕೈ ಮುಗಿದು ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಾದ್ರೆ ಎಲ್ಲರೂ ಒಗ್ಗಟ್ಟಾಗಿ ಹೋಗಬೇಕು. ಜಗದೀಶ್ ಶೆಟ್ಟರ್ ಕೂಡ ಹೇಳಿದ್ದಾರೆ ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಅಂತ. ಬಸವರಾಜ್ ಬೊಮ್ಮಾಯಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಹೇಳಿದರು.
ಇನ್ನು ಈ ಹಿಂದೆ ನಾವು ಅಧಿವೇಶನದಲ್ಲಿ ಕೇಳಿದ್ದು ಕೆಲವು ಪ್ರಶ್ನೆಗಳನ್ನು ಮಾತ್ರ. ಒಬ್ಬ ಬಿಸಿನೆಸ್ ಮೆನ್ 2014 ರಲ್ಲಿ 50 ಸಾವಿರ ಕೋಟಿ ಆಸ್ತಿ ಇತ್ತು. 2020 ರಲ್ಲಿ 2 ಲಕ್ಷ ಕೋಟಿ ಆಯ್ತು. 2023 ರಲ್ಲಿ 12 ಲಕ್ಷ ಕೋಟಿ ಆಗುತ್ತದೆ. ಈ ಬಗ್ಗೆ ನಾವು ಪ್ರಶ್ನೆ ಕೇಳಿದೆವು. ನೀವು ಹೊರಗೆ ಹೋದಾಗ ಯಾಕೆ ಮೀಟ್ ಮಾಡಿದ್ರಿ. ಸಾರ್ವಜನಿಕರ ಹಿತಾಸಕ್ತಿ ವಿಚಾರವಾಗಿ ನಾವು ಪ್ರಶ್ನೆ ಮಾಡಿದ್ವಿ. ಆದರೆ ಅದರ ಬದಲು ರಾಹುಲ್ ಕೋಲಾರದಲ್ಲಿ ಮಾತನಾಡಿದ ವಿಚಾರ ಬಂತು. ಗುಜರಾತ್ ನಲ್ಲಿ ಕೇಸ್ ದಾಖಾಲಾಗಿತ್ತು. ಇದೇ ವಿಚಾರ ಇಟ್ಕೊಂಡು ಅನರ್ಹ ಮಾಡಿದರು. ಅಧಿವೇಶನದಲ್ಲಿ ರಾಹುಲ್ ಒಬ್ಬರೇ ಧೈರ್ಯವಾಗಿ ಮಾತನಾಡುವುದು ಎಂದರು.
ಜಗದೀಶ್ ಶೆಟ್ಟರ್‌ರನ್ನು ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲು ಡಿಕೆಶಿ ಆಪ್ತನ ಯತ್ನ: ಲ್ಯಾಂಡಿಂಗ್‌ಗೆ ಅನುಮತಿ ನಿರಾಕರಣೆ
ಇನ್ನು ಬಂಗಾರದ ನಾಡಾಗಿರುವ ಕೋಲಾರದಲ್ಲಿ ನೀರಾವರಿಗಾಗಲೀ, ಕೃಷಿಗಾಗಲೀ ಹೆಚ್ಚು ಮಹತ್ವ ಕೊಡ್ತಿರಲಿಲ್ಲ. ನಮ್ಮ ಸರ್ಕಾರ ಇಲ್ಲಿನ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದೆ. ಈಗ ನೂರಾರು ಎಕರೆಯಲ್ಲಿ ಕೃಷಿ ಮಾಡಲಾಗ್ತಿದೆ. ಇಲ್ಲಿ ಡೇರಿ ಹಾಗೂ ರೇಷ್ಮೆ ಉದ್ಯಮ ಕೂಡ ಆರಂಭ ಆಗಿದೆ. ಇಂಥಾ ಬಂಗಾರದ ನೆಲದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಿದ್ದೇವೆ. ಮಗೆ ಯಶಸ್ಸು ಸಿಗುವುದಂತೂ ನಿಶ್ಚಿತ. ಮೋದಿ ಸರ್ಕಾರಕ್ಕಿಂತ ಭ್ರಷ್ಟ ಸರ್ಕಾರ ಏ. 40 ಕಮಿಷನ್ ಸರ್ಕಾರ. ಮೋದಿ ಅಮಿತ್ ಶಾ ಇಲ್ಲಿನ ಭ್ರಷ್ಟ ಸರ್ಕಾರದ ಬಗ್ಗೆ ಮಾತನಾಡಲ್ಲ. ಇಲ್ಲಿ ಬಂದು ಕಾಂಗ್ರೆಸ್ ಏನು ಮಾಡಿತು ಅಂತ ಮಾತಾಡ್ತಾರೆ ಎಂದು ಕಿಡಿ ಕಾರಿದರು.
ದೇಶ ಮತ್ತು ರಾಜ್ಯದಲ್ಲಿ ಎಚ್ಎಎಲ್, ಬಿಎಚ್ಎಎಲ್ ಎಲ್ಲಾ ಮೋದಿ ಮಾಡಿದ್ದಾರಾ? ದೇಶದಲ್ಲಿ ಮೊದಲು ವಿದ್ಯುತ್ ಬಂದಿದ್ದು ಕೋಲಾರದ ಕೆಜಿಎಫ್ ನಲ್ಲಿ. ಇವರು ಏನು ಮಾಡಿದ್ದಾರೆ. ಡಬಲ್ ಇಂಜಿನ್ ಸರ್ಕಾರ ಕರ್ನಾಟಕಕ್ಕೆ ಏನು ಕೊಟ್ಟಿದೆ ಅನ್ನೋದನ್ನ ಹೇಳಬೇಕು. ಪ್ರತೀ ವರ್ಷ 2 ಕೋಟಿ ಉದ್ಯೋಗ ಕೊಡ್ತಿನಿ ಅಂದರು. ಇಷ್ಟು ಹೊತ್ತಿಗೆ 9 ಕೋಟಿ ಉದ್ಯೋಗ ಕೊಡಬೇಕಿತ್ತು ಎಲ್ಲಿ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.