ಮಡಿಕೇರಿ ಕ್ಷೇತ್ರದಲ್ಲಿ ಶಾಸಕರಾಗಿರುವುದು ಮಂತರ್ ಗೌಡರೋ ಇಲ್ಲ ಅರಕಲಗೂಡು ಶಾಸಕ ಎ. ಮಂಜುವೋ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅನುಮಾನ ವ್ಯಕ್ತಪಡಿಸಿ ವ್ಯಂಗ್ಯಬೆರೆಸಿ ಪ್ರಶ್ನಿಸಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.12): ಮಡಿಕೇರಿ ಕ್ಷೇತ್ರದಲ್ಲಿ ಶಾಸಕರಾಗಿರುವುದು ಮಂತರ್ ಗೌಡರೋ ಇಲ್ಲ ಅರಕಲಗೂಡು ಶಾಸಕ ಎ.ಮಂಜುವೋ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಅಪ್ಪಚ್ಚು ರಂಜನ್ ಅನುಮಾನ ವ್ಯಕ್ತಪಡಿಸಿ ವ್ಯಂಗ್ಯಬೆರೆಸಿ ಪ್ರಶ್ನಿಸಿದ್ದಾರೆ. ಕೊಡಗಿನ ಅಧಿಕಾರಿಗಳನ್ನು ಅರಕಲಗೂಡಿಗೆ ಕರೆಸಿಕೊಂಡು ಸಭೆ ಮಾಡುತ್ತಿರುವುದು, ಯಾಕೆಂದು ಅಪ್ಪಚ್ಚು ರಂಜನ್ ಪ್ರಶ್ನಿಸಿದ್ದಾರೆ. ಅಧಿಕಾರಿಗಳು ಜಿಲ್ಲೆಯಲ್ಲಿ ನೆಮ್ಮದಿಯಿಂದ ಕೆಲಸ ಮಾಡಲಾಗುತ್ತಿಲ್ಲ. ಇದರಿಂದ ಅಧಿಕಾರಿಗಳು ವರ್ಗಾವಣೆ ಪಡೆದು ಬೇರೆಡೆಗೆ ಹೋಗುತ್ತಿದ್ದಾರೆ.
ವೈದ್ಯರು, ಪಿಡಿಓಗಳು ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಜಿಲ್ಲೆಯಲ್ಲಿ ನೆಮ್ಮದಿಯಿಂದ ಕೆಲಸ ಮಾಡಲಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲೆಯಲ್ಲಿ ದ್ವೇಷ ರಾಜಕಾರಣವನ್ನು ಮಾಡಲಾಗುತ್ತಿದ್ದು, ವಿನಾಕಾರಣ ಬಿಜೆಪಿ ಕಾರ್ಯಕರ್ತರ ಮೇಲೆ 107 ಸೆಕ್ಷನ್ ಹಾಕಲಾಗುತ್ತಿದೆ. ನಮ್ಮನ್ನು ರಾಜಕೀಯವಾಗಿ ಶಕ್ತಿಗುಂದಿಸಲು ಪ್ರಯತ್ನಿಸಲಾಗುತ್ತಿದೆ. ನೀವು ಈ ರೀತಿ ಮಾಡಿದರೆ, ನಾವು ಅದನ್ನೇ ಮಾಡಬೇಕಾಗುತ್ತದೆ ಎಂದು ಅಪ್ಪಚ್ಚು ರಂಜನ್ ಎಚ್ಚರಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದೆಂದೂ ಈ ರೀತಿ ದ್ವೇಷದ ರಾಜಕಾರಣ ಮಾಡುತ್ತಿರಲಿಲ್ಲ. ಆದರೆ ಈಗ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನನ್ನ ತೇಜೋವಧೆಗೆ ಜೋಶಿ ಇಳಿದಿದ್ದಾರೆ: ದಿಂಗಾಲೇಶ್ವರ ಸ್ವಾಮೀಜಿ ಆರೋಪ
ಇದೇ ಸಂದರ್ಭ ಮಾತನಾಡಿದ ಕೆ. ಜಿ ಬೋಪಯ್ಯ ಅವರು ಹಿಂದೆಂದೂ ನಡೆದ ರೀತಿಯಲ್ಲಿ ವೈಯಕ್ತಿಕ ಟೀಕೆಯ ರಾಜಕಾರಣ ಇಂದು ಜಿಲ್ಲೆಯಲ್ಲಿ ನಡೆಯುತ್ತಿದೆ. ಜೊತೆಗೆ ದ್ವೇಷ ರಾಜಕಾರಣ ನಡೆಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾರೋ ಹಾಕಿದ ಪೋಸ್ಟ್ ಅನ್ನು ಫಾರ್ವರ್ಡ್ ಮಾಡಿದರೆ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ಅವರ ಮೇಲೆ ಕೇಸ್ ಹಾಕಲಾಗುತ್ತಿದೆ. ಇದು ಕಾಂಗ್ರೆಸ್ ತಾನು ಸೋಲಿನ ಹತಾಶೆಯಿಂದ ಹೀಗೆ ಮಾಡಿಸುತ್ತಿದೆ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟು ಮಾಡಲಾಗುತ್ತಿದೆ. ನಿನ್ನೆ ಕುಶಾಲನಗರದಲ್ಲಿ ಮೈಸೂರು ಕೊಡಗು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ನಮಾಜ್ ಮಾಡಿದ್ದಾರೆ.
ಇದು ಅವರಿಗೆ ಅಪರಾಧ ಆಗುವುದಿಲ್ಲ.? ಜಿಲ್ಲಾಡಳಿತ ಒಂದು ಪಕ್ಷದ ಪರವಾಗಿ ಕೆಲಸ ಮಾಡುವಂತಿದೆ. ಜಿಲ್ಲೆಯ ವಾತಾವರಣ ಕೆಡಿಸುವ ಕೆಲಸವನ್ನು ಕಾಂಗ್ರೆಸ್ ಮತ್ತು ಅವರ ಜನಪ್ರತಿನಿಧಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 2022 ರಲ್ಲಿ ಅಮೃತ್ 2 ಯೋಜನೆಗೆ ಕೇಂದ್ರ ಸರ್ಕಾರದಿಂದ ಒಪ್ಪಿಗೆ ನೀಡಿದೆ. ಇದನ್ನು ಕಾಂಗ್ರೆಸ್ ನಾವು ಮಾಡಿದ್ದು ಎಂದು ಹೇಳುತ್ತಿದೆ. ಸಿದ್ದರಾಮಯ್ಯನವರು ಕೊಡಗಿಗೆ ಬಂದಾಗ ಇದಕ್ಕೂ ಗುದ್ದಲಿ ಪೂಜೆ ಮಾಡಿದ್ದಾರೆ. ನಿಮ್ಮ ಸರ್ಕಾರ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು. ಮಳೆ ಹಾನಿ ಹಿನ್ನೆಲೆ 14 ಕೋಟಿ ಕೊಡಗು ಜಿಲ್ಲೆಗೆ ಕೊಡಲಾಗಿದೆ.
ಐಪಿಎಲ್ ಮ್ಯಾಚ್ ಪ್ರೇಕ್ಷಕರಿಗೆ ಗುಡ್‌ನ್ಯೂಸ್! ಪ್ರಯಾಣದ ಟೆನ್ಶನ್ ಬೇಡ!
ಅದನ್ನು ಮಾರ್ಚ್ 2023 ರಲ್ಲಿ ಇದನ್ನು ಬಿಡುಗಡೆ ಮಾಡಲಾಗಿದೆ. ಆಗಲೂ ರಾಜ್ಯದಲ್ಲಿ ನಮ್ಮ ಸರ್ಕಾರವಿತ್ತು. ಹಿಂದಿನ ನಮ್ಮ ಸರ್ಕಾರ ಜಾರಿ ಮಾಡಿದ್ದ ಕಾಮಗಾರಿಗಳಿಗೆ ತಡೆ ನೀಡಿ ಅವುಗಳನ್ನು ಬದಲಾಯಿಸಲಾಗಿದೆ. ಕಾಮಗಾರಿ ಬದಲಾಯಿಸಿ ನಾವು ಅಷ್ಟು ಅನುದಾನ ತಂದಿದ್ದೇವೆ. ಇಷ್ಟು ಅನುದಾನ ತಂದಿದ್ದೇನೆ ಎನ್ನುತ್ತಾರೆ ಶಾಸಕರು. ಒಬ್ಬರು ವಕೀಲರಾಗಿ ಶಾಸಕರು ಇಷ್ಟು ಕೀಳು ಮಟ್ಟದ ರಾಜಕಾರಣ ಮಾಡಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. 20 ವರ್ಷದಿಂದ ಬಿಜೆಪಿ ಶಾಸಕರು ಏನೂ ಮಾಡಲಿಲ್ಲ ಎನ್ನುತ್ತಾರೆ. 150 ಕೋಟಿಯಲ್ಲಿ ರೂಪಾಯಿಯಲ್ಲಿ ರೈಲ್ವೆ ಕಂಬಿ ಬೇಲಿ ನಿರ್ಮಿಸಲಾಗಿದೆ. ಇದು ಶಾಸಕರ ಕಣ್ಣಿಗೆ ಕಾಣುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅದಾದ ಮೇಲೆ ಜಿಲ್ಲೆಗೆ ನೀವೆಷ್ಟು ತಂದಿದ್ದೀರಿ ಲೆಕ್ಕಕೊಡಿ ಎಂದು ಬೋಪಯ್ಯ ಪ್ರಶ್ನಿಸಿದ್ದಾರೆ.