ಬರೋಬ್ಬರಿ 98 ಕೋಟಿ ರೂ ಆಸ್ತಿಗೆ ಒಡೆಯ ಬಿಜೆಪಿ ರೆಬೆಲ್ ಶಾಸಕ ಕೆಎಸ್‌ ಈಶ್ವರಪ್ಪ!

By Suvarna NewsFirst Published Apr 12, 2024, 6:26 PM IST
Highlights

ಲೋಕಸಭೆ ಚುನಾವಣೆ 2024ರ ಹಿನ್ನೆಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ‌ಈಶ್ವರಪ್ಪ ಅವರ ಆಸ್ತಿ ವಿವರ ಬಹಿರಂಗವಾಗಿದೆ.

ಶಿವಮೊಗ್ಗ (ಏ.12): ಲೋಕಸಭೆ ಚುನಾವಣೆ 2024ರ ಹಿನ್ನೆಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ‌ಈಶ್ವರಪ್ಪ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆಸ್ತಿ ವಿವರ ಲಭ್ಯವಾಗಿದ್ದು,  ಈಶ್ವರಪ್ಪ ಹೆಸರಿನಲ್ಲಿ ಒಟ್ಟು ಆಸ್ತಿ ಮೌಲ್ಯ‌ 98 ಕೋಟಿ 92 ಲಕ್ಷದ 20 ಸಾವಿರ ಆಗಿದೆ.

ಈಶ್ವರಪ್ಪ ಅವರ ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 35 ಕೋಟಿ 50 ಲಕ್ಷದ 20 ಸಾವಿರ ಆಸ್ತಿ ಇದೆ. ಈಶ್ವರಪ್ಪ ಅವರ ಕೈಯಲ್ಲಿ ಇರುವ ನಗದು 25 ಲಕ್ಷ. ಪತ್ನಿ ಜಯಲಕ್ಷ್ಮಿ ಅವರ ಕೈಯಲ್ಲಿ ಇರುವ ನಗದು 2 ಲಕ್ಷ. ಈಶ್ವರಪ್ಪ ಹೆಸರಿನಲ್ಲಿ ಬಂಗಾರ 300 ಗ್ರಾಂ, ಬೆಳ್ಳಿ 2 ಕೆ.ಜಿ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಬಂಗಾರ 500 ಗ್ರಾಂ, ಬೆಳ್ಳಿ 5 ಕೆ.ಜಿ. ಇದೆ.

ಚುನಾವಣೆ ಬಳಿಕ ಪೆನ್‌ಡ್ರೈವ್ ಬಾಂಬ್, ಸ್ವ ಪಕ್ಷದವರ ವಿರುದ್ಧವೇ ತೊಡೆ ತಟ್ಟಿದ ಬಿಕೆ ಹರಿಪ್ರಸಾದ್‌!

ಈಶ್ವರಪ್ಪ ಹೆಸರಿನಲ್ಲಿ ನಿಧಿಗೆ ಗ್ರಾಮದ ಬಳಿ 1 ಎಕರೆ 31 ಗುಂಟೆ ಕೃಷಿ ಭೂಮಿ ಇದ್ದು, 4 ಎಕರೆ 24 ಗುಂಟೆ ಕೃಷಿಯೇತರ ಭೂಮಿ ಇದೆ. ಶಿವಮೊಗ್ಗದಲ್ಲಿ ವಾಸದ ಮನೆ. ಬೆಂಗಳೂರಿನ‌ ಜಯನಗರದಲ್ಲಿ ನಿವೇಶನ ಇದೆ.

ಈಶ್ವರಪ್ಪ ಹೆಸರಿನಲ್ಲಿ ಸಾಲ 5 ಕೋಟಿ 87 ಲಕ್ಷದ 39 ಸಾವಿರ ಸಾಲ ಇದ್ದು, ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ 70 ಲಕ್ಷದ 80 ಸಾವಿರದ 13 ಸಾವಿರ ಸಾಲ ಇದೆ. ಈಶ್ವರಪ್ಪ ಅವರ ಹೆಸರಿನಲ್ಲಿ ಚರಾಸ್ಥಿ 4 ಕೋಟಿ 28 ಲಕ್ಷದ 61 ಸಾವಿರ. ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಚರಾಸ್ಥಿ‌ 3 ಕೋಟಿ 77 ಲಕ್ಷದ 34 ಸಾವಿರ ಇದೆ. ಈಶ್ವರಪ್ಪ ಹೆಸರಿನಲ್ಲಿ ಸ್ಥಿರಾಸ್ಥಿ‌ 10 ಕೋಟಿ 95 ಲಕ್ಷದ 59 ಸಾವಿರ ಮತ್ತು ಪತ್ನಿ ಜಯಲಕ್ಷ್ಮಿ ಹೆಸರಿನಲ್ಲಿ ಸ್ಥಿರಾಸ್ಥಿ 7 ಲಕ್ಷದ 31 ಸಾವಿರ ಇದೆ.

Rameshwaram Cafe Blast case: ಕೆಫೆ ಬಾಂಬ್‌ ಇಟ್ಟ ಮಾಸ್ಟರ್‌ ಮೈಂಡ್‌ ಉಗ್ರ ಸೇರಿ ಇಬ್ಬರು ಅರೆಸ್ಟ್

2018 ರಲ್ಲಿ ಅವರು ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗಿನಿಂದ ಅವರ ಆಸ್ತಿ ಮೌಲ್ಯವು ನಾಲ್ಕು ಪಟ್ಟು ಹೆಚ್ಚಾಗಿದೆ. ಆಗ ಅವರು   6.41 ಕೋಟಿ ರೂ ಗೂ ಅಧಿಕ ಮೌಲ್ಯದ ಆಸ್ತಿ ಮತ್ತು ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದರು. 77ರ ಹರೆಯದ ಅವರು ಕರ್ನಾಟಕದಲ್ಲಿ ರಾಜ್ಯ ಬಿಜೆಪಿ ವಿರುದ್ಧ ಬಂಡಾಯವೆದ್ದು ಶಿವಮೊಗ್ಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

ಕಳೆದ ಆರು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಎರಡು ವಾಣಿಜ್ಯ ಆಸ್ತಿ ಖರೀದಿಸಿದ್ದಾರೆ. ಅವರು ಮತ್ತು ಅವರ ಮಗ ಕೆ.ಇ. ಕಾಂತೇಶ್ ಅವರು 2019 ರಲ್ಲಿ ಬೆಂಗಳೂರಿನ ಜಯನಗರದಲ್ಲಿ 4,000 ಚದರ ಅಡಿಯ ಬಿಲ್ಟ್-ಅಪ್ ವಿಸ್ತೀರ್ಣದ ವಾಣಿಜ್ಯ ಆಸ್ತಿಯನ್ನು ಜಂಟಿಯಾಗಿ ಖರೀದಿಸಿದ್ದಾರೆ. ಆಸ್ತಿಯ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು  7.5 ಕೋಟಿ ರೂ ಎಂದು ನಮೂದಿಸಲಾಗಿದೆ. ತಂದೆ-ಮಗ ಇಬ್ಬರೂ 2021 ರಲ್ಲಿ ಕುಮಾರ ಪಾರ್ಕ್‌ನಲ್ಲಿ ಮತ್ತೊಂದು ವಾಣಿಜ್ಯ ಆಸ್ತಿಯನ್ನು ಖರೀದಿಸಿದ್ದಾರೆ. ಆಸ್ತಿಯಲ್ಲಿ ಶ್ರೀ ಈಶ್ವರಪ್ಪ ಅವರ ಪಾಲು 25% ಆಗಿದೆ ಮತ್ತು ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ  3.75 ಕೋಟಿ ರೂ.

ಮಾಜಿ ಸಚಿವ ಈಶ್ವರಪ್ಪ ಯಾವುದೇ ವಾಹನ ಹೊಂದಿಲ್ಲ. ಅವರ ಅಫಿಡವಿಟ್ ಪ್ರಕಾರ, 2022-23ನೇ ಹಣಕಾಸು ವರ್ಷದಲ್ಲಿ ಅವರ ವಾರ್ಷಿಕ ಆದಾಯ  98.92 ಲಕ್ಷವಾಗಿದ್ದರೆ, 2016–17ನೇ ಸಾಲಿನಲ್ಲಿ ಅವರ ವಾರ್ಷಿಕ ಆದಾಯ  21.99 ಲಕ್ಷ ರೂ ಆಗಿತ್ತು. 

click me!