ನನ್ನ ತೇಜೋವಧೆಗೆ ಪ್ರಲ್ಹಾದ್ ಜೋಶಿ ಇಳಿದಿದ್ದಾರೆ. ನೇರವಾಗಿ ಥ್ರೆಟ್ ಮಾಡ್ತಿಲ್ಲ. ಬದಲಿಗೆ ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ಹರಿಹಾಯ್ದಿದ್ದಾರೆ.
ಹುಬ್ಬಳ್ಳಿ (ಏ.12): ನನ್ನ ತೇಜೋವಧೆಗೆ ಪ್ರಲ್ಹಾದ್ ಜೋಶಿ ಇಳಿದಿದ್ದಾರೆ. ನೇರವಾಗಿ ಥ್ರೆಟ್ ಮಾಡ್ತಿಲ್ಲ. ಬದಲಿಗೆ ನಮ್ಮವರನ್ನೇ ನನ್ನ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ನನ್ನ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ಹರಿಹಾಯ್ದಿದ್ದಾರೆ. ಜೋಶಿ ಅವರು ನಾನು ನಾಮಪತ್ರ ಸಲ್ಲಿಸಬಾರದು ಅಂತ ಶಿರಹಟ್ಟಿಯಲ್ಲಿ ಪತ್ರಿಕಾಗೋಷ್ಠಿ ಮಾಡಿಸಿದ್ದಾರೆ. ಅವರೆಲ್ಲರೂ ಜೋಶಿ ಭಕ್ತರು. ನನ್ನ ಅಭಿಮಾನಿಗಳನ್ನೇ ಎತ್ತಿ ಕಟ್ಟೋ ಕೆಲಸ ಮಾಡುತ್ತಿದ್ದಾರೆ. ತಮ್ಮ ಕುತಂತ್ರವನ್ನು ಅಲ್ಲಿಯೂ ಪ್ರಯೋಗಿಸುತ್ತಿದ್ದಾರೆ . ಎಲ್ಲ ಸಮಾಜದ ನಾಯಕರನ್ನು ಕುತಂತ್ರ ಮಾಡಿ ಶಕ್ತಿ ಹೀನರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ: ನನ್ನನ್ನು ಚುನಾವಣೆಯಿಂದ ಹಿಂದೆ ಸರಿಸುವ ವ್ಯಕ್ತಿ ಭೂಮಿ ಮೇಲೆ ಹುಟ್ಟಿಲ್ಲ. ಚುನಾವಣೆಯಲ್ಲಿ ಹಿಂದೆ ಸರಿಯುತ್ತೇನೆ ಅನ್ನೋದು ಕೇವಲ ಊಹಾಫೋಹ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ ಸ್ಪಷ್ಟಪಡಿಸಿದರು. ಧಾರವಾಡ ಲೋಕಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಿಸಿದ ನಂತರ ಪ್ರಥಮ ಬಾರಿಗೆ ಹುಬ್ಬಳ್ಳಿ ನಗರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.
ಐಪಿಎಲ್ ಮ್ಯಾಚ್ ಪ್ರೇಕ್ಷಕರಿಗೆ ಗುಡ್‌ನ್ಯೂಸ್! ಪ್ರಯಾಣದ ಟೆನ್ಶನ್ ಬೇಡ!
ಜನತೆ ಚುನಾವಣೆ ನಿಲ್ಲುವಂತೆ ಸಲಹೆ ನೀಡಿದ್ದಾರೆ. ಪಕ್ಷೇತರನಾಗಿ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ. ಹೀಗಿರುವಾಗ ಅಖಾಡದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಏಪ್ರಿಲ್ 18ಕ್ಕೆ ನಾಮಪತ್ರ ಸಲ್ಲಿಸುತ್ತೇನೆ ಎಂದರು. ಬಹುಸಂಖ್ಯಾತ ನಾಯಕರು ಈಗಾಗಲೇ ನನ್ನ ಜೊತೆ ಮಾತನಾಡಿ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮನವಿ ಮಾಡಿದ್ದಾರೆ. ಆದರೆ, ಚುನಾವಣೆಯಿಂದ ಹಿಂದೆ ಸರಿಯಲ್ಲ ಎಂದು ಅವರಿಗೆ ಹೇಳಿದ್ದೇನೆ. ಕಾಂಗ್ರೆಸ್ ಪಕ್ಷ ಏನು ಚರ್ಚೆ ನಡೆಸಿದೆಯೋ ಗೊತ್ತಿಲ್ಲ. ಯಾವುದೇ ಕಾಂಗ್ರೆಸ್ ನಾಯಕರು ಸಂಪರ್ಕಿಸಿಲ್ಲ. ಒಂದು ವೇಳೆ ಕಾಂಗ್ರೆಸ್‌ನಿಂದ ಅವಕಾಶ ಸಿಕ್ಕಲ್ಲಿ ಭಕ್ತರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಸದ್ಯಕ್ಕೆ ನಾನು ಪಕ್ಷೇತರನಾಗಿ ನಿಲ್ಲುವುದು ಖಚಿತ ಎಂದು ಹೇಳಿದರು.