ಆರ್ಟಿಕಲ್ 370ನ್ನು ರದ್ದು ಮಾಡಿದ ಬಳಿಕ ಜಮ್ಮು -ಕಾಶ್ಮೀರ ನಮ್ಮದು ಎಂಬ ವಾತಾವರಣ ನಿರ್ಮಾಣ ಆಗುತ್ತಿದೆ. ಅಖಂಡ ಭಾರತ ನಿರ್ಮಾಣ ಆಗುತ್ತಿದ್ದು, ಇಂದಲ್ಲ ನಾಳೆ ಪಾಕಿಸ್ತಾನ ಭಾರತದ ಜೊತೆ ಸೇರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು.
ಶಿವಮೊಗ್ಗ (ಡಿ.15): ಆರ್ಟಿಕಲ್ 370ನ್ನು ರದ್ದು ಮಾಡಿದ ಬಳಿಕ ಜಮ್ಮು -ಕಾಶ್ಮೀರ ನಮ್ಮದು ಎಂಬ ವಾತಾವರಣ ನಿರ್ಮಾಣ ಆಗುತ್ತಿದೆ. ಅಖಂಡ ಭಾರತ ನಿರ್ಮಾಣ ಆಗುತ್ತಿದ್ದು, ಇಂದಲ್ಲ ನಾಳೆ ಪಾಕಿಸ್ತಾನ ಭಾರತದ ಜೊತೆ ಸೇರುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದರು. ಪಾಕಿಸ್ತಾನದಲ್ಲಿ ಮುಸ್ಲಿಂ ಆಡಳಿತ ಇದ್ದರೂ ಅನ್ನ, ನೀರು ಕೊಡಲು ಆಗ್ತಿಲ್ಲ. ಆದರೆ, ಇಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಭಾರತ ಎಲ್ಲಾ ಕ್ಷೇತ್ರಗಳಲ್ಲೂ ಮೊದಲನೇ ಸ್ಥಾನಕ್ಕೆ ಹೋಗುತ್ತಿದೆ ಎಂದು ಅವರು ತಿಳಿಸಿದರು.
ಕೊಲೆಗಡುಕರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ: ಕರ್ನಾಟಕ ರಾಜ್ಯ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ಕೇಂದ್ರ ಆಗುತ್ತಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗಂಭೀರ ಆರೋಪ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾಗುತ್ತಲೇ ಇವೆ. ಶಾಲೆಗಳಿಗೆ, ರಾಜ ಭವನಕ್ಕೆ ಬಾಂಬ್ ಬೆದರಿಕೆ ಹಾಕಿದರೂ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಂತಪ್ರಿಯವಾಗಿದ್ದ ಕರ್ನಾಟಕ ಈಗ ಭಯೋತ್ಪಾದಕರು, ಕೊಲೆಗಡುಕರು, ಗೂಂಡಾಗಳ ರಾಜ್ಯವಾಗುತ್ತಿದೆ. ಅವರಿಗೆ ಕಾಂಗ್ರೆಸ್ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದರು.
undefined
ಕಾಂಗ್ರೆಸ್ ಸರ್ಕಾರ ಎದುರುತ್ತಿದೆ: ರಾಜ್ಯದಲ್ಲಿ ಗಾಂಜಾ, ಡ್ರಗ್ಸ್, ಕೊಲೆ, ಸುಲಿಗೆ, ಭಯೋತ್ಪಾದಕ ಕೃತ್ಯಗಳು ಎಗ್ಗಿಲ್ಲದೇ ನಡೆಯುತ್ತಿವೆ. ಇದರ ಬಗ್ಗೆ ಮುಖ್ಯಮಂತ್ರಿ, ಗೃಹಮಂತ್ರಿಗೆ ಗಂಭೀರತೆ ಇಲ್ಲ. ವಿದೇಶಿ ಭಯೋತ್ಪಾದಕರನ್ನು ಕೇಂದ್ರ ಸರ್ಕಾರ ಮೆಟ್ಟಿ ನಿಂತಿದೆ. ಮುಸ್ಲಿಂ ಗೂಂಡಾಗಳಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಯ ಹುಟ್ಟಿಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಮಾತ್ರ ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಹೆದರುತ್ತಿದೆ. ಭಯೋತ್ಪಾದಕರಲ್ಲಿ ಹೆಚ್ಚು ಮುಸ್ಲಿಂಮರೇ ಇದ್ದಾರೆ. ಮುಸ್ಲಿಂ ಓಟ್ ಹೋಗುತ್ತೆ ಅಂತ ಮುಸ್ಲಿಂರನ್ನು ಓಲೈಸುತ್ತಾರೆ. ದೇಶದ್ರೋಹಿ ಜಮೀರ್ ಸಚಿವ ಸಂಪುಟದಲ್ಲಿ ಇದ್ದಾನೆ. ಮುಸ್ಲಿಂ ಧರ್ಮವನ್ನು ಒಗ್ಗೂಟಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ತೆಲಂಗಾಣದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಪಾದಿಸಿದರು.
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಸಮೀಕ್ಷೆ ಆಧರಿಸಿ ಟಿಕೆಟ್ ನೀಡಿ: ರೇಣುಕಾಚಾರ್ಯ
ಭದ್ರಾವತಿ ಪ್ರಕರಣದಲ್ಲಿ ಶಾಸಕ ಪುತ್ರನ ಕುಮ್ಮಕ್ಕು: ಮೊನ್ನೆ ಭದ್ರಾವತಿಯಲ್ಲೂ ಗೂಂಡಾ ವರ್ತನೆ ನಡೆದಿದೆ. ಇದರಲ್ಲಿ ಶಾಸಕರ ಮಗನ ಕುಮ್ಮಕ್ಕಿದೆ ಎನ್ನುವುದು ಗೊತ್ತಾಗಿದೆ. ಕಾಂಗ್ರೆಸ್ ಸರ್ಕಾರ ಭಯೋತ್ಪಾದಕ ರಾಜ್ಯವಾದರೆ, ಪೊಲೀಸ್ ರಾಜ್ಯ ಗೂಂಡಾ ರಾಜ್ಯವಾಗಿದೆ. ಕೊಲೆ, ಸುಲಿಗೆ, ದರೋಡೆ ಬಗ್ಗೆ ಮೌನವಾಗಿದ್ದಾರೆ. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಇದ್ಯೋ, ಇಲ್ವೋ ಗೊತ್ತಿಲ್ಲ. ಭದ್ರಾವತಿ ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭಿರವಾಗಿ ತೆಗೆದುಕೊಳ್ಳಬೇಕು ಎಂದರು.