ನಿಖಿಲ್‌ಗೆ ಗಿಫ್ಟ್ ಬಂದಿರೋದು ಎಂದು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರಿನ ಪೆಂಡೆಂಟ್ ಒಪ್ಪಿಸಿದ ಎಚ್‌ಡಿಕೆ!

Published : Oct 25, 2023, 09:01 PM IST
ನಿಖಿಲ್‌ಗೆ ಗಿಫ್ಟ್ ಬಂದಿರೋದು ಎಂದು ಅರಣ್ಯಾಧಿಕಾರಿಗಳಿಗೆ ಹುಲಿ ಉಗುರಿನ ಪೆಂಡೆಂಟ್ ಒಪ್ಪಿಸಿದ ಎಚ್‌ಡಿಕೆ!

ಸಾರಾಂಶ

ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಬಗ್ಗೆ ಚರ್ಚೆ ನಡೀತಿದೆ. ನನ್ನ ಪುತ್ರ ನಿಖಿಲ್ ಮದುವೆ ಸಂದರ್ಭದಲ್ಲಿ ಧರಿಸಿದ್ದು ಇದೆ ಪೆಂಡೆಂಟ್. ನಾನೇ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಸಿದ್ದೀನಿ ಎಂದು ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು (ಅ.25): ಕರ್ನಾಟಕದಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ವಿವಿಧ ಗಣ್ಯರು ಹುಲಿ ಉಗುರಿನ ಪೆಂಡೆಂಟ್ ಧರಿಸಿದ್ದಾರೆ ಅವರ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಅರಣ್ಯ ಸಚಿವರನ್ನು ಪ್ರಶ್ನೆ ಮಾಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಪುತ್ರ, ನಟ, ಜೆಡಿಎಸ್ ಪಕ್ಷದ ನಾಯಕ ನಿಖಿಲ್ ಕುಮಾರಸ್ವಾಮಿ ವಿವಾಹದ ಸಂದರ್ಭದಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರುವ ಸರ ಧರಿಸಿದ್ದರು ಎಂಬ ಸುದ್ದಿ ವಿವಿಧ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದ್ದಾರೆ.

ಇವತ್ತು ಬೆಳಗ್ಗಿನಿಂದ ಚಿತ್ರನಟರು, ಜ್ಯೋತಿಷಿಗಳು ಇಟ್ಟಿರುವ ಹುಲಿ ಉಗುರುಗಳ ಬಗ್ಗೆ ಚರ್ಚೆ ನಡೀತಿದೆ. ನನ್ನ ಪುತ್ರ ನಿಖಿಲ್ ಮದುವೆ ಸಂದರ್ಭದಲ್ಲಿ ಧರಿಸಿದ್ದು ಇದೆ ಪೆಂಡೆಂಟ್. ನಾನೇ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಸಿದ್ದೀನಿ. ಬಡವರಿಗೆ ಒಂದು ನ್ಯಾಯ , ಉಳ್ಳವರಿಗೆ ಒಂದು ನ್ಯಾಯ ಎನ್ನುವಂತಾಗಬಾರದು. ಕೇಳಿದ್ದೆಲ್ಲಾ ಬರೆದು ಕೊಟ್ಟಿದ್ದೀನಿ. ಮಹಜರ್ ಮಾಡ್ತಿದ್ದಾರೆ. ನಾನೇ ಅಧಿಕಾರಿಗಳ ಜೊತೆಯಲ್ಲಿ ಗೋಲ್ಡ್ ಅಂಗಡಿಗೆ ಕಳಿಸ್ತಿದ್ದೀನಿ. ಈ ಪೆಂಡೆಂಟ್ ಸಿಂಥೆಟಿಕ್, ಸಾಕಷ್ಟು ಜನ್ರ ಬಳಿ ಈ ಪೆಂಡೆಂಟ್ ಇದೆ. ವನ್ಯ ಜೀವಿಗಳ ವಸ್ತುಗಳನ್ನ ಇಟ್ಟುಕೊಳ್ಳುವುದು ಕಾನೂನು ಬಾಹೀರ ಅಂತಾ ಗೊತ್ತಿದ್ದು. ನಾವು ಅಂಥಾ ಕೆಲಸ ಮಾಡೋದಿಲ್ಲ ಎಂದರು.

ನಟ ಜಗ್ಗೇಶ್‌ ಮನೆಯಲ್ಲಿ ಸಿಕ್ತು ಹುಲಿ ಉಗುರಿನ ಪೆಂಡೆಂಟ್‌, ಎಫ್‌ಎಸ್‌ಎಲ್‌ಗೆ ಕಳಿಸಿದ ಅರಣ್ಯ ಇಲಾಖೆ!

ಎಫ್‌ಎಸ್‌ಎಲ್‌ಗೆ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಲಿ. ಮದುವೆ ಸಂದರ್ಭದಲ್ಲಿ ನಿಖಿಲ್‌ಗೆ ಗಿಫ್ಟ್ ಬಂದಿರೋದು. ಸಂಬಂಧಿಕರು ಕೊಟ್ಟಿರೋದು. ಬೆಳಗ್ಗೆ ನನ್ನ ಸೊಸೆ ಕರೆಸಿ ಎಲ್ಲಿಟ್ಟಿದ್ದೀಯ ಅಂತಾ ತರಿಸಿದ್ದೆ. ನಾನೆ ಬೆಳಗ್ಗೆ 11 ಗಂಟೆಗೆ ಅಧಿಕಾರಿಗಳಿಗೆ ಫೋನ್ ಮಾಡಿ ಕರೆಸಿದ್ದೀನಿ. ಎಷ್ಟು ಮನೆಯಲ್ಲಿ ಇಲ್ಲ ಇದು. ಚೆನ್ನಾಗಿ ಕಾಣುತ್ತೆ ಅಂತಾ ಹಾಕೊತಾರೆ. ಇದು ಹುಲಿ ಉಗುರು ಅಲ್ಲ. ಅಷ್ಟು ಪರಿಜ್ಞಾನ ಇಲ್ವಾ ನನಗೆ . ಹುಲಿ ಉಗುರು ಇದ್ರೆ ಅವತ್ತೇ ರಿಜೆಕ್ಟ್ ಮಾಡ್ತಿದ್ದೆ ಎಂದು ಗರಂ ಆಗಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

Jailer ನರಸಿಂಹನ ಪಾತ್ರವೇ ಸಿನಿಮಾ ಆಗುತ್ತಾ?: ಶಿವಣ್ಣನ ಹೊಸ ಸಿನಿಮಾ ಟೈಟಲ್ ಏನು ಗೊತ್ತಾ?

ಎಚ್‌ಡಿಕೆ ಪೆಂಡೆಂಟ್ ನೀಡಿದ್ದಾರೆ: ಎಚ್.ಡಿ.ಕುಮಾರಸ್ವಾಮಿ ಮನೆಗೆ ಪೆಂಡೆಂಟ್ ಪಡೆಯಲು ಬಂದಿದ್ದು, ಹುಲಿ ಉಗುರಿನ ಮಾದರಿ ಅಂತಾ ಫೋಟೊ ವೈರಲ್ ಆಗಿತ್ತು. ಕುಮಾರಸ್ವಾಮಿ ಅವರು ಸದ್ಯ ಆ ಪೆಂಡೆಂಟ್ ನೀಡಿದ್ದಾರೆ. ಅದನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಎಫ್‌ಎಸ್ ಎಲ್ ಕಳಿಸಲಾಗುತ್ತೆ. ನಮಗೆ ಸಂಪೂರ್ಣ ಲಾಕೆಟ್ ಬೇಡ, ಹುಲಿ ಹಲ್ಲಿನ ಮಾದರಿಯ ಪೆಂಡೆಂಟ್ ಮಾತ್ರ ಸಾಕು. ಅದನ್ನ ಎಚ್‌ಡಿಕೆ ಅವರು ನೀಡಿದ್ದಾರೆ. ನೋಟಿಸ್ ಅನ್ನ ಎಚ್‌ಡಿಕೆ ಅವರೇ ಸ್ವೀಕರಿಸಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ರಮೇಶ ಶೇತ ಸನದಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ