ಆಪರೇಷನ್‌ ಕಮಲ ಖಚಿತ: ಮಾಜಿ ಸಚಿವ ಮುರುಗೇಶ ನಿರಾಣಿ

By Kannadaprabha News  |  First Published Oct 25, 2023, 11:47 AM IST

ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಇರಲೆಂಬುದು ನಮ್ಮ ಆಶಯ. ಆದರೆ, ಬಿಟ್ಟಿ ಭಾಗ್ಯಗಳನ್ನು ನೀಡಿ ತಮ್ಮ ತಮ್ಮೊಳಗೆ ಕಚ್ಚಾಡುತ್ತಿರುವ ಕಾಂಗ್ರೆಸ್‌ ಮುಖಂಡರಿಂದಲೇ ಸರ್ಕಾರ ನೆಲಕಚ್ಚುವ ಸಮಯ ದೂರವಿಲ್ಲ: ಮಾಜಿ ಸಚಿವ ಡಾ.ಮುರುಗೇಶ ನಿರಾಣಿ 


ಕೆರೂರ(ಅ.25): ನಿರಾಣಿ ಸಮೂಹದ ಸಕ್ಕರೆ ಕಾರ್ಖಾನೆಗಳು ರೈತರನ್ನು ಆರ್ಥಿಕವಾಗಿ ಸಧೃಡಗೊಳಿಸುವ ಜೊತೆಗೆ ರೈತರ ಮಕ್ಕಳು ಸೇರಿದಂತೆ ಅನೇಕರಿಗೆ ಉದ್ಯೋಗ ಅವಕಾಶ ಒದಗಿಸಿವೆ ಎಂದು ಮಾಜಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು. ಅವರು ಸಮೀಪದ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ ನೆರವೇರಿಸಿ, ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ಮಾತನಾಡಿದರು.

ನಿರಾಣಿ ಸಮೂಹ ಸಕ್ಕರೆ ಉತ್ಪಾದನೆಯಲ್ಲಿ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ಯಾರ ಪಾಲುದಾರಿಕೆಯೂ ಇಲ್ಲದೇ ಸ್ವಂತ ಮಾಲೀಕತ್ವ ಹೊಂದಿರುವ ಕಾರ್ಖಾನೆಗಳು ಎಥೆನಾಲ್ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿವೆ. ಮುಂದಿನ ದಿನಗಳಲ್ಲಿ ವಿಶ್ವದಲ್ಲಿಯೇ ಸಕ್ಕರೆ ಹಾಗೂ ಎಥೆನಾಲ್‌ ಉತ್ಪಾದನಾ ವಲಯದಲ್ಲಿ ನಿರಾಣಿ ಸಮೂಹ ಅಗ್ರ ಸ್ಥಾನ ತಲುಪಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Tap to resize

Latest Videos

ಗುತ್ತಿಗೆದಾರರಿಂದ ಹಣ ಹೊಡೆಯುವ ಹುನ್ನಾರ: ಮಾಜಿ ಸಚಿವ ಮುರುಗೇಶ ನಿರಾಣಿ

ಈ ಮುಂಚೆ ಬಾದಾಮಿ ತಾಲೂಕಿನ ರೈತರು ಕಬ್ಬು ಸಾಗಿಸಲು ದೂರದ ಊರುಗಳಿಗೆ ಹೋಗಬೇಕಿತ್ತು. ಇದರಿಂದ ರೈತರಿಗಾಗುವ ತೊಂದರೆ ಅರಿತು ತಾಲೂಕಿನಲ್ಲಿಯೇ ಈಗ 3 ಕಾರ್ಖಾನೆಗಳನ್ನು ಕೆಲಸ ಮಾಡುವಂತೆ ಮಾಡಿದ್ದೇನೆ. ಈಗ ರೈತರು ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಬೆಳೆಯುತ್ತಿದ್ದು ಅವಧಿಗೆ ಸರಿಯಾಗಿ ಕಬ್ಬು ಕಟಾವು ಮಾಡಿಸಿ ನಿಗದಿತ ಅವಧಿಯೊಳಗೆ ಬಿಲ್ಲು ಕೊಡುವ ವ್ಯವಸ್ಥೆಯಾಗಿದೆ. ಪ್ರಸಕ್ತ ವರ್ಷ ಮಳೆ ಕೊರತೆಯಿಂದ ಇಳುವರಿ ಕಡಿಮೆಯಾಗುವ ಸಂಭವ ಇದ್ದು ರೈತರಿಗೆ ಸರ್ಕಾರ ನಿಗದಿ ಪಡಿಸಿದ ಬೆಲೆ ಕೊಡಲಾಗುವುದು ಎಂದರು.

ಆಪರೇಷನ್‌ ಕಮಲ ಖಚಿತ: ನಿರಾಣಿ

ಮುಂಬರುವ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಗಾಳಿ ಬೀಸಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 5 ವರ್ಷ ಇರಲೆಂಬುದು ನಮ್ಮ ಆಶಯ. ಆದರೆ, ಬಿಟ್ಟಿ ಭಾಗ್ಯಗಳನ್ನು ನೀಡಿ ತಮ್ಮ ತಮ್ಮೊಳಗೆ ಕಚ್ಚಾಡುತ್ತಿರುವ ಕಾಂಗ್ರೆಸ್‌ ಮುಖಂಡರಿಂದಲೇ ಸರ್ಕಾರ ನೆಲಕಚ್ಚುವ ಸಮಯ ದೂರವಿಲ್ಲ. ಆಪರೇಷನ್‌ ಹಸ್ತ ಎಂದು ಕೆಲ ಕಾಂಗ್ರೆಸ್‌ ನಾಯಕರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದ್ದು, ಇನ್ನೇನಿದ್ದರೂ ಆಪರೇಷನ್‌ ಕಮಲ ಖಚಿತ ಎಂದರು.

ಲಿಂಗಾಯತರನ್ನು ಯಾಮಾರಿಸಿದೆ ಕಾಂಗ್ರೆಸ್‌: ಮುರುಗೇಶ ನಿರಾಣಿ

ಸರ್ಕಾರದ ವಿರುದ್ಧ ಜನರ ದಂಗೆ ಶೀಘ್ರ

ವಿಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ರಾಜ್ಯದಲ್ಲಿ ಜನವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದೆ. ಮುಂಬರುವ ದಿನಗಳಲ್ಲಿ ಈ ಸರ್ಕಾರದ ವಿರುದ್ಧ ಜನರೇ ದಂಗೆ ಏಳಲಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಗ್ಯಾರಂಟಿ ಭರಾಟೆಯಲ್ಲಿ ಸರ್ಕಾರ ಬೊಕ್ಕಸ ಖಾಲಿ ಮಾಡಿದೆ. ರಾಜ್ಯದಲ್ಲಿ ಅರಾಜಕತೆ ತಾಂಡವವಾಡುತ್ತಿದೆ. ಹೀಗಾಗಿ, ಸದ್ಯದಲ್ಲೇ ಈ ಸರ್ಕಾರದ ಬಿದ್ದುಹೋಗಲಿದೆ ಎಂದರು.

ಈ ಸಂದರ್ಭದಲ್ಲಿ ವಿಪ ಸದಸ್ಯ ಹನಮಂತ ನಿರಾಣಿ, ಜಿಪಂ ಮಾಜಿ ಉಪಾಧ್ಯಕ್ಷ ಹೂವಪ್ಪ ರಾಠೋಡ ಸೇರಿ ಅನೇಕ ಧುರೀಣರು ಇದ್ದರು.

click me!