ಲಾಯಕ ತಂದೆ ಹೇಳಿದ ಮಾತನ್ನು ಲಾಯಕ ಪುತ್ರ ಮುಂದುವರಿಸಿದೆ. ಕರ್ನಾಟಕದ ಚುನಾವಣೆಯಲ್ಲಿ ನಿಮ್ಮ ಕೀಳು ಭಾಷೆಗಳಿಂದ ಕರ್ನಾಟಕ ಮಾನ ಮರ್ಯಾದೆ ತೆಗೆಯಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಖರ್ಗೆ ನಿಂದನೆಗೆ ತಿರುಗೇಟು ನೀಡಿದ್ದಾರೆ.
ರಾಯಚೂರು(ಮೇ.02): ಕಾಂಗ್ರೆಸ್ ಓಪನಿಂಗ್ ಬ್ಯಾಟ್ಸ್‌ಮನ್ ಹಾಗೂ ಒನ್ ಡೌನ್ ಬ್ಯಾಟ್ಸ್‌ಮನ್ ಬಳಸಿದ ಶಬ್ದ, ಭಾಷೆ, ಪದಗಳಿಂದ ನಾನು ಮಾತ್ರವಲ್ಲ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಯಚೂರಿನಲ್ಲಿ ಆಯೋಜಿಸಿದ ಬೃಹತ್ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇದೇ ವೇಳೆ ಕಾಂಗ್ರೆಸ್ ನಾಯಕರಿಗೆ ಒಂದು ಮನವಿಯನ್ನು ಮಾಡಿದ್ದಾರೆ. ನೀವು ಮೋದಿ ವಿರುದ್ಧ ಯಾವುದೇ ಜೋಕ್ ಮಾಡಿ. ಆದರೆ ಕರ್ನಾಟಕದ ಗೌರವಕ್ಕೆ ಚ್ಯುತಿ ಬರುವ ಕೆಲಸ ಮಾಡಬೇಡಿ. ಕೀಳಮಟ್ಟಕ್ಕಿಳಿದು ರಾಜ್ಯ ಮಾನ ಹರಾಜಿಗಿಡಬೇಡಿ ಎಂದು ಮನವಿ ಮಾಡಿದ್ದಾರೆ.
ಜಗಜ್ಯೋತಿ ಬಸವೇಶ್ವರ, ಕಲಿಯುಗದ ಗುರು ರಾಘವೇಂದ್ರ ಸ್ವಾಮಿಗಳಿಗೆ ಪ್ರಣಾಮಗಳು ಎಂದು ಮೋದಿ ಮಾತು ಆರಂಭಿಸಿದರು. ಅಭಿವೃದ್ಧಿಯ ನೀಲ ನಕ್ಷೆ, ಡಬಲ್ ಎಂಜಿನ್ ಸರ್ಕಾರ, ಡಬಲ್ ಎಂಜಿನ್ ಶಕ್ತಿ ಹೊಂದಿರು ಏಕೈಕ ಪಾರ್ಟಿ ಬಿಜೆಪಿ. ಆದರೆ ಕಾಂಗ್ರೆಸ್ ನಾಯಕ ವಿದಾಯದ ಚುನಾವಣೆ ಇದು. ಹೀಗಾಗಿ ನೀವು ಈ ಬಾರಿ ಕೊನೆಯದಾಗಿ ಒಂದು ಮತ ನೀಡಿ ಎಂದು ಮತ ಕೇಳುತ್ತಿದೆ. ಇತ್ತ ಜೆಡಿಎಸ್ ನಮ್ಮ ಪರಿವಾರದ ಅಸ್ತಿತ್ವಕ್ಕಾಗಿ ಮತ ಕೇಳುತ್ತಿದೆ. ಇದು ಜೆಡಿಎಸ್ ಕಾಂಗ್ರೆಸ್ ಮತ ಕೇಳುವ ಪರಿ ಎಂದು ಮೋದಿ ಹೇಳಿದ್ದಾರೆ.
ಬಜರಂಗದಳ ನಿಷೇಧಿಸುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹನುಮ ಜನ್ಮಸ್ಥಳದಲ್ಲಿ ಪ್ರಧಾನಿ ಮೋದಿ ವಾಗ್ದಾಳಿ!
ಕರ್ನಾಟಕದಲ್ಲಿ ಎಲ್ಲೇ ಹೋದರೂ ಒಂದು ಮಾತು ಕೇಳಿಬರುತ್ತಿದೆ. ಅದು ಈ ಬಾರಿಯ ನಿರ್ಧಾರ, ಬಹುಮತದ ಬಿಜೆಪಿ ಸರ್ಕಾರ ಎಂದು ಬಿಜೆಪಿ ಚುನಾವಣಾ ಘೋಷಣಾ ವಾಕ್ಯ ಹೇಳಿದರು. ಉಕ್ರೇನ್ ಸಂಕಷ್ಟದಲ್ಲಿ ಕಾಂಗ್ರೆಸ್, ಜೆಡಿಎಸ್ ಟೀಕೆಯಲ್ಲಿ ಮುಳುಗಿತ್ತು. ಆದರೆ ಪ್ರತಿಯೊಬ್ಬ ಭಾರತೀಯನನ್ನೂ ಯುದ್ಧ ಭೂಮಿಯಿಂದ ಉಕ್ರೇನ್‌ನಿಂದ ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಯಿತು. ಕೊರೋನಾ ಸಮಯದಲ್ಲಿ ಉಚಿತ ಲಸಿಕೆ ನೀಡಿ ಜನರ ಜೀವ ಉಳಿಸುವ ಕೆಲಸ ಮಾಡಿದೆ. ಕೊರೋನಾ ಸಂಕಷ್ಟದಲ್ಲಿ ಉಚಿತ ಪಡಿತರ ನೀಡುವ ಮೂಲಕ ಹಸಿವು ನೀಗಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕದ ಮಹಾನ್ ಪರಂಪರೆಯನ್ನು ಹೇಗೆ ಅವಮಾನಿಸಲು ಕಾಂಗ್ರೆಸ್ ಟೊಂಕಕಟ್ಟಿ ನಿಂತಿದೆ. ಕಾಂಗ್ರೆಸ್ ಬಳಸುವ ಭಾಷೆ, ನಾಯಕರ ಅಹಂಕಾರ, ಅವರ ಶಬ್ದ, ಮಾತುಗಳನ್ನು ಕೇಳಿ ನಾನು ಮಾತ್ರವಲ್ಲ, ಹಿಂದುಸ್ಥಾನವೇ ನಾಚಿಗೆ ಪಡುವಂತಾಗಿದೆ. ಕಾಂಗ್ರೆಸ್ ಬಳಿ ಅಭಿವೃದ್ಧಿ, ಯೋಜನೆಗಳ ವಿಷಯವಿಲ್ಲ. ಕರ್ನಾಟಕದ ಮಾನ ಮರ್ಯಾದೆಯನ್ನು ಹರಾಗಿಡುತ್ತಿದ್ದಾರೆ. ಚುನಾವಣೆ ಆರಂಭದಲ್ಲಿ ಒಪನಿಂಗ್ ಬ್ಯಾಟ್ಸ್‌ಮನ್ , ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ವಿಷ ಸರ್ಪ ಎಂದರು. ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಮಾತು ಮುಂದುವರಿಸಿದರು. ಲಾಯಕ್ ತಂದೆ ಬಳಿಕ ಲಾಯಕ್ ಪುತ್ರ ಇದೇ ಮಾತನ್ನು ಮುನ್ನಡೆಸಿದರು. ಈ ಮಾತನ್ನು ನಾನು ಮುಂದುವರಿಸಿದವುದಿಲ್ಲ. ಕಾಂಗ್ರೆಸ್ ನಾಯಕರ ಈ ಮಾತಿಗೆ ಕರ್ನಾಟಕದ ಜನತೆ ಉತ್ತರಿಸಲಿದ್ದಾರೆ. ನಿಮಗೆ ಮೋದಿ ವಿರುದ್ಧ ಜೋಕ್ ಹೇಳಬೇಕೆಂದರೆ ಹೇಳಿ, ಆದರೆ ಕರ್ನಾಟಕದ ಗೌರವ ಚ್ಯುತಿಬರವು ಕೆಲಸ ಮಾಡಬೇಕು. ಕೆಳಮಟ್ಟಕ್ಕೆ ಇಳಿಯಬೇಡಿ ಎಂದು ಮೋದಿ ಕಾಂಗ್ರೆಸ್ ನಾಯಕರಲ್ಲಿ ಮನವಿ ಮಾಡಿದ್ದಾರೆ.
ರೌಡಿಗಳನ್ನು ಎನ್‌ಕೌಂಟರ್ ಮಾಡಿದರೆ ಕಾಂಗ್ರೆಸ್ ಕಣ್ಣಲ್ಲಿ ನೀರು, ಚಿತ್ರದುರ್ಗದಲ್ಲಿ ಮೋದಿ ಮಾತಿಗೆ ವಿಪಕ್ಷ ಸುಸ್ತು!
ನಿಮ್ಮ ಪುತ್ರ ದೆಹಲಿಯಲ್ಲಿ ಕೆಲಸ ಮಾಡಲು ದೆಹಲಿಯಲ್ಲಿ ಕುಳಿತಿದ್ದಾನೆ. ಇದೇ ಉತ್ಸಾಹದಲ್ಲಿ ನೀವು ಮತದಾನ ಕೇಂದ್ರಕ್ಕೆ ತೆರಳಿ ಮತಹಾಕಿ. ಬಿಜೆಪಿಗೆ ಮತ ನೀಡಿ ಎಂದು ಮೋದಿ ಮನವಿ ಮಾಡಿದರು.