ಮೋದಿ ನಾಲಾಯಕ್ ಮಗ ಹೇಳಿಕೆ, ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್!

Published : May 03, 2023, 08:59 PM IST
ಮೋದಿ ನಾಲಾಯಕ್ ಮಗ ಹೇಳಿಕೆ,  ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್!

ಸಾರಾಂಶ

ನಾಲಾಯಕ್ ಮಗ ಮೋದಿ ಎಂದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಇದೇ ವೇಳೆ ಸೋನಿಯಾ ಗಾಂಧಿಗೆ ವಿಷಕನ್ಯೆ ಎಂದಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಆಯೋಗ ಬಿಸಿ ಮುಟ್ಟಿಸಿದೆ.  

ನವದೆಹಲಿ(ಮೇ.03): ಕರ್ನಾಟಕ ಚುನಾವಣಾ ಅಖಾಡದಲ್ಲಿ ರಾಜಕೀಯ ನಾಯಕರ ಹೇಳಿಕೆಗೆಳು ಮಿತಿ ದಾಟುತ್ತಿದೆ. ಒಲೈಕೆ, ಚಪ್ಪಾಳೆ, ಮತ ಸೆಳೆಯಲು ನೀಡುತ್ತಿರುವ ಹೇಳಿಕೆ ರಾಜ್ಯದಲ್ಲಿ ಭಾರಿ ಕೋಲಾಹಲ ಸೃಷ್ಟಿಸುತ್ತಿದೆ. ಹೀಗೆ ಎಲ್ಲೆ ಮೀರಿದ ಇಬ್ಬರು ನಾಯಕರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನಾಲಾಯಕ್ ಮಗ ಎಂದು ಹೇಳಿದ್ದ ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಆಯೋಗ ನೋಟಿಸ್ ನೀಡಿದೆ. ಇತ್ತ ಸೋನಿಯಾ ಗಾಂಧಿ ವಿಷಕನ್ಯೆ ಎಂದು ವಿವಾದ ಸೃಷ್ಟಿಸಿದ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ಗೂ ಚುನಾವಣಾ ಆಯೋಗ ನೋಟಿಸ್ ನೀಡಿದೆ.

ಚುನಾವಣಾ ಆಯೋಗ ಪ್ರಿಯಾಂಕ್ ಖರ್ಗೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಶೋಕಾಸ್ ನೋಟಿಸ್ ನೀಡಿದೆ. ಇಬ್ಬರು ನಾಯಕರು ಮೇ.4ರೊಳಗೆ ತಮ್ಮ ತಮ್ಮ ವಿವಾದಾತ್ಮಕ ಹೇಳಿಕೆಗೆ ಉತ್ತರ ನೀಡಬೇಕು ಎಂದು ಚುನಾವಣಾ ಆಯೋಗ ನೋಟೀಸ್‌ನಲ್ಲಿ ಹೇಳಿದೆ. ಇದೀಗ ಇಬ್ಬರು ನಾಯತರು ವಿವಾದಾತ್ಮಕ ಹೇಳಿಕೆಗೆ ಸ್ಪಷ್ಟನೆ ನೀಡಬಬೇಕಿದೆ. ಈ ಉತ್ತರ ಬಳಿಕ ಆಯೋಗ ಮುಂದಿನ ಕ್ರಮ ಕೈಗೊಳ್ಳಲಿದೆ.

 

ಪ್ರಿಯಾಂಕ್‌ ಹೇಳಿಕೆ, ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಬಿಜೆಪಿ ದೂರು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದದ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ವಿವಾದ ಸೃಷ್ಟಿಸಿದ್ದರು. ಮೋದಿ ವಿಷ ಸರ್ಪ ಎಂದಿದ್ದ ಖರ್ಗೆ ವಿವಾದ ಕಾಂಗ್ರೆಸ್ ಕೈಸುಟ್ಟಿತ್ತು.  ಇತ್ತ ಪುತ್ರ ಪ್ರಿಯಾಂಕ್ ಖರ್ಗೆ, ಮೋದಿಯನ್ನು ನಾಲಾಯಕ್ ಎಂದಿದ್ದರು.   ಪ್ರಧಾನಿ ಮೋದಿಯವರು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡಕ್ಕೆ ಬಂದು ಬಂಜಾರಾ ಸಮುದಾಯದವರಿಗೆ ಮನೆಗಳ ಹಕ್ಕು ಪತ್ರ ನೀಡುವಾಗಿನ ಸಮಾರಂಭದಲ್ಲಿ ಆಡಿದ ಮಾತುಗಳನ್ನು ಉಲ್ಲಖಿಸುತ್ತ ರೋಶಾವೇಶದಲ್ಲಿ ಪ್ರಧಾನಿಯವರನ್ನ ‘ನಾಲಾಯಕ್‌’ ಎಂದಿದ್ದರು. 

ರಾಜ್ಯ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿ ಬಂಜಾರಾ ಸಮಾಜಕ್ಕೆ ಅನ್ಯಾಯ ಮಾಡಿತು. ದಿಲ್ಲಿಯಲ್ಲಿ ಕುಳಿತವ ‘ನಾಲಾಯಕ್‌ ಬೇಟಾ’ ಇದ್ದಾಗ ಇನ್ನೇನು ಆಗಲು ಸಾಧ್ಯ? ಎಂದು ಪ್ರಿಯಾಕ್‌ ಖರ್ಗೆ ಪ್ರಧಾನಿ ಮೋದಿ ವಿರುದ್ಧ ನೇರವಾಗಿಯೇ ಟೀಕಾ ಪ್ರಹಾರ ಮಾಡಿದ್ದರು. ದಿಲ್ಲಿಯಲ್ಲಿ ಕುಳಿತ ಮಗ ಸಮರ್ಥ ಇರಬೇಕು ತಾನೆ? ಅವನೇ ಸಮರ್ಥ ಇಲ್ಲಂತಾದರೆ ಬಂಜಾರಾ ಸಮಾಜಕ್ಕೆ ನ್ಯಾಯ ಹೇಗೆ ಸಿಕ್ಕೀತು? ಮೀಸಲಾತಿ ಗೊಂದಲ ಹುಟ್ಟುಹಾಕಿ ಬಂಜಾರಾ ಸೇರಿದಂತೆ ಎಲ್ಲಾ ಸಮಾಜದವರಿಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದಿದ್ದರು.

ಖರ್ಗೆ ವಿವಾದಾತ್ಮಕ ಹೇಳಿಕೆಯಿಂದ ಕಾಂಗ್ರೆಸ್‌ಗೆ ನಷ್ಟ, ಸಮೀಕ್ಷೆಯಲ್ಲಿ ಬಯಲಾಯ್ತು ರಹಸ್ಯ!

ಇತ್ತ ಬಸನಗೌಡ ಪಾಟೀಲ್ ಯತ್ನಾಳ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿಷ ಸರ್ಪ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಸೋನಿಯಾ ಗಾಂಧಿ ವಿಷಕನ್ಯೆ ಎಂದಿದ್ದರು. ಪ್ರಧಾನಿ ಮೋದಿ ಅವರನ್ನು ವಿಷ ಸರ್ಪ, ನೆಕ್ಕಿದರೆ ವಿಷವೇರಿ ಸಾಯ್ತಾರೆ ಎಂದು ಖರ್ಗೆ ಹೇಳಿದ್ದಾರೆ. ಹಾಗಾದರೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯೇನು ವಿಷ ಕನ್ಯೆಯೇ? ಅವರು ಚೀನಾ, ಇಟಲಿ ರಾಯಭಾರಿಯಾಗಿ ಕೆಲಸ ಮಾಡುತ್ತಿಲ್ಲವೇ ಎಂದು ಕಿಡಿಕಾರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದರಾಮಯ್ಯ ಹೆಲಿಕಾಪ್ಟರ್‌ ಪ್ರಯಾಣಕ್ಕೆ ರಾಜ್ಯದ ಬೊಕ್ಕಸದಿಂದ ಕೋಟ್ಯಂತರ ಖರ್ಚು!
ಅಂದು ಜ್ಯೋತಿಷಿ ಹೇಳಿದ್ದು 'The Devilʼ ಸಿನಿಮಾದಲ್ಲಿ ನಿಜವಾಯ್ತು, Darshan ರಿಯಲ್‌ ಲೈಫ್‌ನಲ್ಲಿ ಏನಾಗತ್ತೆ?