ಮೇ.6 ರಂದು ಬೆಂಗಳೂರಿನಲ್ಲಿ ಮೋದಿ ಮೇನಿಯಾ, ಬರೋಬ್ಬರಿ 38 ಕಿ.ಮೀ ರೋಡ್ ಶೋ!

Published : May 03, 2023, 06:56 PM ISTUpdated : May 03, 2023, 07:02 PM IST
ಮೇ.6 ರಂದು ಬೆಂಗಳೂರಿನಲ್ಲಿ ಮೋದಿ ಮೇನಿಯಾ, ಬರೋಬ್ಬರಿ 38 ಕಿ.ಮೀ ರೋಡ್ ಶೋ!

ಸಾರಾಂಶ

ಮೇ 6 ಶನಿವಾರದಂದು ಬೆಂಗಳೂರಿನಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್ ಶೋ ನಡೆಸಲಿದ್ದು,  ಒಟ್ಟು  18 ವಿಧಾನಸಭೆ ಕ್ಷೇತ್ರಗಳಲ್ಲಿ ಎರಡು ಹಂತದಲ್ಲಿ ಬರೋಬ್ಬರಿ 38 ಕಿ. ಮೀ ರೋಡ್ ಶೋ ನಡೆಸಲಿದ್ದಾರೆ.

ಬೆಂಗಳೂರು (ಮೇ.3): ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ.  ಮೇ 6 ಶನಿವಾರದಂದು ಬೆಂಗಳೂರಿನಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಒಟ್ಟು  18 ವಿಧಾನಸಭೆ ಕ್ಷೇತ್ರಗಳಲ್ಲಿ ಮೋದಿ ರೋಡ್ ಶೋ ನಡೆಸಲಿದ್ದು, ಎರಡು ಹಂತಗಳಲ್ಲಿ ಈ ರೋಡ್ ಶೋ ನಡೆಯಲಿದೆ. ಬೆಳಗ್ಗೆ 9 ಗಂಟೆ ಸುಮಾರಿಗೆ 10.1 ಕಿಲೋಮೀಟರ್  ರೋಡ್ ಶೋ ಒಟ್ಟು - 5 ವಿಧಾನಸಭೆ ಕ್ಷೇತ್ರಗಳಲ್ಲಿ ನಡೆಯಲಿದೆ. ಎರಡನೇ ರೋಡ್ ಶೋ ಸಂಜೆ 4 ಗಂಟೆ ಗೆ 26.5 ಕಿಲೋಮೀಟರ್ 13 ಕ್ಷೇತ್ರಗಳಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿಯವರ  ರೋಡ್ ಶೋ ಸಂಚಾರ ಮಾಡಲಿರುವ ವಿಧಾನ ಸಭಾ ಕ್ಷೇತ್ರಗಳ ವಿವರ ಇಂತಿದೆ.

ಮೊದಲ ರೋಡ್ ಶೋ ಬೆಳಗ್ಗೆ  9 ಗಂಟೆ, ಒಟ್ಟು - 5 ವಿಧಾನಸಭೆ ಕ್ಷೇತ್ರ - 10.1 ಕಿಲೋಮೀಟರ್ 
ಮಹಾದೇವ ಪುರ ವಿಧಾನ ಸಭಾ ಕ್ಷೇತ್ರ
ಕೆ ಆರ್ ಪುರ ವಿಧಾನ ಸಭಾ ಕ್ಷೇತ್ರ
ಸಿವಿ ರಾಮನ್ ವಿಧಾನ ಸಭಾ ಕ್ಷೇತ್ರ
ಶಿವಾಜಿ ನಗರ ವಿಧಾನ ಸಭಾ ಕ್ಷೇತ್ರ
ಶಾಂತಿ ನಗರ ವಿಧಾನ ಸಭಾ ಕ್ಷೇತ್ರ

ಜೆಡಿಎಸ್ ಅಭ್ಯರ್ಥಿಯ ಸ್ವಯಂ ಕಿಡ್ನಾಪ್ ಡ್ರಾಮಾ, ಆರೋಪಿ ಪಟ್ಟದಲ್ಲಿ ಎಸ್.ಆರ್

ಎರಡನೇ ರೋಡ್ ಶೋ ಸಂಜೆ 4 ಗಂಟೆ, ಒಟ್ಟು 13 ವಿಧಾನಸಭೆ ಕ್ಷೇತ್ರ - 26.5 ಕಿಲೋಮೀಟರ್ 
ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರ
ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರ
ಜಯನಗರ ವಿಧಾನ ಸಭಾ ಕ್ಷೇತ್ರ
ಪದ್ಮನಾಭ ನಗರ ವಿಧಾನ ಸಭಾ ಕ್ಷೇತ್ರ
ಬಸವಣಗುಡಿ ವಿಧಾನ ಸಭಾ ಕ್ಷೇತ್ರ 
ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರ
ಚಾಮರಾಜ ಪೇಟೆ ವಿಧಾನ ಸಭಾ 
ಗಾಂಧಿ ನಗರ ವಿಧಾನ ಸಭಾ ಕ್ಷೇತ್ರ
ಮಹಾಲಕ್ಷ್ಮಿ ಲೇಓಟ್ ವಿಧಾನ ಸಭಾ ಕ್ಷೇತ್ರ
ವಿಜಯನಗರ ವಿಧಾನ ಸಭಾ ಕ್ಷೇತ್ರ
ಗೋವಿಂದ ರಾಜ ನಗರ ವಿಧಾನ ಸಭಾ ಕ್ಷೇತ್ರ
ರಾಜಾಜಿ ನಗರ ವಿಧಾನ ಸಭಾ ಕ್ಷೇತ್ರ
ಮಲ್ಲೇಶ್ವರಂ ವಿಧಾನ ಸಭಾ ಕ್ಷೇತ್ರ

ಕನಕಪುರದಲ್ಲಿ ನೆಮ್ಮದಿಯ ಉಸಿರಾಟಕ್ಕೆ ಗೆದ್ದೇ ಗೆಲ್ಲುವೆ: ಆರ್ ಅಶೋಕ್

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜನವರಿ 30ರ ಒಳಗೆ ಸಿಎಂ ಖುರ್ಚಿ ಯಾರ ಪಾಲಾಗಲಿದೆ? ಖ್ಯಾತ ಜ್ಯೋತಿಷಿ ದ್ವಾರಕನಾಥ್‌ ಭವಿಷ್ಯವೇನು?
Ballari Banner row: ಬಿಜೆಪಿಯವರಿಂದಲೇ ಬಳ್ಳಾರಿ ಬಿಹಾರವಾಗಿದೆ! - ಜನಾರ್ದನ ರೆಡ್ಡಿ ವಿರುದ್ಧ ನಾಗೇಂದ್ರ ಕಿಡಿ