ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಶಿವಮೊಗ್ಗದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರಿನ ರೋಡ್ ಶೋ ಹಾಗೂ ನೀಟ್ ಪರೀಕ್ಷೆ ಕುರಿತು ಮಾತನಾಡಿದ್ದಾರೆ. ಮೋದಿ ಭಾಷಣದ ವಿಡಿಯೋ ಇಲ್ಲಿದೆ.
ಶಿವಮೊಗ್ಗ(ಮೇ.07): ಬೆಂಗಳೂರಿನಲ್ಲಿ ನೀಟ್ ಪರೀಕ್ಷೆ ಕಾರಣ ಬೆಳಗ್ಗೆ ಬಹುಬೇಗನೆ ರೋಡ್ ಶೋ ಆರಂಭಿಸಿ, ಅಷ್ಟೇ ವೇಗದಲ್ಲಿ ಮುಗಿಸಿದ್ದೇವೆ. ಇಂದು ಮಕ್ಕಳ ಭವಿಷ್ಯದ ಪರೀಕ್ಷೆ. ನಮ್ಮ ಪರೀಕ್ಷೆ ಮೇ.10ಕ್ಕೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಆಯೋಜಿಸಿದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಈ ಬಾರಿ ಕರ್ನಾಟಕದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗುವ ವಿಶ್ವಾಸವಿದೆ ಎಂದರು.
ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಅಂತಿಮ ಹಂತದ ಪ್ರಚಾರದಲ್ಲಿ ತೊಡಗಿರುವ ಮೋದಿ, ಶಿವಮೊಗ್ಗದಲ್ಲಿ ಭರ್ಜರಿ ಮತಶಿಖಾರಿ ನಡೆಸಿದರು. ದೇಶದ ಯುವ ಸಮೂಹಕ್ಕೆ ಯಾವುದೇ ಗ್ಯಾರೆಂಟ್ ಇಲ್ಲದೆ ಸಾಲ ನೀಡಲಾಗುತ್ತಿದೆ. ಈ ಯೋಜನೆಯಿಂದ ದೇಶದ ಕೋಟ್ಯಾಂತರ ಮಂದಿ ಲಾಭ ಪಡೆದಿದ್ದಾರೆ. ಶಿವಮೊಗ್ಗದ ಸಾವಿರಾರು ಮಂದಿ ಈ ಯೋಜನೆಯ ಲಾಭ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕೇವಲ ಪೇಪರ್‌ನಲ್ಲಿರುತ್ತದೆ. ಇದು ಅನುಷ್ಠಾನಕ್ಕೆ ಬರುವುದಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಂದಿನ 5 ವರ್ಷದಲ್ಲಿ ಖಾಸಗಿ ವಲಯದಲ್ಲಿ 10 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದೆ. ಅಂದರೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ನೀಡುವುದಾಗಿ ಹೇಳಿದೆ. ಕರ್ನಾಟಕದಲ್ಲಿ 3.5 ವರ್ಷಗಳಿಂದ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಈ ಸಮಯದಲ್ಲಿ ಕೋವಿಡ್ ಮಹಾಮಾರಿಯಲ್ಲಿ ವಿಶ್ವವೇ ನಡುಗಿತ್ತು. ಸರಿಸುಮಾರು 2 ವರ್ಷ ಕೊರೋನದಲ್ಲಿ ಕಳೆದು ಹೋಯಿತು. ಇನ್ನುಳಿದ ಅತ್ಯಲ್ಪ ಸಮಯದಲ್ಲಿ 13 ಲಕ್ಷ ಫಾರ್ಮಲ್ ಉದ್ಯೋಗವನ್ನು ಬಿಜೆಪಿ ಒದಗಿಸಿದೆ . ಕರ್ನಾಟಕದಲ್ಲಿ ಕಾಂಗ್ರೆಸ್ ರೀವರ್ಸ್ ಗೇರ್‌ನಲ್ಲಿದೆ. ಹೀಗಾಗಿ ಕರ್ನಾಟಕದ ಜನರು ಕಾಂಗ್ರೆಸ್‌ನಿಂದ ದೂರ ಉಳಿಯುವುದು ಅತ್ಯವಶ್ಯಕವಾಗಿದೆ ಎಂದು ಮೋದಿ ಹೇಳಿದ್ದಾರೆ.
PM Modi roadshow: ಹಾವೇರಿಯಲ್ಲಿ ಮೊಳಗಿದ ಮೋದಿ, ಬಜರಂಗಬಲಿ ಘೋಷಣೆ!
ಕಾಂಗ್ರೆಸ್ ನೀತಿಗಳಿಂದ ಹೂಡಿಕೆದಾರರು ಕರ್ನಾಟಕದಿಂದ ದೂರ ಉಳಿಯುತ್ತಿದ್ದರು. ಆದರೆ ಬಿಜೆಪಿ ಆಡಳಿತದಲ್ಲಿ ಕರ್ನಾಟಕಕ್ಕೆ ಬಂದಿರುವ ಹೂಡಿಕೆ ದಾಖಲೆ ಬರೆದಿದೆ. ಭಾರತದ ವಿಶ್ವದಲ್ಲಿ 3ನೇ ಅತೀ ದೊಡ್ಡ ಆಟೋಮೊಬೈಲ್ ಪಾರ್ಟ್ಸ್ ಉತ್ಪಾದನಾ ಕೇಂದ್ರವಾಗಿದೆ. ಶಿವಮೊಗ್ಗ ಮಲೆನಾಡು ಹೆಬ್ಬಾಗಿಲು, ವಿಶ್ವವಿಖ್ಯಾತ ಜೋಗಜಲಪಾತ, ಗಂಗಾ ಸ್ನಾನ, ತುಂಗಾ ಪಾನ ಎಂದೇ ಖ್ಯಾತಿ ಗೊಂಡಿದೆ. ಕವಿ ಕುವೆಂಪು ಪರಂಪರೆಯ ನಾಡಿದು. ಈ ನಾಡಿನ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯ ಪೂರ್ಣ ಬಹುಮತದ ಸರ್ಕಾರ ರಚಿಸಲು ಮತದಾರರು ನಿರ್ಧರಿಸಿದ್ದರೆ. ಇದಕ್ಕೆ ನೀವೆಲ್ಲಾ ಬಿಜೆಪಿಗೆ ಮತ ನೀಡಿ ಪೂರ್ಣಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ನೀವು ಶ್ರಮಿಸಬೇಕು. ಪ್ರತಿ ಭೂತ್ ಮಟ್ಟಕ್ಕೆ ತೆರಳಿ ಬಿಜೆಪಿಗೆ ಮತ ನೀಡುವಂತೆ ಪ್ರೇರಿಸಬೇಕು ಎಂದು ಮೋದಿ ಹೇಳಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಬರೀ ಸುಳ್ಳು, ಇಂಥ ಪಕ್ಷ ನಂಬಬೇಡಿ: ಮೋದಿ ವಾಗ್ದಾಳಿ
ಯಾವುದೇ ರಾಜಕೀಯ ಪಕ್ಷ ಬೆಳಗ್ಗೆ 11 ಗಂಟೆಗೂ ಮೊದಲು ಯಾವುದೇ ಕಾರ್ಯಕ್ರಮ ಇಟ್ಟುಕೊಳ್ಳುವುದಿಲ್ಲ. ಆದರೆ ನಾನು ಇಂದು ಜನರ ದರ್ಶನಕ್ಕಾಗಿ ಬೆಂಗಳೂರಿನಲ್ಲಿ ತೆರಳಿದ್ದೆ. ಒಂದೆಡೆ ಮಳೆ ಬರುತ್ತಿತ್ತು. ಆದರೆ ಜನಸಾಗರವೇ ಹರಿದು ಬಂದಿತ್ತು. ಇಂದು ನೀಟ್ ಪರೀಕ್ಷೆ ಇದೆ ಎಂಬ ಮಾಹಿತಿ ಬಂದಿತ್ತು. ಹೀಗಾಗಿ ನಾನು ಪಕ್ಷದಲ್ಲಿ ವಿನಂತಿಸಿಕೊಂಡೆ, ನಮ್ಮ ಪರೀಕ್ಷೆ ಮೇ.10ಕ್ಕೆ ಇಂದು ಮಕ್ಕಳ ಭವಿಷ್ಯದ ಪರೀಕ್ಷೆ ಇದೆ. ಹೀಗಾಗಿ ಬೆಳಗ್ಗೇ ರೋಡ್ ಶೋ ಆರಂಭಿಸಿ ಬಹುಬೇಗನೆ ಮುಗಿಸಿದ್ದೇವೆ ಎಂದು ಮೋದಿ ಹೇಳಿದ್ದಾರೆ.