ನನ್ನ ತಂದೆ ತಪ್ಪು ಮಾಡಿಲ್ಲ, ಅಪಪ್ರಚಾರ ಮಾಡಿದ್ರೆ ಎದುರಿಸ್ತೇವೆ: ಯತೀಂದ್ರ

Kannadaprabha News   | Kannada Prabha
Published : Oct 14, 2026, 06:57 AM IST
Yathindra Sidddaramaiah

ಸಾರಾಂಶ

ತಮ್ಮ ತಂದೆಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಅಪಪ್ರಚಾರ ಹಾಗೂ ನಕಲಿ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ ಎಂದು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ತಿಳಿಸಿದ್ದಾರೆ. ತಮ್ಮ ತಂದೆ ಯಾವುದೇ ತಪ್ಪು ಮಾಡಿಲ್ಲ. ಹೀಗಾಗಿ ಈ ಅಪಪ್ರಚಾರ ತಡೆಯಲು ಸ್ಟೇ ತರಲಾಗಿದೆ ಎಂದು ಹೇಳಿದ್ದಾರೆ.

ಮೈಸೂರು (ಅ.14): ನನ್ನ ತಂದೆ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ತಂದೆಯವರು ತಡೆಯಾಜ್ಞೆ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಸಚಿವ ಡಾ। ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನನ್ನ ತಂದೆ ತಪ್ಪು ಮಾಡಿಲ್ಲ ಎಂದ ಯತೀಂದ್ರ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಪಪ್ರಚಾರ ಮಾಡುತ್ತಿದ್ದವರ ಮೇಲೆ ದೂರು ಸಹ ಕೊಡಲಾಗಿದೆ. ಅಪಪ್ರಚಾರ ಮಾಡುತ್ತಿದ್ದರೂ ಸುಮ್ಮನೆ ಇರಬೇಕಾ ಎಂದು ಪ್ರಶ್ನಿಸಿದರು. ತಂದೆಯವರು ಮೊದಲೇ ಹೇಳಿದ್ದರು. ನನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಸ್ಟೇ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದರು. ರಾಜಕಾರಣದ ವ್ಯವಸ್ಥೆ ಹಾಳಾಗಿದೆ. ನಾವು ಎಲ್ಲವನ್ನೂ ಎದುರಿಸುತ್ತೇವೆ. ತಂದೆ ತಪ್ಪು ಮಾಡಿಲ್ಲ, ಹಾಗಾಗಿ ನನಗೆ ಬೇಸರವಿಲ್ಲ. ರಾಜಕೀಯ ಈ ಮಟ್ಟಕ್ಕೆ ಬಂದಿದೆ. ಎಲ್ಲವನ್ನೂ ಎದುರಿಸುತ್ತೇವೆ. ಕಾನೂನು ಸಲಹೆ ಪಡೆದು ಮುಂದುವರಿಯಿರಿ ಎಂದು ಹೇಳಿದ್ದೇವೆ ಎಂದು ತಿಳಿಸಿದರು.

ಸೋಷಿಯಲ್ ಮೀಡಿಯಾದಲ್ಲಿ ಫೇಕ್ ವಿಡಿಯೋ

ಇನ್ಸ್ಟಾಗ್ರಾಂನಲ್ಲಿ ಕೆಲವರು ಆರೋಪ ಮಾಡಿದ್ದರು. ಅದೊಂದು ಸುಳ್ಳು ವೀಡಿಯೋ. ಯಾರ್ಯಾರು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೋ ಅವರ ಮೇಲೂ ದೂರು ಕೊಟ್ಟಿದ್ದಾರೆ ಎಂದು ದೂರಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Amit shah: ಗುಜರಾತ್‌ನಲ್ಲಿ 40 ವರ್ಷಗಳಿಂದ ಕಾಂಗ್ರೆಸ್ ಗೆದ್ದಿಲ್ಲ, ಇದಕ್ಕೆ SIR ಕಾರಣವಾ? ರಾಹುಲ್ ಬಗ್ಗೆ ಗಂಭೀರ ಆರೋಪ!
ECI: ಇವತ್ತು ಆಯೋಗವನ್ನು ಪ್ರಶ್ನಿಸುವ ಕಾಂಗ್ರೆಸ್‌, ಅಂದು ಮಾಡಿದ್ದೇನು; ಅದು ಬಿಜೆಪಿಗಿಂತ ವಿಭಿನ್ನ ಹೇಗೆ? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್‌!