ಕೆಲಸ ಮಾಡಿ; ಇಲ್ಲಾ ಹುದ್ದೆ ಬಿಡಿ: ಮಲ್ಲಿಕಾರ್ಜುನ ಖರ್ಗೆ ಖಡಕ್ ಸೂಚನೆ

Published : Dec 05, 2022, 06:18 AM IST
ಕೆಲಸ ಮಾಡಿ; ಇಲ್ಲಾ ಹುದ್ದೆ ಬಿಡಿ: ಮಲ್ಲಿಕಾರ್ಜುನ ಖರ್ಗೆ ಖಡಕ್  ಸೂಚನೆ

ಸಾರಾಂಶ

ಕಾಂಗ್ರೆಸ್‌ ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಬೇಕು. ಇಲ್ಲವೇ ಹುದ್ದೆ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್‌ ಸೂಚನೆ ನೀಡಿದ್ದಾರೆ.

ಪಿಟಿಐ ನವದೆಹಲಿ(ಡಿ.5) : ಕಾಂಗ್ರೆಸ್‌ ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನರಿತು ಕೆಲಸ ಮಾಡಬೇಕು. ಇಲ್ಲವೇ ಹುದ್ದೆ ಬಿಟ್ಟು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಖಡಕ್‌ ಸೂಚನೆ ನೀಡಿದ್ದಾರೆ.

ತಾವು ಎಐಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಒಂದು ತಿಂಗಳ ನಂತರ ಇದೇ ಮೊದಲ ಬಾರಿ ಭಾನುವಾರ ಪಕ್ಷದ ಚಾಲನಾ ಸಮಿತಿಯ ಸಭೆ ನಡೆಸಿದ ಅವರು, ಪಕ್ಷದ ಪ್ರಮುಖ ಹುದ್ದೆಗಳಲ್ಲಿರುವವರಿಗೆ ಎರಡು ಮುಖ್ಯ ಟಾಸ್‌್ಕಗಳನ್ನು ನೀಡಿದ್ದಾರೆ.

ಬಿಜೆಪಿ ಸರಿಯಾಗಿ ಕೆಲಸ ಮಾಡಿದ್ದರೆ ಮೋದಿ ಏಕೆ ಇಷ್ಟು ಸುತ್ತಬೇಕು: ಖರ್ಗೆ

1. 2024ರೊಳಗೆ ವಿಧಾನಸಭೆ ಚುನಾವಣೆಯಿರುವ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಮುಂದಿನ 30ರಿಂದ 90 ದಿನಗಳ ಒಳಗೆ ಜನರಿಗೆ ಸಂಬಂಧಪಟ್ಟವಿಚಾರಗಳನ್ನಿಟ್ಟುಕೊಂಡು ರೂಪಿಸುವ ಬೃಹತ್‌ ಆಂದೋಲನಗಳ ಕುರಿತು ನೀಲನಕ್ಷೆ ರೂಪಿಸಿ 15ರಿಂದ 30 ದಿನದೊಳಗೆ ತಮ್ಮ ಜೊತೆ ಚರ್ಚಿಸಬೇಕು.

2. ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು ತಿಂಗಳಿಗೆ ಕನಿಷ್ಠ 10 ದಿನವಾದರೂ ತಮಗೆ ಸಂಬಂಧಪಟ್ಟರಾಜ್ಯಗಳಲ್ಲಿ ಪ್ರವಾಸ ಮಾಡಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಹೋರಾಟ ರೂಪಿಸಲು ಕಾರ್ಯತಂತ್ರ ಹೆಣೆಯಬೇಕು.

ಹುದ್ದೆಗೆ ತಕ್ಕ ಹೊಣೆಗಾರಿಕೆ:

ಚಾಲನಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಖರ್ಗೆ, ‘ಪಕ್ಷದ ತಳಮಟ್ಟದಿಂದ ಹಿಡಿದು ಉನ್ನತ ಮಟ್ಟದವರೆಗೆ ಪ್ರತಿಯೊಂದು ಹುದ್ದೆಯಲ್ಲಿರುವವರಿಗೂ ಹೊಣೆಗಾರಿಕೆ ನಿಗದಿಯಾಗಬೇಕು. ಆ ಹೊಣೆಗಾರಿಕೆಗಳನ್ನು ನಿಭಾಯಿಸಲು ಆಗದವರು ಹುದ್ದೆ ತೊರೆದು ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು. ಪಕ್ಷವು ಸಾಂಸ್ಥಿಕವಾಗಿ ಗಟ್ಟಿಯಾಗಿದ್ದರೆ, ಹೊಣೆಗಾರಿಕೆ ಪ್ರದರ್ಶಿಸಿದರೆ ಹಾಗೂ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಡೆದುಕೊಂಡರೆ ಮಾತ್ರ ಚುನಾವಣೆ ಗೆಲ್ಲಲು ಸಾಧ್ಯ’ ಎಂದು ಹೇಳಿದರು.

ತಿಂಗಳೊಳಗೆ ನೀಲನಕ್ಷೆ ಸಲ್ಲಿಸಿ:

2024ರೊಳಗೆ ವಿಧಾನಸಭೆ ಚುನಾವಣೆಯಿರುವ ರಾಜ್ಯಗಳ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರು ಒಂದು ತಿಂಗಳೊಳಗೆ ಮುಂದಿನ ಮೂರು ತಿಂಗಳಲ್ಲಿ ರಾಜ್ಯಗಳಲ್ಲಿ ಹಮ್ಮಿಕೊಳ್ಳುವ ಬೃಹತ್‌ ಆಂದೋಲನಗಳ ನೀಲನಕ್ಷೆ ಸಿದ್ಧಪಡಿಸಿ ನನ್ನ ಜೊತೆ ಚರ್ಚಿಸಬೇಕು. ಚುನಾವಣಾ ರಣತಂತ್ರಕ್ಕೆ ಸ್ಪಷ್ಟಯೋಜನೆಯನ್ನು ರೂಪಿಸಿ ಸಲ್ಲಿಸಬೇಕು ಎಂದು ಖರ್ಗೆ ಸೂಚನೆ ನೀಡಿದರು.

ಆಲಸಿಗಳಿಗೆ ಖಡಕ್‌ ಎಚ್ಚರಿಕೆ:

‘ಪಕ್ಷದಲ್ಲಿ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡುತ್ತಿರುವ ಸಾಕಷ್ಟುಜನರಿದ್ದಾರೆ. ಆದರೆ ಕೆಲವರು ಹೊಣೆ ಮರೆತು ಹಾಯಾಗಿದ್ದಾರೆ. ಅದು ಸರಿಯೂ ಅಲ್ಲ, ಅದನ್ನು ಒಪ್ಪಲೂ ಸಾಧ್ಯವಿಲ್ಲ. ಯಾರಿಗೆ ತಮ್ಮ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲವೋ ಅವರು ಹುದ್ದೆ ಬಿಡಬೇಕಾಗುತ್ತದೆ. ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಉಸ್ತುವಾರಿಗಳು ಮೊದಲು ತಮ್ಮ ಜವಾಬ್ದಾರಿ ಅರಿತುಕೊಳ್ಳಬೇಕು. ನೀವು ತಿಂಗಳಿಗೆ 10 ದಿನವಾದರೂ ರಾಜ್ಯ ಪ್ರವಾಸ ಮಾಡುತ್ತಿದ್ದೀರಾ? ನಿಮಗೆ ಸಂಬಂಧಿಸಿದ ರಾಜ್ಯಗಳ ಪ್ರತಿ ಜಿಲ್ಲೆ ಹಾಗೂ ಬ್ಲಾಕ್‌ಗಳಿಗೆ ಭೇಟಿ ನೀಡಿ ಪಕ್ಷದ ನಾಯಕರ ಜೊತೆಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೀರಾ?’ ಎಂದು ಖರ್ಗೆ ಪ್ರಶ್ನಿಸಿದರು.

ಹೊಸ ಮುಖಗಳನ್ನು ತನ್ನಿ:

‘ಪಕ್ಷದ ಬ್ಲಾಕ್‌ ಮತ್ತು ಜಿಲ್ಲಾ ಹಂತಗಳಲ್ಲಿ ಹೊಸ ಹೊಸ ಮುಖಗಳನ್ನು ತರಬೇಕು. ಕಳೆದ ಐದು ವರ್ಷಗಳಲ್ಲಿ ಬದಲಾವಣೆ ಮಾಡದ ಜಿಲ್ಲಾ ಘಟಕಗಳನ್ನು ತಕ್ಷಣ ಬದಲಾಯಿಸಬೇಕು. ಎಐಸಿಸಿ ನಿರ್ದೇಶನದ ಮೇರೆಗೆ ಜಿಲ್ಲಾ ಘಟಕಗಳು ಎಷ್ಟುಹೋರಾಟಗಳನ್ನು ರೂಪಿಸಿವೆ ಎಂಬುದನ್ನು ಗಮನಿಸಬೇಕು. ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಉಸ್ತುವಾರಿಗಳು, ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರು, ಶಾಸಕರು ಹಾಗೂ ಸಂಸದರು ಸ್ಥಳೀಯ ಮಟ್ಟದಲ್ಲಿ ನೀಲನಕ್ಷೆಗಳನ್ನು ರೂಪಿಸದಿದ್ದರೆ ನಮ್ಮ ಜವಾಬ್ದಾರಿ ನಿಭಾಯಿಸಲು ಸಾಧ್ಯವಿಲ್ಲ’ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್‌ನಲ್ಲಿ ಮಹತ್ವದ ಬೆಳವಣಿಗೆ, ಮಲ್ಲಿಕಾರ್ಜುನ ಖರ್ಗೆಗೆ ಅಧ್ಯಕ್ಷ ಪಟ್ಟ ಕೈತಪ್ಪುವ ಭೀತಿ!

ರಾಹುಲ್‌ ಯಾತ್ರೆ ಈಗ ರಾಷ್ಟ್ರೀಯ ಚಳವಳಿ

ರಾಹುಲ್‌ ಗಾಂಧಿ ನೇತೃತ್ವದಲ್ಲಿ ಭಾರತ್‌ ಜೋಡೋ ಯಾತ್ರೆಯು ದೇಶದಲ್ಲಿ ಇತಿಹಾಸ ನಿರ್ಮಿಸುತ್ತಿದೆ. ಈಗ ಈ ಯಾತ್ರೆ ರಾಷ್ಟ್ರೀಯ ಚಳವಳಿಯ ರೂಪ ಪಡೆದಿದೆ. ಹಣದುಬ್ಬರ, ನಿರುದ್ಯೋಗ, ಆರ್ಥಿಕ ಹಾಗೂ ಸಾಮಾಜಿಕ ಅಸಮಾನತೆ, ರಾಜಕೀಯ ದ್ವೇಷದ ವಿರುದ್ಧ ಈ ಯಾತ್ರೆ ಯುದ್ಧ ಸಾರಿದೆ. ಹಿಂದೆ ಕಾಂಗ್ರೆಸ್‌ ಪಕ್ಷವನ್ನು ಟೀಕಿಸುತ್ತಿದ್ದವರು ಕೂಡ ಇಂದು ಯಾತ್ರೆಯ ಜೊತೆ ಕೈಜೋಡಿಸಿದ್ದಾರೆ.

- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
ಸಿಎಂ ಸಿದ್ದರಾಮಯ್ಯಗೆ ಪ್ರಧಾನಿ ಮೋದಿ ಜನಪ್ರಿಯತೆ ಸಹಿಸಲು ಸಂಕಷ್ಟ: ಬಿ.ವೈ.ವಿಜಯೇಂದ್ರ