ದತ್ತಾಶ್ರಮದಲ್ಲಿ 'ಡಿಕೆಶಿ ಸಿಎಂ'ಕೂಗು: ಸಿಎಂ ಆಗುವ ಕಾಲ ದೂರವಿಲ್ಲ ಎಂದ ವಿನಯ್ ಗುರೂಜಿ!

Published : Jun 18, 2023, 02:30 PM ISTUpdated : Jun 18, 2023, 02:31 PM IST
  ದತ್ತಾಶ್ರಮದಲ್ಲಿ 'ಡಿಕೆಶಿ ಸಿಎಂ'ಕೂಗು: ಸಿಎಂ ಆಗುವ ಕಾಲ ದೂರವಿಲ್ಲ ಎಂದ ವಿನಯ್ ಗುರೂಜಿ!

ಸಾರಾಂಶ

ಅವದೂತ ವಿನಯ್ ಗುರೂಜಿ ನುಡಿದಿರುವ ಭವಿಷ್ಯ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಉಂಟುಮಾಡಿದೆ. ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸಿಎಂ ಹುದ್ದೆ ಬಗ್ಗೆ ವಿನಯ್ ಗುರೂಜಿ ಹೇಳಿರುವ ಭವಿಷ್ಯ ರಾಜಕೀಯ ವಲಯದಲ್ಲಿ ಮುತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ ವಿನಯ್ ಗುರೂಜಿ ದತ್ತಾಶ್ರಮದಲ್ಲಿ ಡಿಕೆಶಿ ಪರ ಸಿಎಂ ಕಹಳೆ ಮೊಳಗಿದೆ. 

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು (ಜೂ.18) : ಅವದೂತ ವಿನಯ್ ಗುರೂಜಿ ನುಡಿದಿರುವ ಭವಿಷ್ಯ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಉಂಟುಮಾಡಿದೆ. ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಸಿಎಂ ಹುದ್ದೆ ಬಗ್ಗೆ ವಿನಯ್ ಗುರೂಜಿ ಹೇಳಿರುವ ಭವಿಷ್ಯ ರಾಜಕೀಯ ವಲಯದಲ್ಲಿ ಮುತ್ತಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅಲ್ಲದೆ ವಿನಯ್ ಗುರೂಜಿ ದತ್ತಾಶ್ರಮದಲ್ಲಿ ಡಿಕೆಶಿ ಪರ ಸಿಎಂ ಕಹಳೆ ಮೊಳಗಿದೆ. 

ದತ್ತಾಶ್ರಮದಲ್ಲಿ ಡಿಕೆಶಿ ಸಿಎಂ ಕೂಗು

ಚಿಕ್ಕಮಗಳೂರು ಕಾಂಗ್ರೆಸ್(Chikkamagaluru congress) ಶಾಸಕ ಹೆಚ್.ಡಿ. ತಮ್ಮಯ್ಯ ಡಿಕೆ ಶಿವಕುಮಾರ್ ಸಿಎಂ(DK Shivakumar CM) ಆಗುವುದನ್ನು ಬಯಸುತ್ತಿದ್ದಾರೆ. ಜೆಡಿಎಸ್ ಎಂಎಲ್ಸಿ ಶರವಣ(JDS MLC sharavan) ಕೂಡ ಡಿಕೆಶಿ ಸಿಎಂ ಆಗುವುದನ್ನು ಎದುರು ನೋಡುತ್ತಿದ್ದಾರೆ. ನಡೆದಾಡುವ ದೈವ ಎಂದೇ ಖ್ಯಾತಿಯಾಗಿರುವ ಅವಧೂತ ವಿನಯ್ ಗುರೂಜಿ(avadhoota vinay guruji) ಆ ದಿನ ದೂರ ಇಲ್ಲ ಎಂದಿದ್ದಾರೆ. ಹಾಗಾದ್ರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ನವರಿಗೆ ಸಿದ್ದರಾಮಯ್ಯ(Siddaramaiah CM) ಮುಖ್ಯಮಂತ್ರಿ ಆಗಿರುವುದು ಇಷ್ಟ ಇಲ್ವಾ ಎಂಬ ಪ್ರಶ್ನೆ ಮೂಡಿದೆ. ಎರಡುವರೆ ವರ್ಷಗಳ ಬಳಿಕ ರಾಜ್ಯ ರಾಜಕೀಯದಲ್ಲಿ ಹೊಸ ದೃವೀಕರಣಕ್ಕೆ ಕರುನಾಡು ಸಾಕ್ಷಿಯಾಗಲಿದ್ಯಾ ಎಂಬ ಪ್ರಶ್ನೆ ಕೂಡ ಮೂಡಿದೆ. 

ತೆಲಂಗಾಣದಲ್ಲಿ ಕನಕಪುರ ಬಂಡೆ ದಂಡಯಾತ್ರೆ: ಕರುನಾಡಲ್ಲಿ "ಕೈ" ಗೆಲ್ಲಿಸಿದ ಯುದ್ಧವೀರನಿಗೆ ಮತ್ತೊಂದು ಚಾಲೆಂಜ್!

ಹೌದು ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಕಾಂಗ್ರೆಸ್  ಶಾಸಕ ಎಚ್.ಡಿ.ತಮ್ಮಯ್ಯ(HD Tammaiah) ಹಾಗೂ ಜೆಡಿಎಸ್ ಎಂಎಲ್ಸಿ ಸರವಣ ಡಿಕೆಶಿ ಸಿಎಂ ಆಗುವುದನ್ನು ಎದುರು ನೋಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಯಾಕಂದ್ರೆ, ಶಾಸಕ ತಮ್ಮಯ್ಯ ವಿನಯ್ ಗುರೂಜಿ ಬಳಿ ಡಿ.ಕೆ. ಶಿವಕುಮಾರ್ ನಮಗೆಲ್ಲ ಟಿಕೆಟ್ ನೀಡಿ ತುಂಬಾ ಸಹಾಯ ಮಾಡಿದ್ದಾರೆ. ಅವರನ್ನು ಒಮ್ಮೆ ಇಲ್ಲಿಗೆ ಕರೆದುಕೊಂಡು ಬರುತ್ತೇವೆ. ಅವರಿಗೆ ಸಿಎಂ ಆಗುವಂತೆ ಆಶೀರ್ವದಿಸಿ ಎಂದು ಅವಧೂತ ವಿನಯ್ ಗುರೂಜಿ ಬಳಿ ವೇದಿಕೆ ಮೇಲೆಯೇ ಮನವಿ ಮಾಡಿದ್ದಾರೆ. 

ಮೂರು ಉಂಗುರದ ಘಟನೆ ಹೇಳಿಧ ಎಂಎಲ್ ಸಿ : 

ಜೆಡಿಎಸ್ ಎಂಎಲ್ಸಿ ಶರವಣ ಕೂಡ ಗುರುಗಳು ಮೂರು ಉಂಗುರ ಮಾಡಿಸಿದ್ದರು.  2018ರಲ್ಲಿ ಒಂದನ್ನು ಕುಮಾರಸ್ವಾಮಿಗೆ ಕೊಟ್ಟಿದ್ದರು. 2019ರಲ್ಲಿ ಮತ್ತೊಂದನ್ನು ಯಡಿಯೂರಪ್ಪನವರಿಗೆ ನೀಡಿದ್ದರು. ಉಳಿದೊಂದು ಉಂಗುರವನ್ನು ಡಿಕೆಶಿ ಅವರಿಗೆ ನೀಡಿದ್ದಾರೆ. ಇದಕ್ಕೆ ನಾನೇ ಸಾಕ್ಷಿ. ನಾನು ಜೆಡಿಎಸ್ ಸರ್ಕಾರ ಬರುವುದಿಲ್ಲವಾ ಎಂದು ಕೇಳಿದ್ದಕ್ಕೆ ಇಲ್ಲ...ಇಲ್ಲ... ಡಿಕೆಶಿ ಸರ್ಕಾರಿ ಬರುವುದು ಎಂದು ಹೇಳಿದ್ದರು. ಡಿಕೆಶಿ ಕೂಡ ಮುಖ್ಯಮಂತ್ರಿ ಅಗಲಿದ್ದಾರೆ ಎಂದರು. 

ಡಿಕೆಶಿ ಸಿಎಂ ಬಗ್ಗೆ ಭವಿಷ್ಯ ನುಡಿದ ವಿನಯ್ ಗುರೂಜಿ

ಯಾವಾಗ, ವೇದಿಕೆ ಮೇಲೆ ತಮ್ಮಯ್ಯ ಹಾಗೂ ಶರವಣ ಡಿಕೆಶಿ ಸಿಎಂ ಆಗುವುದರ ಬಗ್ಗೆ ಮನವಿ ಹಾಗೂ ಭವಿಷ್ಯದ ಬಗ್ಗೆ ತಿಳಿಸಿದರೋ ಅದನ್ನ ಅವಧೂತ ವಿನಯ್ ಗುರೂಜಿ ಕೂಡ ಪುರಸ್ಕರಿಸಿದ್ದಾರೆ. ತಮ್ಮಯ್ಯ ಮನವಿ ಮಾಡಿದ್ದು, ಅವರ ಬಯಕೆ ಈಡೇರಿಕೆಯ ದಿನ ದೂರ ಇಲ್ಲ. ಡಿ.ಕೆ.ಶಿವಕುಮಾರ್ ಮಗುವಿನಂತಹ ಮನಸ್ಸಿನವರು. ಅವರು ಮಠಕ್ಕೆ ಚಿರಪರಿಚಿತರು. ದೇವರುಗಳು ಇರುವುದೇ ಬಂಡೆಯ ಮೂರ್ತಿಯಲ್ಲಿ. ನಾವು ಮೊದಲು ಅದನ್ನ ಕರೆಯುವುದೇ ಬಂಡೆ ಎಂದು. ಬಂಡೆಯೊಳಗೊಂದು ಮುಗ್ಧ ಮನಸ್ಸು ಎಂದು ಡಿಕೆಶಿ ಸಿಎಂ ಆಗುವ ಭವಿಷ್ಯವನ್ನು ಅವಧೂತ ವಿನಯ್ ಗುರೂಜಿ ಕೂಡ ನುಡಿದಿದ್ದಾರೆ.

ಡಿ.ಕೆ. ಶಿವಕುಮಾರ್‌ ಬಗ್ಗೆ ಭವಿಷ್ಯ ನುಡಿದ ವಿನಯ್‌ ಗುರೂಜಿ: ಹೇಳಿದ್ದೇನು ?

 

ಒಟ್ಟಾರೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಕೂಡ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗುವುದನ್ನು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಮಧ್ಯೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ಜೆಡಿಎಸ್ ಹಾಗೂ ಕಾಂಗ್ರೆಸ್ಸಿಗರಿಗೆ ಇಷ್ಟ ಇಲ್ವಾ ಎಂಬ ಪ್ರಶ್ನೆ ಕೂಡ ಮೂಡಿದೆ. ಆದರೆ ಜನ ಮಾತ್ರ ಅಯ್ಯೋ... ಸಿಎಂ ಯಾರಾದರೂ ಆಗಲಿ. ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ದಿನಕ್ಕೊಂದು ಕಾನೂನು ತರುವ ಬದಲು ನಿಬಂಧನೆಗಳಿಲ್ಲದೆ ಪಂಚ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತಂದರೇ ಸಾಕು ಎನ್ನುತ್ತಿದ್ದಾರೆ..

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!