ಬೆಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್ ಅವರು ರಾಜಕಾರಣದಲ್ಲಿ ನೆಮ್ಮದಿಯಿಲ್ಲ, ನನಗೆ ರಾಜಕೀಯ ಸಾಕು ಎಂದು ಹೇಳಿದ್ದಾರೆ.
ಬೆಂಗಳೂರು (ಜೂ.18): ರಾಜ್ಯದಲ್ಲಿ ಡಿಕೆ ಬ್ರದರ್ಸ್ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಸ್ವಂತ ಹೋರಾಟದ ಮೂಲಕ ಪಕ್ಷ ಸಂಘಟನೆ ಮಾಡಿ ರಾಜ್ಯದ ಉಪಮುಖ್ಯಮಂತ್ರಿ ಆಗಿರುವ ಡಿ.ಕೆ. ಶಿವಕುಮಾರ್ ಅವರ ಸಹೋದರ ಸಂಸದ ಡಿ.ಕೆ. ಸುರೇಶ್ ಅವರು ರಾಜಕೀಯ ಸನ್ಯಾಸತ್ವ ಸ್ವೀಕಾರಕ್ಕೆ ಮುಂದಾಗಿದ್ದಾರೆ. ನನಗೆ ರಾಜಕಾರಣದಲ್ಲಿ ನೆಮ್ಮದಿಯಿಲ್ಲ, ರಾಜಕಾರಣ ಸಾಕು ಎಂದು ಸ್ವತಃ ಸಂಸದ ಡಿ.ಕೆ. ಸುರೇಶ್ ಅವರು ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕಾರಣದಲ್ಲಿ ನೆಮ್ಮದಿ ಅನ್ನೋದೇ ಇಲ್ಲ. ರಾಜಕೀಯ ಅಂದರೆ ಮುಖ್ಯವಾಗಿ ಮನೆಯಿಂದ ಹೊರಗಿರುವ ಜನರ ಬಳಿಯೂ ನೆಮ್ಮದಿ ಇಲ್ಲ. ಇಲ್ಲಿ ನಮ್ಮ ಜೊತೆಗೆ ಇರುವವರ ಬಳಿಯೂ ನೆಮ್ಮದಿ ಇಲ್ಲ. ರಾಜಕಾರಣ ಸಾಕು. ನಾನು ರಾಜಕಾರಣದಿಂದ ದೂರ ಉಳಿಯುತ್ತೇನೆ. ಚುನಾವಣಾ ರಾಜಕಾರಣದಿಂದ ದೂರ ಉಳಿಯುತ್ತೇನೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಕಷ್ಟ ಪಟ್ಟವರು ಸಂತೋಷವಾಗಿ ಇದ್ದಾರೆ. ಅವರೆಲ್ಲಾ ಅಧಿಕಾರದಲ್ಲಿ ಇದ್ದಾರೆ. ಸಂತೋಷವಾಗಿ ಅಧಿಕಾರ ಅನುಭವಿಸಲಿ. ನನಗೆ ರಾಜಕಾರಣ ಬೇಡ ಎಂದು ಹೇಳಿದ್ದಾರೆ.
ಗೃಹಜ್ಯೋತಿ ಅರ್ಜಿ ಸಲ್ಲಿಕೆಗೆ ಆರಂಭದಲ್ಲೇ ವಿಘ್ನ: ಕೆಲಸಕ್ಕೆ ಬಾರದ ಸಿಬ್ಬಂದಿ, ಕೆಲಸ ಮಾಡದ ಸರ್ವರ್
ಅಕ್ಕಿ ಸ್ಟಾಕ್ ಇಟ್ಕೊಂಡು ಹಾಳು ಮಾಡೋ ಬದ್ಲು ರಾಜ್ಯಕ್ಕೆ ಕೊಡಿ: ಎಫ್ ಸಿ ಐ ಗೋಡೋನ್ ನಲ್ಲಿ ಸಾಕಷ್ಟು ಅಕ್ಕಿ ಇದೆ. ಕೇಂದ್ರ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇರಬೇಕು. ನಮ್ಮ ಕಾರ್ಯಕ್ರಮ ಬಡವರ ಮೇಲಿನ ಕಾಳಜಿಯಿಂದ ಮಾಡಿರುವಂತದ್ದು. ಸ್ಟಾಕ್ ಜಾಸ್ತಿ ಇಟ್ಟುಕೊಳ್ಳೋದ್ರಿಂದ ಅಕ್ಕಿ ಹಾಳಾಗುತ್ತದೆ. ಉಪಯೋಗಕ್ಕೆ ಬರಲ್ಲ. ಅದರ ಬದಲಿಗೆ ಕರ್ನಾಟಕ ಸರ್ಕಾರ ಎಫ್‌ಸಿಐಗೆ ಇಟ್ಟಿರುವ ಬೇಡಿಕೆಯನ್ನು ಪರಿಗಣಿಸಬಹುದಿತ್ತು. ನಾವೇನೂ ಫ್ರೀಯಾಗಿ ಕೇಳ್ತಾ ಇಲ್ಲ. ನಾನು ಬಿಜೆಪಿಯ ಎಲ್ಲಾ ಸಚಿವರು, ಸಂಸದರನ್ನು ಮನವಿ ಮಾಡ್ತೀನಿ ಎಂದು ಹೇಳಿದರು.
ನಾವು ಜಾರಿಗೊಳಿಸಿದ ಕಾನೂನಿಂದ ನಮ್ಮ ಸರ್ಕಾರಕ್ಕೇ ತೊಡಕು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಕ್ಷಣ ಎಲ್ಲ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಅಂತಾ ಒತ್ತಾಯ ಮಾಡ್ತಾಯಿದ್ದಾರೆ. ನಾವು ಗ್ಯಾರಂಟಿಗಳನ್ನು ಜಾರಿ ಮಾಡೋಕೆ ಅವಕಾಶ ಕೊಡಿ. ಇಲ್ಲವಾದರೆ ವಿಧಿಯಿಲ್ಲದೇ ಹೋರಾಟಕ್ಕೆ ಇಳಿಯಬೇಕಾಗುತ್ತದೆ. ದೇಶದಲ್ಲಿ ಆಹಾರ ಭದ್ರತೆ ಕಾನೂನು ತಂದದ್ದು ಯುಪಿಎ ಸರ್ಕಾರ. ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವಧಿಯಲ್ಲಿ ಫುಡ್ ಸೆಕ್ಯುರಿಟಿ ಕಾನೂನು ತಂದಿದ್ದು, ಇಡೀ ದೇಶದಲ್ಲಿ ಜಾರಿಯಾಗಿದೆ. ಪ್ರತಿ ಬಡವನಿಗೆ ಅನ್ನ ನೀಡುವ ಸಲುವಾಗಿ ಈ ಕಾನೂನು ತಂದಿದ್ದೆವು. ಆದರೆ, ಈಗ ಕಾಂಗ್ರೆಸ್ ಸರ್ಕಾರಕ್ಕೆ ಅಕ್ಕಿ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ತಮ್ಮ ಆದ್ರೂ ನನಗೆ ಮಗ ಇದ್ದ ಹಾಗೆ: ಡಿಕೆ ಸುರೇಶ್ ಬಗ್ಗೆ ಮಾತನಾಡಿ ಕಣ್ಣೀರಿಟ್ಟ ಡಿಕೆ ಶಿವಕುಮಾರ್
ನಾನು ಚುನಾವಣೆಗೆ ಸ್ಪರ್ಧಿಸೊಲ್ಲ: ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲ್ಲ. ನನ್ನ ಮನಸಿನಲ್ಲಿ ಇದ್ದ ಮಾತನ್ನು ಹೇಳಿದ್ದೇನೆ. ಹೊಸಬರಿಗೆ ಅವಕಾಶ ಕೊಡಬೇಕು. ಸಾಕಷ್ಟು ಜನ ಆಕಾಂಕ್ಷಿಗಳು ಇದ್ದಾರೆ. ಅವರಿಗೆ ಅವಕಾಶ ಕೊಡಬೇಕು ಎಂಬುದು ನನ್ನ ಉದ್ದೇಶವಾಗಿದೆ. ಇದನ್ನು ಹಿಂದೆಯೂ ಹೇಳಿದ್ದೇನೆ, ಈಗಳು ಹೇಳುತ್ತಿದ್ದೇನೆ ಎಂದು ಸಂಸದ ಡಿ ಕೆ ಸುರೇಶ್ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಆದರೆ, ರಾಜಕೀಯದಿಂದ ದೂರ ಉಳಿಯಲು ಕಾರಣವೇನು ಎಂಬುದರ ಬಗ್ಗೆ ಮಾತ್ರ ಸ್ಪಷ್ಟಪಡಿಸುತ್ತಿಲ್ಲ. ರಾಜಕಾರಣದಲ್ಲಿ ನೆಮ್ಮದಿ ಇಲ್ಲವೆಂದು ಹೇಳುತ್ತಿದ್ದು, ನೆಮ್ಮದಿ ಹಾಳಾಗಲು ಕಾರಣವನ್ನೂ ಈವರೆಗೆ ತಿಳಿಸಿಲ್ಲ.