ಜಿಲ್ಲೆಗೆ ಕೇಳುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಕಲಬುರಗಿ ತೆಕ್ಕೆಗೆ ಹಾಕಿಕೊಳ್ಳಲು ಹೊರಟಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲರನ್ನೇ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅವರ ವಿರುದ್ಧ ಗೋ ಬ್ಯಾಕ್, ಬೈಕಾಟ್ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಇಂತಹ ವಿರೋಧದ ನಡುವೆಯೂ ಸಚಿವ ಶರಣಪ್ರಕಾಶ ಪಾಟೀಲ್ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
ರಾಯಚೂರು (ಜೂ.11) ಜಿಲ್ಲೆಗೆ ಕೇಳುತ್ತಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಯನ್ನು ಕಲಬುರಗಿ ತೆಕ್ಕೆಗೆ ಹಾಕಿಕೊಳ್ಳಲು ಹೊರಟಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲರನ್ನೇ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ಜಿಲ್ಲೆಯಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಅವರ ವಿರುದ್ಧ ಗೋ ಬ್ಯಾಕ್, ಬೈಕಾಟ್ ಪ್ರತಿಭಟನೆಗಳು ಸಹ ನಡೆಯುತ್ತಿವೆ. ಇಂತಹ ವಿರೋಧದ ನಡುವೆಯೂ ಸಚಿವ ಶರಣಪ್ರಕಾಶ ಪಾಟೀಲ್ ಭಾನುವಾರ ನಗರಕ್ಕೆ ಆಗಮಿಸುತ್ತಿದ್ದಾರೆ.
ಶ್ರೀಶಕ್ತಿ ಯೋಜನೆಗೆ ಚಾಲನೆ:
ರಾಜ್ಯ ಕಾಂಗ್ರೆಸ್ ಸರ್ಕಾರವು ಘೋಷಿಸಿರುವ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶ್ರೀ ಶಕ್ತಿ ಯೋಜನೆಗೆ ಚಾಲನೆ ನೀಡಲು ಸಚಿವ ಡಾ.ಶರಣಪ್ರಕಾಶ ಪಾಟೀಲ್ ಆಗಮಿಸುತ್ತಿದ್ದಾರೆ. ಮೊನ್ನೆಯಷ್ಟೇ ಕಲಬುರಗಿಗೆ ಏಮ್ಸ್ ಮಾದರಿ ಆಸ್ಪತ್ರೆ ಪಡೆಯುವುದರ ಬಗ್ಗೆ ಸಚಿವರು ಹೇಳಿಕೆ ನೀಡುತ್ತಿದ್ದಂತೆಯೇ ರಾಯಚೂರಿನಲ್ಲಿ ವಿವಿಧ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಶರಣಪ್ರಕಾಶ ಪಾಟೀಲರ ಭಾವಚಿತ್ರ ಸುಟ್ಟು ಗೋ ಬ್ಯಾಕ್ ಚಳವಳಿ, ಬೈಕಾಟ್ ಹೋರಾಟ ಸಹ ಕೈಗೊಂಡಿದ್ದಾರೆ.
ಸಚಿವ ಶರಣಪ್ರಕಾಶ ಪಾಟೀಲರಿಗೆ ಉಸ್ತುವಾರಿ ಪಟ್ಟ: ರಾಯಚೂರಲ್ಲಿ ಅಸಮಾಧಾನ ಸ್ಫೋಟ!
ಕಾಂಗ್ರೆಸ್ನಲ್ಲಿ ಪರ-ವಿರೋಧ:
ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ವಿಚಾರವು ಜಿಲ್ಲಾ ಕಾಂಗ್ರೆಸ್ ಸಮಿತಿಯಲ್ಲಿರುವ ಬಣ ರಾಜಕೀಯದಲ್ಲಿ ಪರ-ವಿರೋಧದ ವ್ಯಕ್ತವಾಗುತ್ತಿದೆ. ಮುಂಚೆಯಿಂದಲೂ ಕೈ ಪಕ್ಷದಲ್ಲಿ ಬೋಸರಾಜು, ಎ.ವಸಂತಕುಮಾರ ಅವರ ಬಣಗಳ ನಡುವೆ ತೀವ್ರ ಸಂಘರ್ಷ ನಡೆಯುತ್ತಲೆಯೇ ಇದೆ. ಅದರಡಿಯಲ್ಲಿಯೇ ಚುನಾವಣೆ ಸಮಯದಲ್ಲಿ ಬೋಸರಾಜುಗೆ ಟಿಕೆಟ್ ತಪ್ಪಿಸಲು ಒಂದು ಬಣ ಯಶಸ್ವಿ ಕಂಡಿತು. ನಂತರ ಶಾಸಕರು-ಎಂಎಲ್ಸಿಯಾಗದೆ ಇದ್ದರು, ಹೈಕಮಾಂಡ್ನ ಮನಸ್ಸನ್ನು ಗೆದ್ದು ಬೋಸರಾಜು ಸಚಿವ ಸ್ಥಾನ ಪಡೆದುಕೊಂಡು ಎ.ವಸಂತಕುಮಾರ ಬಣಕ್ಕೆ ಶಾಕ್ ನೀಡಿದ್ದರು. ಇದೀಗ ಖರ್ಗೆ ಆಪ್ತರಾಗಿರುವ ಡಾ.ಶರಣಪ್ರಕಾಶ ಪಾಟೀಲ್ರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸುವಲ್ಲಿ ವಸಂತಕುಮಾರ ಬಣ ಯಶಸ್ಸು ಕಂಡಿದೆ. ಸ್ಥಳೀಯ ಸಚಿವರಾಗಿರುವ ಬೋಸರಾಜುಗೆ ದೂರದ ಕೊಡಗು ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿರುವುದು ಪಕ್ಷದ ಗುಂಪು ಸಂಘರ್ಷಕ್ಕೆ ಜಿಲ್ಲೆಯ ಅಭಿವೃದ್ಧಿ ಬಲಿಯಾಗುವಂತಾಗಿದೆ.
ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರಣಪ್ರಕಾಶ ವಿರುದ್ಧ ಗೋ ಬ್ಯಾಕ್ ಚಳವಳಿ ಎಚ್ಚರಿಕೆ
ಸಮಾರಂಭ ಬಹಿಷ್ಕಾರ, ರಾಜಿನಾಮೆ ಎಚ್ಚರಿಕೆ:
ಶರಣಪ್ರಕಾಶ ಪಾಟೀಲ್ರನ್ನು ಉಸ್ತುವಾರಿ ಸಚಿವರನ್ನಾಗಿ ಮಾಡಿರುವುದಕ್ಕೆ ಬೋಸರಾಜು ಮತ್ತು ಅವರ ಗುಂಪು ಸಿಟ್ಟಾಗಿದ್ದು ಭಾನುವಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಲಿರುವ ಸಚಿವರಿಗೆ ಸನ್ಮಾನ ಸಮಾರಂಭ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. ವಾರದ ಹಿಂದೆ ಸಚಿವರಾಗಿ ನಗರಕ್ಕೆ ಬಂದಿದ್ದ ಬೋಸರಾಜು ಅವರನ್ನು ಪಕ್ಷದಿಂದ ಅಭಿನಂದಿಸಿದ ಸಮಯದಲ್ಲಿ ಎ.ವಸಂತಕುಮಾರ ಬಣ ಸಮಾರಂಭದಿಂದ ದೂರ ಉಳಿದಿತ್ತು. ಇದೀಗ ಬೋಸರಾಜು ಬಣ ಅದೇ ರೀತಿಯ ನಡೆಗೆ ಮುಂದಾಗಿರುವುದರ ಜೊತೆಗೆ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡದೇ ಇದ್ದಲ್ಲಿ ನಗರಸಭೆ ಸದಸ್ಯ ಸ್ಥಾನಗಳಿಗೆ ಸಾಮೂಹಿಕ ರಾಜಿನಾಮೆ ನೀಡುವುದಾಗಿ ಬೋಸರಾಜು ಅವರ ಬೆಂಬಲಿತ ಸಿಎಂಸಿ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.