
ನವದೆಹಲಿ(ಜೂ.11): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ 9 ವರ್ಷದ ಅವಧಿಯಲ್ಲಿ ಭಾರತದ ಸಾಲ ಮೂರು ಪಟ್ಟು ಹೆಚ್ಚಾಗಿದ್ದು, 155 ಕೋಟಿ ರು.ಗೆ ಹೆಚ್ಚಳವಾಗಿದೆ ಎಂದು ಶನಿವಾರ ಆರೋಪಿಸಿರುವ ಕಾಂಗ್ರೆಸ್ ಈ ಕುರಿತಾಗಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್, ‘2014ರಲ್ಲಿ ದೇಶದ ಸಾಲ 55 ಲಕ್ಷ ಕೋಟಿ ರು.ನಷ್ಟಿತ್ತು. 2014ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಈ ಸರ್ಕಾರ ಸಾಲಕ್ಕೆ 100 ಲಕ್ಷ ಕೋಟಿ ರು.ಗಳನ್ನು ಸೇರಿಸಿದೆ. ಪ್ರಸ್ತುತ ದೇಶದ ಪರಿಸ್ಥಿತಿಗೆ ಆರ್ಥಿಕ ದುರುಪಯೋಗವೇ ಕಾರಣವಾಗಿದೆ’ ಎಂದರು.
ಪ್ರಧಾನಿ ಮೋದಿ ಭೇಟಿಗೂ ಮುನ್ನ 'ನ್ಯಾಟೋ' ಆಫರ್ ನೀಡಿದ ಅಮೆರಿಕ, ತಿರಸ್ಕರಿಸಿದ ಭಾರತ!
‘ಆರ್ಥಿಕತೆಯ ನಿರ್ವಹಣೆ ಮಾಡುವುದು ಹೆಡ್‌ಲೈನ್‌ಗಳನ್ನು ನಿರ್ವಹಣೆ ಮಾಡಿದಂತಲ್ಲ. ಇದನ್ನು ಟೆಲಿಪ್ರಾಂಪ್ಟರ್ ಮತ್ತು ವಾಟ್ಸಾಪ್ ಫಾರ್ವರ್ಡ್‌ಗಳ ಮೂಲಕ ನಿಯಂತ್ರಣ ಮಾಡಲಾಗುವುದಿಲ್ಲ. ಈ ಕುರಿತಾಗಿ ಸರ್ಕಾರ ಶ್ವೇತಪತ್ರ ಹೊರಡಿಸಬೇಕು ಎಂದು ನಾವು ಆಗ್ರಹಿಸುತ್ತೇವೆ’ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.