ಧಾರವಾಡ ಗ್ರಾಮೀಣ ಕ್ಷೇತ್ರ ಸದ್ಯ ಪ್ರತಿಷ್ಠಿತ ಕಣವಾಗಿ ಪರಣಮಿಸಿದೆ . ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಾಂಗ್ ಕೊಟ್ಟ ಶಾಸಕ ಅಮೃತ ದೇಸಾಯಿ. ಬಾರೋ ಎಲ್ಲೆ ಕುಳಿತು ವಿಡಿಯೋ ಮಾಡಿ ಹಾಕ್ತಿ. ನಿನಗೋಸ್ಕರ ಕಾಯ್ತಾ ಇದ್ದೀನಿ ಬಾರೋ ಎಂದು ಏಕವಚನದಲ್ಲಿ ವಿನಯ ಕುಲಕರ್ಣಿಗೆ ಟಾಂಗ್
ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್
ಧಾರವಾಡ (ಅ.16): ಧಾರವಾಡ ಗ್ರಾಮೀಣ ಕ್ಷೇತ್ರ ಸದ್ಯ ಪ್ರತಿಷ್ಠಿತ ಕಣವಾಗಿ ಪರಣಮಿಸಿದೆ ಎರಡು ರಾಷ್ಟ್ರಿಯ ಪಕ್ಷಗಳಿಗೆ ಧಾರವಾಡ ಗ್ರಾಮೀಣ ಕ್ಷೇತ್ರದ ಮೇಲೆ ಎರಡು ಪಕ್ಷಗಳು ಕಣ್ಣಿಟ್ಟಿವೆ, ಆದರೆ ಇಂದು ನಡೆದ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಮಾವೇಶಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರು ಉದ್ಘಾಟಿಸಿದರು. ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಅಮೃತ ದೇಸಾಯಿ ಅವರು ಮಾತನಾಡಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಸಮಾವೇಶ ನಡೆದಿದೆ, ಎಂತಹ ಕಷ್ಟ ಪರಿಸ್ತಿತಿಯಲ್ಲಿ ಕಾರ್ಯಕರ್ತರು ನನ್ನ ಕೈ ಬಿಡಲಿಲ್ಲ ಯಡಿಯೂರಪ್ಪ ಮಾರ್ಗದರ್ಶನ ಬೊಮ್ಮಾಯಿ ಸರಕಾರ ಕೆಲಸ ಮಾಡುತ್ತಿದೆ ಸಿದ್ದರಾಮಯ್ಯ ಅವರಿಗೆ ನೇರವಾಗಿ ಪ್ರಶ್ನೆ ಕೇಳುತ್ತೆನೆ ಯಡಿಯೂರಪ್ಪಗೆ ವಯಸ್ಸಾಗಿದೆ, ಬೊಮ್ಮಾಯಿಗೆ ಕುಂಟುತ್ತಿರಿ ಅಂತಿಸಿ ಸಿದ್ದರಾಮಯ್ಯ ಅವರೆ ಈ ಕ್ಷೇತ್ರಕ್ಕೆ 1400 ಕೋಟಿ ಅನುದಾನ ನೀಡಿದೆ ಬಿಜೆಪಿ ಸರಕಾರ ನೀಡಿದೆ ಸಿದ್ದರಾಮಯ್ಯ ಅವರೆ ನಿಮಗೆ ಅರಳು ಮರಳು ನಿಮಗಿದೆ ಅಧಿವೇಶನದಲ್ಲಿ ನಿಮ್ಮ ಪಂಚೆ ಕಳದಿದ್ದು ಗೊತ್ತಿಲ್ವೆ ಸಿದ್ದರಾಮಯ್ಯ ಅವರಿಗೆ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ವಾರ್ನ ಮಾಡಿದ ಶಾಸಕ ಅಮೃತ ದೇಸಾಯಿ ಬಳಿಕ ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಾಂಗ್ ಕೊಟ್ಟಿದ್ದಾರೆ.
ಚುಣಾವಣೆಯ ರಣ ಕಹಳೆ ಇವತ್ತಿನಿಂದಲೇ ಆರಂಭ ಎಂದ ಶಾಸಕ ಅಮೃತ ದೇಸಾಯಿ, ಎಲ್ಲೋ ಕುಂತು ನಾ ಬರ್ತೆನಿ ಅಂತ ವಿಡಿಯೋ ಮಾಡಿ ಹಾಕ್ತಿ ಬಾರೋ ನಿಂದೆ ದಾರಿ ಕಾಯ್ತಾ ಇದ್ದೇನೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಾಂಗ್ ಕೊಟ್ಟ ಶಾಸಕ ಅಮೃತ ದೇಸಾಯಿ ಅವರುಆತನಾಡಿ ನಾನು ನಿನಗೋಸ್ಕರ ಕಾಯುತ್ತಿದ್ದೆನೆ ಬಾರೋ ಎಂದ ಏಕವಚನದಲ್ಲಿ ಚುಣಾವಣೆ ಸ್ಪರ್ದೆಗೆಜನಕ ಆಹ್ವಾನ್ ಮಾಡಿದರು ಧಾರವಾಡ ಶಾಂತವಾಗಿರಬೇಕು ಎಂದರೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕು ಕಾರ್ಯಕರ್ತರ ಸಮಾವೇಶದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು ಶಾಸಕ ಅಮೃತ ದೇಸಾಯಿ.
ರಾಜ್ಯ ಉಸ್ತುವಾರಿ ಅರುಣ ಸಿಂಗ್ ಸಮಾವೇಶದ ಬಾಷಣದಲ್ಲಿ ಮಾತನಾಡಿ ಧಾರವಾಡದ ಸಾಯಿ ಅರಣ್ಯ ಹಾಲ್‌ನಲ್ಲಿ ನಡೆಯುತ್ತಿರುವ ಸಂಕಲ್ಪ ಸಮಾವೇಶ ರಾಜ್ಯದಲ್ಲಿ 150 ಸಿಟುಗಳನ್ನ ಬಿಜಿಪಿ ಗೆಲ್ಲುತ್ತೆ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕ ಅಮೃತ ದೇಸಾಯಿ ಗೆಲ್ತಾರೆ ಅಮೃತ ದೇಸಾಯಿ ಅವರು ಅಮೃತವನ್ನು ಕುಡಿಸುತ್ತಾರೆ. ಮತ್ತೆ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆಬರಲಿದೆ ಧಾರವಾಡವನ್ನ ಇಡಿ ದೇಶಕ್ಕೆ ಗೊತ್ತಿದೆ ಇಲ್ಲಿ ಸಾಹಿತ್ಯ,ವಿದ್ಯಾವಂತರು ಇರ್ತಾರೆ ಇಡೀ ದೇಶದಲ್ಲಿ ಧಾರವಾಡದ ಹೆಸರು ಚರ್ಚೆಯಾಗುತ್ತಿದೆ ಬಿಜೆಪಿ ಪಕ್ಷ ದೇಶದಲ್ಲಿ ದೊಡ್ಡ ಪಕ್ಷವಾಗಿ ಪರಿಣಮಿಸಿದೆ ಬೂತ್ ಮಟ್ಟದ ಕಾರ್ಯಕರ್ತರು ಪಕ್ಷದ ಮಾಲಿಕರು, 2023 ರ ಚುಣಾವಣೆ ಬರ್ತಾ ಇದೆ ರಾಹುಲ್ ಗಾಂಧಿಗೆ ಹೇಳುತ್ತೇನೆ. 1,28,000 ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹಣ ನೀಡಲಾಗುತ್ತಿದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರೆ ಗ್ರಾಮಿಣ ಜನರಿಗೆ ಎನ್ ಕೆಲಸ ಮಾಡಿದ್ದರು ಹೇಳಿ.
ನಿಮ್ಮ ಅಧಿಕಾರದಲ್ಲಿ ನೀವು ಎನ್ ಮಾಡಿದ್ದೀರಿ ಎಂದು ಪ್ರಶ್ನೆ ಮಾಡಿದ ಅರುಣಸಿಂಗ್, ಮಿಸಲಾತಿ ಬಗ್ಗೆ ಬಿಜೆಪಿ ಪಕ್ಷ ಎಲ್ಲವನ್ನ ಗಮನಿಸುತ್ತಿದೆ ಎಸ್ ಸಿ ಎಸ್ ಟಿ , ಸಮಾಜಕ್ಕೆ ಮಿಸಲಾತಿಯನ್ನ ಕೊಟ್ಟಿದ್ದ ಬೊಮ್ಮಾಯಿ ಸರಕಾರ ರಾಹುಲ್ ಗಾಂಧಿ ಬಾರತ್ ಜೋಡೊ ಯಾತ್ರೆ ಮಾಡ್ತಿಲ್ಲ ಸಿದ್ದು ಡಿಕೆ ಇಬ್ಬರನ್ನ ಜೋಡೋ ಮಾಡ್ತಾ ಇದಾರೆ ರಾಹುಲ್ ಗಾಂಧಿ ಅವರು 13 ದಿನದಿಂದ ಯಾತ್ರೆ ಮಾಡ್ತಾ ಇದಾರೆ ರಾಹುಲ್ ಬಾಬಾ ಗೆ ಎರಡು ಟೆಂಗಿನಕಾಯಿ ಕೊಟ್ರು ಮಕ್ಕಳ ತರ ಒಡಿತಾ ಇದ್ರು ರಾಹುಲ್ ಗಾಂದಿ ಕೇವಲ ಭಾರತವನ್ನ ಒಡೆದಿದ್ದಾರೆ.
Bharat Jodo Yatra: ಬಳ್ಳಾರಿಗೆ 1 ರು.ಕೆಲಸವನ್ನೂ ಬಿಜೆಪಿ ಮಾಡಿಲ್ಲ: ಸಿದ್ದು ವಾಗ್ದಾಳಿ
ಕಾಂಗ್ರೆಸ್ ನವರು ಕಾಂಗ್ರೆಸ್ ಪಕ್ಷ ದೇಶದಲ್ಲಿ ಎರಡು ರಾಜ್ಯದಲ್ಲಿ ಮಾತ್ರ ಅಧಿಕಾರಕ್ಕೆ ಇದೆ ಬಿಜೆಪಿ 18 ರಾಜ್ಯದಲ್ಲಿ ಅಧಿಕಾರದಲ್ಲಿದೆ ಗೋವಾ,ಮಣಿಪುರ್, ಉತ್ತರಖಾಂಡ, ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಉತ್ತರ ಪ್ರದೇಶದಲ್ಲಿ ಯೋಗಿ ಭಾಬಾ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ ಎರರಡೆರಡು ಸರೆ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರ್ತಾಇದೆ ಬಿಜೆಪಿ ಗೆಲ್ಲುವ ರಿಕಾರ್ಡನ್ನ ಮಾಡ್ತಾ ಇದೆ ಕಾಂಗ್ರೆಸ್ ಸೋಲುವ ರಿಕಾರ್ಡ ಮಾಡುತ್ತಿದೆ 2023 ರ ಚುಣಾವಣೆಯಲ್ಲಿ ಬಿಜೆಪಿ ಗೆಲ್ಲಲು ಸಂಕಲ್ಪ ಮಾಡಿ ಎಂದ ಅರುಣಸಿಂಗ್ ಒಂದೆ ಮಾತರಂ ಸಂಕಲ್ಪ ಮಾಡಿಸಿದ ಅರುಣಸಿಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.
Yadgir: ಅ.19ಕ್ಕೆ ಜನಸಂಕಲ್ಪ ಯಾತ್ರೆ ಸಮಾವೇಶ: ಶಾಸಕ ರಾಜೂಗೌಡ
ಇನ್ನು ಸಭೆಯಲ್ಲಿ ಶಾಸಕ ಅಮೃತ ದೇಸಾಯಿ ,ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಮಹೇಶ ಟೆಂಗಿನಕಾಯಿ, ಮಾಜಿ ಶಾಸಕಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ ಸಭೆಯಲ್ಲಿ ಭಾಗಿಯಾಗಿದ್ದರು.