ಮಾಸ್ಕ್ ಮ್ಯಾನ್ ಫ್ರಾಡ್ ಎಂದು ನಾನು ಮುಂಚೆಯೇ ಹೇಳಿದ್ದೆ: ಕೇಂದ್ರ ಸಚಿವ ಸೋಮಣ್ಣ ಸಿಡಿಮಿಡಿ

Published : Aug 23, 2025, 02:01 PM IST
V Somanna

ಸಾರಾಂಶ

ಸತ್ಯ ಎಷ್ಟೇ ಕಹಿಯಾಗಿದ್ದರು ಕೊನೆಗೆ ಅದು ಗೆಲ್ಲುತ್ತದೆ ಎಂದು ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ತುಮಕೂರು (ಆ.23): ಧರ್ಮಸ್ಥಳ ಸಾವಿರಾರೂ ವರ್ಷಗಳ ಇತಿಹಾಸವಿರುವ ಕ್ಷೇತ್ರ. ಈ ದೇಶದ ಪ್ರತಿಯೊಬ್ಬ ಭಕ್ತರಿಗೆ ನೆಮ್ಮದಿ ಕೊಡುವ ಕ್ಷೇತ್ರ. ಎಸ್‌ಐಟಿ ರಚನೆ ಆದಾಗ ನಾನು ದೆಹಲಿಯಲ್ಲಿ ಒಬ್ಬ ಮುಖ್ಯಸ್ಥರನ್ನು ಭೇಟಿಯಾಗಿ ಇದು ಫೇಕ್ ಎಂದು ಹೇಳಿದ್ದೆ. ಸತ್ಯ ಎಷ್ಟೇ ಕಹಿಯಾಗಿದ್ದರು ಕೊನೆಗೆ ಅದು ಗೆಲ್ಲುತ್ತದೆ ಎಂದು ಎಸ್‌ಐಟಿಯಿಂದ ಮಾಸ್ಕ್ ಮ್ಯಾನ್ ಬಂಧನ ವಿಚಾರವಾಗಿ ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಸುಳ್ಳಿನ ಕಂತೆ ಎಷ್ಟೇ ದೊಡ್ಡದಿದ್ದರು ಅದು ಸೋಲುತ್ತದೆ. ಈ ಸುಳ್ಳಿನ ಕಂತೆಯನ್ನು ಇಡಿ ವಿಶ್ವವೇ ನೋಡಿತು. ಮಾಧ್ಯಮದವರು ಸಹ ಅದನ್ನೇ ಅನಿವಾರ್ಯವಾಗಿ ಫಾಲೋ ಮಾಡಬೇಕಾಯಿತು. ಆದರೇ ಇಂತಹ ಪಾಪದ ಕೃತ್ಯ ನಡೆದಿರೊದು ದುರಂತ ಎಂದರು.

ಸತ್ಯಕ್ಕೆ ಮನ್ನಣೆ ಸಿಗುತ್ತೆ ಅನ್ನೊದು ಈಗ ಗೊತ್ತಾಗಿದೆ. ಭಾರತ ಮಾತೆ ಸತ್ಯವನ್ನು ತೋರಿಸಿದ್ದಾರೆ. ಆದರೇ ಈ ಸರ್ಕಾರ ನಡೆದುಕೊಂಡ ರೀತಿ ತರವಲ್ಲ. ಈ ಪಾಪದ ಕೃತ್ಯಕ್ಕೆ ಯಾರಾದರೂ ಹೊಣೆಗಾರರಿದ್ದರೇ ಅದು ರಾಜ್ಯದ ಸಿಎಂ ಸಿದ್ದರಾಮಯ್ಯ. ಈ ಕೃತ್ಯಕ್ಕೆ ಸಿಎಂ ಸಿದ್ದರಾಮಯ್ಯ ಬೆಲೆ ತೆರಬೇಕಾಗುತ್ತದೆ. ದೇಶದ ಕೋಟ್ಯಾಂತರ ಭಕ್ತರ ನಂಬಿಕೆಗೆ ದ್ರೋಹ ಆಗಿದೆ. ಆ ಮಾಸ್ಕ್ ಮ್ಯಾನ್ ಫ್ರಾಡ್ ಎಂದು ನಾನು ಹಿಂದೆ ಹಲವಾರು ಬಾರಿ ಹೇಳಿದ್ದೇ. ಈಗ ಆತ ಅರೆಸ್ಟ್ ಆಗಿದ್ದಾನೆ. ಲೆಫ್ಟಿಸ್ಟ್ ಗಳ ಮಾತನ್ನು ಕೇಳಿಕೊಂಡು ಕರ್ನಾಟಕದ ಆರು ಕೋಟಿ ಜನರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ತಿಳಿಸಿದರು.

ಸರ್ಕಾರಕ್ಕೆ ಈ ವಿಚಾರ ಈ ಕ್ಷಣದಲ್ಲೇ ಭಗ್ನಿಗೂಟ ಆಗಲಿದೆ. ಗಜಿನಿ ಮಹಮದ್ 17 ಬಾರಿ ದಾಳಿ ಮಾಡಿದರೂ ಭಾರತಿಯ ಸಂಸ್ಕೃತಿ ಒಡೆಯಲಾಗಲಿಲ್ಲ. ಎಸ್‌ಐಟಿಯವರನ್ನು ಈಗ ಮೆಚ್ಚಿಕೊಳ್ಳುತ್ತೇನೆ. ಎಲ್ಲವೂ ಫೇಕ್, ವ್ಯವಸ್ಥಿತ ಷಡ್ಯಂತ್ರ ಎಂದು ಎಸ್‌ಐಟಿಯವರು ಬಹಿರಂಗ ಪಡಿಸಿದ್ದಾರೆ. ಸಿದ್ದರಾಮಯ್ಯನವರು ಈ ಪಾಪದ ಪ್ರಾಯಶ್ಚಿತಕ್ಕಾಗಿ ಧರ್ಮಸ್ಥಳದಲ್ಲಿ ಮೂರು ದಿನ ಇದ್ದು ಪಾಪ ಕಳೆದುಕೊಂಡು ಬರಲಿ. ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿಯ ದರ್ಶನ ಮಾಡಿ ಕೈ ಮುಗಿದು, ನಾನು ಯಾರದ್ದೋ ಮಾತು ಕೇಳಿ ಇಂತಃ ಪಾಪ ಕೃತ್ಯ ಮಾಡಿದೆ ಎಂದು ಕ್ಷಮೆ ಕೇಳಲಿ. ಕ್ಷಮೆ ಕೇಳಿದರೇ ಸಿದ್ದರಾಮಯ್ಯಗೂ ಒಳ್ಳೆಯದು ರಾಜ್ಯಕ್ಕೂ ಒಳ್ಳೆಯದು ಎಂದು ಸೋಮಣ್ಣ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ