ಬಿಜೆಪಿಯ ಭದ್ರ ಕೋಟೆಯಾಗಿರೋ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ದಮನಕಾರಿ ಆಡಳಿತ ನಡೆಯುತ್ತಿದ್ದು, ಅವರನ್ನು ಸೋಲಿಸುವುದೇ ಈ ಮುಂದೆ ನಮ್ಮ ಗುರಿ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ ಘೋಷಿಸಿದ್ದಾರೆ.
ಹುಬ್ಬಳ್ಳಿ (ಏ.01): ಬಿಜೆಪಿಯ ಭದ್ರ ಕೋಟೆಯಾಗಿರೋ ಧಾರವಾಡ ಲೋಕಸಭಾ ಮತಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರಿಂದ ದಮನಕಾರಿ ಆಡಳಿತ ನಡೆಯುತ್ತಿದ್ದು, ಅವರನ್ನು ಸೋಲಿಸುವುದೇ ಈ ಮುಂದೆ ನಮ್ಮ ಗುರಿ ಎಂದು ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಶ್ರೀ ಘೋಷಿಸಿದ್ದಾರೆ. ದಿಂಗಾಲೇಶ್ವರ ಶ್ರೀಗಳ ಈ ಪಟ್ಟಿನಿಂದ ಬಿಜೆಪಿ ಹೈಕಮಾಂಡ್‌ಗೆ ಇಕ್ಕಟ್ಟಾಗಿದೆ. ಅನಾಯಾಸವಾಗಿ ಗೆಲ್ಲೋ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿದ್ದು, ಸತತ ಐದನೇ ಬಾರಿ ಗೆಲ್ಲಬೇಕೆನ್ನೋ ಜೋಶಿ ಕನಸಿಗೆ ಶ್ರೀಗಳ ವಿಘ್ನ ಎದುರಾಗಿದೆ.
ಯಡಿಯೂರಪ್ಪ ಆದಿಯಾಗಿ ಮನವೊಲಿಕೆ ಮಾಡಿದ್ರೂ ಫಲ ಸಿಗದೇ ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸೋದೆ ಗುರಿ ಎಂದು ಸ್ವಾಮೀಜಿ ಗುಡುಗಿದ್ದಾರೆ. ಈ ವಿಚಾರವಾಗಿ ಧಾರವಾಡ ಲೋಕಸಭಾ ಕ್ಷೇತ್ರದ ಲಿಂಗಾಯತ ಸಮುದಾಯವನ್ನು ಸ್ವಾಮೀಜಿಯು ಒಟ್ಟು ಮಾಡುತ್ತಿದ್ದು, ಜೋಶಿ ಬಿಜೆಪಿಗೆ ಅನಿವಾರ್ಯವಾದ್ರೆ, ನನಗೆ ಹೋರಾಟ ಅನಿವಾರ್ಯ ಎಂದಿದ್ದಾರೆ. ಚುನಾವಣಾ ಅಖಾಡಕ್ಕೆ ಇಳಿಯದೇ ಜೋಶಿ ಸೋಲಿಗೆ ದಿಂಗಾಲೇಶ್ವರ ಸ್ವಾಮೀಜಿ ರಣತಂತ್ರ ರೂಪಿಸಿದ್ದಾರೆ.
ನನ್ನ ಸೋಲಿಸಲು ಗ್ರಾಪಂ ಮಟ್ಟದಲ್ಲೂ ಕಾಂಗ್ರೆಸ್ ಷಡ್ಯಂತ್ರ: ಶ್ರೀರಾಮುಲು
ಬಿಜೆಪಿ ನಾಯಕರೊಬ್ಬರನ್ನು ಬಂಡಾಯ ಅಭರ್ಥಿಯನ್ನಾಗಿ ನಿಲ್ಲಿಸೋ ಲೆಕ್ಕಾಚಾರದಲ್ಲಿದ್ದು, ಒಂದು ಕಡೆ ಮಠಾಧೀಶರನ್ನು ಶ್ರೀಗಳು ಒಗ್ಗೂಡಿಸುತ್ತಿದ್ದಾರೆ. ಅಲ್ಲದೇ ಮತ್ತೊಂದು ಕಡೆ ಭಕ್ತರ ಅಭಿಪ್ರಾಯವನ್ನು ಶ್ರೀಗಳು ಸಂಗ್ರಹಿಸ್ತಿದ್ದಾರೆ. ಜೊತೆಗೆ ಬಿಜೆಪಿಯ ಅತೃಪ್ತರಿಗೂ ಶ್ರೀಗಳು ಗಾಳ ಹಾಕಿದ್ದು, ತೆರೆಮರೆಯಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ನಡೆಸಿದ್ದಾರೆ. ಇನ್ನು ಧಾರವಾಡ ಕ್ಷೇತ್ರದಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆಯಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಮಧ್ಯಪ್ರವೇಶದಿಂದ ರಾಜಕಾರಣ ಕಾವೇರಿದೆ.
ದಿಂಗಾಲೇಶ್ವರ ಶ್ರೀ ವಿಚಾರವಾಗಿ ಯಾರೊಂದಿಗೂ ಮಾತಾಡಿಲ್ಲ: ದಿಂಗಾಲೇಶ್ವರ ಸ್ವಾಮೀಜಿ ನಡೆ ವಿಚಾರವಾಗಿ ನಾನು ಮುರುಘಾಮಠವಾಗಲಿ, ತಿಪಟೂರು ಷಡಕ್ಷರಿ ರುದ್ರಮುನಿ ಸ್ವಾಮೀಜಿ ಮಾತ್ರವಲ್ಲ, ಯಾರ ಮೊರೆಯೂ ಹೋಗಿಲ್ಲ, ಮಾತನಾಡಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಶನಿವಾರ ಸುದ್ದಿಗಾರರ ಜತೆಗೆ ಮಾತನಾಡಿ, ದಿಂಗಾಲೇಶ್ವರ ಶ್ರೀಗಳು ತಮಗೆ ಕ್ಷೇತ್ರ ಬದಲಾವಣೆ ಬಗ್ಗೆ ಕೊಟ್ಟ ಗಡುವು ಭಾನುವಾರಕ್ಕೆ ಮುಗಿಯುತ್ತದೆಯಲ್ಲ? ಎಂಬ ಪ್ರಶ್ನೆಗೆ, ನೋಡೋಣವಂತೆ ಗಡುವು ಮುಗಿದ ಮೇಲೆ ಎಂದಷ್ಟೇ ಪ್ರತಿಕ್ರಿಯಿಸಿದರು. ಧಾರವಾಡ ಮುರುಘಾ ಮಠದ ಶ್ರೀಗಳು ಕೊಟ್ಟ ಎರಡು ದಿನದ ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೋಡಿದ್ದೇನಷ್ಟೇ. ಆ ಬಗ್ಗೆ ತಮಗೆ ಹೆಚ್ಚಿನದೇನು ಗೊತ್ತಿಲ್ಲ ಎಂದರು.
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್: ಬೆಂಗಳೂರು ಟು ತುಮಕೂರು ಮೆಟ್ರೋ ಕಾರ್ಯ ಚುರುಕು!
ಅತೃಪ್ತಿ ಸರಿಪಡಿಸುತ್ತೇವೆ: ಚಿತ್ರದುರ್ಗ ಮಾತ್ರವಲ್ಲ, ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅತೃಪ್ತಿ ಇರುವ ಎಲ್ಲೆಡೆಯೂ ವಿಶೇಷ ಗಮನಹರಿಸಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಗೆಲ್ಲುವ ಪಕ್ಷದೊಳಗೆ ಸಣ್ಣ ಪುಟ್ಟ ಗೊಂದಲ ಸಹಜ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಲ್ಲೂ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಸಮಸ್ಯೆ ಇರುವೆಡೆ ವಿಶೇಷ ಗಮನಹರಿಸಿ ಬಗೆಹರಿಸುತ್ತೇವೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದು, ಅಲ್ಲಿನ ಎಲ್ಲ ಪ್ರಮುಖರನ್ನು ಮಾತನಾಡಿಸಿ, ವಿಶ್ವಾಸಕ್ಕೆ ತೆಗೆದುಕೊಂಡು ಪರಿಹರಿಸುತ್ತೇವೆ ಎಂದರು.