ರಾಜ್ಯದಲ್ಲಿ ಡ್ರಗ್ಸ್‌ ಮಾಫಿಯಾ ನಿರ್ಮೂಲನೆಗೆ ನಿರ್ಧಾರ: ಸಚಿವ ಪರಮೇಶ್ವರ್‌

By Kannadaprabha News  |  First Published Jul 10, 2023, 12:14 PM IST

ಡ್ರಗ್ಸ್‌ ಮಾಫಿಯಾವನ್ನು ಕರ್ನಾಟಕದಲ್ಲಿ ನಿರ್ಮೂಲನೆ ಮಾಡಲು ದೃಢ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ ಈ ಮಾಫಿಯಾವನ್ನು ಮಟ್ಟಹಾಕಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. 


ಕೊರಟಗೆರೆ (ಜು.10): ಡ್ರಗ್ಸ್‌ ಮಾಫಿಯಾವನ್ನು ಕರ್ನಾಟಕದಲ್ಲಿ ನಿರ್ಮೂಲನೆ ಮಾಡಲು ದೃಢ ನಿರ್ಧಾರ ತೆಗೆದುಕೊಂಡಿದ್ದು ಪೊಲೀಸ್‌ ಇಲಾಖೆ ಈ ಮಾಫಿಯಾವನ್ನು ಮಟ್ಟಹಾಕಲಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದರು. ಪಟ್ಟಣದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ವಾಸವಿ ಯುವಜನ ಸಂಘ, ಬೆಂಗಳೂರಿನ ಸಪ್ತಗಿರಿ, ಪ್ರಕ್ರಿಯ, ಸ್ಪರ್ಶ ಆಸ್ಪತ್ರೆರವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಚಿತ ಮಲ್ಟಿಸ್ಪೆಷಲ್‌ ಮೆಡಿಕಲ್‌ ಕ್ಯಾಂಪ್‌ನ ಕಾರ್ಯಕ್ರಮದಲ್ಲಿ ಮಾತನಾಡಿ ಭಾರತದಲ್ಲಿ ಡ್ರಗ್‌ ಮಾಫಿಯಾ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಹೆಚ್ಚಿನದಾಗಿ ನಗರ ಪ್ರದೇಶದ ಯುವಕರು ಯುವಕಿಯರು ಈ ಮಾಫಿಯಾಗೆ ಬಲಿಯಾಗುತ್ತಿದ್ದು ಅವರ ನರಗಳ ಮೇಲೆ ಪರಿಣಾಮ ಬೀರುವುದರಿಂದ ಬೇಗ ದುರ್ಬಲರಾಗುತ್ತಿದ್ದಾರೆ. 

ನಮ್ಮ ರಾಜ್ಯದಲ್ಲಿ ಈ ಡ್ರಗ್ಸ್‌ ದಂಧೆಯನ್ನು ಸಂಪೂರ್ಣ ಮಟ್ಟಹಾಕಲು ಪೊಲೀಸ್‌ ಇಲಾಖೆ ತೀರ್ಮಾನಿಸಿದ್ದು, ಕಾರ್ಯ ರೂಪಕ್ಕೂ ತರುತ್ತಿದ್ದೇವೆ. ಕಳೆದ ಒಂದುವರೆ ತಿಂಗಳಲ್ಲಿ ನಮ್ಮ ರಾಜ್ಯದಲ್ಲಿ ಸುಮಾರು 150 ಕೋಟಿಯಿಂದ 200 ಕೋಟಿ ರು. ಗಳ ಮೌಲ್ಯದ ಡ್ರಗ್ಸ್‌ಗಳನ್ನು ಸುಟ್ಟು ಹಾಕಿ ನಾಶ ಮಾಡಲಾಗಿದೆ. ನಮ್ಮ ಪೊಲೀಸ್‌ ಇಲಾಖೆ ಬಹಳ ಶಕ್ತಿಯುತವಾಗಿ ಬೆಳೆಯುತ್ತಿದೆ. ವಿದ್ಯಾವಂತ ಮತ್ತು ಸದೃಢ ಯುವಕರು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಮತ್ತಷ್ಟುಯುವಕರಿಗೆ ಇಲಾಖೆಯಲ್ಲಿ ಆದ್ಯತೆ ನೀಡಲಾಗುವುದು ಎಂದರು.

Tap to resize

Latest Videos

ಎಚ್‌.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸ​ಚಿವ ಚ​ಲು​ವ​ರಾ​ಯ​ಸ್ವಾಮಿ

ಮನುಷ್ಯನಿಗೆ ಜೀವನದಲ್ಲಿ ಆರೋಗ್ಯವೆ ಮುಖ್ಯವಾಗಿದೆ. ಇದನ್ನು ಅರಿತ ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿವೆ. ರಾಜ್ಯದಲ್ಲಿ ಈಗಾಗಲೇ 6500ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿದೆ. ದೇಶವು ಶಕ್ತಿಯುತವಾಗಿರಬೇಕಾದರೆ ಅಲ್ಲಿ ಆರೋಗ್ಯವಂತ ಪ್ರಜೆಗಳಿದ್ದರೆ ಮಾತ್ರ ಸಾದ್ಯ. ಈ ದೆಸೆಯಲ್ಲಿ ಸರ್ಕಾರೇತರ ಸಂಸ್ಥೆಗಳಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ನಡೆಯುತ್ತಿರುವುದು ಕೋಟ್ಯಂತರ ಬಡವರಿಗೆ ಮತ್ತು ಗ್ರಾಮೀಣ ಜನರ ಬದುಕಿಗೆ ನೆರವಾಗಿದೆ. ಕೊರಟಗೆರೆ ವಾಸವಿ ಯುವಜನ ಸಂಘವು ಹಲವು ವರ್ಷಗಳಿಂದ ಇಂತಹ ಹಲವು ಜನಪರ ಸೇವೆ ಮಾಡಿಕೊಂಡು ಬರುತ್ತಿರುವುದಕ್ಕಾಗಿ ಅಭಿನಂದನೆ ತಿಳಿದರು.

ಪರಂ ಮನೆ ಮುಂದೆ ಎಸ್ಸಿಎಸ್ಟಿಗುತ್ತಿಗೆದಾರರ ಧರಣಿ: ‘ಪರಿಶಿಷ್ಟಜಾತಿ, ವರ್ಗಗಳ ಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ನೀಡಿರುವ ಮೀಸಲಾತಿ ಮಿತಿ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲು ಹೋದಾಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರು ಸರಿಯಾಗಿ ಸ್ಪಂದಿಸಲಿಲ್ಲ’ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಎಸ್ಸಿ, ಎಸ್ಟಿಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಪರಮೇಶ್ವರ್‌ ನಿವಾಸದ ಮುಂದೆ ಧರಣಿ ನಡೆಸಿದ್ದಾರೆ.

ಎಸ್ಸಿ, ಎಸ್ಟಿಗುತ್ತಿಗೆದಾರರಿಗೆ ಸರ್ಕಾರಿ ಕಾಮಗಾರಿಗಳಲ್ಲಿ ನೀಡಿರುವ ಮೀಸಲಾತಿ ಮಿತಿಯನ್ನು 1 ಕೋಟಿಯಿಂದ 5 ಕೋಟಿ ರು.ಗೆ ಹೆಚ್ಚಿಸಬೇಕು ಎಂದು ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಲು ಪರಮೇಶ್ವರ್‌ ಅವರ ನಿವಾಸಕ್ಕೆ ಭಾನುವಾರ ತೆರಳಿದ್ದರು. ಆದರೆ ಸಚಿವರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಆರೋಪಿಸಿ ಸಂಘದ ಪದಾಧಿಕಾರಿಗಳು ಪರಮೇಶ್ವರ್‌ ನಿವಾಸದ ಮುಂದೆ ಪ್ರತಿಭಟಿಸಿದರು. ಬಳಿಕ ಆಗಮಿಸಿದ ಪರಮೇಶ್ವರ್‌, ಮನವಿ ಸ್ವೀಕರಿಸಿ ಸರ್ಕಾರದ ಮಟ್ಟದಲ್ಲಿ ಪರಿಶೀಲಿಸುವುದಾಗಿ ಭರವಸೆ ನೀಡಿದ್ದಾರೆ.

ಗೃಹಜ್ಯೋತಿ ಎಫೆಕ್ಟ್: ಕರೆಂಟ್ ಬಿಲ್ ಕೊಡಲು ಹೋದ ಬೆಸ್ಕಾಂ ಸಿಬ್ಬಂದಿ ಮೇಲೆ ಹಲ್ಲೆ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎನ್‌.ಮಹದೇವಸ್ವಾಮಿ, ಗುತ್ತಿಗೆ ಮೀಸಲಾತಿ ಮಿತಿಯನ್ನು 5 ಕೋಟಿ ರುಪಾಯಿಗೆ ಹೆಚ್ಚಿಸಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿತ್ತು. ಪರಮೇಶ್ವರ್‌ ಅವರಿಗೂ ಮನವಿ ಸಲ್ಲಿಸಲು ಆಗಮಿಸಿದ್ದಾಗ ಸರಿಯಾಗಿ ಕೇಳಿಸಿಕೊಳ್ಳಲಿಲ್ಲ. ಆದ್ದರಿಂದ ಧರಣಿ ನಡೆಸಲಾಯಿತು. ಬಳಿಕ ಸಚಿವರು ನಮ್ಮ ಮನವಿ ಸ್ವೀಕರಿಸಿದರು ಎಂದು ಸ್ಪಷ್ಟಪಡಿಸಿದರು.

click me!