ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒಕ್ಕಲಿಗರನ್ನು ಅವರು ದೂರ ಇಡುತ್ತಾ ಬಂದಿದ್ದಾರೆ. ಮತ್ತೆ ನಾನು ಎಂದೂ ಗೆಲ್ಲಲ್ಲ ಎಂದು ಅಂದುಕೊಂಡಿದ್ದರು.
ಮಂಡ್ಯ (ಜು.10): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ನಾಯಕರು ಬೆಳೆಯುವುದನ್ನು ಸಹಿಸಲ್ಲ. ಒಕ್ಕಲಿಗರನ್ನು ಅವರು ದೂರ ಇಡುತ್ತಾ ಬಂದಿದ್ದಾರೆ. ಮತ್ತೆ ನಾನು ಎಂದೂ ಗೆಲ್ಲಲ್ಲ ಎಂದು ಅಂದುಕೊಂಡಿದ್ದರು. ಮಂಡ್ಯದ ಜನ ನನ್ನನ್ನು ಪಾಪದ ಹುಡುಗ ಎಂದು ಗೆಲ್ಲಿಸಿಬಿಟ್ಟಿದ್ದಾರೆ. ನಾನು ಈಗ ಮಂತ್ರಿ ಆಗಿದ್ದೇನೆ. ಅದನ್ನು ಸಹಿಸಿಕೊಳ್ಳಲು ಕುಮಾರಸ್ವಾಮಿಗೆ ಕಷ್ಟಆಗುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಆರೋಪಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಮಗೇನೂ ಅವರ ಮೇಲೆ ದ್ವೇಷ ಇಲ್ಲ. ಆದರೆ, ಅವರಿಗೆ ನಮ್ಮನ್ನು ಕಂಡರೆ ಆಗುವುದಿಲ್ಲ.
ಇದನ್ನು ಹಳೇ ಮೈಸೂರು ಭಾಗದ ಜನತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ನಾನು ಒಕ್ಕಲಿಗ ನಾಯಕ ಎಂಬ ಕಾರಣಕ್ಕೆ ನನ್ನ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿಯಾಗಿದ್ದವರು. ನಾವೆಲ್ಲಾ ಅವರನ್ನು ಪ್ರೀತಿ ಮಾಡುತ್ತೇವೆ. ಕುಮಾರಸ್ವಾಮಿ ದೇವೇಗೌಡರ ಹೆಸರನ್ನು ತರದೆ ರಾಜಕೀಯ ಮಾಡುವುದಕ್ಕೆ ಆಗುವುದಿಲ್ಲ. ಅದಕ್ಕಾಗಿ ನಿತ್ಯ ದೇವೇಗೌಡರ ಹೆಸರೆತ್ತುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಸದನದಲ್ಲಿ ನಾವು ದೇವೇಗೌಡರ ಹೆಸರು ಬಳಸಿಲ್ಲ. ದೇವೇಗೌಡರ ಹೆಸರು ಬಳಸುವವರೇ ಅವರು. ಗೌಡರ ಹೆಸರು ಹೇಳದಿದ್ದರೆ ತಮ್ಮ ಬೇಳೆಕಾಳು ಬೇಯಲ್ಲ ಅನ್ನುವುದು ಅವರಿಗೂ ಗೊತ್ತಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಜಗಳ: ಯುವಬ್ರಿಗೇಡ್ ಕಾರ್ಯಕರ್ತನ ಕೊಲೆ
ಆದ್ದರಿಂದಲೇ ನಿತ್ಯ ದೇವೇಗೌಡರ ಹೆಸರೆತ್ತಿಯೇ ಮಾತು ಆರಂಭಿಸುತ್ತಾರೆ ಎಂದು ತಿರುಗೇಟು ನೀಡಿದರು. ಪೆನ್‌ಡ್ರೈವ್ ದಾಖಲೆ ನೀಡಲಿ: ವರ್ಗಾವಣೆ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸುಮ್ಮನೆ ಆರೋಪ ಮಾಡಿದರೆ ಸಾಲದು. ಸರ್ಕಾರದ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರದ ವಿರುದ್ಧ ಅವರ ಬಳಿ ಯಾವುದೇ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಸಂತೋಷ. ಬೇಕಿದ್ದರೆ ಸದನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ದಾಖಲೆ ಇದೆ ಎಂದು ಹೇಳಿ ಈ ಹಿಂದೆ ಜನಾರ್ದನರೆಡ್ಡಿ ಸಿಡಿಸಿದ ಸಿಡಿ ಬಾಂಬ್ ರೀತಿ ಆಗುವುದು ಬೇಡ ಎಂದು ಟೀಕಿಸಿದರು.
ಹಸಿರೀಕರಣ ಅಗತ್ಯ: ಮರ ಗಿಡಗಳ ಕ್ಷೀಣಿಸುತ್ತಿರುವುದು ಪರಿಸರ ಹಾಗೂ ಹವಾಮಾನದ ಮೇಲೆ ನೇರ ಪರಿಣಾಮ ಬೀರುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಆದ್ದರಿಂದ ಹಸಿರೀಕರಣ ಅಭಿಯಾನ ಮಾಡುವ ಅವಶ್ಯಕತೆ ಇದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಅಭಿಪ್ರಾಯಪಟ್ಟರು. ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಮತ್ತು ಅರಣ್ಯ ಇಲಾಖೆ ಆಶ್ರಯದಲ್ಲಿ ಹೆಬ್ಬಾಳದ ಜಿಕೆವಿಕೆಯಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಮರ ಗಿಡಗಳು ಕಡಿಮೆ ಆದರೆ ಅದು ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ.
ಆಷಾಢ ಮಾಸದ ಕೊನೆಯ ಸೋಮವಾರ: ನಂದಿಗಿರಿ ಪ್ರದಕ್ಷಿಣೆ ಮಾಡುತ್ತಿರುವ ಭಕ್ತರು
ರಾಷ್ಟ್ರೀಯ ಅರಣ್ಯ ನೀತಿಯ ಗುರಿ ತಲುಪಲು ಅರಣ್ಯ ಪ್ರದೇಶದ ಖಾಲಿ ಜಾಗ, ಸರ್ಕಾರಿ ಸ್ಥಳ, ರಸ್ತೆ ಬದಿ, ಶೈಕ್ಷಣಿಕ ಸಂಸ್ಥೆ, ಇಲಾಖೆಗಳ ಅವರಣ, ರೈತರ ಜಮೀನಿನ ಬದು, ಕರೆ ಅಂಗಳ ಮತ್ತಿತರ ಪ್ರದೇಶಗಳಲ್ಲಿ ಹಸಿರೀಕರಣ ಕಾರ್ಯಕ್ರಮವನ್ನು ಅಭಿಯಾನವನ್ನಾಗಿ ಅನುಷ್ಠಾನಗೊಳಿಸುವುದು ಅವಶ್ಯಕವಾಗಿದೆ. ವಿತರಣೆ ಮಾಡಿದ ಸಸಿಗಳ ದಾಖಲಾತಿ ನಿರ್ವಹಿಸಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಬೆಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ಲಿಂಗರಾಜು, ಕೃಷಿ ವಿವಿ ಕುಲಪತಿ ಡಾ.ಎಸ್.ವಿ.ಸುರೇಶ ಹಾಜರಿದ್ದರು.