ನಮ್ಮ 5 ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನಮ್ಮ ಅಕ್ಕ ತಂಗಿಯರಿಗೆ, ಹೆಣ್ಣು ಕುಲಕ್ಕೆ ಅಷ್ಟೇ ಅಲ್ಲ, ಇಡೀ ಮಾನವ ಕುಲಕ್ಕೆ ಅಪಮಾನವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.14): ನಮ್ಮ 5 ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ದಾರಿತಪ್ಪುತ್ತಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನಮ್ಮ ಅಕ್ಕ ತಂಗಿಯರಿಗೆ, ಹೆಣ್ಣು ಕುಲಕ್ಕೆ ಅಷ್ಟೇ ಅಲ್ಲ, ಇಡೀ ಮಾನವ ಕುಲಕ್ಕೆ ಅಪಮಾನವಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗವಹಿಸಿದ್ದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದರು. ಅವರ ಹೇಳಿಕೆಗೆ ಕುಮಾರಸ್ವಾಮಿ ಅವರಿಂದ ನಾನು ಉತ್ತರ ಬಯಸಲ್ಲ. ಬದಲಾಗಿ ಎನ್ ಡಿಎ ಅಭ್ಯರ್ಥಿ ಆಗಿರುವುದರಿಂದ ಪ್ರಧಾನಿ ಮೋದಿ ಇದಕ್ಕೆ ಉತ್ತರ ಕೊಡಬೇಕು. ನಿರ್ಮಲ ಸೀತಾರಾಂ, ಸ್ಮೃತಿ ಇರಾನಿ ಅವರು ಇದಕ್ಕೆ ಉತ್ತರ ಕೊಡಬೇಕು.
ಇಂತವರನ್ನು ಎನ್ ಡಿಎಗೆ ಸೇರಿಕೊಂಡು ನನ್ನ ಅಕ್ಕ, ತಂಗಿ, ತಾಯಂದಿರಿಗೆ ಅಪಮಾನ ಮಾಡಿದ್ದಾರೆ. ಇದಕ್ಕೆ ಯಾರು ಕ್ಷಮಿಸುವುದಕ್ಕೆ ಸಾಧ್ಯವಿಲ್ಲ. ಗ್ಯಾರಂಟಿ ಕಾರ್ಡುಗಳನ್ನು ತಾಯಿ ಚಾಮುಂಡಿ ಬಳಿ ಇಟ್ಟು ಪೂಜೆ ಮಾಡಿ ಬಳಿಕ ವಿತರಣೆ ಮಾಡಲಾಗಿದೆ. ಅಣ್ಣ, ತಮ್ಮಂದಿರ ಮನೆಗೆ, ತವರು ಮನೆಗೆ, ತೀರ್ಥಯಾತ್ರೆಗೆ ಮಹಿಳೆಯರು ಹೋಗಿದ್ದಾರೆ. ಇದನ್ನು ನೀವು ದಾರಿ ತಪ್ಪುತಿದ್ದಾರೆ ಅಂಥ ಹೇಳುತ್ತೀರಿ ಕುಮಾರಸ್ವಾಮಿಯವರೇ. ನಾವು ಕೊಟ್ಟ ಎರಡು ಸಾವಿರದಿಂದ ತಾಯಂದಿರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎನ್ನುತ್ತಿದ್ದಾರೆ. ಪ್ರತೀ ತಿಂಗಳು ಪ್ರತೀ ಕುಟುಂಬಕ್ಕೆ ಐದಾರು ಸಾವಿರ ಉಳಿತಾಯವಾಗುತ್ತಿದೆ.
ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ ಎಂದರೆ ಏನರ್ಥ: ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಗರಂ
ಇದನ್ನು ದಾರಿ ತಪ್ಪುತಿದ್ದಾರೆ ಅಂತ ಹೇಳುತ್ತಿದ್ದಾರೆ ಎಂದು ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಇವರ ಮಾತಿನಿಂದ ನನಗೆ ದುಃಖ ತಡೆದುಕೊಳ್ಳಲಾಗುತ್ತಿಲ್ಲ. ಮಹಿಳೆಯ ಹೋರಾಟಕ್ಕೆ ನಾನು ಅಡ್ಡ ಬರುವುದಿಲ್ಲ ಎಂದು ಹೇಳುವ ಮೂಲಕ ಮಹಿಳೆಯರು ಹೋರಾಟ ಮಾಡುವುದಕ್ಕೆ ಡಿಕೆ ಶಿವಕುಮಾರ್ ಸೂಚಿಸಿದರು. ಹೆಚ್.ಡಿ ಕುಮಾರ್ ಸ್ವಾಮಿ ಅವರಿಂದ ಆಗಿರುವುದು ಬರೀ ಹೆಣ್ಣುಮಕ್ಕಳಿಗೆ ಆದ ಅವಮಾನವಲ್ಲ. ಇಡೀ ಮಾನವ ಕುಲಕ್ಕೆ ಆದ ಅವಮಾನ. ಇದಕ್ಕೆ ದೇಶದ ಪ್ರಧಾನಿ ಮೋದಿಯವರೇ ಉತ್ತರ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಈಗ ಕೊಟ್ಟಿರುವ ಭರವಸೆಗಳಿರಲಿ, 10 ವರ್ಷದಿಂದ ಕೊಟ್ಟಿರುವ ಭರವಸೆಗಳ ಈಡೇರಿಸಿದ್ದಾರಾ ಎಂದು ಪ್ರಶ್ನಿಸಿದರು. 10 ವರ್ಷಗಳ ಹಿಂದೆ ಇವರು ಕೊಟ್ಟಿದ್ದ ಭರವಸೆಗಳ ಬಗ್ಗೆ ತಾನೆ ಈಗ ಚರ್ಚೆಯಾಗಬೇಕಾಗಿರುವುದು. ಅದು ಬಿಟ್ಟು ಈಗ ಮತ್ತೆ ರೀತಿಯ ಸುಳ್ಳು ಭರವಸೆಗಳನ್ನು ಬಿಜೆಪಿ ಪ್ರಣಾಳಿಕೆಗೆ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಕೊಡಗಿನಲ್ಲಿ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ ಅವರು ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದಿದ್ದರು. 2 ಕೋಟಿ ಉದ್ಯೋಗ ಸೃಷ್ಟಿಸಿದ್ದಾರಾ ಎಂದು ಕೇಳಿದರು.
ಪ್ರಜಾಪ್ರಭುತ್ವ, ಸಂವಿಧಾನ ಉಳಿಬೇಕಾ ಎಂಬುದಕ್ಕೆ ಉತ್ತರ ಕೊಡುವ ಚುನಾವಣೆ ಇದು: ಸಚಿವ ಪರಮೇಶ್ವರ್
ಮೇಕ್ ಇನ್ ಇಂಡಿಯಾ ಮಾಡುತ್ತೇವೆ ಎಂದಿದ್ದರು, ಮೇಕ್ ಇನ್ ಇಂಡಿಯಾ ಮಾಡಿದ್ರಾ. ಅಚ್ಛೇದಿನ್ ಆಯೇಗಾ ಎಂದರು, ಬಂತಾ ಎಂದ ಸಿಎಂ ಸಿದ್ದರಾಮಯ್ಯ ಕೇಳಿದರು. ಎಲ್ಲಾ ಅಗತ್ಯ ವಸ್ತುಗಳ ಬೆಲೆ ಕಡಿಮೆ ಆದವಾ ಎಂದರು. 2018 ರಲ್ಲಿಯೂ ಬಿಜೆಪಿ 600 ಭರವಸೆ ನೀಡಿದ್ದರು. ಅದರಲ್ಲಿ 60 ಇನ್ನೂ ಈಡೇರಿಸಿಲ್ಲ. ಅವರು ಯಾವತ್ತೂ ಕೊಟ್ಟ ಭರವಸೆ ಈಡೇರಿಸಿಲ್ಲ. ಈಗಲೂ ಅಷ್ಟೇ ಬಿಜೆಪಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸಲ್ಲ ಎಂದು ಸಿಎಂ ಟೀಕಿಸಿದರು. 25 ಕೋಟಿ ಉದ್ಯೋಗ ಸೃಷ್ಟಿಸಿದ್ದೇವೆ ಎಂದಿರುವುದಕ್ಕೂ ವ್ಯಂಗ್ಯವಾಡಿದ ಸಿಎಂ ಸಿದ್ದರಾಮಯ್ಯ ಅವರು ನಿಮಗೆ ಉದ್ಯೋಗ ಸಿಕ್ಕಿದೆಯಾ ಎಂದು ಅಲ್ಲಿಯೇ ಇದ್ದ ಯುವಕರನ್ನು ಪ್ರಶ್ನಿಸಿದರು.