ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆದರು. ದಾರಿತಪ್ಪಿದ್ದಾರೆ ಅಂದರೆ ಏನರ್ಥ, ರಾಜಕೀಯವಾಗಿ ನಾವು ಏನು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು.
ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು (ಏ.14): ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ಹೆಣ್ಣುಮಕ್ಕಳು ದಾರಿತಪ್ಪಿದ್ದಾರೆ ಎಂಬ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆದರು. ದಾರಿತಪ್ಪಿದ್ದಾರೆ ಅಂದರೆ ಏನರ್ಥ, ರಾಜಕೀಯವಾಗಿ ನಾವು ಏನು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು. ಆದರೆ ಜನಸಾಮಾನ್ಯರ ಅರ್ಥದಲ್ಲಿ ದಾರಿತಪ್ಪುವುದು ಎಂದರೆ ಏನರ್ಥ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದವರು. ಹೆಣ್ಣುಮಕ್ಕಳ ಬಗ್ಗೆ ಹೀಗೆ ಮಾತನಾಡಿದರೆ ಹೇಗೆ. ಹೆಣ್ಣುಮಕ್ಕಳು ಇದನ್ನು ಸಹಿಸಿಕೊಳ್ಳುತ್ತಾರಾ ಎಂದು ಸಿಎಂ ಗರಂ ಆದರು.
ಇನ್ನು ಮದ್ಯ, ಸ್ಟ್ಯಾಂಪ್ ಡ್ಯೂಟಿ ಸೇರಿದಂತೆ ಕೆಲವುಗಳ ಬೆಲೆ ಜಾಸ್ತಿ ಮಾಡಿ ಗ್ಯಾರಂಟಿ ಯೋಜನೆ ಮಾಡಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು ಮದ್ಯ, ಸ್ಟಾಂಪ್ ಡ್ಯೂಟಿ ದರ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತೆ ಅಂತ ವಿಜಯೇಂದ್ರಗೆ ಗೊತ್ತೋ ಎಂದರು. ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 58 ಸಾವಿರ ಕೋಟಿ ರೂಪಾಯಿ ಬೇಕು. ಆದರೆ ಕೆಲವುಗಳ ದರ ಹೆಚ್ಚಳದಿಂದ ಸರ್ಕಾರಕ್ಕೆ ಎಷ್ಟು ಆದಾಯ ಬರುತ್ತೆ ಎನ್ನುವುದು ಗೊತ್ತೋ. ಇದನ್ನು ವಿಜಯೇಂದ್ರಗೆ ಕೇಳಿ ಎಂದು ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ತಿರುಗೇಟು ನೀಡಿದರು.
ಪ್ರಜಾಪ್ರಭುತ್ವ, ಸಂವಿಧಾನ ಉಳಿಬೇಕಾ ಎಂಬುದಕ್ಕೆ ಉತ್ತರ ಕೊಡುವ ಚುನಾವಣೆ ಇದು: ಸಚಿವ ಪರಮೇಶ್ವರ್
ಸುಮ್ಮನೇ ಏನೋ ಹೇಳಬೇಕು ಎಂದು ಹೇಳುವುದಲ್ಲ ಎಂದರು. ಇನ್ನು ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ಆರ್ಎಸ್ಎಸ್ & ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲವೇ ಇಲ್ಲ. ಸಂವಿಧಾನ ಜಾರಿ ಆದಾಗ ಸಾವರ್ಕರ್ ಅಭಿಪ್ರಾಯ ಏನಿತ್ತು..? ಸಂವಿಧಾನ ಬದಲಾವಣೆ ಬಿಜೆಪಿಯ ಹಿಡೆನ್ ಅಜೆಂಡಾ ಎಂದು ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ಹರಿಹಾಯ್ದರು. ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದರು.
ಸಂವಿಧಾನ ಬದಲಾವಣೆ ವಿಚಾರವನ್ನ ಅನಂತ್ ಕುಮಾರ್ ಜೊತೆ ಮೋದಿ ಮತ್ತು ಅಮಿತ್ ಶಾ ಅವರೇ ಹೇಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಿಡಿಸದರು. ಅಂಬೇಡ್ಕರ್ ಜನುಮದಿನದಂದು ಸಂವಿಧಾನದ ವಿಚಾರ ತೆಗೆದ ಸಿಎಂ ಸಿದ್ದರಾಮಯ್ಯ ಅವರು ಈ ದೇಶದ ಪ್ರಜಾತಂತ್ರ ಅಪಾಯದಲ್ಲಿದೆ. ಜನತಂತ್ರದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ. ಹಿಟ್ಲರ್, ಮುಸಲ್ಲೋನಿ ತತ್ವದ ಬಗ್ಗೆ ಮಾತ್ರ ಬಿಜೆಪಿ, ಮೋದಿಗೆ ನಂಬಿಕೆ ಎಂದರು. ಮತ್ತೆ ಮನ್ ಕಿ ಬಾತ್ ವಿಷಯ ಪ್ರಸ್ತಾಪಿಸಿ ವ್ಯಂಗ್ಯವಾಡಿದ ಸಿದ್ದು, ಸ್ವಾತಂತ್ರ್ಯ ಹೋರಾಟಕ್ಕೆ ಆರ್ಎಸ್ಎಸ್ ಕೊಡುಗೆ ಏನು..?.
Lok Sabha Election 2024: ಈ ದಿನ ನನಗೆ ಅತ್ಯಂತ ದುಃಖ ತಂದ ದಿನ: ಡಿಸಿಎಂ ಡಿ.ಕೆ.ಶಿವಕುಮಾರ್
ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದೆ. ಬಿಜೆಪಿ, ಆರ್ಎಸ್ಎಸ್ನ ಬಡವರಿಗೂ ನಮ್ಮ 5 ಗ್ಯಾರಂಟಿ ಸಿಗುತ್ತಿದೆ. ಕೊಡಗಿಗೆ ಬಿಜೆಪಿ ಸರ್ಕಾರದ ಕೊಡುಗೆ ಏನು ಹೇಳಿ..? ಎಂದರು. ಶಾಸಕರಾದ ಪೊನ್ನಣ್ಣ & ಮಂಥರ್ ಏನ್ ಹೇಳ್ತಾರೋ ಅದೆಲ್ಲವನ್ನೂ ಕೊಡಗಿಗೆ ನಾನು ಮಾಡಿ ಕೊಡ್ತೀನಿ ಎಂದ ಸಿದ್ದರಾಮಯ್ಯ ಅವರು ಸೋಲ್ತೀವಿ ಅಂತ ಪ್ರತಾಪ್ ಸಿಂಹನನ್ನು ಬದಲಾವಣೆ ಮಾಡಿದ್ದಾರೆ ಎಂದರು. ಒಟ್ಟಿನಲ್ಲಿ ಬಿಜೆಪಿ. ಜೆಡಿಎಸ್ ಮುಖಂಡರ ವಿರುದ್ಧ ಹರಿಹಾಯುತ್ತಲೇ ಕಾಂಗ್ರೆಸ್ ಮತ ಹಾಕಿ ಎಂದು ಕೇಳುತ್ತಾ ಮತಬೇಟಿಯಾದರು. ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.