ಪ್ರತಾಪ್ ಸಿಂಹ ಗೋವಿಂದಾ ಗೋವಿಂದಾ... ಸದಾನಂದಗೌಡ ಗೋವಿಂದಾ ಗೋವಿಂದಾ... ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.
ಹುಣಸೂರು (ಏ.13): ಪ್ರತಾಪ್ ಸಿಂಹ ಗೋವಿಂದಾ ಗೋವಿಂದಾ... ಸದಾನಂದಗೌಡ ಗೋವಿಂದಾ ಗೋವಿಂದಾ... ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು. ಬಿಜೆಪಿಯಲ್ಲಿ ಸಂಸದರಾಗಿದ್ದ 14 ಜನರಿಗೆ ಟಿಕೆಟ್ ಕೊಟ್ಟಿಲ್ಲ. ಯಾಕಂದ್ರೆ ಅವರೆಲ್ಲ ಸೋಲ್ತಾರೆ ಅಂತ ಗೊತ್ತಿತ್ತು. ನಿಮ್ಮ ಕ್ಷೇತ್ರದ ಪ್ರತಾಪ್ ಸಿಂಹ ಭಾರಿ ಹೋರಾಟ ಮಾಡಿದ್ದ. ಯಾಕೆ ಅವರಿಗೆಲ್ಲ ಟಿಕೆಟ್ ಕೊಡಲಿಲ್ಲ. ಶೋಭಕ್ಕ ನೀನ್ ಹೋಗಕ್ಕ ಅಂತ ಹೊರಗಡೆ ಕಳುಹಿಸಿದ್ರು. ನಾನು ಕಾಂಗ್ರೆಸ್ ಅಧ್ಯಕ್ಷ ಆಗಿದ್ದೆ, ನಳೀನ್ ಕುಮಾರ್ ಕಟೀಲ್ ಬಿಜೆಪಿ ಅಧ್ಯಕ್ಷ ಆಗಿದ್ದ. ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುತ್ತೀನಿ ಅಂತಿದ್ದ ಎಂದರು.
ನಾರಾಯಣಸ್ವಾಮಿ ಸಚಿವ ಆಗಿದ್ದ. ಅವರ್ಯಾರಿಗೂ ಟಿಕೆಟ್ ಕೊಟ್ಟಿಲ್ಲ. ಈಶ್ವರಪ್ಪನ ದೇವರೇ ಕಾಪಾಡಬೇಕು. ಕಾಂಗ್ರೆಸ್‌ನವರು ಒಳ್ಳೆಯ ಅಭ್ಯರ್ಥಿಗಳಿಗೆ ಟಿಕೆಟ್ ಕೊಟ್ಟಿದ್ದೇವೆ. ಒಕ್ಕಲಿಗರಿಗೆ ಹೆಚ್ಚು ಟಿಕೆಟ್ ಕೊಟ್ಟಿದ್ದೇವೆ. ಪ್ರತಾಪ್ ಸಿಂಹನಾದ್ರೂ ತಾಲೂಕು ಕಚೇರಿಗೆ ಬಂದು ಗಲಾಟೆನಾದ್ರು ಮಾಡ್ತಿದ್ದ. ಈಗಿರುವ ಅಭ್ಯರ್ಥಿ ಬರ್ತಾರಾ. ನಮ್ಮ ಅಭ್ಯರ್ಥಿ ನೀವು ಎಲ್ಲಿಗೇ ಕರೆದರೂ ಬರುತ್ತಾರೆ. ಅಂತಹವರಿಗೆ ಮತ ಕೊಟ್ಟು ಗೆಲ್ಲಿಸಿ ಎಂದು ಡಿಕೆಶಿ ಹೇಳಿದರು.
ಮೋದಿ ವಿಶ್ವ ನಾಯಕ, ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ: ಸಚಿವ ಕೆ.ವೆಂಕಟೇಶ್
ಎಚ್ಡಿಕೆಯವರೇ ನಾನು ಯಾವ ವಿಷ ಹಾಕಿದ್ದೀನಿ ಹೇಳಿ: ನಾನು ವಿಷ ಹಾಕಿದ್ದೇನೆ ಅಂತಾ ಎಚ್.ಡಿ.ಕುಮಾರಸ್ವಾಮಿ ಹೇಳುತ್ತಾರೆ. ನಾನು ಯಾವ ವಿಷ ಹಾಕಿದ್ದೀನಿ ಅಂತಾ ಎಚ್ಡಿಕೆಗೆ ಕೇಳಬೇಕು. ತಮ್ಮ ಸರಕಾರ ಬೀಳಿಸಿದವರನ್ನೆ ಎಚ್ಡಿಕೆ ಚುಂಚನಗಿರಿ ಮಠಕ್ಕೆ ಕರೆದು ಕೊಂಡು ಹೋಗಿದ್ದಾರೆ ನಿಮಗೆ ಮಾನ ಮಾರ್ಯಾದೆ ಬೇಡ್ವಾ? ಸೂರ್ಯ ಮುಳುಗುವುದು ನಿಶ್ಚಿತ ಹೇಗೋ ಕಮಲ ಬಾಡುವುದು ಅಷ್ಟೆ ನಿಶ್ಚಿತ. ಆಡೋ ಹೈಕ್ಕಳಿಗೆ ಅಧಿಕಾರ ಕೊಟ್ಟರೆ ಗದ್ದೆಗೆ ಹೋಗಿ ಏನೋ ಮಾಡಿದ್ರಂತೆ. ಹಂಗೇ ದೇವೇಗೌಡರು ಕುಮಾರಸ್ವಾಮಿ ಕೈಗೆ ಪಕ್ಷದ ಅಧಿಕಾರ ಕೊಟ್ಟರೆ ಅವರು ಪಕ್ಷವನ್ನೆ ಮಾರಿದರು. ಮನೆ ಅಳಿಯನನ್ನು ಬಿಜೆಪಿ ಪಕ್ಷದಿಂದ ಸ್ಪರ್ಧೆಗೆ ಇಳಿಸ್ತಾರಾ? ಇದು ಒಂದು ಪಕ್ಷ ಏನ್ರಿ ಎಂದು ಕಿಚಾಯಿಸಿದರು.