ಲೋಕ ಕದನ ಹೊತ್ತಲ್ಲೆ ನೂತನ ಪಕ್ಷ ಸ್ಥಾಪಿಸುವ ಸೂಚನೆ ನೀಡಿದ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ!

By Govindaraj S  |  First Published Apr 13, 2024, 5:34 PM IST

ಅನ್ಯಭಾಷೆಯ ನಾಮಫಲಕ ತೆರವಿಗೆ ಈಗಾಗಲೇ ಗಡುವು ನೀಡಿದ್ದೇವು. ಇನ್ನು‌ ಕೆಲವೆಡೆ ಅನ್ಯ ಭಾಷೆಯ ನಾಮಫಲಕಗಳನ್ನ ತೆರವು ಮಾಡಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ತಿಳಿಸಿದರು. 


ಬೀದರ್ (ಏ.13): ಅನ್ಯಭಾಷೆಯ ನಾಮಫಲಕ ತೆರವಿಗೆ ಈಗಾಗಲೇ ಗಡುವು ನೀಡಿದ್ದೇವು. ಇನ್ನು‌ ಕೆಲವೆಡೆ ಅನ್ಯ ಭಾಷೆಯ ನಾಮಫಲಕಗಳನ್ನ ತೆರವು ಮಾಡಿಲ್ಲ ಎಂದು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ತಿಳಿಸಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ನಾರಾಯಣಗೌಡ, ಕನ್ನಡ ಭಾಷೆಗೆ ಹೆಚ್ಚಿನ‌ ಪ್ರಾಧಾನ್ಯತೆ ನೀಡುವಂತೆ ಸರ್ಕಾರಗಳು ಸೂಚನೆ ನೀಡಬೇಕಿತ್ತು. ಆದ್ರೆ ಎಲ್ಲಾ ರಾಜಕಾರಣಿಗಳ ಬ್ಲಡ್ ಒಂದೇ ತರ ಇದೆ. ಆದ್ರೆ ಸರ್ಕಾರಗಳು ಕನ್ನಡ ಅಸ್ಮಿತೆ ಉಳಿಸಲು ಶ್ರಮಿಸುತ್ತಿಲ್ಲ. ಮುಂದಿನ ದಿನಗಳಲ್ಲಿ‌ ಅಪ್ಪಟ ಕನ್ನಡಿಗರ ಪಕ್ಷ ಸ್ಥಾಪನೆ‌ ಮಾಡ್ತೇವೆ. ಮುಂಬರುವ ದಿನಗಳಲ್ಲಿ ವಿಧಾನಸೌಧ ಮೆಟ್ಟಿಲು ಹತ್ತುತ್ತೇವೆ ಎಂದು ಲೋಕ ಕದನ ಹೊತ್ತಲ್ಲೆ ನೂತನ ಪಕ್ಷ ಸ್ಥಾಪಿಸುವ ಸೂಚನೆಯನ್ನು ನೀಡಿದರು.

ರಾಜ್ಯಾದ್ಯಂತ ಎಲ್ಲಾ ತಾಲುಕುಗಳಲ್ಲಿ‌ ನಮ್ಮ‌ ಕಾರ್ಯಕರ್ತರಿದ್ದಾರೆ. ಎಲ್ಲರೂ ಸದೃಡರಾಗಿದ್ದೇವೆ, ಕನ್ನಡಿಗರ ಪಕ್ಷ ಕಟ್ಟುತ್ತವೆ ಎಂದ ನಾರಾಯಣಗೌಡ. ಬೀದರ್‌ನಲ್ಲಿ ಮರಾಠಾ ಸಮುದಾಯದ ಸಭೆ ಬಳಿಕ, ಕರವೇ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ನಾರಾಯಣಗೌಡ ಈಗಾಗಲೇ ಬೆಳಗಾವಿಯಲ್ಲಿ‌ ಎಮ್‌ಇಎಸ್ ಮುಗಿಸಿದ್ದೇವೆ‌. ಈಗ ಬೀದರ್‌ಗೆ ಬರ್ತಾ ಇದ್ದಾರೆ, ಇಲ್ಲೂ ನಮ್ಮ ಕಾರ್ಯಕರ್ತರ ಪಡೆ ಗಟ್ಟಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಮ್‌ಇಎಸ್‌ ನೆಲೆಯೂರಲು ಬಿಡಲ್ಲ ಎಂದು ಎಮ್‌ಇಎಸ್‌ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಎಚ್ಚರಿಕೆ ನೀಡಿದರು.

Tap to resize

Latest Videos

ಸಿದ್ದರಾಮಯ್ಯ ಬರ ಪರಿಹಾರಕ್ಕಾಗಿ ದೆಹಲಿಗೆ ಹೋಗಿಲ್ಲ: ವಿ.ಸೋಮಣ್ಣ

ಕನ್ನಡದ ವಿಚಾರದಲ್ಲಿ ಎಷ್ಟು ಬಾರಿಯಾದ್ರೂ ಜೈಲಿಗೆ ಹೋಗಲು ಸಿದ್ಧ: ಕನ್ನಡ ಭಾಷೆ ವಿಚಾರದಲ್ಲಿ ರಾಜಿ ಇಲ್ಲ. ಎಷ್ಟು ಬಾರಿಯಾದರೂ ಜೈಲಿಗೆ ಹೋಗಲು ಸಿದ್ಧ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ತಿಳಿಸಿದರು. ಅವರು ಪಟ್ಟಣದ ಹಳೆ ಬಸ್‌ ನಿಲ್ದಾಣದಲ್ಲಿ ಕರವೇ ತಾಲೂಕು ಘಟಕದಿಂದ ಆಯೋಜಿಸಿದ್ದ ಕನ್ನಡದ ಹಬ್ಬ-2024 ಹಾಗೂ ತಮಗೆ ನೀಡಿದ ಚಳವಳಿ ಭೀಷ್ಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ನನ್ನ ಧ್ವನಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ. ಕೊನೆವರೆಗೂ ನಾಡು ನುಡಿಗಾಗಿ ಹೋರಾಡಿ ಸಾಯುತ್ತೇನೆ. ತಲೆ ತಗ್ಗಿಸಿ ಸಾಯಲ್ಲ. ಹೋರಾಟದ ಹಾದಿಯಲ್ಲಿ ಸಾಯಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ನುಡಿದರು.

ಪಿಎಂ, ಸಿಎಂ ಸ್ಥಾನ ಉಳಿಸಿಕೊಳ್ಳಲು ಅಪ್ಪ, ಮಗನಿಗೆ ಆಗಲಿಲ್ಲ: ಸಚಿವ ಕೆ.ಎನ್.ರಾಜಣ್ಣ ವ್ಯಂಗ್ಯ

ಕನ್ನಡಕ್ಕಾಗಿ ಯಾವ ರಾಜಕಾರಣಿಯೂ ಜೈಲಿಗೆ ಹೋಗಿರುವ ಊದಾಹರಣೆ ಇಲ್ಲ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಎಂದು ನಾಮಕರಣ ಮಾಡಿದ್ದಾರೆ, ಆದರೆ ಬಸವಣ್ಣನವರ ವಿಚಾರಧಾರೆಗಳನ್ನು ಯಾವುದಾದರೂ ರಾಜಕಾರಣಿ ಅಳ‍ವಡಿಸಿಕೊಂಡಿದ್ದಾರೆಯೇ ಎಂದು ಅವರು ಪ್ರಶ್ನಿಸಿದರು. ಬೆಂಗಳೂರು ಭಾಷಾ ಅಲ್ಪಸಂಖ್ಯಾತರ, ಬಂಡವಾಳಶಾಹಿಗಳ ಮುಷ್ಠಿಯಲ್ಲಿದೆ. ಕನ್ನಡಿಗರ ಊರು ಬೆಂಗಳೂರು ಆಗಬೇಕು. ಕಳೆದ ಡಿ.27ರಂದು ಬಹುದೊಡ್ಡ ಬದಲಾವಣೆಯಾಯಿತು. ಬೆಂಗಳೂರು ಕನ್ನಡಿಕೀರಣವಾಗುವ ಹಾದಿಯಲ್ಲಿದೆ ಎಂದು ಹೇಳಿದರು. ಎಂ.ಪಿ. ಪ್ರಕಾಶ ಸಮಾಜಮುಖಿ ಟ್ರಸ್ಟ್‌ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ ಮಾತನಾಡಿ, ಕನ್ನಡದ ಇತಿಹಾಸವನ್ನು ಮಕ್ಕಳಿಗೆ ಹೇಳಿ ಕೊಡುವ ಕೆಲಸವಾಗಬೇಕು. ಆಂಗ್ಲ ಭಾಷೆಯ ಒತ್ತಡಿಂದ ಕನ್ನಡ ನಲುಗುತ್ತದೆ. ಇಂತಹ ದಿನಗಳಲ್ಲಿ ನಾರಾಯಣಗೌಡರಂತವರ ಅಗತ್ಯತೆ ಇದೆ ಎಂದರು. ಭಾಷೆ ಸತ್ತರೆ ಸಂಸ್ಕೃತಿ ಸತ್ತು ಹೋಗುತ್ತದೆ. ಕನ್ನಡ ಪುಸ್ತಕಗಳನ್ನು ಪ್ರತಿಯೊಬ್ಬರೂ ಓದಬೇಕು ಎಂದು ಹೇಳಿದರು.

click me!