ಬಲಿಷ್ಠ ಒಕ್ಕಲಿಗ ನಾಯಕರಾದ ದೇವೇಗೌಡ-ಎಸ್‌ ಎಂ ಕೃಷ್ಣ ಭೇಟಿಯಾಗಿ ಆಶೀರ್ವಾದ ಪಡೆದ ಡಿಕೆಶಿ

Published : May 22, 2023, 10:05 PM IST
ಬಲಿಷ್ಠ ಒಕ್ಕಲಿಗ ನಾಯಕರಾದ  ದೇವೇಗೌಡ-ಎಸ್‌ ಎಂ ಕೃಷ್ಣ ಭೇಟಿಯಾಗಿ ಆಶೀರ್ವಾದ ಪಡೆದ ಡಿಕೆಶಿ

ಸಾರಾಂಶ

ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು ಮಾಜಿ ಸಿಎಂ ಎಸ್‌ ಎಂ ಕೃಷ್ಣ ಮತ್ತು ಮಾಜಿ ಪ್ರಧಾನಿ ಹೆಚ್‌ ಡಿ ದೇವೇ ಗೌಡ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಬೆಂಗಳೂರು (ಮೇ.22): ಬೆಳಿಗ್ಗೆ ಎಸ್.ಎಂ.ಕೃಷ್ಣರನ್ನ ಭೇಟಿ ‌ಮಾಡಿ ಆಶೀರ್ವಾದ ಪಡೆದಿದ್ದ ಡಿಕೆಶಿ  ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಾಯಂಕಾಲ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಪದ್ಮನಾಭನಗರದ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಡಿಸಿಎಂ ಡಿಕೆಶಿ ಅವರಿಗೆ ಹಾರ ಮತ್ತು ಶಾಲು ಹೊದಿಸಿ ಹೆಚ್ಡಿಡಿ ಅಭಿನಂದಿಸಿದರು. 

ದೇವೇಗೌಡರ ಭೇಟಿ ಬಳಿಕ ಮಾತನಾಡಿದ ಡಿಸಿಎಂ ಡಿಕೆಶಿ, ದೇವೇಗೌಡರು ಕರ್ನಾಟಕ ರಾಜ್ಯದ ಅತಿದೊಡ್ಡ ಸೇವೆ,ಕೊಡುಗೆ ಕೊಟ್ಟಿದ್ದಾರೆ. ಅತಿದೊಡ್ಡ ಸ್ಥಾನ ತುಂಬಿದ್ದಾರೆ. ಅವರು ದೊಡ್ಡ ಛಲಗಾರರು,ಅವರ ಆಶೀರ್ವಾದ ಪಡೆಯೋಣ ಅಂತ ಬಂದಿದ್ದೆ. ರಾಜಕೀಯ ಮುಗಿದು ಹೋಯ್ತು. ಇನ್ನೇನಿದ್ದರೂ ಕರ್ನಾಟಕ ಉಳಿಯಬೇಕು. ಹಾಗಾಗಿ ದೇವೇಗೌಡರ ಬಳಿ ಅನೇಕ ಸಲಹೆ ಕೇಳಿದ್ದೇವೆ. ಅವರು ಕೂಡ ಸ್ಪೂರ್ತಿ ಮತ್ತು ಧೈರ್ಯ ತುಂಬಿ ಕಳುಹಿಸಿದ್ದಾರೆ ಎಂದರು.

ಎಲೆಕ್ಷನ್ ಮುಗೀತು, ಇನ್ಯಾಕೆ ನೆಗೆಟಿವ್? ಇದರಿಂದ ಲಾಭ ಏನೂ ಇಲ್ಲ. ಜನ ನಮಗೆ ಕೊಟ್ಟಿರುವ ಭರವಸೆ ಈಡೇರಿಸಬೇಕು. ನುಡಿದಂತೆ ನಡೆಯಬೇಕು. ಕಾಂಗ್ರೆಸ್ ಪಕ್ಷ ಮತ್ತು ವೈಯಕ್ತಿಕವಾಗಿ ನಾನು ಪಾಸಿಟಿವ್ ಆಗಿರ್ತೀನಿ. ಅನೇಕರು ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ. 
ನಾವು ಅದನ್ನು ಒಪ್ಪಿಕೊಂಡು ಗೌರವಿಸಬೇಕು. ಎಲ್ಲಾ ಹಿರಿಯ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾವೇರಿ ನದಿ ವಿಚಾರ ಸೇರಿದಂತೆ ಅನೇಕ ವಿಚಾರ ಚರ್ಚೆ ಮಾಡಿದ್ದೇನೆ ಎಂದು ಈ ವೇಳೆ ಹೇಳಿದ್ದಾರೆ. 

ಒಕ್ಕಲಿಗ ನಾಯಕತ್ವದ ವಿಚಾರವಾಗಿ ಮಾತನಾಡಿದ ಅವರು ಅದರ ಬಗ್ಗೆ ನಾನು ಮಾತನಾಡಲ್ಲ. ಸಮುದಾಯದ ವಿಚಾರ ಅಲ್ಲ. ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು. ಬೆಂಗಳೂರಿನಲ್ಲಿ ಮಳೆಯಿಂದ ಆದ ಅವಾಂತರ ವಿಚಾರವಾಗಿ ಮಾತನಾಡಿದ ಡಿಕೆಶಿ, ಆ ಬಗ್ಗೆ ಸಭೆ ಮಾಡಿ‌ ಚರ್ಚೆ ಮಾಡಿದ್ದೇವೆ. ಮಳೆ ಬಂದಾಗ ಎಲ್ಲೆಲ್ಲಿ ನೀರು ತುಂಬಿಕೊಳ್ಳುತ್ತೆ. ಅಂತಾ ಕಡೆ ಶಾಶ್ವತ ಪರಿಹಾರ ಕಂಡಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆಗೆ ನಿಂತು ಕೆಲಸ ಮಾಡ್ತಿವಿ ಎಂದರು. 

ಕರುನಾಡ ಯುದ್ಧವೀರರ ಮುಂದೆ ಟಾರ್ಗೆಟ್ 7 ಚಾಲೆಂಜ್: ದಕ್ಷಿಣಾಪಥೇಶ್ವರರ ದಂಡಯಾತ್ರೆಗೆ ರೆಡಿಯಾಗಿದೆ ರಣವ್ಯೂಹ !

ಇದಕ್ಕೂ ಮುನ್ನ ಇಂದು ಬೆಳಗ್ಗೆ ಡಿಕೆಶಿ ಅವರು, ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು. ಈ ವೇಳೆ ಡಿಕೆ ಶಿವಕುಮಾರ್ ಅವರನ್ನು  ಹಾರ ಹಾಕಿ ಎಸ್ ಎಮ್‌ ಕೃಷ್ಣ ಸ್ವಾಗತಿಸಿದರು. ಬ.ನ. ಸುಂದರ ರಾವ್  ಅವರು ಬರೆದಿರುವ ಬೆಂಗಳೂರು ಇತಿಹಾಸ ಎನ್ನುವ ಪುಸ್ತಕವನ್ನು ಉಡುಗೊರೆಯಾಗಿ ಕೃಷ್ಣ ಅವರಿಗೆ ಡಿಕೆಶಿಗೆ ಕೊಟ್ಟರು.  ಜೊತೆಗೆ  ಎಸ್ ಎಮ್ ಕೃಷ್ಣ ಅವರ ಕಾಲಿಗೆ ನಮಸ್ಕರಿಸಿದ  ಡಿಕೆ ಶಿವಕುಮಾರ್ ಆಶಿರ್ವಾದ ಪಡೆದರು.

ಡಿಕೆಶಿ ನನ್ನ ದೈವವೆಂದು ಶಾಸಕ ಪ್ರಮಾಣವಚನ: ಹಿಂದು ಹುಲಿ ಯತ್ನಾಳ್‌ ಘರ್ಜನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ