ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೀನಾಯವಾಗಿ ಸೋತ ನಂತರ, ಬಿಜೆಪಿ ಈಗ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳುವತ್ತ ಗಮನಹರಿಸಿದೆ. ಈ ಹಿನ್ನೆಲೆ ನಾನಾ ಕಸರತ್ತುಗಳನ್ನು ನಡೆಸ್ತಿದೆ.
ನವದೆಹಲಿ (ಆಗಸ್ಟ್ 19, 2023): 2024 ರ ಬಹು ನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು 3 ಪ್ರಮುಖ ಕಾರ್ಯತಂತ್ರದ ಬದಲಾವಣೆಗಳನ್ನು ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡುವುದರಿಂದ ಹಿಡಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಹಣ ಪಾವತಿ ಹೆಚ್ಚು ಮಾಡುವುದು, ಹರ್ ಘರ್ ಜಲ ಯೋಜನೆಗೆ ಹೆಚ್ಚು ವೇಗ ನೀಡುವ ಪ್ಲ್ಯಾನ್ ಮಾಡ್ತಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಹೀನಾಯವಾಗಿ ಸೋತ ನಂತರ, ಬಿಜೆಪಿ ಈಗ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವತ್ತ ಗಮನಹರಿಸಿದೆ. ಈ ವರ್ಷದ ಆರಂಭದಲ್ಲಿ 26 ವಿರೋಧ ಪಕ್ಷಗಳನ್ನು ಒಳಗೊಂಡಿರುವ INDIA ಮೈತ್ರಿಕೂಟ ಮಾಡಿದ್ದು, 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಕೇಸರಿ ಬ್ರಿಗೇಡ್ ಅನ್ನು ಕೇಂದ್ರದಲ್ಲಿ ಕಿತ್ತೊಗೆಯುವುದಾಗಿ ಪ್ರಮಾಣ ಮಾಡಿದೆ.
ಇದನ್ನು ಓದಿ: ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ? ವಾರಾಣಸಿಯಲ್ಲಿ ನಿಂತ್ರೆ ಗೆಲ್ಲೋದು ಇವ್ರೇ ಎಂದ ಶಿವಸೇನಾ ನಾಯಕ!
ಎಲ್‌ಪಿಜಿ ಬೆಲೆ ಕಡಿಮೆ ಮಾಡಲು ಪ್ಲ್ಯಾನ್
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ಬಹುತೇಕ ದ್ವಿಗುಣಗೊಂಡಿರುವ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಇಳಿಕೆ ಮಾಡಲು ಪರಿಗಣಿಸಬಹುದು. ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ತನ್ನ ಮಹಿಳಾ ಮತದಾರರು ಅತೃಪ್ತರಾಗಿದ್ದಾರೆ ಎಂದು ಬಿಜೆಪಿ ಗಮನಕ್ಕೆ ಬಂದಿದ್ದು, ಬೆಲೆ ಇಳಿಕೆಗೆ ಪ್ಲ್ಯಾನ್ ಮಾಡ್ತಿದೆ. ಸದ್ಯ, 14.2 ಕೆಜಿ ತೂಕದ ಎಲ್‌ಪಿಜಿ ಬೆಲೆ ಅಂದಾಜು 1100 ರೂ. ಇದೆ.
'ಹರ್ ಘರ್ ಜಲ್' ಯೋಜನೆಗೆ ವೇಗ
ಮಹತ್ವಾಕಾಂಕ್ಷೆಯ "ಹರ್ ಘರ್ ಜಲ್" ಯೋಜನೆಯನ್ನು ತ್ವರಿತಗೊಳಿಸಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡ್ತಿದೆ. 2024 ರ ವೇಳೆಗೆ 100% ನಲ್ಲಿ ನೀರಿನ ಸಂಪರ್ಕವನ್ನು ಸಾಧಿಸುವ ಗುರಿಯನ್ನು ಹೊಂದಿದ್ದರೂ, ಸಾರ್ವತ್ರಿಕ ಚುನಾವಣೆಯ ಮೊದಲು ಹೆಚ್ಚಿನ ಕೆಲಸವನ್ನು ಪೂರ್ಣಗೊಳಿಸಲು ಮೋದಿ ಸರ್ಕಾರ ಬಯಸಿದೆ ಎಂದು ವರದಿಯಾಗಿದೆ. ಪ್ರಸ್ತುತ ಸುಮಾರು 67% ಕುಟುಂಬಗಳು ನಲ್ಲಿ ನೀರಿನ ಪ್ರವೇಶವನ್ನು ಹೊಂದಿವೆ, ಇದು ನಾಲ್ಕು ವರ್ಷಗಳ ಹಿಂದೆ 17% ಕ್ಕಿಂತ ಗಮನಾರ್ಹ ಏರಿಕೆಯಾಗಿದೆ.
ಕೇಂದ್ರ ಸಚಿವ ಭಗವಂತ್ ಖೂಬಾಗೆ ಮತ್ತೊಂದು ಶಾಕ್!
ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಪಾವತಿ ಹೆಚ್ಚಳ?
ಮತ್ತೊಂದು ಪ್ರಮುಖ ಕ್ರಮದಲ್ಲಿ, ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪಾವತಿಯನ್ನು ಹೆಚ್ಚಿಸಲು ಯೋಜಿಸಿದೆ. ಇದು ರೈತರಿಗೆ ಪ್ರತಿ ವರ್ಷ ಮೂರು ಸಮಾನ ಕಂತುಗಳಲ್ಲಿ 2,000 ರೂ. ನಂತೆ 6,000 ರೂ. ನೀಡ್ತಿದೆ. ಈ ಯೋಜನೆಯಡಿಯಲ್ಲಿ ರೈತರು ಕೇಂದ್ರ ಸರ್ಕಾರದಿಂದ ಪಾವತಿ ಹೆಚ್ಚಳವನ್ನು ಬಯಸುತ್ತಾರೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 100 ರನ್ ಹೊಡೆಯಲು ಕಾಂಗ್ರೆಸ್ ಹರಸಾಹಸ: ವಿಪಕ್ಷಗಳಲ್ಲಿ ಹೆಣ್ಮಕ್ಕಳೇ ಸ್ಟ್ರಾಂಗು ಗುರು!