ರಾಜಕೀಯ ನನಗೆ ಅನಿವಾರ್ಯವಲ್ಲ, ಆಕಸ್ಮಿಕ: ಲೋಕಸಭೆಗೂ ಮುನ್ನ ಟ್ವಿಸ್ಟ್‌ ಕೊಟ್ಟ ಸುಮಲತಾ ಅಂಬರೀಶ್‌

By Sathish Kumar KH  |  First Published Aug 19, 2023, 12:28 PM IST

ನಾನು ಬಿಜೆಪಿಗೆ ಸಪೋರ್ಟ್‌ ಮಾಡಿದ್ದೇನೆ ಹೊರತು ಬಿಜೆಪಿಯ ಸದಸ್ಯೆಯಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ ಎಂದು ಸಂಸದೆ ಸುಮಲತಾ ಅಂಬರೀಶ್‌ ಅವರು ಹೇಳಿಕೆ ನೀಡಿದ್ದಾರೆ. 


ಮಂಡ್ಯ (ಆ.19): ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನವೇ ಆಪರೇಷನ್‌ ಹಸ್ತ ಮಾಡಲಾಗುತ್ತಿದೆ ಎಂಬ ವಿಚಾರದಲ್ಲಿ, ಯಾರೂ ನನಗೆ ಕಾಂಗ್ರೆಸ್‌ಗೆ ಆಹ್ವಾನ ನೀಡಿಲ್ಲ. ನಾನು ಬಿಜೆಪಿಗೆ ಸಪೋರ್ಟ್‌ ಮಾಡಿದ್ದೇನೆ ಹೊರತು ಬಿಜೆಪಿಯ ಸದಸ್ಯೆಯಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವಾಗಿಲ್ಲ, ಆಕಸ್ಮಿಕ ಮಾತ್ರ ಎಂದು ಸಂಸದೆ ಸುಮಲತಾ ಅಂಬರೀಶ್‌ ಅವರು ಹೇಳಿಕೆ ನೀಡಿದ್ದಾರೆ. 

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೈತರ ಸಮಸ್ಯೆಗಳು, ನೀರಿನ ಸಮಸ್ಯೆಗಳ ಬಗ್ಗೆ ಇಂದಿನ ಸಭೆ ಕರೆಯಲಾಗಿದೆ. ಸಭೆಗೆ ಹೋದ ಮೇಲೆ ಮತಷ್ಟು ವಿಚಾರ ತಿಳಿಯಲಿದೆ. ನೀರಿನ ಸಮಸ್ಯೆ ಬರಿ ರೈತರದಲ್ಲ, ಸಾಮಾನ್ಯ ಜನರ ಸಮಸ್ಯೆ ಕೂಡ ಹಾಗಿದೆ. ಇದರಲ್ಲಿ ರಾಜಕಾರಣ ಮಾಡಬಾರದು. ಮಳೆ ಬಾರದ ಕಾರಣ ದುರಾದೃಷ್ಟ ನೀರಿನ ಸಮಸ್ಯೆ ಇದೆ. ಕಳೆದ ಬಾರಿ ಮಳೆಯಾಗಿ ಬಾಗಿನ ಸಹ ಬಿಟ್ಟಿದ್ದೆವು. ಇದು ನಮ್ಮ ರೈತರ ಕಷ್ಟ ನಾವು ಯಾವ ರೀತಿ ಹೋರಾಟ ಮಾಡ್ತೆವೆ ಅದು ಮುಖ್ಯ ಎಂದು ತಿಳಿಸಿದರು.

Tap to resize

Latest Videos

ರಾಜ್ಯದಲ್ಲಿ ಲೋಕಸಭಾ ಚುನಾವಣೆ ವಿಚಾರದಲ್ಲಿ ಆಪರೆಷನ್ ಹಸ್ತ ವಿಚಾರವಾಗಿ ಯಾರು ನನಗೆ ಆಹ್ವಾನ ಮಾಡಿಲ್ಲ, ನಾನು ಸಂತೋಷವಾಗಿದ್ದೇನೆ. ಕಾಂಗ್ರೆಸ್ ನಿಂದ ಆಫರ್ ವಿಚಾರವೆಲ್ಲವೂ ಊಹಾಪೋಹಗಳು ಆಗಿವೆ. ರಾಜಕೀಯ ಅನ್ನೋದು ನನಗೆ ಅನಿವಾರ್ಯ ಅಲ್ಲ, ಆಕಸ್ಮಿಕವಾಗಿದೆ. ಎಲ್ಲವೂ ಸರಿ ಎನಿಸಿದ್ರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ. ಇದಕ್ಕೆಲ್ಲ ಈಗ ಉತ್ತರ ಕೊಡಲ್ಲ. ಸಂಸದೆ ಸುಮಾಲತಾ ಬೆಂಬಲಿಗರಿಂದ ಚಲುವರಾಯಸ್ವಾಮಿ ಪರ ಬ್ಯಾಟಿಂಗ್ ವಿಚಾರದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದು ಅವರವರಿಗೆ ಬಿಟ್ಟಿದ್ದಾಗಿದೆ ಎಂದು ಮಾಹಿತಿ ನೀಡಿದರು.

ಕೆಪಿಎಸ್‌ಸಿಗೆ ಭ್ರಷ್ಟರನ್ನು ನೇಮಿಸಲು ಮುಂದಾದ ಕಾಂಗ್ರೆಸ್‌ ಸರ್ಕಾರ

ನಮಗೆ ಸಮಸ್ಯೆ ಇದ್ದರೂ ನೀರು ಬಿಡ್ತಿದ್ದಾರೆ: ಕೇಂದ್ರದಲ್ಲಿ ತಮಿಳುನಾಡಿಗೆ ಹೆಚ್ಚು ಒಲವು ಇದೆ. ನಾವು ಹೋರಾಟ ಮಾಡಬೇಕಾದ ಅವಶ್ಯಕತೆಯಿದೆ. ಇದಕ್ಕೆ ಪರಿಹಾರ ಹುಡುಕುವ ಕೆಲಸ ಮಾಡಬೇಕು. ನಮಗೆ ಸಮಸ್ಯೆ ಇದೆ, ನಮ್ಮ ಹೋರಾಟ ನಾವು ಮಾಡಬೇಕು. ನಮಗೆ ಸಮಸ್ಯೆ ಇದ್ದರೂ ನೀರು ಬಿಡ್ತಿದ್ದಾರೆ. ಕಾವೇರಿ ನೀರಿಗಾಗಿ ಸರ್ವಪಕ್ಷಗಳ ಸಭೆ ವಿಚಾರ. ಕೇಂದ್ರ- ರಾಜ್ಯ ಸರ್ಕಾರ ಒಟ್ಟಾಗಿ ಇದರ ಬಗ್ಗೆ ಧ್ವನಿ ಎತ್ತಬೇಕು. ಇನ್ನು ರಾಜ್ಯದ ಬಿಜೆಪಿ ಸಂಸದರು ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತಿಲ್ಲ ಮಧು ಬಂಗಾರಪ್ಪ ಆರೋಪ ಮಾಡಿದ್ದಾರೆ. ಆದರೆ, ನಾನು ಸಂಸತ್ತಿನಲ್ಲಿ ಕಾವೇರಿ ನೀರಿನ ಬಗ್ಗೆ ಮಾತನಾಡಿದ್ದೇನೆ. ನಮ್ಮ ಸಮಸ್ಯೆ ಬಗ್ಗೆ ಹೇಳಿದ್ದೇನೆ. ಕೇಂದ್ರದ ಸಚಿವರನ್ನ ಸಹ ಭೇಟಿ ಮಾಡಿದ್ದೇನೆ. ಇವತ್ತು ಸಮಸ್ಯೆ ಯಾಗಿದೆ ನಾವು ಖಂಡಿತ ಮಾತನಾಡ್ತೇವೆ ಮಾಹಿತಿ ನೀಡಿದರು.

ಇಂದು ರೈತರಿಗೆ, ನಾಳೆ ಕುಡಿಯುವ ನೀರಿಗೂ ಸಮಸ್ಯೆ: ಇನ್ನು ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸುವುದರಿಂದ ಇವತ್ತು ರೈತರ ಬೆಳೆಗೆ ಸಂಕಷ್ಟ ಎದುರಾಗಿದೆ. ನಾಳೆ ಕುಡಿಯುವ ನೀರಿಗೂ ಸಮಸ್ಯೆ ಕಾಡಲಿದೆ. ಇದರಲ್ಲಿ ನಾನು ರಾಜಕೀಯದ ಬಗ್ಗೆ ಮಾತನಾಡಲ್ಲ ಎಲ್ಲರೂ ಸಹ ಹೋರಾಟ ಮಾಡಬೇಕು. ರೈತರ ಜೊತೆ ಎಲ್ಲರು ಸಹ ನಿಲ್ಲಬೇಕು. ಇನ್ನು ರಾಜ್ಯದಲ್ಲಿ ಕಾವೇರಿ ನೀರಿನ ವಿಚಾರವಾಗಿ ಸರ್ವಪಕ್ಷಗಳ ಸಭೆ ಕರೆದಿದ್ದರ ಬಗ್ಗೆ ಗೊತ್ತಾಗಿದ್ದು, ನೆನ್ನೆ ಅಲ್ಲಿ ಚರ್ಚೆಯಾದ ಬಳಿಕ ತಿಳಿಯಲಿದೆ. ರೆಪ್ರೆಸೆಂಟ ಹಾಗಿದ್ಯೋ ಇಲ್ವೋ ಅನ್ನೊ ಪ್ರಶ್ನೆ ಇದೆ. ತಮಿಳುನಾಡಿನ ಪರ ಇದೆ ಅಂದ್ರೆ ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡಬೇಕು. ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದರು.

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು; ಶಾಸಕರ ಘರ್‌ ವಾಪ್ಸಿ ಬಗ್ಗೆ ಸುಳಿವು ಕೊಟ್ರಾ ಡಿಕೆಶಿ?

ಆಪರೇಷನ್‌ ಹಸ್ತದಿಂದ ಆಹ್ವಾನ ಬಂದಿಲ್ಲ: ಇನ್ನು ರಾಜಕೀಯವಾಗಿ ಬಿಜೆಪಿಗೆ ನನ್ನ ಸಪೋರ್ಟ್ ಅಷ್ಟೆ, ನಾನು ಬಿಜೆಪಿ ಮೆಂಬರ್ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗಲ್ಲ, ಅದು ಅವರಿಗೆ ಬಿಟ್ಟದ್ದು. ಎಲ್ಲವನ್ನೂ ನನ್ನ ಕೇಳಿ ಮಾಡಬೇಕು ಎಂಬ ರೂಲ್ಸ್ ಇಲ್ಲ‌. ಪ್ರತಿಯೊಂದು ವಿಷಯದಲ್ಲೂ ನಾನು ಮಧ್ಯ ಪ್ರವೇಶ ಮಾಡಲ್ಲ. ನನಗೆ ಕಮ್ಯುನಿಕೆಟ್ ಮಾಡಿದ್ರೆ ಮಾತ್ರ ಸಪೋರ್ಟ್ ಮಾಡ್ತೇನೆ. ಚಲುವರಾಯಸ್ವಾಮಿ ಮೇಲಿನ ಆರೋಪಗಳ ಬಗ್ಗೆ ನಾನು ಕಮೆಂಟ್ ಮಾಡಲ್ಲ. ಅದು ನನಗೆ ಸಂಬಂಧಿಸಿದ ವಿಷಯವಲ್ಲ.

click me!