ಸಿದ್ದರಾಮಯ್ಯ ಸೋಲಲಿ ಎಂದು ಡಿಕೆಶಿ ಹೋಮ ಮಾಡಿಸಿದ್ದಾರೆ: ಸಿ.ಟಿ. ರವಿ

By Kannadaprabha News  |  First Published May 7, 2023, 2:00 AM IST

ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾಲಿಬಾನ್‌ ಮಾದರಿ ಆಡಳಿತ ನಡೆಸುತ್ತೆ. ಟಿಪ್ಪು ಬೆಂಬಲಿಗರಿಗೆ ಮತ ನೀಡಬೇಡಿ ಎಂದ ಸಿ.ಟಿ. ರವಿ 


ಶನಿವಾರಸಂತೆ(ಮೇ.07):  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೋಲಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಹೋಮ ಮಾಡಿಸಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಗೆ ಬಹುಮತ ಬಾರದಿರಲಿ ಎಂದು ಜೆಡಿಎಸ್‌ ವರಿಷ್ಠ ದೇವೇಗೌಡ ಅವರು ಪೂಜೆ ಮಾಡಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಿಸಿದ್ದಾರೆ. 

ಕೊಡಗಿನ ಶನಿವಾರಸಂತೆಯಲ್ಲಿ ಮಡಿಕೇರಿ ಕ್ಷೇತ್ರದ ಅಭ್ಯರ್ಥಿ ಅಪ್ಪಚ್ಚು ರಂಜನ್‌ ಪರ ಪ್ರಚಾರ ನಡೆಸಿದ ಅವರು, ಬಿಜೆಪಿ ಗೆದ್ದರೆ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡುತ್ತೇವೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ತಾಲಿಬಾನ್‌ ಮಾದರಿ ಆಡಳಿತ ನಡೆಸುತ್ತೆ. ಟಿಪ್ಪು ಬೆಂಬಲಿಗರಿಗೆ ಮತ ನೀಡಬೇಡಿ ಎಂದರು.

Tap to resize

Latest Videos

undefined

ಪ್ರಧಾನಿ ಮೋದಿ ಸೋಲಿನ ಭಯದಿಂದ, ಗಲ್ಲಿ ಗಲ್ಲಿ ಸುತ್ತಾಡ್ತಿದಾರೆ! ಎಚ್. ವಿಶ್ವನಾಥ್ ಟೀಕೆ

ಕೊಡಗಿನಲ್ಲಿ ಜಾತಿ ನಡೆಯಲ್ಲ, ಹಿಂದುತ್ವ ಮಾತ್ರ ನಡೆಯುತ್ತದೆ. ಹೀಗಾಗಿಯೇ, 20-25 ವರ್ಷಗಳಿಂದ ಬಿಜೆಪಿ ಗೆಲ್ಲುತ್ತಾ ಬಂದಿದೆ ಎಂದು ಹೇಳಿದರು.

ಭಜರಂಗಿಗೆ ಸೋಲಿಲ್ಲ, ಸೋಲು ಕಾಂಗ್ರೆಸ್‌ಗೆ ಕಟ್ಟಿಟ್ಟಬುತ್ತಿ. ಸುಮ್ಮನಿದ್ದ ಭಜರಂಗಿ ಬಾಲಕ್ಕೆ ರಾವಣ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಭಸ್ಮವಾಯ್ತು. ಈಗ ಭಜರಂಗಿಗಳನ್ನು ಕಾಂಗ್ರೆಸ್‌ ಕೆಣಕಿದೆ. ಹೀಗಾಗಿ, ಕಾಂಗ್ರೆಸ್‌ ಕೂಡ ಭಸ್ಮವಾಗುತ್ತೆ ಎಂದು ಹೇಳಿದರು.

click me!