ಕರ್ನಾಟಕದಲ್ಲಿ ಒಂದು ರೀತಿಯ ತುಷ್ಟೀಕರಣ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಾವೆಲ್ಲ ಒಗ್ಗೂಡಬೇಕಾಗಿದೆ. ಕಾಂಗ್ರೆಸ್ ಒಂದು ಸಮಾಜದ ಪಾದ ನೆಕ್ಕಲು ಮುಂದಾಗಿದೆ ಎಂದ ದೇವೇಂದ್ರ ಫಡ್ನವೀಸ್
ಹುಬ್ಬಳ್ಳಿ(ಮೇ.07): ‘ಕಾಂಗ್ರೆಸ್ ಒಂದು ಸಮಾಜದ ಪಾದ ನೆಕ್ಕಲು ಮುಂದಾಗಿದೆ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಲ್ಲಿನ ಎಸ್‌ಎಸ್‌ಕೆ ಸಮಾಜದ ಸಭೆಯಲ್ಲಿ ಶನಿವಾರ ಬಿಜೆಪಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕರ್ನಾಟಕದಲ್ಲಿ ಒಂದು ರೀತಿಯ ತುಷ್ಟೀಕರಣ ನಡೆಯುತ್ತಿದೆ. ಇಂತಹ ಸಮಯದಲ್ಲಿ ನಾವೆಲ್ಲ ಒಗ್ಗೂಡಬೇಕಾಗಿದೆ. ಕಾಂಗ್ರೆಸ್ ಒಂದು ಸಮಾಜದ ಪಾದ ನೆಕ್ಕಲು ಮುಂದಾಗಿದೆ ಎಂದರು. ಆದರೆ, ಸಮಾಜದ ಹೆಸರನ್ನು ಉಲ್ಲೇಖಿಸಲಿಲ್ಲ. ಛತ್ರಪತಿ ಶಿವಾಜಿ ಮಹಾರಾಜರು ಹೇಳಿದ ಹಾಗೆ ನಾವು ದೇಶ, ಧರ್ಮಕ್ಕಾಗಿ ಇರುವವರು. ನೀವು, ನಮ್ಮೊಂದಿಗೆ ಬಿಜೆಪಿಯೊಂದಿಗೆ ಇದ್ದೀರಿ. ಕೆಲ ಜನರಿಗೆ ಬಿಜೆಪಿ ಬಿಟ್ಟು ಹೋಗುವಾಗ ಈ ಸಮಾಜವನ್ನು ಸಹ ತಮ್ಮ ಜೊತೆ ಕರೆದೊಯ್ಯಬಹುದು ಎಂದು ಅನಿಸಿತ್ತು. ಆದರೆ, ಈ ಸಮಾಜದ ಯಾವುದೇ ವ್ಯಕ್ತಿ ಅವರ ಜೊತೆಗೆ ಹೋಗಿಲ್ಲ. ಅವರೊಂದಿಗೆ ಇಲ್ಲ ಎಂದು ಶೆಟ್ಟರ್ ಹೆಸರು ಪ್ರಸ್ತಾಪಿಸದೇ ಟಾಂಗ್ ನೀಡಿದರು.
undefined
ಮಹಾರಾಷ್ಟ್ರ ಡಿಸಿಎಂ ಫಡ್ನವೀಸ್‌ಗೆ ಕರ್ನಾಟಕದ ನೀರಾವರಿ ಅಭಿವೃದ್ಧಿ ಅರಿವಿಲ್ಲ: ಎಂ.ಬಿ.ಪಾಟೀಲ
ಧರ್ಮದ ಮೇಲೆ ಆಘಾತ ಮಾಡಲು ಯಾರಾದರೂ ಯತ್ನಿಸಿದರೆ ಕ್ಷತ್ರೀಯ ಸಮಾಜ ಎಲ್ಲರಿಗಿಂತ ಮೊದಲು ನುಗ್ಗುತ್ತದೆ. ಧರ್ಮ ನಾಶವಾಗಿ, ಅಧರ್ಮ ತಲೆ ಎತ್ತಿದಾಗಲೆಲ್ಲಾ ನಾನು ಜನ್ಮ ತಾಳುವೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಹಾಗಂತ ಪ್ರತಿ ಬಾರಿ ಶ್ರೀಕೃಷ್ಣ ಜನ್ಮ ತಾಳುವ ಅವಶ್ಯಕತೆ ಇಲ್ಲ. ನಾವೆಲ್ಲರೂ ನಮ್ಮೆಲ್ಲರೊಳಗಿನ ಶ್ರೀಕೃಷ್ಣನ ಜಾಗೃತ ಮಾಡಿ ಧರ್ಮ ಹಾನಿ ತಡೆಯಬೇಕು ಎಂದರು.