ಕಾಂಗ್ರೆಸ್‌ ಗೆಲ್ಲಲ್ಲ, ಗೆದ್ದರೂ ಸಿದ್ದು ಸಿಎಂ ಆಗಲ್ಲ: ಪ್ರಹ್ಲಾದ ಜೋಶಿ

By Kannadaprabha News  |  First Published May 7, 2023, 1:30 AM IST

ಸ್ವಾತಂತ್ರ್ಯ ನಂತರದ 60 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾಂಗ್ರೆಸ್‌ ಪಕ್ಷ ಯಾವುದೇ ರೀತಿಯಲ್ಲಿ ಶ್ರಮಿಸಲಿಲ್ಲ. ಎಲ್ಲರನ್ನೂ ಬರೀ ಮತ ಪಡೆಯುವ ಸಲುವಾಗಿ ಬಳಸಿಕೊಂಡಿತು ಎಂದು ಕಿಡಿಕಾರಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ 


ಧಾರವಾಡ(ಮೇ.07):  ಕಾಂಗ್ರೆಸ್‌ ಈ ಬಾರಿ ಅಧಿಕಾರಕ್ಕೆ ಬರುವುದಿಲ್ಲ. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅ​ಧಿಕಾರಕ್ಕೆ ಬಂದರೂ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. 

ನಗರದಲ್ಲಿ ಶನಿವಾರ ನಡೆದ ಹು-ಧಾ ಪಶ್ಚಿಮ ಕ್ಷೇತ್ರದ ಹಿಂದುಳಿದ ವರ್ಗಗಳ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್‌ ಪಕ್ಷ ಹಾಲುಮತದ ಸಿದ್ದರಾಮಯ್ಯ ಅವರನ್ನು ತಮ್ಮ ಮತಗಳಿಕೆಗೆ ಮಾತ್ರ ಬಳಸಿಕೊಳ್ಳುತ್ತಿದೆ. ಹಿಂದುಳಿಗ ವರ್ಗಗಳ ಬಗ್ಗೆ ಕಾಂಗ್ರೆಸ್‌ಗೆ ಯಾವುದೇ ಕಾಳಜಿಯಿಲ್ಲ ಎಂದರು.

Tap to resize

Latest Videos

ಜಗದೀಶ್‌ ಶೆಟ್ಟರ್‌ ಪರಿಸ್ಥಿತಿ ನೋಡಿದರೆ ಅಯ್ಯೋ ಅನಿಸುತ್ತೆ: ಈಶ್ವರಪ್ಪ

ಸ್ವಾತಂತ್ರ್ಯ ನಂತರದ 60 ವರ್ಷಗಳ ಆಡಳಿತದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಕಾಂಗ್ರೆಸ್‌ ಪಕ್ಷ ಯಾವುದೇ ರೀತಿಯಲ್ಲಿ ಶ್ರಮಿಸಲಿಲ್ಲ. ಎಲ್ಲರನ್ನೂ ಬರೀ ಮತ ಪಡೆಯುವ ಸಲುವಾಗಿ ಬಳಸಿಕೊಂಡಿತು ಎಂದು ಕಿಡಿಕಾರಿದರು. ಆದರೆ, ಮೋದಿ ನೇತೃತ್ವದ ಸರ್ಕಾರ ಅ​ಧಿಕಾರಕ್ಕೆ ಬಂದ ನಂತರ ಓಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕಲ್ಪಿಸಿತು. ಇದು ಹಿಂದುಳಿದ ವರ್ಗಗಳ ಮೇಲೆ ಬಿಜೆಪಿಗಿರುವ ಕಾಳಜಿಗೆ ನಿದರ್ಶನವಾಗಿದೆ. ಓಬಿಸಿ ವರ್ಗಕ್ಕೆ ಮೀಸಲಾತಿ ಹೆಚ್ಚಳ, ವೈದ್ಯಕೀಯ ಅಧ್ಯಯನದಲ್ಲಿಯೂ ಮೀಸಲಾತಿ ನಿಗದಿ, ವಿದ್ಯಾರ್ಥಿ ನಿಲಯಗಳಿಗೆ ಕೋಟ್ಯಾಂತರ ರೂ.ಅನುದಾನ ನೀಡಲಾಗಿದೆ. ಶಿಷ್ಯವೇತನ ಹೆಚ್ಚಳ ಮಾಡಲಾಗಿದೆ. ಮುದ್ರಾ ಯೋಜನೆಯಲ್ಲಿಯೂ ಈ ವರ್ಗಗಳಿಗೆ ಹೆಚ್ಚು ಅನುಕೂಲ ಆಗಿದೆ ಎಂದರು.

click me!