ಮಹಾಭಾರತದ ಕುರುಕ್ಷೇತ್ರಕ್ಕೆ ಮುನ್ನ ಶ್ರೀಕೃಷ್ಣ ಅರ್ಜುನನಿಗೆ ತೋರಿಸಿದ ವಿರಾಟ ಸ್ವರೂಪದ ದರ್ಶನ ಇದಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ದಾವಣಗೆರೆ (ಮಾ.26) : ಮಹಾಭಾರತದ ಕುರುಕ್ಷೇತ್ರಕ್ಕೆ ಮುನ್ನ ಶ್ರೀಕೃಷ್ಣ ಅರ್ಜುನನಿಗೆ ತೋರಿಸಿದ ವಿರಾಟ ಸ್ವರೂಪದ ದರ್ಶನ ಇದಾಗಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು.
ನಗರದ ಜಿಎಂಐಟಿ ಕಾಲೇಜು ಸಮೀಪ ಮಹಾಸಂಗಮ(BJP Mahasangama convention davanagere) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಕುರುಕ್ಷೇತ್ರ ಯುದ್ಧದಲ್ಲಿ ಬಿಲ್ಲು ಬಾಣ ಇತ್ತು. ಆದರೆ ಇದು ಪ್ರಜಾಪ್ರಭುತ್ವದ ಕುರುಕ್ಷೇತ್ರದ ಯುದ್ಧದಲ್ಲಿ ವಾಗ್ಬಾಣದ ಮೂಲಕ ನಮ್ಮ ಪಕ್ಷದ ನೀತಿ, ನಿಯತ್ತು, ನೇತೃತ್ವದಲ್ಲಿ ಹಾಗೂ ವಿಪಕ್ಷದ ನಿಯತ್ತಿನ ವಿರುದ್ಧವಾಗಿದೆ ಎಂದು ಕಿಡಿಕಾರಿದರು.ನಮ್ಮ ಅಶ್ವಮೇಧ ಕುದುರೆ ಯಾತ್ರೆ ರಾಜ್ಯದ ಉದ್ದಗಲಕ್ಕೂ ಸಂಚರಿಸಿದೆ ಎಂದರು. ಸಿದ್ದರಾಮಯ್ಯ ಚಾಮುಂಡೇಶ್ವರಿ ಗೆಲ್ಲಲ್ಲ, ಬಾದಾಮಿಯಲ್ಲಿ ಮತ್ತೆ ಗೆಲುವಿಲ್ಲ, ಕೋಲಾರದಿಂದ ಸೋಲು ಖಚಿತ, ನಾಯಕರೇ ಗೆಲ್ಲಲ್ಲ. ಇನ್ನು ಹಿಂಬಾಲಕರು ಗೆಲ್ಲಲು ಸಾಧ್ಯವೇ ಎಂದು ಪ್ರಶ್ನಿಸಿದರು.
DAVANAGERE: ಬಿಜೆಪಿ ಮಹಾ ಸಂಗಮಕ್ಕೆ ಸಾಕ್ಷಿಯಾದ 7-8 ಲಕ್ಷ ಜನ!
ಕಾಂಗ್ರೆಸ್(Congress) ಅಧಿಕಾರದಲ್ಲಿದ್ದಾಗ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಬೆಣ್ಣೆ ಎನ್ನುವ ರೀತಿ ಕೆಲಸ ಮಾಡಿತು. ಸಬ್ ಕಾ ಸಾಥ್ ಸಬ್ ಕಾ ವಿಕಾಸ(Sab Ka Sath Sab Ka Vikasa) ಆಗಿರಲಿಲ್ಲ. ಸಮಾಜವನ್ನು ಜಾತಿಯ ಆಧಾರದಿಂದ ಒಡೆಯುವುದಾಗಿತ್ತು. ಮಕ್ಕಳ ಮನಸ್ಸಿನಲ್ಕೂ ಜಾತಿ ವಿಷ ಬೀಜ ಬಿತ್ತಿದವರು ಕಾಂಗ್ರೆಸ್‌ನವರು. ಶಾದಿ ಭಾಗ್ಯ ಮೂಲಕ ಕೇವಲ ಒಂದು ಕೋಮಿನ ಕೆಲವರಿಗೆ ಮಾತ್ರ ಸೀಮಿತ ಮಾಡಿತು ಎಂದರು.
ಬ್ರಿಟಿಷ್ ಭಾರತ ಒಡೆದು ಆಳುವ ನೀತಿಯನ್ನು ಕಾಂಗ್ರೆಸ್ ಬಳವಳಿಯಾಗಿ ಪಡೆದು ಸಮಾಜ ಒಡೆದಾಳುತ್ತಿದೆ. ಈಗ ಅದು ದೇಶ, ರಾಜ್ಯದಲ್ಲಿ ನಡೆಯುವುದಿಲ್ಲ. ಬಿಜೆಪಿಯವರದು ದೇಶ ಮೊದಲು ಎನ್ನುವ ತತ್ವ, ಆದರೆ ಕಾಂಗ್ರೆಸ್‌ದು ಅಧಿಕಾರ ಹಿಡಿಯಬೇಕು. ಅದಕ್ಕಿಂತ ದೊಡ್ಡದು ಯಾವುದು ಇಲ್ಲ ಎನ್ನುವ ನೀತಿ ಅವರದು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ನಮ್ಮ ನೀತಿ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಜಾತಿ ಆಧಾರದಲ್ಲಿ ಸಮಾಜ ಒಡೆದಿಲ್ಲ. ಜನಧನ್ ಖಾತೆ ಎಲ್ಲರಿಗೂ ಸಿಕ್ಕಿದೆ. ಮನೆ ಇಲ್ಲದವರಿಗೆ ಮನೆ ಸಿಕ್ಕಿದೆ. ಫಸಲ್ ಭಿಮಾ ಯೋಜನೆ, ಮುದ್ರಾ ಯೋಜನೆ ಮೂಲಕ ಎಲ್ಲರಿಗೂ ಅನುಕೂಲ ಮಾಡಲಾಗಿದೆ. ಜಾತ್ಯಾತೀತ ಮನೋಭಾವ ನಮ್ಮದು. ಜಾತಿ ಹುಡುಕುವ ಕೆಲಸ ಕಾಂಗ್ರೆಸ್‌ನವರದು. ನಮ್ಮ ಡಬಲ್ ಎಂಜಿನ್ ಸರ್ಕಾರ ರೈತರಿಗೆ ನೆರವು ನೀಡುತ್ತಿದೆ. ಸಾಮಾಜಿಕ ನ್ಯಾಯದ ಬದ್ದತೆ ನಮ್ಮ ನೀತಿ. ಮೀಸಲಾತಿ ಹೆಚ್ಚಳ ಬದ್ದತೆಯಿಂದ ಮಾಡಿದ್ದೇವೆ. ಯಾವುದೇ ವರ್ಗಕ್ಕೆ ಅನ್ಯಾಯವಾಗದಂತೆ ಎಲ್ಲಾ ವರ್ಗಕ್ಕೆ ಸಾಮಾಜಿಕ ನ್ಯಾಯ ಸಂಪುಟದಲ್ಲಿ ನೀಡಿದ್ದೇವೆ ಎಂದು ಹೇಳಿದರು.
ಖರ್ಗೆ ತವರಿಂದಲೇ ವಿಜಯ ದುಂದುಭಿ: ಪ್ರಧಾನಿ ಮೋದಿ
ಕಾಂಗ್ರೆಸ್ ಪಕ್ಷವು ಭಾರತ ಇಸ್ಲಾಮಿಕ್ ಮಾಡಲು ಹೊರಟಿರುವವರ ಜೊತೆ ಸಂಚು ರೂಪಿಸಿದ್ದರು. ಸುಳ್ಳು ಕಾರ್ಡ್ ಹಂಚುತ್ತಿದ್ದಾರೆ.ಅಧಿಕಾರದಲ್ಲಿ ಇದ್ದಾಗ ಯೋಜನೆಗಳ ಸಮರ್ಪಕ ಜಾರಿ ಮಾಡಲಿಲ್ಲ. ಮೂಗಿಗೆ ಬದಲು ಮೊಣಕೈಗೆ ತುಪ್ಪ ಹಚ್ಚಿ ಮೋಸ ಮಾಡುವ ಜನ. ಸುಳ್ಳು ಮತ್ತು ಮೋಸ ಕಾಂಗ್ರೆಸ್‌ನ ನೀತಿಯ ಭಾಗ. ಇದನ್ನೇ ರಾಜಕೀಯ ತಂತ್ರವಾಗಿಸಿಕೊಂಡಿದ್ದಾರೆ. ಲೂಟಿಯ ಹೊಸ ಮಾದರಿ ತೋರಿಸಿದವರು, ಮೋಸ ಮಾಡುವ ಹೊಸ ದಾರಿ ಹುಡುಕಿದವರು ಇದೀಗ ಹೊಸ ಮೋಸದ ಭಾಗ್ಯ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ನೀಡುವುದು.
ಸಿ.ಟಿ.ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ