ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಹಾ ಸಂಗಮವಾದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸೇರಿದ್ದ ಸುಮಾರು 7-8 ಲಕ್ಷ ಜನ ಸಾಗರವನ್ನು ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಪುಳಕಿತರಾದರು. ಇದು ಮಹಾ ಸಂಗಮ ಸಮಾವೇಶ ಅಲ್ಲ ಇದು, ಬಿಜೆಪಿ ದಿಗ್ವಿಜಯದ ಯಾತ್ರೆ. ಇಲ್ಲಿಂದಲೇ ಶುರುವಾಗಿಯೆನ್ನುವ ಮೂಲಕ ಕಾರ್ಯಕರ್ತರ ಸಂಚಲನಕ್ಕೆ ಕಾರಣರಾದರು.
ದಾವಣಗೆರೆ (ಮಾ.26) : ರಾಜ್ಯದ 224 ಕ್ಷೇತ್ರಗಳಲ್ಲಿ ಸಂಚರಿಸಿ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ ಮಹಾ ಸಂಗಮವಾದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಸೇರಿದ್ದ ಸುಮಾರು 7-8 ಲಕ್ಷ ಜನ ಸಾಗರವನ್ನು ಕಂಡು ಸ್ವತಃ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪುಳಕಿತರಾಗುವ ಜೊತೆಗೆ ಮಹಾ ಸಂಗಮ ಸಮಾವೇಶ ಅಲ್ಲ ಇದು, ಬಿಜೆಪಿ ದಿಗ್ವಿಜಯದ ಯಾತ್ರೆ. ಇಲ್ಲಿಂದಲೇ ಶುರುವಾಗಿಯೆನ್ನುವ ಮೂಲಕ ಕಾರ್ಯಕರ್ತರ ಸಂಚಲನಕ್ಕೆ ಕಾರಣರಾದರು.
ನಗರದ ಜಿಎಂಐಟಿ ಕಾಲೇಜು(GMIT Collage ground) ಪಕ್ಕ ಸುಮಾರು 400 ಎಕರೆ ಪ್ರದೇಶದಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ(Vijayasankalpa yatre davanagere)ಗೆ ಬೆಂಗಳೂರಿನ ಕಾರ್ಯಕ್ರಮಗಳನ್ನು ಮುಗಿಸಿ, ಮೂರು ಹೆಲಿಕಾಪ್ಟರ್‌ಗಳಲ್ಲಿ ಧೂಳೆಬ್ಬಿಸಿಕೊಂಡು ಬಂದ ಪ್ರಧಾನಿ ನರೇಂದ್ರ ಮೋದಿ(Narendra Modi)ಆಗಮನದ ಸುದ್ದಿ ಕೇಳುತ್ತಿದ್ದಂತೆ ಕಿಮೀಗಟ್ಟಲೇ ದೂರದಲ್ಲಿದ್ದ ಜನರು ಓಡಿಕೊಂಡು ಸಮಾವೇಶ ಸ್ಥಳದತ್ತ ದೌಡಾಯಿಸಿದರು.
ಖರ್ಗೆ ತವರಿಂದಲೇ ವಿಜಯ ದುಂದುಭಿ: ಪ್ರಧಾನಿ ಮೋದಿ
ದೂರದ ಜಿಲ್ಲೆಗಳಿಂದ ಶುಕ್ರವಾರ ರಾತ್ರಿಯೇ ಬಂದಿದ್ದ ಸಾವಿರಾರು ಮುಖಂಡರು, ಕಾರ್ಯಕರ್ತರು ವಿವಿಧ ಲಾಡ್ಜ್‌ಗಳು, ಕಲ್ಯಾಣ ಮಂಟಪಗಳು, ಬಂಧು-ಬಳಗ, ಸ್ನೇಹಿತರ ಮನೆಗಳಲ್ಲಿ ವಾಸ್ತವ್ಯ ಮಾಡಿದ್ದರು. ಮಧ್ಯಾಹ್ನ 3 ಗಂಟೆ ನಂತರ ಪ್ರಧಾನಿ ಮೋದಿ ವೇದಿಕೆ ಬರುತ್ತಾರೆಂಬ ಮಾಹಿತಿ ಕಾರಣಕ್ಕೆ ಶನಿವಾರ ನಸುಕಿನ ವೇಳೆ, ಬೆಳಿಗ್ಗೆ, ಮಧ್ಯಾಹ್ನದ ಹೊತ್ತಿಗೆ ದಾವಣಗೆರೆ ತಲುಪಿದವರ ಸಂಖ್ಯೆಯೇನೂ ಕಡಿಮೆ ಇರಲಿಲ್ಲ. ಮೂರು ಭಾಗವಾಗಿ ಅಳವಡಿಸಿದ್ದ ಪೆಂಡಾಲ್‌ನ್ನು ಮೀರಿ, ಹಳೆ ಪಿಬಿ ರಸ್ತೆ ಕಡೆಯಿಂದ ಹಾಗೂ ಶಿವಪುರ-ಆವರಗೊಳ್ಳ ಮಾರ್ಗದ ಕಡೆಯಿಂದಲೂ ಅಪಾರ ಸಂಖ್ಯೆಯಲ್ಲಿ ರೈಲ್ವೇ ಹಳಿ ದಾಟಿಕೊಂಡು ಜನರು ಬಂದಿದ್ದರು.
ಭಾರತೀಯ ವಾಯುಪಡೆಯ ಮೂರು ಹೆಲಿಕಾಪ್ಟರ್‌ಗಳು ಆಗಮಿಸುತ್ತಿದ್ದಂತೆ ಎದ್ದ ಧೂಳಿನ ಮಧ್ಯೆ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು. ಮೋದಿ ಮೋದಿ ಮೋದಿ ಎಂಬ ಘೋಷಣೆಗಳು ಮೊಳಗ ತೊಡಗಿದವು. ಜಿಎಂಐಟಿ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಳಿದು, ಅಲ್ಲಿಂದ ತೆರೆದ ಜೀಪಿನಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಜೊತೆಗೆ ಪೆಂಡಾಲ್‌ನೊಳಗೆ ಇದೇ ಮೊದಲ ಬಾರಿಗೆ ರೋಡ್ ಶೋ ಮೂಲಕ ಆಗಮಿಸಿದರು.
ಮೋದಿ ಕಂಡು ಪುಳಕಿತರಾದ ಜನರು:
ತೆರೆದ ಜೀಪಿನಲ್ಲಿ ಕೈ ಮುಗಿಯುತ್ತಾ, ಕೈ ಬೀಸುತ್ತಾ ನಸು ನಗುತ್ತಾ ಬಂದ ಪ್ರಧಾನಿ ಮೋದಿ ಕಂಡು ಪುಳಕಿತರಾದ ಜನರು ಮೋದಿ ಮೋದಿ ಮೋದಿ ಎಂಬ ಹರ್ಷೋದ್ಗಾರದಲ್ಲಿ ಮೈಮರೆತರು. ಚಂಡಿ ಹೂವು ಸೇರಿದಂತೆ ವಿವಿಧ ಹೂವುಗಳಿಂದ ಅಲಂಕೃತವಾಗಿದ್ದ ಜೀಪಿನಲ್ಲಿ ಜನರತ್ತ ಕೈಬೀಸಿ ಬರುತ್ತಿದ್ದ ನರೇಂದ್ರ ಮೋದಿಗೆ ಪುಷ್ಪವೃಷ್ಟಿಯ ಸ್ವಾಗತ ದೊರಕಿತು. ಸುಮಾರು 20 ಅಡಿ ಅಗಲದ ಜಾಗದಲ್ಲಿ ಮೋದಿ ವಾಹನದ ಸುತ್ತ ಭದ್ರತಾ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು. ಎಡಿಜಿಪಿ ಅಲೋಕಕುಮಾರ ಸೇರಿದಂತೆ ಹಿರಿಯ ಅಧಿಕಾರಿಗಳು ಬಂದೋಬಸ್‌್ತ ಉಸ್ತುವಾರಿ ವಹಿಸಿದ್ದರು. ಸುಮಾರು ಅರ್ಧ ಕಿಮೀ ರೋಡ್ ಶೋ ನಂತರ ಪ್ರಧಾನಿ ಮೋದಿ ವೇದಿಕೆಯನ್ನೇರಿದರು.
ವೇದಿಕೆಯಿಂದ ಸೇರಿದ್ದ ಜನರನ್ನು ಕಂಡು ಪುಳಕಿತರಾದ ನರೇಂದ್ರ ಮೋದಿ ಸಹ ಸುಮಾರು ಹೊತ್ತು ಜನರಿಗೆ ಕೈ ಮುಗಿಯುತ್ತಾ, ನಮಿಸುತ್ತಾ ನಿಂತರು. ನಂತರ ತಮ್ಮ ಭಾಷಣದಲ್ಲೂ ಇಷ್ಟೊಂದು ಜನರನ್ನು ಕಂಡ ಮೋದಿ ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತರುವಂತೆ ಜನತೆಗೆ ಮನವಿ ಮಾಡಿದರು. ಇಂದು ಇಡೀ ಜಗತ್ತು ಭಾರತದತ್ತ ನೋಡುತ್ತಿದ್ದರೆ ಅದಕ್ಕೆ ನರೇಂದ್ರ ಮೋದಿ ಕಾರಣ ಅಲ್ಲ. ಅದು ನೀವು ಹಾಕಿದ್ದ ಒಂದು ಮತ ಕಾರಣ. ನಿಮ್ಮ ಒಂದು ಮತದಿಂದ ಇಡೀ ವಿಶ್ವವೇ ಇಂದು ನಮ್ಮ ದೇಶದತ್ತ ಕುತೂಹಲ, ಅಭಿಮಾನದಿಂದ ನೋಡುತ್ತಿದೆಯೆನ್ನುವ ಮೂಲಕ ತಮ್ಮ ಜನಪ್ರಿಯತೆಯ ಶ್ರೇಯವನ್ನು ಮತದಾರರು ಹಾಗೂ ಮತದಾರರ ಒಂದ ಮತಕ್ಕೆ ಸಮರ್ಪಿಸಿದರು.
ಭಾರೀ ಭದ್ರತೆ ಮಧ್ಯೆ ಒಳಗೆ ಪ್ರವೇಶಾವಕಾಶ
ವಿಶಾಲ ಪೆಂಡಾಲ್‌ನಲ್ಲಿ ಪ್ರವೇಶ ದ್ವಾರದ ಬಳಿ ಪೊಲೀಸ್ ಅಧಿಕಾರಿ, ಸಿಬ್ಬಂದಿ, ಬಿಜೆಪಿ ಸ್ವಯಂ ಸೇವಕರು, ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನೇಮಿಸಲಾಗಿತ್ತು. ಮೆಟಲ್ ಡಿಟೆಕ್ಟರ್ ಮೂಲಕ ಎಲ್ಲರನ್ನೂ ತಪಾಸಣೆ ಮಾಡಲಾಯಿತು. ಮಹಿಳೆಯರ ವ್ಯಾನಿಟಿ ಬ್ಯಾಗ್‌ಗಳನ್ನು ತಪಾಸಣೆ ಮಾಡಿ, ಒಳಗೆ ಬಿಡಲಾಗುತ್ತಿತ್ತು. ಮಾಧ್ಯಮದವರು ಅಲ್ಲದವರಿಗೂ ಬಿಜೆಪಿಯಿಂದ ಮಾಧ್ಯಮ ಪ್ರತಿನಿಧಿಗಳ ಪಾಸ್ ನೀಡಲಾಗಿತ್ತು. ಮತ್ತೆ ಕೆಲವರು ಪೊಲೀಸ್ ಇಲಾಖೆ ನೀಡಿದ್ದ ಗುರುತಿನ ಪತ್ರ ಹಿಡಿದು ಮಾಧ್ಯಮದವರ ಗ್ಯಾಲರಿಯಲ್ಲಿ ಪ್ರತ್ಯಕ್ಷರಾದರು. ಪ್ರಧಾನಿ ಮೋದಿ ವೇದಿಕೆ ಏರುವವರೆಗೂ ಎಲ್ಲಾ ಬಿಗಿಯಾಗಿ ನೋಡಿಕೊಂಡರೂ, ಮೋದಿ ಆಗಮನದೊಂದಿಗೆ ಸಿಕ್ಕ ಸಿಕ್ಕಲ್ಲಿ ಜನರು ನುಗ್ಗಿ, ಖಾಲಿ ಇದ್ದ ಜಾಗಗಳನ್ನು ಅಲಂಕರಿಸಿದರು. ಮುಖ್ಯ ವೇದಿಕೆಯಲ್ಲಿ ಮೋದಿ, ಯಡಿಯೂರಪ್ಪ, ಬೊಮ್ಮಾಯಿ ಇತರರು ಇದ್ದರು. ಉಳಿದ ಎರಡು ವೇದಿಕೆಗಳಲ್ಲಿ ಹಾಲಿ-ಮಾಜಿ ಸಚಿವರು, ಶಾಸಕರು, ಸಂಸದರು, ಎಂಎಲ್‌ಸಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು. ಪೆಂಡಾಲ್ ಒಳಗೆ ಪ್ರವೇಶಿಸುತ್ತಿದ್ದವರ ಬಳಿ ಇದ್ದ ಹರಿತ ವಸ್ತುಗಳು, ಬಾಚಣಿಗೆ, ಬೆಂಕಿ ಪೊಟ್ಟಣ, ಲೈಟರ್‌ಗಳು, ಸಿಗರೇಟು ಇತ್ಯಾದಿ ವಸ್ತುಗಳನ್ನು ಪೊಲೀಸರು ಅಲ್ಲಿಯೇ ಹೊರಗೆ ಹಾಕಿಸಿ, ಒಳಗೆ ಕಳಿದರು. ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿ, ಸಿಬ್ಬಂದಿ ಜೊತೆಗೆ ವಾಗ್ವಾದ ಮಾಡಿದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆನ್ನಲಾಗಿದೆ.
ಕಾಂಗ್ರೆಸ್‌ಗಿಂತ 5 ಪಟ್ಟು ಅಧಿಕ ಅನುದಾನ ಕೊಟ್ಟ ಪ್ರಧಾನಿ ಮೋದಿ: ರಾಜ್ಯಕ್ಕೆ 7,351 ಕೋಟಿ ರೂ. ಕೊಡುಗೆ
ಹಣ್ಣು, ಮಜ್ಜಿಗೆ, ನೀರಿನ ಪಾಕೆಟ್‌ಗಳ ವಿತರಣೆ
ಮಹಾ ಸಂಗಮ ಸಮಾವೇಶ(BJP mahasangama samavesha)ದ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ವಿವಿಧೆಡೆ ಜನರಿಗೆ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು, ತಂಪು ಪಾನೀಯಗಳು, ಮಜ್ಜಿಗೆ, ನೀರಿನ ಪಾಕೆಟ್‌ಗಳನ್ನು ನೀಡಲಾಯಿತು. ಸಮಾರಂಭದ ಪೆಂಡಾಲ್ ಒಳಗೆ ನೀರಿನ ಬಾಟಲುಗಳನ್ನು, ಪ್ಲೇಟ್, ಪ್ಲಾಸ್ಟಿಕ್ ಸ್ಪೂನ್‌ನಂತಹ ವಸ್ತುಗಳನ್ನು ಬಳಸದಂತೆ ಭದ್ರತಾ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಪಾಕೆಟ್‌ಗಳಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಕುಡಿಯುವ ನೀರಿನ ಕ್ಯಾನ್ ಇರುವಲ್ಲಿ 4-5 ಪ್ಲಾಸ್ಟಿಕ್ ಲೋಟಗಳನ್ನು ಇಡಲಾಗಿತ್ತು. ಸಮಾರಂಭಕ್ಕೆ ಬಂದವರಿಗೆ ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಅನುವಾಗುವಂತೆ 40 ಬೃಹತ್ ಎಲ್‌ಇಡಿ ಟಿವಿಗಳ ಪರದೆ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಧ್ವನಿವರ್ಧಕದ ಸಮಸ್ಯೆ ಒಂದಿಷ್ಟುಕಾಡಿತ್ತು.