
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಯವರ ಸಚಿವ ಸಂಪುಟಕ್ಕೆ ಹೊಸ ಸದಸ್ಯನ ಸೇರ್ಪಡೆಯಾಗಿದೆ. ಭಾರತ ತಂಡದ ಮಾಜಿ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದ್ದು, 16ನೇ ಸದಸ್ಯನಾಗಿ ರೇವಂತ್ ರೆಡ್ಡಿಯವರ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.. ವಿಚಿತ್ರ ಎಂದರೆ ಅವರಿನ್ನೂ ಚುನಾವಣೆಗೆ ಸ್ಪರ್ಧಿಸಿಲ್ಲ, ಶಾಸಕನೂ ಆಗಿಲ್ಲ, ಆದರೂ ಈಗ ತೆಲಂಗಾಣದ ಕಾಂಗ್ರೆಸ್ ಸರ್ಕಾರ ಅವರನ್ನು ಸಚಿವನನ್ನಾಗಿ ಆಯ್ಕೆ ಮಾಡಿದ್ದಾರೆ. ತೆಲಂಗಾಣ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷ ಆಗಿರುವ ಕ್ರಿಕೆಟರ್ ಮೊಹಮ್ಮದ್ ಅಜರುದ್ದೀನ್ ಅವರು ತೆಲಂಗಾಣದ ಸಚಿವರಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ್ದು, ಹೀಗಾಗಿ ರೇವಂತ್ ರೆಡ್ಡಿ ಸಂಪುಟದಲ್ಲಿ ಸಚಿವರ ಸಂಖ್ಯೆ 16ಕ್ಕೆ ಏರಿದೆ.
ಮಧ್ಯಾಹ್ನ 12.30 ರ ಸುಮಾರಿಗೆ ತೆಲಂಗಾಣದ ರಾಜಭವನದಲ್ಲಿ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಅವರು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರಿಗೆ ಪ್ರಮಾಣವಚನ ಬೋಧನೆ ಮಾಡಿದರು. ಈ ವೇಳೆ ಅಲ್ಲಿ ಬಹುತೇಕ ಎಲ್ಲಾ ಸಚಿವರು, ಅಜರುದ್ದೀನ್ ಅವರ ಪುತ್ರ ಮತ್ತು ಪುತ್ರಿ, ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು. ಅಜರುದ್ದೀನ್ ಅವರು ಇಂಗ್ಲೀಷ್ ಭಾಷೆಯಲ್ಲಿ ಅಲ್ಲಾಹ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿ ಕೊನೆಗೆ ಜೈ ಹಿಂದ್ ಜೈ ತೆಲಂಗಾಣ ಎಂದು ಹೇಳಿದರು. ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ಅಜರುದ್ದೀನ್ ಅವರಿಗೆ ಇಂದು ಅಥವಾ ನಾಳೆ ಖಾತೆ ಘೋಷಣೆ ಮಾಡಲಿದ್ದಾರೆ.
ನವೆಂಬರ್ 11ರಂದು ಜ್ಯುಬಿಲಿಹಿಲ್ಸ್ ಕ್ಷೇತ್ರಕ್ಕೆ ಚುನಾವಣೆ
ಆದರೆ ಕ್ರಿಕೆಟರ್ ಅಜರುದ್ದೀನ್ ಅವರು ಜನರಿಂದ ಇನ್ನೂ ಶಾಸಕರಾಗಿ ಆಯ್ಕೆಯಾಗಿಲ್ಲ, ಅವರು ವಿಧಾನ ಪರಿಸತ್ ಸದಸ್ಯರು ಅಲ್ಲ, ಆದರೆ ನವಂಬರ್ 11ರಂದು ಇಲ್ಲಿನ ಜ್ಯುಬಿಲಿ ಹಿಲ್ ಕ್ಷೇತ್ರಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ಇದು ಮುಸ್ಲಿಂ ಬಹುಳ್ಯದ ಕ್ಷೇತ್ರವಾಗಿದ್ದು, ಇಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಬಹಳಷ್ಟಿದ್ದು, ಈ ಕ್ಷೇತ್ರದಲ್ಲಿ ಅವರು ಚುನಾವಣೆಗೆ ನಿಲ್ಲಲಿದ್ದಾರೆ. ಹೀಗಾಗಿ ಅಜರುದ್ದೀನ್ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಿಂದ ರೇವಂತ್ ರೆಡ್ಡಿಯವರು ಮೊಹಮ್ಮದ್ ಅಜರುದ್ದೀನ್ ಅವರು ಶಾಸಕರಾಗಿ ಆಯ್ಕೆಯಾಗುವ ಮೊದಲೇ ಸಚಿವ ಸ್ಥಾನ ನೀಡಿದ್ದಾರೆ. ಜ್ಯುಬಿಲಿ ಹಿಲ್ ಕ್ಷೇತ್ರದಲ್ಲಿ ಶೇ.25ರಷ್ಟು ಮುಸ್ಲಿಂ ಮತದಾರರಿದ್ದಾರೆ.
ಈಗ ಅಜರುದ್ದೀನ್ ಅವರು ಸಚಿವರಾಗಿ ರೇವಂತ್ ರೆಡ್ಡಿಯವರ ಸಂಪುಟವನ್ನು ಸೇರಿರುವುದರಿಂದ ತೆಲಂಗಾಣ ರಾಜ್ಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆದ ಮುಸ್ಲಿಂ ಸಮುದಾಯದ ಏಕೈಕ ಸದಸ್ಯ ಎನಿಸಿದ್ದಾರೆ. 2023ರ ಡಿಸೆಂಬರ್ 7ರಂದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಬೇಕು ಎಂಬ ಮುಸ್ಲಿಂ ಸಮುದಾಯದ ಕೂಗು ಹಾಗೂ ಕಾಯುವಿಕೆಗೆ ಅಜರುದ್ದೀನ್ ಅವರ ಸೇರ್ಪಡೆಯಿಂದ ಅಂತ್ಯ ಸಿಕ್ಕಿದೆ. ರೇವಂತ್ ಸಂಪುಟದಲ್ಲಿ ಇನ್ನೂ ಎರಡು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ಭರ್ತಿ ಮಾಡುವ ಸಾಧ್ಯತೆಯಿದೆ.
ಇದನ್ನೂ ಓದಿ: ಶಾಲೆಗೆ ಹೋಗಲೊಪ್ಪದ ಹುಡುಗ: ಮಂಚದ ಸಮೇತ ಶಾಲೆಗೆ ಕರೆತಂದ ಮನೆಯವರು
ಇದನ್ನೂ ಓದಿ: ತನ್ನ ಸಾಕಿದವನಿಗೆ ತಾನು ಬೇಟೆಯಾಡಿದ ಮಾಂಸದಲ್ಲಿ ಪಾಲು ನೀಡಿದ ಸಿಂಹ: ವನ್ಯಲೋಕದ ವೀಡಿಯೋ ವೈರಲ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.