ಯೋಗೇಶ್ವ‌ರ್ ದಿಢೀರ್‌ ರಾಜೀನಾಮೆ: ಸ್ವತಂತ್ರ ಸ್ಪರ್ಧೆ?, ಕಾಂಗ್ರೆಸ್‌ ಸೇರ್ಪಡೆ?

By Kannadaprabha NewsFirst Published Oct 22, 2024, 4:24 AM IST
Highlights

ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿಜೆ ಪಿಯ ಚಿಹ್ನೆಯಿಂದ ಸ್ಪರ್ಧಿಸಲು ಬಯಸಿದ್ದ ಯೋಗೇಶ್ವರ್ ಅವರ ಬಗ್ಗೆ ಜೆಡಿಎಸ್ ಒಪ್ಪದೇ ಇದುದರಿಂದ ಅನಿವಾರ್ಯವಾಗಿ ಪಕ ತೊರೆಯಲೂ ಮುಂದಾಗಿದ್ದಾರೆ. ಪಕ್ಷೇತರ ಅಥವಾ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. 
 

ಹುಬ್ಬಳ್ಳಿ/ಬೆಂಗಳೂರು(ಅ.22): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುವುದು ನಿಶ್ಚಿತವಾಗಿದ್ದು, ಚುನಾವಣಾ ಅಖಾಡಕ್ಕೆ ಇಳಿಯುವ ಉದ್ದೇಶದಿಂದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವ‌ರ್ ಅವರು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ದಿಢೀರ್‌ರಾಜೀನಾಮೆ ನೀಡಿದ್ದಾರೆ. 

ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಬಿಜೆ ಪಿಯ ಚಿಹ್ನೆಯಿಂದ ಸ್ಪರ್ಧಿಸಲು ಬಯಸಿದ್ದ ಯೋಗೇಶ್ವರ್ ಅವರ ಬಗ್ಗೆ ಜೆಡಿಎಸ್ ಒಪ್ಪದೇ ಇದುದರಿಂದ ಅನಿವಾರ್ಯವಾಗಿ ಪಕ ತೊರೆಯಲೂ ಮುಂದಾಗಿದ್ದಾರೆ. ಪಕ್ಷೇತರ ಅಥವಾ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರೀಕ್ಷೆಯಿದೆ. ಸೋಮವಾರ ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ ಯೋಗೇಶ್ವ‌ರ್ ಅವರು ವಿಧಾನಪರಿಷತ್ತಿನ ಸಭಾಪತಿ ಬಸ ವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದರು.

Latest Videos

ಚನ್ನಪಟ್ಟಣದ ಚೆಕ್‌ಮೇಟ್, ಸಿಪಿ ಯೋಗೇಶ್ವರ್‌ ರಾಜೀನಾಮೆಗೆ ಬಿಜೆಪಿ ಕಂಗಾಲು!

ಕೆಲಹೊತ್ತಿನ ಬಳಿಕ ರಾಜೀನಾಮೆ ಅಂಗೀಕರಿಸಿದ್ದಾಗಿ ಹೊರಟ್ಟಿ ಘೋಷಿಸಿದರು. ಈ ಮೂಲಕ ಯೋಗೇಶ್ವರ್ ಹಾದಿಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ನನ್ನ ಸ್ವಂತ ಇಚ್ಛೆಯಿಂದ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ಬಂದಿದೆ. ಅದರಲ್ಲಿ ಸ್ಪರ್ಧಿಸುತ್ತಿದ್ದೇನೆ. ಹೀಗಾಗಿ ನಾನು ಈ ತೀರ್ಮಾನ ಕೈಗೊಂಡೆ' ಎಂದರು. 

ಪರಿಷತ್ ಸ್ಥಾನಕ್ಕೆ ಮಾತ್ರ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿಲ್ಲ. ಈಗಲೂ ನನಗೆ ಬಿಜೆಪಿ ಬಗ್ಗೆ ಆಶಾ ಭಾವನೆ ಇದೆ. ನಮ್ಮ ಪಕ್ಷದ ಮುಖಂಡರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲರೂ ನನ್ನ ಪರವಾಗಿಯೇ ಇದ್ದಾರೆ. ಪಕ್ಷದ ಹೈಕಮಾಂಡ್ ನನಗೆ ಟಿಕೆಟ್ ಕೊಡಲಿ ಎಂದು ಮನವಿ ಮಾಡುತ್ತೇನೆ' ಎಂದರು. 

ಜೆಡಿಎಸ್‌ನಿಂದ ಸ್ಪರ್ಧಿಸಲ್ಲ: 

'ಚನ್ನಪಟ್ಟಣ ಕುಮಾರಸ್ವಾಮಿ ಅವರ ಕ್ಷೇತ್ರ. ಅವರು ಆ ಕ್ಷೇತ್ರ ಬಿಟ್ಟುಕೊಟ್ಟಿಲ್ಲ. ನಾನು ಜೆಡಿಎಸ್‌ನಿಂದ ಸ್ಪರ್ಧಿಸುವುದಿಲ್ಲ. ಕಳೆದ 20 ವರ್ಷದಿಂದ ಜೆಡಿಎಸ್ ವಿರುದ್ಧವಾಗಿ ರಾಜಕಾರಣ ಮಾಡುತ್ತಾ ಬಂದಿ ದ್ದೇನೆ. ಅವರ ಪಕ್ಷದಿಂದ ಸ್ಪರ್ಧಿಸಲು ಅವರ ಪಕ್ಷದ ಕಾರ್ಯಕರ್ತರು ವಿರೋಧಿಸುತ್ತಾರೆ. ನಮ್ಮ ಕಾರ್ಯ ಕರ್ತರೂ ವಿರೋಧಿಸುತ್ತಾರೆ. ಹೀಗಾಗಿ ನಾನು ಎನ್‌ಡಿಎ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಬೇಕೆಂಬ ಇಚ್ಛೆ ಹೊಂದಿದ್ದೇನೆ' ಎಂದರು. 

'ರಾಜೀನಾಮೆ ಕೊಟ್ಟರು ವುದು ಬಿಜೆಪಿಗೆ ಬ್ಲ್ಯಾಕ್‌ಮೇಲ್ ತಂತ್ರವೇ?' ಎಂಬ ಪ್ರಶ್ನೆಗೆ ಉತ್ತರಿಸಿದ ಯೋಗೇಶ್ವ‌ರ್, 'ಹಾಗೇನೂ ಇಲ್ಲ. ಬ್ಲ್ಯಾಕ್‌ಮೇಲ್ ಎಂದು ಏಕೆ ಅಂದುಕೊಳ್ಳುತ್ತೀರಿ. ನಾಮಪತ್ರ ಸಲ್ಲಿಸಲು 2-3 ದಿನ ಮಾತ್ರ ಇದೆ. ಚುನಾವಣೆ ತಯಾರಿ ನಡೆಸಬೇಕು. ಹೀಗಾಗಿ ರಾಜೀನಾಮೆ ಕೊಟ್ಟ ಬಳಿಕವೇ ಜನರ ಎದುರಿಗೆ ಹೋಗಬೇಕು ಎಂದುಕೊಂಡು ರಾಜೀನಾಮೆ ಕೊಟ್ಟಿದ್ದೇನೆ' ಎಂದು ಸ್ಪಷ್ಟಪಡಿಸಿದರು.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಬೆಳೆಸಬೇಕು ಎನ್ನುವುದು ನನ್ನ ಉದ್ದೇಶ. ಆದರೆ ಬಿಜೆಪಿಗರು ಈವರೆಗೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಹಿಂದೆಯೂ ಪಕ್ಷೇತರನಾಗಿ ಸ್ಪರ್ಧೆ ಮಾಡಿದ್ದೇನೆ. ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.

ಕಾಂಗ್ರೆಸ್ ಸೇರಿ ಸ್ಪರ್ಧೆ ಸಾಧ್ಯತೆ ಇಂದು ಸಿದ್ದು, ಡಿಕೆಶಿ ಸಭೆ 

ಬೆಂಗಳೂರು: ಬಿಜೆಪಿಯ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀ ನಾಮೆ ನೀಡಿರುವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಪಕ್ಷ ಸೇರುವ ಸಾಧ್ಯತೆಯಿದ್ದು, ಕಾಂಗ್ರೆಸ್ ಪಕ್ಷ ಸೇರಿದರೆ ಅವರೇ ಅಭ್ಯರ್ಥಿಯಾಗುವುದು ನಿಶ್ಚಿತ ಎಂದು ತಿಳಿದುಬಂದಿದೆ. ಚನ್ನಪಟ್ಟಣ ಎನ್‌ಡಿಎ ಟಿಕೆಟ್ ಜೆಡಿಎಸ್ ಪಕ್ಷಕ್ಕೆ ಎಂಬುದು ಅಂತಿಮವಾಗಿದೆ. ಜೆಡಿಎಸ್‌ನಿಂದ ಯೋಗೇಶ್ವರ್‌ಗೆ ಟಿಕೆಟ್ ನೀಡಲು ತೀವ್ರ ವಿರೋಧವಿದೆ. 

ಈ ಹಿನ್ನೆಲೆಯಲ್ಲಿ ಯೋಗೇಶ್ವರ್ ಮುಂದಿನ ನಡೆ ಕುತೂಹಲ ಮೂಡಿಸಿದೆ. ಮೂಲಗಳ ಪ್ರಕಾರ ಅವರು ಕಾಂಗ್ರೆಸ್ ಪಕ್ಷಕ್ಕೆ ವಾಪಸಾಗುವ ಸಾಧ್ಯತೆ ಹೆಚ್ಚು ಇದೆ. ಈ ಬಗ್ಗೆ ಸೋಮವಾರವೇ ಚರ್ಚೆಯಾಗಬೇಕಾಗಿತ್ತು. ಆದರೆ ಮುಖ್ಯಮಂತ್ರಿಗಳು ಲಭ್ಯವಿಲ್ಲದ ಕಾರಣ ಮಂಗಳವಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಈ ಬಗ್ಗೆ ಸಭೆ ನಡೆಸಲಿದ್ದಾರೆ. ಬಳಿಕ ಯೋಗೇಶ್ವರ್ ಪಕ್ಷ ಸೇರ್ಪಡೆ ಅಂತಿಮವಾಗಲಿದೆ ಎನ್ನಲಾಗಿದೆ.  ಒಂದೊಮ್ಮೆ ಯೋಗೇಶ್ವ‌ರ್ ಕಾಂಗ್ರೆಸ್ ಸೇರ್ಪಡೆಯಾದರೆ ಅವರೇ ಅಭ್ಯರ್ಥಿಯಾಗಲಿದ್ದಾರೆ. ಡಿ.ಕೆ.ಸುರೇಶ್, ಪುಟ್ಟಣ್ಣ ಸೇರಿದಂತೆ ಎಲ್ಲರೂ ಅವರ ಗೆಲುವಿಗಾಗಿ ಶ್ರಮಿಸುವಂತೆ ಸಭೆ ನಡೆಸಿ ಪಕ್ವ ಸೂಚನೆ ನೀಡುವ ಸಾಧ್ಯತೆಯಿದೆ.

ಯೋಗೇಶ್ವರ್‌ ಕಾಂಗ್ರೆಸ್‌ ಜತೆ ಸಂಪರ್ಕದಲ್ಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ

ಜೋಶಿ ಭರವಸೆ ಕೊಟ್ಟಿದ್ದಾರೆ, ಕಾಯುವೆ 

ಹುಬ್ಬಳ್ಳಿ: ಬಿಜೆಪಿ ನಾಯಕರೆಲ್ಲರೂ ನನ್ನ ಪರವಾಗಿದ್ದು, ಚನ್ನಪಟ್ಟಣದಲ್ಲಿ ನನ್ನನ್ನು ಅಭ್ಯರ್ಥಿಯನ್ನಾಗಿಸಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋತಿ ಅವರು ಮಂಗಳ ವಾರವರೆಗೂ ಕಾಯುವಂತೆ ಹೇಳಿದ್ದು, ಕಾದು ನೋಡುತ್ತೇನೆ ಎಂದು ಸಿ.ಪಿ.ಯೋಗೇಶ್ವ‌ರ್ ತಿಳಿಸಿದ್ದಾರೆ. 

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಜೋಶಿ ಅವರೊಂದಿಗೆ ಮಾತನಾಡಿ ಮನವಿ ಮಾಡಿದ್ದೇನೆ. ಕುಮಾರಸ್ವಾಮಿ ಮನವೋಲಿ ಸಲು ಪ್ರಯತ್ನಿಸುವುದಾಗಿ ಜೋಶಿ ಭರವಸೆ ನೀಡಿದ್ದು, ಕಾಯುವಂತೆ ತಿಳಿಸಿದ್ದಾರೆ. ಹೀಗಾಗಿ ಕಾಯುತ್ತೇನೆ, ನೋಡೋಣ ಏನಾಗುತ್ತದೆ ಎಂದರು.

click me!