ರಾಕೇಶ್ ಸಿದ್ದರಾಮಯ್ಯ ಸಾವಿಗೆ ಕಾರಣ ಯಾರು? ಆರೋಪ ಪ್ರತ್ಯಾರೋಪದ ನಡುವೆ ಸಿಡಿದ ಬಾಂಬ್!

By Chethan KumarFirst Published Oct 21, 2024, 11:57 PM IST
Highlights

ಭೈರತಿ ಸುರೇಶ್ ಮಾಡಿದ ಆರೋಪಕ್ಕೆ ಪ್ರತಿಯಾಗಿ ಇದೀಗ ಶೋಭ ಕರಂದ್ಲಾಜೆ ಅಷ್ಟೇ ಗಂಭೀರವಾದ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಶೋಭಾ ಹೇಳಿರುವುದು ಇದೀಗ ಕೋಲಾಹಲ ಸೃಷ್ಟಿಸಿದೆ.

ಬೆಂಗಳೂರು(ಅ.21) ಕರ್ನಾಟಕ ಉಪ ಚುನಾವಣೆ ಕಾವಿನ ನಡುವೆ ಮುಡಾ ಹಗರಣದಲ್ಲಿ ನಾಯಕರ ಆರೋಪ ಪ್ರತ್ಯಾರೋಪ ಇದೀಗ ವೈಯುಕ್ತಿಕ ಮಟ್ಟಕ್ಕೆ ಇಳಿದಿದೆ. ಮುಡಾ ಪ್ರಕರಣ ಸಂಬಂಧ ದಾಖಲೆಗಳನ್ನು ಭೈರತಿ ಸುರೇಶ್ ರಹಸ್ಯವಾಗಿ ಸಾಗಿಸಿ ಸುಟ್ಟಿದ್ದಾರೆ ಎಂದು ಶೋಭಕರಂದ್ಲಾಜೆ ಆರೋಪ ಇದೀಗ ಹಳೇ ಸಾವಿನ ಪ್ರಕರಣಕ್ಕೆ ಬಂದು ತಲುಪಿದೆ. ಭೈರತಿ ನೀಡಿದ ತಿರುಗೇಟಿಗೆ ಕೌಂಟರ್ ನೀಡಿರುವ ಶೋಭ ಕರಂದ್ಲಾಜೆ, ಸಿದ್ದರಾಮಯ್ಯ ಪುತ್ರ ರಾಕೇಶ್ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪ ಇದೀಗ ಕೋಲಾಹಲ ಸೃಷ್ಟಿಸಿದೆ.

ಭೈರತಿ ಸುರೇಶ್ ಆರೋಪಕ್ಕೆ ತಿರುಗೇಟು ನೀಡಿದ ಶೋಭ ಕರಂದ್ಲಾಜೆ ಇಂದು ಸುದ್ದಿಗೋಷ್ಠಿ ನಡೆಸಿ ಗಂಭೀರ ಆರೋಪ ಮಾಡಿದ್ದಾರೆ. ಸಿದ್ದರಾಮಯ್ಯನವರ ಬಳಿ ನನ್ನ ಪ್ರಶ್ನೆ ಒಂದೇ ಇಂತವರನ್ನು(ಭೈರತಿ ಸುರೇಶ್) ಯಾಕೆ ಹತ್ತಿರ ಇಟ್ಟುಕೊಂಡಿದ್ದೀರಿ. ಕೌರವರ ಜೊತೆ ಶಕುನಿ ಯಾಕೆ ಸೇರಿಕೊಂಡಿದ್ದಾರೆ. ಮುಖ್ಯಮಂತ್ರಿ ಹಿಂದೆ ಮುಂದೆ ಬೈರತಿ ಸುತ್ತುತ್ತಾ ಇರುತ್ತಾರೆ. ನಿಮ್ಮನ್ನು(ಸಿದ್ದರಾಮಯ್ಯ) ಉದ್ದಾರ ಮಾಡಲು ಭೈರತಿ ಈ ಕೆಲಸ ಮಾಡುತ್ತಿಲ್ಲ. ನಿಮ್ಮನ್ನು ಮುಗಿಸಲು ಈ ಪ್ರಯತ್ನಗಳನ್ನು ಬೈರತಿ ಸುರೇಶ್ ಮಾಡುತ್ತಿದ್ದಾರೆ ಎಂದು ಶೋಭಾ ಆರೋಪಿಸಿದ್ದಾರೆ.

Latest Videos

ಪೊಲೀಸರು ಸರ್ಕಾರದ ಗುಲಾಮರಾಗಿ ಕೆಲಸ ಮಾಡುತ್ತಿದ್ದಾರೆ: ಎಂಪಿ ರೇಣುಕಾಚಾರ್ಯ ಕಿಡಿ

ರಾಕೇಶ್ ಸಿದ್ದರಾಮಯ್ಯನವರ ಸಾವಿಗೆ ಭೈರತಿ ಸುರೇಶ್ ಕಾರಣ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.ಒಪ್ಪಿಕೊಳ್ಳುತ್ತೀರಾ? ಸಿದ್ದರಾಮಯ್ಯನವರ ಆಸ್ತಿ ಒಡೆಯಲು, ಸಿದ್ದರಾಮಯ್ಯನವರು ದುಡ್ಡು ಹೊಡೆಯಲು, ಸಿದ್ದರಾಮನವರ ವಾರಸುದಾರಿಕೆ ಪಡೆಯಲು ಭೈರತಿ ಸುರೇಶ್ ಪ್ರಯತ್ನಿಸುತ್ತಿದ್ದಾರೆ. ನಾನೂ ಹೆಬ್ಬಾಳದಲ್ಲೇ ಇದ್ದೇನೆ. ಹೆಬ್ಬಾಳದಿಂದ ಓಡಿಸುವ ಕೆಲಸ ನಾವು ಮಾಡುತ್ತೇವೆ. ಮುಡಾ ಫೈಲ್ ಸುಟ್ಟು ಹಾಕಿದ್ದಾರೆ ಎಂದು ಹೇಳಿದರೆ ನನ್ಮ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತೀರಿ. ನಾಲಗೆ ಬಿಗಿ ಹಿಡಿದು ಮಾತನಾಡಿ ಎಂದು ಶೋಭ ಕರಂದ್ಲಾಜೆ ಎಚ್ಚರಿಕೆ ನೀಡಿದ್ದಾರೆ.

ಅಷ್ಟಕ್ಕು ಶೋಭ ಕರಂದ್ಲಾಜೆ ಈ ಗಂಭೀರ ಆರೋಪ ಮಾಡಲು ಕಾರಣ, ಭೈರತಿ ಮಾಡಿ ಆರೋಪಗಳು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪವವರ ಧರ್ಮ ಪತ್ನಿ ಸಾವಿನಲ್ಲಿ ಶೋಭ ಕರಂದ್ಲಾಜೆ ಪಾತ್ರವಿದೆ ಎಂದು ಆರೋಪಿಸಿದ್ದರು. ಶೋಭ ಕರಂದ್ಲಾಜೆ ಬಂಧಿಸಿದರೆ ಸತ್ಯ ಹೊರಗೆ ಬರಲಿದೆ. ಇದರ ತನಿಖೆ ಅಗತ್ಯವಿದೆ ಎಂದು ಭೈರತಿ ಸುರೇಶ್ ಆರೋಪಿಸಿದ್ದರು. ಇದೀಗ ಈ ಆರೋಪಕ್ಕೆ ಶೋಭ ಕರಂದ್ಲಾಜೆ ರಾಕೇಶ್ ಸಿದ್ದರಾಮಯ್ಯ ಸಾವಿನ ಘಟನೆ ತೆಗೆದಿಟ್ಟಿದ್ದಾರೆ.

ಬೈರತಿ ಸುರೇಶ್ ವಿರುದ್ಧ ಮಾನನಷ್ಟ ಮೊಕದ್ದಮೆ- ರೇಣುಕಾಚಾರ್ಯ 
 

click me!