ಚಾಮರಾಜನಗರ (ಡಿ.02): ಮರಿ ರಾಜಾಹುಲಿ ಮೈಸೂರು-ಚಾಮರಾಜನಗರಕ್ಕೆ (Mysuru - Chamarajanagar) ವಿಶೇಷ ಗಮನ ಕೊಟ್ಟರೆ 15 ಕ್ಷೇತ್ರದಲ್ಲಿ ಕಮಲ (BJP) ಅರಳಲಿದೆ ಎನ್ನುವ ಮೂಲಕ ಮುಂದಿನ ಚುನಾವಣೆಗೆ ಮೈಸೂರಿನತ್ತ ಬರುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ (BY Vijayendra) ಸಹಕಾರ ಸಚಿವ ಸಚಿವ ಎಸ್.ಟಿ. ಸೋಮಶೇಖರ್ (ST somashekhar) ಬಹಿರಂಗ ಆಹ್ವಾನ ಕೊಟ್ಟಿದ್ದಾರೆ. ಅಂಬೇಡ್ಕರ್ ಭವನದಲ್ಲಿ ಬುಧವಾರ ಬಿಜೆಪಿ (BJP) ಅಭ್ಯರ್ಥಿ ರಘು ಕೌಟಿಲ್ಯ ಪರ ಮತಯಾಚಿಸಿ ಮಾತನಾಡಿ, ನಾನು ಹೇಳಿಕೊಂಡು ಬರುತ್ತಿದ್ದೇನೆ, ಮುಂದಿನ ಚುನಾವಣೆಯಲ್ಲಿ (Election) ಮೈಸೂರಿನತ್ತ (Mysuru) ಗಮನ ಕೊಟ್ಟರೇ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ, ಈ ಭಾಗದಲ್ಲಿ ಶಕ್ತಿ ಇನ್ನಷ್ಟುಹೆಚ್ಚಲಿದೆ ಎಂದರು.
ಜೆಡಿಎಸ್ (JDS) ಅಭ್ಯರ್ಥಿ ಮಂಜೇಗೌಡ ವಿರುದ್ಧ ಕಿಡಿಕಾರಿದ ಅವರು, ಜೆಡಿಎಸ್ ಅಭ್ಯರ್ಥಿ ಸಾ.ರಾ.ಜೊತೆ ಹೋದರೆ ಜಿಟಿಡಿ(GTD) ಕಾಲೆಳೆಯುತ್ತಾರೆ, ಜಿಟಿಡಿಯನ್ನ ತಪ್ಪಿಸಿಕೊಂಡು ಪಿರಿಯಾಪಟ್ಟಣದತ್ತ ಹೋದರೆ ಶಾಸಕ ಮಹಾದೇವ ಅಭ್ಯರ್ಥಿಯನ್ನು ಪೂರ್ತಿ ಎಳೆದೇ ಬಿಡುತ್ತಾರೆ. ಇದು ಅವರ ಪರಿಸ್ಥಿತಿ, ಇನ್ನೆಲ್ಲಿ ಅವರು ಗೆಲ್ಲುವುದು. ಕೈ ಅಭ್ಯರ್ಥಿಗೆ ಸಿದ್ದರಾಮಯ್ಯ (Siddaramaiah) ಬಂದರಷ್ಟೇ ಪ್ರಚಾರ ಟೇಕಾಫ್ ಆಗುವುದು, ಸಿದ್ದರಾಮಯ್ಯ ಬಂದರೆ ಬರುತ್ತಾರೆ ಇಲ್ಲಾಂದ್ರೆ ಇಲ್ಲಾ, ಈ ನಡುವೆ ಅವರಿಗೆ ಕ್ಷೇತ್ರದಲ್ಲಿ ತಿಳಿವಳಿಕೆ ಬರುವ ತನಕ ಚುನಾವಣೆಯೇ ಮುಗಿದಿರುತ್ತದೆ ಎಂದು ವ್ಯಂಗ್ಯ ಮಾಡಿದರು.
undefined
ಚಾಮರಾಜನಗರ (Chamarajanagar) ಶಾಸಕರು 10 ಸಾವಿರ ರು. ಕೆಲಸವಾಗಬೇಕಾದರೂ ನಮ್ಮ ಪಕ್ಷದವರಿಗೆ ಕೊಡಿ ಎಂದು ಧಮ್ಕಿ ಹಾಕುತ್ತಾರೆ, ಕಿರುಕುಳ ಕೊಡುತ್ತಾರೆ. ಇವಕ್ಕೆಲ್ಲ ಕಡಿವಾಣ ಹಾಕಬೇಕೆಂದರೆ ರಘು ಕೌಟಿಲ್ಯ ಗೆಲ್ಲಬೇಕು. ಅವರ ಮಾತಿನ ಛಾತಿ, ಕೆಲಸ ಮಾಡುವ ಗುಣದಿಂದ ಗ್ರಾಪಂಗಳಿಗೆ ಶಕ್ತಿ ಬರಲಿದೆ ಎಂದರು.
ಬಿಜೆಪಿ ಋುಣ ಇದೆ: ಕಾಂಗ್ರೆಸ್‌ನಲ್ಲೇ (Congress) ಇದ್ದಿದ್ದರೇ ನಾನು ಸಹಕಾರ ಸಚಿವನಾಗುತ್ತಿರಲಿಲ್ಲ. ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಚಿವನನ್ನಾಗಿ ಮಾಡಿ, ಬಿಜೆಪಿಯ (bjp) ಋುಣ ನನ್ನ ಮೇಲಿದೆ. ಆ ಋುಣ ತೀರಿಸಲು ರಘು ಕೌಟಿಲ್ಯ ಅವರ ಗೆಲುವಿಗೆ ದುಡಿಯುತ್ತಿದ್ದೇನೆ, ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.
ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ: ಸಚಿವ ಎಸ್.ಟಿ.ಸೋಮಶೇಖರ್
ಚಾಮರಾಜನಗರ: ಬೆಂಗಳೂರು ಕಾಂಗ್ರೆಸ್ ಅಭ್ಯರ್ಥಿ ಕೆಜಿಎಫ್ ಬಾಬು ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣಗೆ ಎಬಿಸಿಡಿ ಗೊತ್ತಿಲ್ಲ, ನನಗೆ ಗೊತ್ತು. ಆತ ಯಾರು, ಆತನ ಹಿನ್ನೆಲೆ ಏನು ಎಂದು ಸಚಿವ ಎಸ್.ಟಿ. ಸೋಮಶೇಖರ್ ಕಿಡಿಕಾರಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕೆಜಿಎಫ್ ಬಾಬು (kgf babu) ಉತ್ತಮ ಅಭ್ಯರ್ಥಿ ಎಂಬಂತೆ ಧ್ರುವನಾರಾಯಣ ಮಾತನಾಡಿದ್ದಾರೆ. ಆದರೆ, ಬಾಬು ವಿರುದ್ಧ 60ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು 20 ಎಫ್‌ಐಆರ್ ನನ್ನ ಮೊಬೈಲ್‌ನಲ್ಲೇ (FIR) ಇದೆ, ಆತ ಏನು ಎಂದು ನನಗೆ ಗೊತ್ತು, ಬೆಂಗಳೂರು ಅಭ್ಯರ್ಥಿಗಳ ಬಗ್ಗೆ, ಕೆಜಿಎಫ್ ಬಾಬು ಬಗ್ಗೆ ಧ್ರುವನಾರಾಯಣಗೆ ಎಬಿಸಿಡಿಯೂ ಗೊತ್ತಿಲ್ಲ ಎಂದು ಟಾಂಗ್ ನೀಡಿದರು.
ಇನ್ನು, ಜೆಡಿಎಸ್ ಮತ್ತು ಬಿಜೆಪಿ ಹೊಂದಾಣಿಕೆ ಕುರಿತು ಮಾತನಾಡಿ, ಮೈಸೂರು-ಚಾಮರಾಜನಗರ ಕ್ಷೇತ್ರದಲ್ಲಿ ದಳದ ಜೊತೆ ಯಾವುದೇ ಹೊಂದಾಣಿಕೆ ಇಲ್ಲ. ಬೇರೆ ಜಿಲ್ಲೆಗಳ ಬಗ್ಗೆ ನನಗೆ ಮಾಹಿತಿ ಇಲ್ಲಾ, ಬೆಳಗಾವಿ ಚುನಾವಣೆ (Belagavai Election) ಬಗ್ಗೆಯೂ ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ(Ramesh jarkiholi) ಕುರಿತ ಪ್ರಶ್ನೆಗೆ ಉತ್ತರಿಸದೇ ಜಾರಿಕೊಂಡರು.
ಮಂಜೇಗೌಡ ತಮಗೆ ಬಹಿರಂಗ ಪತ್ರ ಬರೆದಿರುವ ಮಾಹಿತಿ ಇದೆ. ಆದರೆ, ಪತ್ರವನ್ನು ನಾನು ನೋಡಿಲ್ಲ, ಪತ್ರ ಓದಿದ ಬಳಿಕ ಅದಕ್ಕೆ ಸಮಂಜಸವಾದ ಉತ್ತರವನ್ನು ಕೊಡುತ್ತೇನೆ ಎಂದು ಮಂಜೇಗೌಡ ಬಹಿರಂಗ ಪತ್ರಕ್ಕೆ ತಿರುಗೇಟು ಕೊಟ್ಟರು.
ರಘು ಕೌಟಿಲ್ಯ ಅವರು ಮೊದಲ ಪ್ರಾಶಸ್ತ್ಯ ಮತದಿಂದಲೇ ಗೆಲ್ಲುವ ಭರವಸೆ ಮೂಡಿದ್ದು ಚಾಮರಾಜನಗರ-ಮೈಸೂರಿನ ಗ್ರಾಮಾಂತರ ಭಾಗದಲ್ಲಿ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಿಜೆಪಿ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಲೆ ಏರಿಕೆಗೆ ದೂರದರ್ಶಿತ್ವ ಯೋಜನೆ ಕಾರಣ: ಶಾಸಕ ಮಹೇಶ್
ಚಾಮರಾಜನಗರ: ಯಾರನ್ನೋ ಮೆಚ್ಚಿಸಲು ಹೇಳುತ್ತಿಲ್ಲ, ಪ್ರಧಾನಿ ನರೇಂದ್ರ ಮೋದಿಯವರದ್ದು ದೊಡ್ಡ ವ್ಯಕ್ತಿತ್ವ, ಬಿಎಸ್ಪಿಯಲ್ಲಿದ್ದಾಗ ತಪುತ್ರ್ಪ ತಿಳಿದಿದ್ದೆ ಎಂದು ಶಾಸಕ ಮಹೇಶ್ ತಿಳಿಸಿದರು.ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಬುಧವಾರ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಪರ ಮತಯಾಚಿಸಿ ಮಾತನಾಡಿ
ದೂರದಲ್ಲಿದ್ದಾಗ ಸತ್ಯ ಗೊತ್ತಿರಲಿಲ್ಲ, ಬಿಜೆಪಿಗೆ ಬಂದಾಗ ತಿಳಿಯಿತು, ಮೋದಿ ಅವರ ದೊಡ್ಡ ವ್ಯಕ್ತಿತ್ವ, ಸಾಮಾನ್ಯ ಕಾರ್ಯಕರ್ತನೋರ್ವ ಪ್ರಧಾನಿಯಾಗುವುದು ಕೂಡ ಬಿಜೆಪಿಯಲ್ಲಿ ಮಾತ್ರ, ಬೇರಾವ ಪಕ್ಷದಲ್ಲೂ ಸಾಧ್ಯವಿಲ್ಲ ಎಂದರು.
ದೇಶದ ಮೊದಲ ಪ್ರಧಾನಿ ನೆಹರೂ (Neharu), ಬಳಿಕ ಇಂದಿರಾ, ರಾಜೀವ್ ನಂತರ ಸೋನಿಯಾ ಗಾಂಧಿ (Sonia Gandhi) ಮುಂದೆಯೂ ಅದೇ ಕುಟುಂಬದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಪಿಎಂ ಸ್ಥಾನದ ಆಕಾಂಕ್ಷಿಗಳು, ಕಾಂಗ್ರೆಸ್‌ನವರು ಅಷ್ಟೆಲ್ಲಾ ಮಾತನಾಡುತ್ತಾರಲ್ಲಾ ಗಾಂಧಿ ಫ್ಯಾಮಿಲಿ ಹೊರತುಪಡಿಸಿ ಪಿಎಂ ಅಭ್ಯರ್ಥಿ ಘೋಷಿಸಲಿ ಎಂದು ಸವಾಲು ಹಾಕಿದರು.
ದೂರದರ್ಶಿತ್ವ ಯೋಜನೆ ಕಾರಣ: ಬೆಲೆ ಏರಿಕೆ, ಬೆಲೆ ಏರಿಕೆ ಎಂದು ಹುಯಿಲೆಬ್ಬಿಸುತ್ತಿದ್ದಾರೆ. ಆದರೆ, ಬೆಲೆ ಏರಿಕೆಗೆ ನಿಜವಾದ ಕಾರಣ ಕೇಂದ್ರ ಸರ್ಕಾರದ ದೂರದರ್ಶಿತ್ವದ ಯೋಜನೆಗಳು ಕಾರಣ, ಇನ್ನು 10 ವರ್ಷಗಳ ಬಳಿಕ ಎಲ್ಲವೂ ಸರಿಹೋಗಲಿದೆ ಎಂದರು.