* ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಹತ್ಯಗೆಗೆ ಸ್ಕೆಚ್ ಪ್ರಕರಣ
* ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ
* 3 ತಿಂಗಳ ಕಾಲ್ ಲಿಸ್ಟ್ ತೆಗೆಸಿದರೆ ಸತ್ಯ ಬಹಿರಂಗವಾಗಲಿದೆ ಎಂದು ಸವಾಲು
ಬೆಂಗಳೂರು, (ಡಿ.01): ಬಿಜೆಪಿ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ (SR Vishwanath) ಹತ್ಯೆಗೆ ಕಾಂಗ್ರೆಸ್ ಮುಖಂಡ (Congress Leader) ಗೋಪಾಲಕೃಷ್ಣ (Gopal Krihshna) ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಬಹಿರಂಗವಾಗಿದೆ
ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿ ಇಂದು (ಡಿ.01) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ, ನಾನು ಯಾವುದೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿಲ್ಲ. ಕೋರ್ಟ್ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದೇನೆ. ವಿಡಿಯೋದಲ್ಲಿ ಇರುವುದು ಶೇ.80 ರಷ್ಟು ಭಾಗ ಫೇಕ್ ಎಂದು ಹೇಳಿದರು.
Murder Plan: ತಮ್ಮ ಹತ್ಯೆಗೆ ಕಾಂಗ್ರೆಸ್ ನಾಯಕ ಸ್ಕೆಚ್, ಮಹತ್ವದ ಮಾಹಿತಿ ಬಿಚ್ಚಿಟ್ಟ ಶಾಸಕ ವಿಶ್ವನಾಥ್
ನನ್ನ ವಿರುದ್ಧದ ಯಾವುದೇ ಸಂಚು ಆರೋಪ ಸುಳ್ಳು. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳೂ ಸುಳ್ಳು. ಇಂತಹವನ್ನು ಮಾಡುವ ಐಡಿಯಾ ಇರೋದು ಶಾಸಕರಿಗೆ. ನಮಗೆ ಇಂತಹ ಕ್ರಿಮಿನಲ್ ಐಡಿಯಾಗಳು ಬರಲ್ಲ. ಕುಳ್ಳ ದೇವರಾಜ್- ಶಾಸಕ ವಿಶ್ವನಾಥ್ ಕಾಲ್ ಲಿಸ್ಟ್ ತೆಗೆಸಲಿ. 3 ತಿಂಗಳ ಕಾಲ್ ಲಿಸ್ಟ್ ತೆಗೆಸಿದರೆ ಸತ್ಯ ಬಹಿರಂಗವಾಗಲಿದೆ ಎಂದು ಸವಾಲು ಹಾಕಿದರು.
8 ಎಕರೆ ಜಮೀನು ವಿಚಾರದಲ್ಲಿ ಶಾಸಕರಿಂದ ತೊಂದರೆ ಆಗಿದೆ. ಹೀಗೆಂದು ಹೇಳಿಕೊಂಡು ಕುಳ್ಳ ದೇವರಾಜ್ ಬಂದಿದ್ದ. ಆ ವಿಡಿಯೋದಲ್ಲಿ ಕೆಲವು ಸತ್ಯ, ಕೆಲವು ಫೇಕ್ ಇರಬಹುದು. ಕಡಬಗರೆ ಸೀನ ಶೂಟೌಟ್ ಕೇಸ್ ಬಗ್ಗೆ ಸಿಬಿಐ ತನಿಖೆಯಾಗಲಿ. ನನ್ನ ತೇಜೋವಧೆ ಮಾಡಲು ಶಾಸಕರಿಂದ ಇಂತಹ ಕೃತ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಕುಳ್ಳ ದೇವರಾಜ್ ವಿರುದ್ಧ ನಾನು ದೂರು ದಾಖಲಿಸುತ್ತೇನೆ. ಕುಳ್ಳ ದೇವರಾಜ್ ವಿರುದ್ಧ ಮಾನನಷ್ಟ ಕೇಸ್ ದಾಖಲಿಸುವೆ. ಜಮೀನು ವಿಚಾರಕ್ಕೆ 5 ಲಕ್ಷ ತಂದು 2 ಲಕ್ಷ ವಾಪಸ್ ಪಡೆದಿದ್ದ. ಯಲಹಂಕ ಕ್ಷೇತ್ರದಲ್ಲಿ ರೌಡಿಗಳ ಚಟುವಟಿಕೆ ಜಾಸ್ತಿ ಆಗಿದೆ. ನನಗೆ ಭದ್ರತೆ ನೀಡಲು ಗೃಹಸಚಿವರಿಗೆ ಮನವಿ ಮಾಡುವೆ. ನನಗೂ ಪೊಲೀಸ್ ಅಧಿಕಾರಿಗಳ ನಡುವೆ ಉತ್ತಮ ಬಾಂಧವ್ಯ ಇದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇದ್ದರೆ ಸಾಬೀತುಪಡಿಸಲಿ ಎಂದರು.
ಸೇಠ್ ಜಮೀನು ವಿಚಾರದಲ್ಲಿ ಕುಳ್ಳ ದೇವರಾಜ್ ಬಂದಿದ್ದ. ಈ ವಿಚಾರ ಬಿಟ್ಟರೆ ಅವನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಶಾಸಕ ವಿಶ್ವನಾಥ್ಗೂ ನನಗೂ ಯಾವುದೇ ವ್ಯವಹಾರವಿಲ್ಲ. ನಾನು ಯಾವುದೇ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿಲ್ಲ. ಕೋರ್ಟ್ ಅನುಮತಿ ಪಡೆದು ಕಟ್ಟಡ ನಿರ್ಮಿಸುತ್ತಿದ್ದೇನೆ. ವಿಡಿಯೋದಲ್ಲಿ ಇರುವುದು ಶೇ.80 ರಷ್ಟು ಭಾಗ ಫೇಕ್ ಎಂದು ಸ್ಪಷ್ಟಪಡಿಸಿದರು.
ನಾನು ಯಾರ ಹತ್ಯೆಗೂ ಸುಪಾರಿ ನೀಡಿಲ್ಲ. ಸುಪಾರಿ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸೇಠ್ ಜಮೀನು ವಿಚಾರಕ್ಕೆ ಕುಳ್ಳ ದೇವರಾಜ್ ಬಂದಿದ್ದ. ಇಂತಹ ಫೇಕ್ ಮಾಡುತ್ತಾನೆಂದು ಯಾರಿಗೆ ಗೊತ್ತಿತ್ತು. ಬಿಜೆಪಿ ಶಾಸಕ ವಿಶ್ವನಾಥ್ ಬಲಗೈ ಭಂಟ ಕುಳ್ಳ ದೇವರಾಜ್ ಎಂದು ಗೋಪಾಲಕೃಷ್ಣ ಹೇಳಿದರು.
ವಿಶ್ವನಾಥ್ ಹೇಳಿದ್ದೇನು?
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಎಸ್.ಆರ್. ವಿಶ್ವನಾಥ್ ಸುದ್ದಿಗೋಷ್ಠಿಯಲ್ಲಿ ನಡೆಸಿ ಪ್ರತಿಕ್ರಿಯಿಸಿದ್ದು, ನಿನ್ನೆ (ಮಂಗಳವಾರ) ಸಂಜೆ ನನಗೆ ಕ್ಷಮಾಪಣ ಪತ್ರ ಬಂದಿತ್ತು. ತಾವು ಮಾಡಿದ ತಪ್ಪಿಗೆ ಕ್ಷಮಿಸಿ ಎಂದು ಪತ್ರ ಬಂದಿತ್ತು. ನನ್ನ ಹತ್ಯೆಗೆ ಪ್ಲ್ಯಾನ್ (Murder Sketch) ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ ಎಂದರು.
3 ತಿಂಗಳಿಂದ ಸ್ಕೆಚ್ ನಡೆದಿರಬಹುದು.
ಕೊಲೆಗೆ ಎಷ್ಟು ದಿನದಿಂದ ಸ್ಕೆಚ್ ಹಾಕಿದ್ದರೆಂದು ಗೊತ್ತಿಲ್ಲ. ಬಹುಶಃ 3 ತಿಂಗಳಿಂದ ನಡೆದಿರಬೇಕೆಂದು ಅನಿಸುತ್ತಿದೆ. ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರವನ್ನು ಕಳುಹಿಸಿದ್ದಾನೆ. ಬೇರೆಯವರ ಕೈಯಲ್ಲಿ ನನಗೆ ಪತ್ರವನ್ನು ಕೊಟ್ಟು ಕಳಿಸಿರಬೇಕು. ನಿನ್ನೆ ಸಂಜೆ 7.30ರ ಸುಮಾರಿಗೆ ಪತ್ರದ ಬಗ್ಗೆ ಮಾಹಿತಿ ಇತ್ತು. ಇಂತಹದೊಂದು ನಡೆಯುತ್ತಿದೆ ಎಂದು ಸಣ್ಣ ಸುಳಿವು ಇತ್ತು. ನಾನು ಮೊದಲೇ ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆ. ಆದರೆ ವಿಡಿಯೋ ಇರಲಿಲ್ಲ, ಗೊತ್ತಾದ ಕೂಡಲೇ ಹೇಳಿದ್ದೇನೆ. ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ ಎಂದು ಅವರಿಗೆ ಹೇಳಿದ್ದೆ. ಗೃಹ ಸಚಿವರಿಗೆ ಹೇಳಿದ ತಕ್ಷಣ ಗೃಹ ಸಚಿವರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.