ಚಾಮರಾಜನಗರ (ಡಿ.02): ಕಾಂಗ್ರೆಸ್‌ನವರದ್ದು (congress) ಎಲುಬಿಲ್ಲದ ನಾಲಗೆ, ಬಿಜೆಪಿ (bjp) ವಿರುದ್ಧ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY vijayendra) ಹೇಳಿದ್ದಾರೆ. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮೇಲ್ಮನೆ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ (Raghu) ಪರ ಮತಯಾಚಿಸಿ ಮಾತನಾಡಿ, ಸಾವಿರಾರು ಕೋಟಿ ರು. ದುಡ್ಡಿದೆ ಎಂದು 5 ನೇ ಕ್ಲಾಸ್ ಪಾಸ್ ಆದವನನ್ನು ಬೆಂಗಳೂರಲ್ಲಿ ಅಭ್ಯರ್ಥಿಯನ್ನಾಗಿಸಿದ್ದಾರೆ, ಈ ಹಿಂದೆ ಈ ಅಭ್ಯರ್ಥಿಗಳು ಗೆದ್ದು ಕಡಿದು ಹಾಕಿದ್ದು ಅಷ್ಟರಲ್ಲೇ ಇದೆ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಅಂಬೇಡ್ಕರ್, ಗಾಂಧಿ ಹೆಸರು ಹೇಳಿಕೊಂಡು ಕಾಂಗ್ರೆಸ್ ತಿರುಗುತ್ತಿದೆ. ಅಂಬೇಡ್ಕರ್ (Ambedkar) ಅವರ ಗೌರವಯುತ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡದವರು, ಅವರನ್ನು ಚುನಾವಣೆಯಲ್ಲಿ (Election) ಸೋಲಿಸಿದವರು ಇದೇ ಕಾಂಗ್ರೆಸ್‌ನವರು (Congress). ಅಂಬೇಡ್ಕರ್ ಆಶಯದಂತೆ ಸರ್ವರಿಗೂ ಒಳಿತನ್ನು ಮಾಡುತ್ತಿರುವವರು ಮೋದಿ (PM Narendra Modi), ಉಪ ಚುನಾವಣಾ ಎದೆ ತಟ್ಟಿಕೊಂಡು ಮತ ಕೇಳುತ್ತೇವೆ. ಆದರೆ, ಕಾಂಗ್ರೆಸ್‌ನವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತಿ ಸಾರ್ವತ್ರಿಕ ಚುನಾವಣೆಯಲ್ಲಿ ತಿರಸ್ಕೃತರಾದರು ಎಂದು ಕಿಡಿಕಾರಿದರು.
undefined
ಅಧಿಕಾರ ಹೋಯ್ತೆಂದು ಯಡಿಯೂರಪ್ಪ (BS Yediyurappa) ಕಾರ್ಯಕರ್ತರ ಒಡನಾಟ, ಪಕ್ಷದ ಸಂಘಟನೆ ಬಿಟ್ಟಿಲ್ಲ ಈಗಲೂ, ಬೇರೆಲ್ಲಾ ಮುಖಂಡರಿಗಿಂತ ಹೆಚ್ಚು ಓಡಾಡುತ್ತಿದ್ದಾರೆ, ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮೋದಿ ಕಾರ್ಯಕ್ರಮಗಳನ್ನು ಬೊಮ್ಮಾಯಿ (Basavaraj Bommai) ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿದ್ದಾರೆ ಎಂದರು.
ಜೆಡಿಎಸ್ ಜೊತೆ ಹೊಂದಾಣಿಕೆ ಗೊತ್ತಿಲ್ಲ: ಸಭಾ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ, ಜಾತ್ಯತೀತ ದಳ ಅಭ್ಯರ್ಥಿಗಳಿಲ್ಲದ (JDS) ಕಡೆ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಅಂತಿಮ ತೀರ್ಮಾನವಾಗಿಲ್ಲ, ಈ ಬಗ್ಗೆ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಆದರೆ, ಬಿಜೆಪಿಗೆ 15 ಸ್ಥಾನ ಗೆಲ್ಲುವ ವಿಶ್ವಾಸ ಇದೆ ಎಂದರು.
ತಾನು ಯಾವ ಕ್ಷೇತ್ರದ ಮೇಲೂ ಗಮನ ಹರಿಸಿಲ್ಲ, 224 ಕ್ಷೇತ್ರಗಳು ನಮ್ಮದೇ ಹೈಕಮಾಂಡ್ ಯಾವ ಕಡೆ ಸ್ಪರ್ಧಿಸಲು ಸೂಚನೆ ಕೊಡುವುದೋ ಅಲ್ಲಿ ನಿಲ್ಲುತ್ತೇನೆ, ಪಕ್ಷದ ವರಿಷ್ಠರು ತೀರ್ಮಾನವೇ ಅಂತಿಮ ಎಂದರು.
ಉಸ್ತುವಾರಿ ಸಚಿವ ಸೋಮಶೇಖರ್, ಶಾಸಕ ಎನ್.ಮಹೇಶ್, ಮಾಜಿ ಶಾಸಕ ಜಿ.ಎನ್. ನಂಜುಂಡಸ್ವಾಮಿ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಕೇಂದ್ರ ಬರ ಪರಿಹಾರ ಸಮಿತಿ ಅಧ್ಯಕ್ಷ ರಾಮಚಂದ್ರ, ರೈತ ಮುಖಂಡ ಮಲ್ಲೇಶ್ ಅಮ್ಮನಪುರ, ಹಾಸನ ಪ್ರಭಾರಿ ಜಿ. ನಿಜಗುಣರಾಜು, ಚುಡಾ ಅಧ್ಯಕ್ಷ ಶಾಂತಮೂರ್ತಿ, ಬಿಜೆಪಿ ಅಧ್ಯಕ್ಷ ಆರ್. ಸುಂದರ್, ಪ್ರಧಾನ ಕಾರ್ಯದರ್ಶಿಗಳಾದ ಜಿ. ನಾಗಶ್ರೀ, ಮಂಗಲ ಶಿವಕುಮಾರ್. ಡಾ.ಎಂ.ಆರ್. ಬಾಬು ಇತರರು ಇದ್ದಾರೆ.
ಮುಂದಿನ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪನವರ (BS Yediyurappa) ಪುತ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಹೌದು...ಈಗಾಗಲೇ ಯಡಿಯೂರಪ್ಪನವರ (BS Yediyurappa) ಹಿರಿಯ ಪುತ್ರ ಬಿವೈ ರಾಘವೇಂದ್ರ (BY Raghavendra) ಶಿವಮೊಗ್ಗ(Shivamogga) ಸಂಸದರಾಗಿದ್ದಾರೆ. ಇದೀಗ ಇನ್ನೋರ್ವ ಮಗ ಬಿವೈ ವಿಜಯೇಂದ್ರ ಸಹ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಆದ್ರೆ, ಯಾವ ಕ್ಷೇತ್ರ ಎನ್ನುವುದು ಮಾತ್ರ ಹೇಳಿಲ್ಲ.
ಇನ್ನು ಈ ಬಗ್ಗೆ ಇಂದು(ನ.27) ತುಮಕೂರಿನಲ್ಲಿ(Tumakuru) ಮಾತನಾಡಿರುವ ಬಿ.ವೈ. ವಿಜಯೇಂದ್ರ, ನಾನು 2023ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ರಾಜ್ಯ ಬಿಜೆಪಿ(BJP) ಉಪಾಧ್ಯಕ್ಷನಾಗಿ ಪ್ರವಾಸ ಮಾಡುತ್ತಿದ್ದೇನೆ. ನಾನು ರಾಜಕೀಯ ಸನ್ಯಾಸಿಯಲ್ಲ. ಮುಂದಿನ ಚುನಾವಣೆಗೆ ಸ್ಪರ್ಧಿಸುವ ಇಚ್ಛೆಯಿದೆ. ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗಿನಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂಬ ಬಯಕೆಯನ್ನು ಹೊಂದಿದ್ದೇನೆ. ನಾನು ಯವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಪಕ್ಷ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.