ವರದಿ: ಮಂಡ್ಯ ಮಂಜುನಾಥ
ಮಂಡ್ಯ (ಡಿ.08): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆ ಯಲಿರುವ ಚುನಾವಣೆ (election) ಇದೀಗ ಅಂತಿಮ ಘಟ್ಟ ತಲುಪಿದೆ. ಚುನಾವಣಾ ರಣರಂಗದಲ್ಲಿ ಮತಬೇಟೆ ಬಿರುಸಾಗಿ ಸಾಗಿದೆ. ಜಯಭೇರಿಗಾಗಿ ಕಾಂಗ್ರೆಸ್(Congress) ಮತ್ತು ಜೆಡಿಎಸ್ (JDS) ರಣಭೇರಿಯನ್ನು ಮೊಳಗಿಸಿವೆ. ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನಿಟ್ಟುಕೊಂಡಿರುವ ಜೆಡಿ ಎಸ್ ಗೆಲುವಿನ ಗುರಿಯತ್ತ ಹೆಜ್ಜೆ ಇರಿಸಿದೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಕೂಡ ಗೆಲ್ಲುವ ಆಸೆಯಿಂದ ಬಿರುಸಿನಿಂದ ಮುನ್ನುಗ್ಗುತ್ತಿದೆ. ಗೆಲ್ಲಲು ಅಗತ್ಯವಿರುವ ಮತಗಳನ್ನು ಕೈವಶ ಮಾಡಿ ಕೊಳ್ಳಲು ರಣತಂತ್ರದೊಂದಿಗೆ ಜಯಸಾಧನೆಯತ್ತ ವೇಗವಾಗಿ ಸಾಗುತ್ತಿದೆ.
ಕೊನೆಯ ಘಳಿಗೆಯಲ್ಲಿ ಸೃಷ್ಟಿಯಾಗಲಿರುವ ನಂಬರ್ ಗೇಮ್‌ನೊಂದಿಗೆ ಗೆಲುವು ನಿರ್ಧಾರವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಕೊನೆಯ ಎರಡು ದಿನಗಳಲ್ಲಿ ನಡೆಯಬಹುದಾದ ಈ ನಂಬರ್ ಗೇಮ್‌ನಲ್ಲಿ ಗೆಲ್ಲುವವರು ಅದೃಷ್ಟಶಾಲಿ ಗಳಾಗಲಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ಪಕ್ಷ ನಿಷ್ಠೆಯೂ ಚುನಾವಣೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಕೆಲಸ ಮಾಡುತ್ತದೆ ಎನ್ನುವವರೂ ಇದ್ದಾರೆ. ಕಳೆದ ಬಾರಿ ಅಪ್ಪಾಜಿಗೌಡರು ಆಡಿದ ನಂಬರ್ ಗೇಮ್ ಅವರಿಗೆ ಸಕ್ಸಸ್ ತಂದು ಕೊಟ್ಟಿತ್ತು.
ಅದೇ ಮಾದರಿಯಲ್ಲಿ ಹೊಸ ನಂಬರ್‌ಗೇಮ್‌ನ್ನು ಈ ಚುನಾವಣೆಯಲ್ಲಿ (Election) ಪ್ರಯೋಗಿಸಿದ್ದಾರೆಯೇ, ಅದರ ಮೂಲಕವೇ ಯಶಸ್ಸು ಕಂಡುಕೊಳ್ಳುವ ನಿರೀಕ್ಷೆಯಲ್ಲಿ ದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಜಿಲ್ಲೆಯಲ್ಲಿರುವ ಗ್ರಾಮ ಪಂಚಾಯಿತಿಗಳಲ್ಲಿ (Grama panchayat) ಜೆಡಿಎಸ್‌ನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆನ್ನುವು ದು ಎಲ್ಲರ ಬಾಯಲ್ಲಿ ಕೇಳಿಬರುತ್ತಿರುವ ಮಾತು. ಹಾಗಾಗಿ ಅಪ್ಪಾಜಿ ಗೌಡರ ಗೆಲುವಿನ ಹಾದಿ ಸುಗಮ ವಾಗಿದೆ ಎಂದು ಸುಲಭವಾಗಿ ಹೇಳಲಾಗುತ್ತಿಲ್ಲ. ಜೆಡಿಎಸ್‌ನೊಳಗೆ (JDS) ಎಲ್ಲವೂ ಸರಿಯಾಗಿಲ್ಲ ಎನ್ನುವ ಮಾತುಗಳೂ ಕೇಳಿಬಂದಿರುವುದರಿಂದ ಪಕ್ಷದ ಮತ ಗಳನ್ನು ಹಿಡಿದಿಟ್ಟುಕೊಳ್ಳಲು ಅಪ್ಪಾಜಿಗೌಡರೂ ತೀ ವ್ರ ಶ್ರಮ ಹಾಕಬೇಕಿದೆ.
ಇದು ಜೆಡಿಎಸ್ ಗೆಲುವಿಗೆ ಹಿನ್ನಡೆಯಾಗಬಹುದೆಂಬ ಭಯವೂ ಕಾಡುತ್ತಿದೆ. ಜೆಡಿಎಸ್‌ನಲ್ಲಿ ಚುನಾವಣಾ (Election) ಸಾರಥ್ಯವನ್ನು ಯಾರೊಬ್ಬರೂ ವಹಿಸಿಕೊಳ್ಳದಿದ್ದರೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರವಾಸ ಕೈಗೊಂಡು ಜಿಲ್ಲಾ ನಾಯಕನಾಗಿ ಬಿಂಬಿತರಾದರು. ಜೆಡಿಎಸ್ ಶಾಸಕರು ಕೂಡ ಅವರವರ ಕ್ಷೇತ್ರಗಳಲ್ಲಿ ಪಕ್ಷದ ಮತಗಳನ್ನು ಬಲವಾಗಿ ಹಿಡಿದಿಟ್ಟುಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್ ಪರವಾಗಿರುವ ಮತಗಳು ಸುಲಭ ವಾಗಿ ಪರಿವರ್ತನೆಯಾಗುವುದಿಲ್ಲ ಎಂಬ ಭರವಸೆ ಅವರಲ್ಲಿದೆ. ಕೊನೆಯ ಹಂತದಲ್ಲಿ ಎದುರಾಗುವ ನಂಬರ್‌ಗೇಮ್‌ನಲ್ಲೇನಾದರೂ ಬದಲಾವಣೆಗಳು ಕಂಡುಬಂದರೆ ಜೆಡಿಎಸ್ ಓಟಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳು ಇವೆ.
ಗೂಳಿಗೌಡ ಸುಲಭ ತುತ್ತಾಗಿಲ್ಲ: ಜಿಲ್ಲೆಯಲ್ಲಿ ಒಂದೂ ಸದಸ್ಯತ್ವವಿಲ್ಲ ಕಾಂಗ್ರೆಸ್‌ಗೆ (Congress) ವಿಧಾನಪರಿಷತ್ ಚುನಾವಣೆ ಪ್ರತಿಷ್ಠೆಯಾಗಿದೆ. ಕೊನೇ ಘಳಿಗೆಯಲ್ಲಿ ಕೈ ಪಾಳಯದಿಂದ ಅಚ್ಚರಿಯ ಅಭ್ಯರ್ಥಿಯಾಗಿ ಆಯ್ಕೆಯಾದ ದಿನೇಶ್ ಗೂಳಿಗೌಡ ಚುನಾವಣೆಯಲ್ಲಿ ತಮ್ಮ ತಾಕತ್ತು ಪ್ರದರ್ಶಿಸುತ್ತಿದ್ದಾರೆ. ಗೂಳಿಗೌಡ ಅವರು ಜೆಡಿಎಸ್‌ಗೆ ಸುಲಭ ತುತ್ತಾಗಿರದೆ ನುಂಗ ಲಾಗದ ತುತ್ತಾಗಿದ್ದಾರೆ. ಕಾಂಗ್ರೆಸ್‌ನ ಎಲ್ಲ ಹಂತದ ನಾಯಕರು, ಮುಖಂಡರನ್ನು ಜೊತೆಗೂಡಿಸಿಕೊಂಡು ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೊಂಡೊಯ್ಯುತ್ತಿ ದ್ದಾರೆ. ಅಪಸ್ವರಗಳಿಗೆ ಜಾಗವಿಲ್ಲದಂತೆ ಎಚ್ಚರಿಕೆ ಕಾಯ್ದುಕೊಂಡಿದ್ದಾರೆ. ಮಾಜಿ ಸಚಿವ ಎನ್. ಚಲುವರಾಯಸ್ವಾಮಿ ನಾ ಯಕತ್ವದಲ್ಲಿ ಪಿ.ಎಂ.ನರೇಂದ್ರಸ್ವಾಮಿ, ರಮೇ ಶ್ ಬಂಡಿಸಿದ್ದೇಗೌಡ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರೆಲ್ಲರೂ ದಿನೇಶ್ ಗೂಳಿಗೌಡರ ಅವರ ಬೆಂಬಲಕ್ಕೆ ನಿಂತಿದ್ದಾರೆ. ಗೆಲುವಿಗೆ ಬೇಕಾದ ಮತ ಗಳನ್ನು ಪಕ್ಷದತ್ತ ಸೆಳೆಯಲು ನಾನಾ ರೀತಿಯ ತಂತ್ರಗಾರಿಕೆಯನ್ನು ಅನುಸರಿಸುತ್ತಿ ರುವುದು ಜೆಡಿಎಸ್ ಗೆಲುವಿನ ಹಾದಿಯನ್ನು ಕಠಿಣವಾಗು ವಂತೆ ಮಾಡಿದೆ. ನಾಮಪತ್ರ ಸಲ್ಲಿಕೆ ಆರಂಭದ ದಿನದಿಂದ ಹಿಡಿದು ಇಲ್ಲಿಯವರೆಗೂ ಮತಬೇಟೆಯಲ್ಲಿ ಕಾಯ್ದುಕೊಂ ಡಿದ್ದ ವೇಗದಲ್ಲಿ ಕೊಂಚವೂ ಕಡಿಮೆಯಾಗದಂತೆ ಅವಿರತವಾಗಿ ಸೆಣಸಾಡುತ್ತಿದ್ದಾರೆ. ನಾಯಕರೂ ಕೂಡ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿ ಸುತ್ತಾ ಗೂಳಿಗೌಡರಿಗೆ ಶಕ್ತಿ ತುಂಬುತ್ತಿದ್ದಾರೆ.
ಕಾಂಗ್ರೆಸ್ ಪಡೆಯ ಈ ಶ್ರಮದಿಂದ ಜೆಡಿಎಸ್‌ನ ಎಷ್ಟು ಮತಗಳು (Vote) ಕಾಂಗ್ರೆಸ್ ಕೈಹಿಡಿಯಲಿವೆ ಎನ್ನುವು ದು ಅಷ್ಟು ಸುಲಭಕ್ಕೆ ಗೊತ್ತಾಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನೊಳಗಿದ್ದು ಕೊಂಡು ಚುನಾವಣಾ ಕಾರ್ಯತಂತ್ರ ರೂಪಿಸಿದ್ದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೆ ದಳಪತಿಗಳು ಪ್ರಯೋಗಿಸುವ ಪಟ್ಟುಗಳೆಲ್ಲಾ ಚೆನ್ನಾಗಿ ತಿಳಿದಿವೆ. ಆ ಪಟ್ಟುಗಳಿಗೆ ಇನ್ನಷ್ಟು ಹೊಸ ವರಸೆಗಳನ್ನಿ ಟ್ಟು ಚುನಾವಣೆ ಗೆಲ್ಲುವ ಕಾರ್ಯತಂತ್ರ ಹೆಣೆದಿದ್ದಾರೆ ಎಂದು ಹೇಳಲಾಗುತ್ತಿದೆ. ಜೆಡಿಎಸ್ ಮತಗಳು ಒಟ್ಟಾಗಿರುವ ಕಡೆಗಳಲ್ಲಿ ಈ ತಂತ್ರಗಳನ್ನು ಪ್ರಯೋ ಗಿಸಿ ಅವುಗಳನ್ನು ಒಡೆದು ಕಾಂಗ್ರೆಸ್ ಬತ್ತಳಿಕೆಗೆ ಸೇರಿಸಿಕೊಳ್ಳುವ ಸಾಹಸ ಪ್ರಯತ್ನ ನಡೆಸಿದ್ದಾರೆಂದು ತಿಳಿದುಬಂದಿದೆ. ದಳಪತಿಗಳಿಗೆ (JDS Leaders) ಪ್ರತಿಯಾಗಿ ಕಾಂಗ್ರೆಸ್ಸಿಗರು ನಡೆಸುತ್ತಿರುವ ನಂಬರ್‌ಗೇಮ್ ಯಾವ ಸ್ವರೂಪದಲ್ಲಿದೆ. ಜೆಡಿಎಸ್ ಮಣಿಸುವುದಕ್ಕೆ ಯಾವ ಅದೃಷ್ಟದ ಸಂಖ್ಯೆಗಳನ್ನು ಆಯ್ದುಕೊಂಡಿದ್ದಾರೆ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ.
ಬಿಜೆಪಿ ಹೋರಾಟ ಪ್ರಬಲವಾಗಿಲ್ಲ: ಬಿಜೆಪಿ (BJP) ಚುನಾ ವಣಾ ಅಖಾಡದಲ್ಲಿದ್ದರೂ ಜೆಡಿಎಸ್-ಕಾಂಗ್ರೆಸ್ ಹೋಲಿಸಿ ನೋಡಿದಾಗ ಅದರ ಹೋರಾಟ ಅಷ್ಟು ಪ್ರಬಲವಾಗಿಲ್ಲ. ಈಗಾಗಲೇ ನಾಲ್ಕೈದು ಬಾರಿ ಜಿಲ್ಲೆಯ ಎಲ್ಲ ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ರುವ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಉತ್ಸಾಹಿ ಯುವಕರಾಗಿದ್ದಾರೆ. ಅವರಿಗೆ ಎಷ್ಟರ ಮಟ್ಟಿಗೆ ಮತದಾರರು ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲ ಕೆರಳಿಸಿದೆ. ಬಿಜೆಪಿ ಚುನಾವಣಾ ಸಾರಥ್ಯ ವಹಿಸಿರುವ ಸಚಿವ ಕೆ.ಸಿ.ನಾರಾಯಣಗೌಡರಿಗೆ ಬಿಜೆಪಿಗೆ ಹೆಚ್ಚಿನ ಮತ ಗಳನ್ನು ತಂದುಕೊಡುವ ಸವಾಲಿದೆ. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವುದರೊ ಂದಿಗೆ ದಾಖಲೆ ಸೃಷ್ಟಿಸಿದ ನಾರಾಯಣಗೌಡರಿಗೆ (narayana Gowda) ಜಿಲ್ಲೆಯಲ್ಲಿ ತಮಗಿರುವ ವರ್ಚಸ್ಸು ಹಾಗೂ ಪಕ್ಷದ ಶಕ್ತಿ ಏನೆಂಬುದನ್ನು ತೋರಿಸುವುದಕ್ಕೆ ಚುನಾವಣೆ ಸಾಕ್ಷಿಯಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪರಾಭವ ಗೊಂಡಿರುವ ಜೆಡಿಎಸ್ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದರ ಮೂಲಕ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾದರೆ ಕಾಂಗ್ರೆಸ್ 2023ರ ಚುನಾವಣೆಯ ದಿಕ್ಸೂಚಿಯಾಗಿ ಈ ಚುನಾವಣೆಯನ್ನು ಗೆದ್ದು ತೋರಿಸುವ ಹರಸಾಹಸಕ್ಕೆ ಮುಂದಾಗಿದೆ. ಈ ಎರಡೂ ಸಾಂಪ್ರದಾಯಿಕ ಎದುರಾಳಿ ಪಕ್ಷಗಳ ನಡುವೆ ಬಿಜೆಪಿ ಕೂಡ ಜಿಲ್ಲೆಯಲ್ಲಿ ತನ್ನ ಅಸ್ತಿತ್ವದ ಹೋರಾಟವನ್ನು ತೀವ್ರಗೊಳಿಸಿದೆ.